ಫ್ಯಾಕ್ಟ್‌ಚೆಕ್‌: ಕರ್ನಾಟಕ ಸರ್ಕಾರ ಮುಸ್ಲಿಂ ಸಮುದಾಯದ ಹುಡುಗಿಯರಿಗೆ ಮಾತ್ರ ಸ್ವರಕ್ಷಣೆ ತರಬೇತಿಯನ್ನು ಘೋಷಿಸಿಲ್ಲ.

ಕರ್ನಾಟಕ ಸರ್ಕಾರ ಮುಸ್ಲಿಂ ಸಮುದಾಯದ ಹುಡುಗಿಯರಿಗೆ ಮಾತ್ರ ಸ್ವರಕ್ಷಣೆ ತರಬೇತಿಯನ್ನು ಘೋಷಿಸಿಲ್ಲ.;

facebooktwitter-grey
Update: 2025-03-28 02:45 GMT
ಫ್ಯಾಕ್ಟ್‌ಚೆಕ್‌: ಕರ್ನಾಟಕ ಸರ್ಕಾರ ಮುಸ್ಲಿಂ ಸಮುದಾಯದ ಹುಡುಗಿಯರಿಗೆ ಮಾತ್ರ ಸ್ವರಕ್ಷಣೆ ತರಬೇತಿಯನ್ನು ಘೋಷಿಸಿಲ್ಲ.
  • whatsapp icon

ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮಾರ್ಚ್ 7, ಶುಕ್ರವಾರ ತಮ್ಮ ದಾಖಲೆಯ 16ನೇ ಬಜೆಟ್ ಮಂಡಿಸಿದ್ದಾರೆ. ವಿಧಾನಸಭೆಯಲ್ಲಿ ಅವರು, 2025-26ನೇ ಸಾಲಿನ ಆಯವ್ಯಯವನ್ನು ಮಂಡಿಸಿದ್ದು, ಈ ಬಾರಿ ಸಿಲಿಕಾನ್ ಸಿಟಿ, ರಾಜ್ಯ ರಾಜಧಾನಿ ಬೆಂಗಳೂರಿಗೆ ದುಪ್ಪಟ್ಟು ಅನುದಾನವನ್ನು ಘೋಷಣೆ ಮಾಡಿದ್ದಾರೆ. ಬರೋಬ್ಬರಿ 4.09 ಲಕ್ಷ ಕೋಟಿ ಮೌಲ್ಯದ ಬಜೆಟ್ ಅನ್ನು ಮಂಡಿಸಿದ್ದಾರೆ. ಇದರಲ್ಲಿ 1.15 ಲಕ್ಷ ಕೋಟಿ ರೂ.ಗಳನ್ನು ಸಾಲ ಮಾಡಿದೆ. ಗ್ಯಾರಂಟಿ ಯೋಜನೆಗಳಿಗೆ ಅನುದಾನ ನೀಡುವ ಜೊತೆಗೆ ಬಹುದೊಡ್ಡದಲ್ಲದಿದ್ದರೂ ಸಣ್ಣ ಪುಟ್ಟ ಅಭಿವೃದ್ಧಿ ಕಾರ್ಯಗಳಿಗೆ ಅನುದಾನವನ್ನು ಹಂಚಿಕೆ ಮಾಡಿದ್ದಾರೆ. ಈ ಪೈಕಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಎಲ್ಲರ ಕಣ್ಣಿಗೆ ಕಾಣುವಂತೆ ಭರಪೂರ ಅನುದಾನವನ್ನು ಕೊಟ್ಟಿದ್ದಾರೆ. ಆಡಳಿತರೂಢ ಕಾಂಗ್ರೆಸ್ ಪಕ್ಷ ಇದೊಂದು ಉತ್ತಮವಾದ ಬಜೆಟ್ ಎಂದಿದ್ದು, ವಿಪಕ್ಷ ಬಿಜೆಪಿ ಬಜೆಟ್ ಕುರಿತು ಟೀಕೆಯನ್ನು ಮಾಡಿದೆ. ಹೀಗಾಗಿ 2025-26ನೇ ಸಾಲಿನ ಬಜೆಟ್‌ ಸಾರ್ವಜನಿಕ ವಲಯದಲ್ಲೂ ಚರ್ಚೆಯನ್ನು ಹುಟ್ಟುಹಾಕಿದೆ. ಈ ವಿವಾದದಲ್ಲಿ ಪ್ರಮುಖವಾಗಿ ಮುಸ್ಲೀಂ ಹೆಣ್ಣು ಮಕ್ಕಳಿಗೆ ಮಾತ್ರ ಆತ್ಮರಕ್ಷಣೆಯ ಕಲೆಯನ್ನು ಕಲಿಸಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯನವರು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ ಎಂಬ ಶಿರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣದ ಬಳಕೆದಾರರು ತಮ್ಮ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಹಿಂದೂಗಳನ್ನು ಕಡೆಗಣನೆ ಮಾಡುತ್ತಿದೆ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿ ಕೋಮು ದ್ವೇಷವನ್ನು ಕೂಡ ಹರಡಲಾಗುತ್ತಿದೆ.

ಮಾರ್ಚ್‌ 18, 2025ರಂದು ಎಕ್ಸ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼEmpower them more. Appease them more. Discriminate Hindus more. Suppress Hindus more. Just before elections, throw some freebies on Hindu’s face, win again and repeat the cycleʼ ಎಂಬ ಶೀರ್ಷಿಕೆಯೊಂದಿಗೆ ಪೊಸ್ಟ್‌ವೊಂದನ್ನು ಶೇರ್‌ ಮಾಡಿದ್ದರು. ಶಿರ್ಷಿಕೆಯನ್ನ ಕನ್ನಡಕ್ಕೆ ಅನುವಾದಿಸಿದಾಗ ʼಅವರನ್ನು ಇನ್ನಷ್ಟು ಸಬಲಗೊಳಿಸಿ. ಅವರನ್ನು ಇನ್ನಷ್ಟು ಸಮಾಧಾನಪಡಿಸಿ. ಹಿಂದೂಗಳನ್ನು ಇನ್ನಷ್ಟು ತಾರತಮ್ಯ ಮಾಡಿ. ಹಿಂದೂಗಳನ್ನು ಇನ್ನಷ್ಟು ನಿಗ್ರಹಿಸಿ. ಚುನಾವಣೆಗೆ ಸ್ವಲ್ಪ ಮೊದಲು, ಹಿಂದೂಗಳ ಮುಖದ ಮೇಲೆ ಕೆಲವು ಉಚಿತ ಕೊಡುಗೆಗಳನ್ನು ಎಸೆಯಿರಿ, ಮತ್ತೆ ಗೆದ್ದು ಮತ್ತೆ ಅದೇ ಚಕ್ರವನ್ನು ಪುನರಾವರ್ತಿಸಿʼ ಎಂದು ಬರೆದಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು. ಇನ್ನು ಪೊಸ್ಟ್‌ನ ಕ್ಯಾಪ್ಷನ್‌ನಲ್ಲಿ ʼHindu girl Swati brutally murdered in Karnataka. One culprit, Nayaz, was arrested by police (sic)." "However, the irony is that in his budget, Karnataka CM Siddaramaiah has announced self-defence training only for girls from the Muslim community!!" ಎಂದು ಬರೆದಿರುವುದನ್ನು ನೋಡಬಹುದು. ಕ್ಯಾಪ್ಷನ್‌ನನ್ನು ಕನ್ನಡಕ್ಕೆ ಅನುವಾದಿಸಿದಾಗ ʼಕರ್ನಾಟಕದಲ್ಲಿ ಹಿಂದೂ ಹುಡುಗಿ ಸ್ವಾತಿಯನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಒಬ್ಬ ಅಪರಾಧಿ ನಯಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ (sic)" ಎಂಬ ಪಠ್ಯವನ್ನು ಸಹ ಬರೆಯಲಾಗಿದೆ. ಹಳದಿ ಹಿನ್ನೆಲೆಯಲ್ಲಿ ಕೆಳಭಾಗದಲ್ಲಿರುವ ಮತ್ತೊಂದು ಪಠ್ಯವು ಹೀಗೆ ಹೇಳುತ್ತದೆ: "ಕರ್ನಾಟಕ ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ಮುಸ್ಲಿಂ ಸಮುದಾಯದ ಹುಡುಗಿಯರಿಗೆ ಮಾತ್ರ ಆತ್ಮರಕ್ಷಣಾ ತರಬೇತಿ ನೀಡುವುದಾಗಿ ಘೋಷಿಸಿದ್ದಾರೆ ಎಂಬುದು ವಿಪರ್ಯಾಸ!!" ಎಂದು ಬರೆದಿರುವುದನ್ನು ನೋಡಬಹುದು.

ಮಾರ್ಚ್ 3, 2025ರಂದು ಕರ್ನಾಟಕದ ಹಾವೇರಿ ಜಿಲ್ಲೆಯಲ್ಲಿ 22 ವರ್ಷದ ಸ್ವಾತಿ ಬ್ಯಾಡ್ಗಿಯನ್ನು ಆಕೆಯ ಮಾಜಿ ಸಂಗಾತಿ ನಿಯಾಜ್ ಬೆನ್ನಿಗೆರೆ ಕೊಲೆ ಮಾಡಿದ ನಂತರ ಈ ಹೇಳಿಕೆ ಹೊರಬಿದ್ದಿದೆ. ನಿಯಾಜ್‌ನನ್ನು ಮಾರ್ಚ್ 13 ರಂದು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಆದರೆ, ಮುಸ್ಲಿಂ ಹುಡುಗಿಯರಿಗೆ ಮಾತ್ರ ಸ್ವರಕ್ಷಣೆ ತರಬೇತಿಯನ್ನು ಪರಿಚಯಿಸಲಾಗಿದೆ ಎಂಬ ವೈರಲ್ ಹೇಳಿಕೆ ಸಂದರ್ಭದಿಂದ ಹೊರಗಿಡಲಾಗಿದೆ.

ವೈರಲ್‌ ಆದ ಸುದ್ದಿಯ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.


ಮಾರ್ಚ್‌ 15. 2025ರಂದು ಯೂಟ್ಯೂಬ್‌ ಖಾತೆದಾರರೊಬ್ಬರು ʼನಮ್ಮ ಹೆಣ್ಣು ಮಕ್ಕಳ ರಕ್ಷಣೆಯ ಹೊಣೆ ಯಾರದ್ದು!? #ytshorts #congress #karnataka #safety #siddaramaiah #crimeʼ ಎಂಬ ಶೀರ್ಷಿಕೆಯ ಮತ್ತು ಕೆಲವು ಹ್ಯಾಷ್‌ಟ್ಯಾಗ್‌ ಮೂಲಕ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹಾಗೆ ವೈರಲ್‌ ಆದ ವಿಡಿಯೋವಿನಲ್ಲಿ ಕ್ಯಾಪ್ಷನ್‌ ಆಗಿ ʼಅಲ್ಪಸಂಖ್ಯಾತ ಸಮುದಾಯದ ಯುವತಿಯರಿಗೆ ಆತ್ಮ ರಕ್ಷಣೆ ತರಬೇತಿ ನೀಡುವುದಾಗಿ ತಮ್ಮ ಬಜೆಟ್‌ನಲ್ಲಿ ಘೋಷಿಸಿರುವ ಸಿದ್ದರಾಮಯ್ಯ, ಸ್ವಾತಿ ಹತ್ಯೆಯ ಕುರಿತು ಪ್ರತಿಕ್ರಿಯೆ ನೀಡುತ್ತಾರೆಯೇ!! ಈ ಜಿಹಾದಿಗಳ ಅಟ್ಟಹಾಸಕ್ಕೆ| ಬಲಿಯಾಗುತ್ತಿರುವ ನಮ್ಮ ಹೆಣ್ಣು ಮಕ್ಕಳ ರಕ್ಷಣೆಯ ಹೊಣೆ ಯಾರದ್ದು?? ಎಂದು ಬರೆದುಕೊಂಡು ಪೊಸ್ಟ್‌ ಮಾಡಿದ್ದಾರೆ.

Full View

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ, ಈ ಬಾರಿಯ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯನವರು ಕೇವಲ ಮುಸ್ಲಿಂ ಹೆಣ್ಣು ಮಕ್ಕಳಿಗೆ ಮಾತ್ರ ಆತ್ಮರಕ್ಷಣೆಯ ತರಬೇತಿ ಕಾರ್ಯಕ್ರಮವನ್ನು ಘೋಷಿಸಿದ್ದಾರೆ ಎಂಬುದು ಸುಳ್ಳು. ಅಲ್ಪಸಂಖ್ಯಾತರ ನಿರ್ದೇಶನಾಲಯವು ನಡೆಸುವ 169 ವಸತಿ ಶಾಲೆಗಳು/ಕಾಲೇಜುಗಳಲ್ಲಿ ಓದುತ್ತಿರುವ 25,000 ಬಾಲಕಿಯರಿಗೆ ಸ್ವರಕ್ಷಣೆ ಕೌಶಲ್ಯ ತರಬೇತಿಯನ್ನು ಕಲಿಸಲಾಗುತ್ತದೆ. ಹಾಗೆಯೇ ಈ ಅಲ್ಪ ಸಂಖ್ಯಾತರ ಸಮುದಾಯದಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು, ಜೈನರು, ಬೌದ್ಧರು, ಸಿಖ್ಯರು ಕೂಡ ಬರುತ್ತಾರೆ.

ನಾವು ವೈರಲ್‌ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ಗೂಗಲ್‌ನಲ್ಲಿ ಕೆಲವು ಪ್ರಮುಖ ಕೀವರ್ಡ್‌ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಮಾರ್ಚ್‌ 08, 2025ರಂದು ʼದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ʼ ವೆಬ್‌ಸೈಟ್‌ನಲ್ಲಿ ʼTrain ’em young: Self-defence for 25k girls in 169 educational institutes in Karnatakaʼ ಎಂಬ ಹೆಡ್‌ಲೈನ್‌ನೊಂದಿಗೆ ವರದಿ ಮಾಡಿರುವುದನ್ನು ನಾವಿಲ್ಲಿ ಕಾಣಬಹುದು. ಹೆಡ್‌ಲೈನ್‌ನ್ನು ಕನ್ನಡಕ್ಕೆ ಅನುವಾದಿಸಿದಾಗ ʼಕರ್ನಾಟಕದ 169 ಶಿಕ್ಷಣ ಸಂಸ್ಥೆಗಳಲ್ಲಿ 25 ಸಾವಿರ ಹುಡುಗಿಯರಿಗೆ ಆತ್ಮರಕ್ಷನೆ ಕಲಿಕೆಗೆ ಅವಕಾಶ’ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ಕರ್ನಾಟಕ ಸರ್ಕಾರದ ಇತ್ತೀಚಿನ ಬಜೆಟ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಹುಡುಗಿಯರಿಗೆ ಸ್ವರಕ್ಷಣೆ ತರಬೇತಿಯನ್ನು ಸೇರಿಸಲಾಗಿದೆ ಎಂದು ವರದಿ ಹೇಳಿದೆ. ಆದರೆ, ತರಬೇತಿ ಮುಸ್ಲಿಂ ಹುಡುಗಿಯರಿಗೆ ಮಾತ್ರ ಸೀಮಿತವಾಗಿದೆ ಎಂದು ಅದು ನಿರ್ದಿಷ್ಟಪಡಿಸಿಲ್ಲ.


ಮಾರ್ಚ್‌ 7, 2025ರಂದು ʼಎಕನಾಮಿಕ್ಸ್‌ ಟೈಮ್ಸ್‌ʼ ವೆಬ್‌ಸೈಟ್‌ನಲ್ಲಿ ʼ“ಅಲ್ಪಸಂಖ್ಯಾತರ ನಿರ್ದೇಶನಾಲಯವು ನಡೆಸುವ 169 ವಸತಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಓದುತ್ತಿರುವ 25,000 ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣಾ ಕೌಶಲ್ಯ ತರಬೇತಿಯನ್ನು ನೀಡಲಾಗುವುದು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಿಸಿದ್ದಾರೆʼ ಎಂದು ವರದಿಯಾಗಿದೆ.


ನಾವು ವೈರಲ್‌ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ಗೂಗಲ್‌ನಲ್ಲಿ ಕರ್ನಾಟಕ ಬಜೆಟ್‌ 2025-2026 ಎಂಬ ಕೀವರ್ಡ್‌ನಿಂದ ಹುಡುಕಾಟ ನಡೆಸಿದಾಗ ಕರ್ನಾಟಕ ಬಜೆಟ್​ 2025-26 ಪಿಡಿಎಫ್ ಪ್ರತಿಯೊಂದು ದೊರೆಯಿತು. ಪಿಡಿಎಫ್‌ನ್ನು ಕ್ಷುಲಕವಾಗಿ ಪರೀಕ್ಷಿಸಿದಾಗ ʼಸರ್ಕಾರದ ಹಣಕಾಸು ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಬಜೆಟ್ ದಾಖಲೆಯಲ್ಲಿನ ಪಾಯಿಂಟ್ ಸಂಖ್ಯೆ 221, "ಅಲ್ಪಸಂಖ್ಯಾತರ ನಿರ್ದೇಶನಾಲಯವು ನಡೆಸುವ 169 ವಸತಿ ಶಾಲೆಗಳು/ಕಾಲೇಜುಗಳಲ್ಲಿ ಓದುತ್ತಿರುವ 25,000 ವಿದ್ಯಾರ್ಥಿನಿಯರಿಗೆ ಸ್ವರಕ್ಷಣೆ ಕೌಶಲ್ಯ ತರಬೇತಿಯನ್ನು ನೀಡಲಾಗುವುದು" ಎಂದು ಉಲ್ಲೇಖಿಸಿರುವುದನ್ನು ನೋಡಬಹುದು



ಅಲ್ಪಸಂಖ್ಯಾತರ ನಿರ್ದೇಶನಾಲಯದ ವೆಬ್‌ಸೈಟ್ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು, ಜೈನರು, ಬೌದ್ಧರು, ಸಿಖ್ಯರು ಮತ್ತು ಪಾರ್ಸಿ ಅಲ್ಪಸಂಖ್ಯಾತರ ವ್ಯಾಪ್ತಿಗೆ ಬರುತ್ತವೆ. ಹಾಗೆಯೇ ಮುಸಲ್ಮಾನರು ಮಾತ್ರ ಅಲ್ಪ ಸಂಖ್ಯಾತರಲ್ಲ ಎಂಬುದು ಕೂಡ ಇದರಿಂದ ಸ್ಪಷ್ಟವಾಗಿದೆ.


2022 ರಲ್ಲಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಭಾರತೀಯ ಜನತಾ ಪಕ್ಷದ ಸರ್ಕಾರವು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ 50,000 ಹುಡುಗಿಯರಿಗಾಗಿ "ಓಬವ್ವ ಕಲೆಯ ಸ್ವರಕ್ಷಣಾ ತರಬೇತಿ" ಕಾರ್ಯಕ್ರಮವನ್ನು ಪ್ರಾರಂಭಿಸಿತು. ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ, ಪೊಲೀಸ್ ತರಬೇತಿ ಶಾಲೆಗಳು "ಮಹಿಳೆಯರಿಗೆ ಸ್ವರಕ್ಷಣೆ ತರಬೇತಿಯನ್ನು" ನೀಡುವುದಾಗಿ ಬೊಮ್ಮಾಯಿ ಘೋಷಿಸಿದರು. ರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಕ್ತಾರರು, ಹೆಸರು ಬಹಿರಂಗಪಡಿಸಲು ಇಚ್ಛಿಸದ ಸ್ಥಿತಿಯಲ್ಲಿ ಮಾತನಾಡುತ್ತಾ, "ಓಬವ್ವ ಆರ್ಟ್ ಆಫ್ ಸೆಲ್ಫ್-ಡಿಫೆನ್ಸ್ ಟ್ರೈನಿಂಗ್" ಕಾರ್ಯಕ್ರಮವು ಸಕ್ರಿಯವಾಗಿದೆ ಮತ್ತು ಹುಡುಗಿಯರು ಸ್ವರಕ್ಷಣೆ ತರಬೇತಿಯನ್ನು ಪಡೆಯುತ್ತಿದ್ದಾರೆ.



 


ಇದರಿಂದ ಸಾಭೀತಾಗಿದ್ದೇನೆಂದರೆ, ಈ ಬಾರಿಯ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯನವರು ಕೇವಲ ಮುಸ್ಲಿಂ ಹೆಣ್ಣು ಮಕ್ಕಳಿಗೆ ಮಾತ್ರ ಆತ್ಮರಕ್ಷಣೆಯ ತರಬೇತಿ ಕಾರ್ಯಕ್ರಮವನ್ನು ಘೋಷಿಸಿದ್ದಾರೆ ಎಂಬುದು ಸುಳ್ಳು. ಅಲ್ಪಸಂಖ್ಯಾತರ ನಿರ್ದೇಶನಾಲಯವು ನಡೆಸುವ 169 ವಸತಿ ಶಾಲೆಗಳು/ಕಾಲೇಜುಗಳಲ್ಲಿ ಓದುತ್ತಿರುವ 25,000 ಬಾಲಕಿಯರಿಗೆ ಸ್ವರಕ್ಷಣೆ ಕೌಶಲ್ಯ ತರಬೇತಿಯನ್ನು ಕಲಿಸಲಾಗುತ್ತದೆ. ಹಾಗೆಯೇ ಈ ಅಲ್ಪ ಸಂಖ್ಯಾತರ ಸಮುದಾಯದಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು, ಜೈನರು, ಬೌದ್ಧರು, ಸಿಖ್ಯರು ಕೂಡ ಬರುತ್ತಾರೆ.

Claim :  ಕರ್ನಾಟಕ ಸರ್ಕಾರ ಮುಸ್ಲಿಂ ಸಮುದಾಯದ ಹುಡುಗಿಯರಿಗೆ ಮಾತ್ರ ಸ್ವರಕ್ಷಣೆ ತರಬೇತಿಯನ್ನು ಘೋಷಿಸಿಲ್ಲ.
Claimed By :  Social Media Users
Fact Check :  False
Tags:    

Similar News