ಫ್ಯಾಕ್ಟ್‌ ಚೆಕ್: ತೆಲಂಗಾಣದಲ್ಲಿರುವ ಮುಸ್ಲಿಮರಿಗೆ ಮಾತ್ರ ಉಚಿತವಾಗಿ ಕಾರು ವಿತರಿಸಲಾಗುತ್ತಿದೆ ಎಂಬ ಸುಳ್ಳು ಸುದ್ದಿ ವೈರಲ್

ತೆಲಂಗಾಣದಲ್ಲಿರುವ ಮುಸ್ಲಿಮರಿಗೆ ಮಾತ್ರ ಉಚಿತವಾಗಿ ಕಾರು ವಿತರಿಸಲಾಗುತ್ತಿದೆ ಎಂಬ ಸುಳ್ಳು ಸುದ್ದಿ ವೈರಲ್

Update: 2023-11-03 18:15 GMT

ತೆಲಂಗಾಣ ಸಿಎಂ ಕೆಸಿಆರ್‌ ಮುಸ್ಲೀಂ ಮತದಾರರ ಗಮನ ಸೆಳೆದು ತಮಗೆ ಮತಗಳನ್ನು ಹಾಕಿಸಿಕೊಳ್ಳಲು ಓಲೈಸಲು 12 ಸಾವಿರ ರೂಪಾಯಿಯನ್ನ ಸರ್ಕಾರದಿಂದ ಲೂಟಿ ಮಾಡಿದ್ದಾರೆ ಎಂದು ಟಿ.ಎಸ್.ಎಂ.ಎಫ್.ಸಿ (TSEMFC) ಫಲಕಗಳನ್ನು ಹಿಡಿದು ಕೆಲವರು ಹೊಸ ಕಾರುಗಳ ಮುಂದೆ ನಿಂತು ಧರಣಿ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವೀಡಿಯೋ ಜೊತೆಗೆ ಕ್ಯಾಪ್ಷನ್‌ ಸಹ ಬರೆದಿದ್ದಾರೆ. ಇಂಗ್ಲೀಷ್‌ನಲ್ಲಿರುವ ಕ್ಯಾಪ್ಷನ್‌ ಹೀಗಿದೆ. Free Cars distribution only to Muslims? With taxpayers money? Less than 5% of Muslims pay any tax, property Tax, Electricity Bill, Water Bill. 80% Muslim shop owners don't even have GST Registration, no filing of GST returns, no payment of GST, and evasion of taxes. Telangana' CM KCR has plundered approx 12000 Cr to please Muslims for getting their votes. This is how Muslim vote bank politics is destroying our country. Some law should be in place to spend tax payers money only for development and NOT giving freebies"

ಈ ಕ್ಯಾಪ್ಷನ್ಗಳನ್ನು ಅನುವಾದಿಸಿದೆವು "ಮುಸ್ಲೀಂ ಸಮುದಾಯಕ್ಕೆ ಮಾತ್ರ ಯಾಕೆ ಕಾರನ್ನ ವಿತರಿಸುತ್ತಿದ್ದೀರಾ? ನೀವು ಹಂಚಿತ್ತಿರುವುದು ಸಹ ನಾವು ಹಟ್ಟಿದ ತೆರಿಗೆ ಹಣದಿಂದ ಯಾಕೆ ಈ ಅನ್ಯಾಯ? ಯಾಕೆ ಈ ತಾತ್ಸಾರ? ಕೇವಲ 5% ಮುಸ್ಲೀಮರು ಆಸ್ತಿ ತೆರಿಗೆ, ವಿದ್ಯತ್‌ ತೆರಿಗೆ, ನೀರಿನ ಬಿಲ್ ಪಾವತಿಸುತ್ತಾರೆ.‌ 80%ಕ್ಕೂ ಹೆಚ್ಚು ಮುಸ್ಲೀಮರು GST ಪಾವತಿಸುತ್ತಿಲ್ಲ ಜೊತೆಗೆ ಸರ್ಕಾರದಲ್ಲಿ ನೊಂದಾಯಿಸಿಕೊಂಡಿಲ್ಲ. ತೆಲಂಗಾಣ ಸಿಎಂ ಮುಸ್ಲೀಮರನ್ನ ಓಲೈಸಲು ಬರೋಬ್ಬರಿ 1200 ಕೋಟಿ ರೂಪಾಯಿ ಲೂಟಿ ಮಾಡಿದ್ದಾರೆ. ಇಂತಹ ರಾಜಕೀಯದಿಂದ ನಮ್ಮ ದೇಶ ಹಾಳಾಗುತ್ತಿದೆ. ತೆರಿಗೆ ಪಾವತಿಸಿದ ಹಣವನ್ನು ರಾಜ್ಯದ ಅಭಿವೃದ್ದಿಗೆ ಬಳಸಿಕೊಳ್ಳದೇ, ಮುಸ್ಲೀಮರಿಗೆ ಉಚಿತ ಕೊಡುಗೆ ನೀಡುವಲ್ಲಿ ಉಪಯೋಗಿಸಿಕೊಳ್ಳುತ್ತಿದ್ದೀರ" ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.


Full View
Full View
Full View




ಫ್ಯಾಕ್ಟ್‌ ಚೆಕ್‌

ಹರಿದಾಡುತ್ತಿರುವ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ತೆಲಂಗಾಣ ರಾಜ್ಯದಲ್ಲಿ ಅಲ್ಪಸಂಖ್ಯಾತರಿಗೆ ಹಣಕಾಸು ನಿಗಮ ಮಂಡಳಿಯು ಡ್ರೈವರ್‌-ಕಂ-ಒನರ್‌ ಯೋಜನೆಯ ಭಾಗವಾಗಿ ರಾಜ್ಯದಲ್ಲಿರುವ ಎಲ್ಲಾ ಅಲ್ಪಸಂಖ್ಯಾತರಿಗೆ ಕಾರುಗಳನ್ನ ವಿತರಿಸಲಾಗಿತ್ತು.

ವೀಡಿಯೋವಿನಲ್ಲಿರುವ ಕೆಲವು ಕೀ ಫ್ರೇಮ್‌ಗಳನ್ನು ಉಪಯೋಗಿಸಿಕೊಂಡು ರಿವರ್ಸ್‌ ಇಮೇಜ್‌ ಸರ್ಚ್‌ ಮಾಡದಾಗ ನಮಗೆ ಕಂಡು ಬಂದಿದ್ದು ಈ ವಿಡಿಯೋವನ್ನ ಅಕ್ಟೋಬರ್‌ 5ರಂದು ತೆಲಂಗಾಣ ರಾಜ್ಯದ ಗೃಹ ಸಚಿವ ಮೊಹಮ್ಮದ್‌ ಮಹಮೂದ್‌ ಅಲಿ ಹೈದರಾಬಾದ್‌ನಲ್ಲಿ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಹೇಳಿಕೆಯೊಂದನ್ನ ಕೊಟ್ಟಿರುತ್ತಾರೆ. ಹೈದರಾಬಾದ್‌ನಲ್ಲಿರುವ ಅಲ್ಪಸಂಖ್ಯಾತರಿಗೆ ಸಬ್ಸೀಡಿಯಲ್ಲಿ ಕಾರನ್ನ ವಿತರಿಸಲಾಗುತ್ತದೆ ಎಂಬ ಹೇಳಿಕೆಯನ್ನ ನೀಡಿದ್ದಾರೆಂದು ನಾವು ಹುಡುಕಿದೆವು.


Full View

ಸಿಯಾಸತ್.ಕಾಮ್‌ ವರದಿಯ ಪ್ರಕಾರ ಆರಾಮ್‌ಗಢನ ಕ್ಲಾಸಿಕ್‌ ಗಾರ್ಡನ್‌ ಫಂಕ್ಷನ್‌ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೃಹ ಸಚಿವ ಮೊಹಮ್ಮದ್ ಮಹಮೂದ್‌ ಅಲಿ ಮತ್ತು ಶಾಸಕ ಪ್ರಕಾಶ್‌ ಗೌಡ ಇತರ ಗಣ್ಯರೊಂದಿಗೆ ವಾಹನಗಳನ್ನು ನೀಡಿದರು.

ನಿರುದ್ಯೋಗಿ ಚಾಲಕರ ಏಳಿಗೆಗಾಗಿ ಗ್ರೇಟರ್‌ ಹೈದರಾಬಾದ್‌ ಮುನಿಸ್ಸಿಪಲ್‌ ಕಾರ್ಪೋರೇಶನ್‌ ಈ ಯೋಜನೆಯನ್ನು ಪ್ರಾರಂಭಿಸಿತ್ತು. ಈ ಯೋಜನೆಯ ಭಾಗವಾಗಿ ಆಯ್ಕೆಯಾದ 100 ಫಲಾನುಭಾವಿಹಗಳನ್ನು ಕರೆದು ಸಚಿವರು ಕಾರುಗಳನ್ನ ವಿತರಿಸಿದ್ದರು. ವಿತರಿಸಿದ ಚಿತ್ರಗಳನ್ನ ಸಚಿವರ X ಖಾತೆಯಲ್ಲೂ ನೋಡಬಹುದು.


ಟಿಎಸ್‌ಸಿಎಫ್‌ಸಿ (TSCFC) ವರದಿಯ ಪ್ರಕಾರ ತೆಲಂಗಾಣ ಸರ್ಕಾರವು ಊಬರ್‌ ಕಾರು ಸರ್ವೀಸ್‌ ಪ್ರೊವೈಡರ್‌ ಆದ ಮಾರುತಿ ಮೋಟಾರ್ಸ್‌ನ ಜೊತೆಗೂಡಿ ತೆಲಂಗಾಣದಲ್ಲಿರುವ ಅಲ್ಪಸಂಖ್ಯಾತ ಏಳಿಗೆಗಾಗಿ "ಡ್ರೈವರ್‌ ಎಂಪವರ್‌ಮೆಂಟ್‌ ಪ್ರೋಗ್ರಾಮ್‌"ನ್ನು ಪ್ರಾರಂಭಿಸಿತು. ಈ ಯೋಜನೆಯಡಿಯಲ್ಲಿ ಮಾರುತಿ ಡ್ರೈವಿಂಗ್‌ ಸ್ಕೂಲ್‌ನ ಮುಖಾಂತರ ತರಬೇತಿದಾರರಿಗೆ ಉಚಿತ ತರಬೇತಿ ನೀಡಿ, ಊಬರ್‌ ಫ್ಲಾಟ್‌ಫಾಮ್‌ ಮುಖಾಂತರ ಉದ್ಯೋಗವಕಾಶ ಕಲ್ಪಿಸುವ ಜೊತೆಗೆ ಅಲ್ಪಸಂಖ್ಯಾತರಿಗೆ ಆರ್ಥಿಕ ಸಹಾಯವನ್ನು ನೀಡುಲಾಗುತ್ತದೆ.

ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಕಾರನ್ನು ಖರೀದಿಸಲು ಆರ್ಥಿಕ ನೆರವನ್ನು ತೆಲಂಗಾಣ ಸರ್ಕಾರ ನೀಡಲಾಗುವುದು ಎಂದು ಪ್ರಕಟಣೆಯನ್ನೂ ಸಹ ಹೊರಡಿಸಿದೆ.


ಈ ಮೇಲ್ಕಂಡ ಅರ್ಜಿಯಲ್ಲಿ ನೋಡುವುದಾದರೆ ಹೊರಡಿಸಿದ ಆದೇಶದಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಅಲ್ಪ ಸಂಖ್ಯಾತರಿಗೆ ಆರ್ಥಿಕ ನೆರವನ್ನು ನೀಡಲಾಗುವುದು ಎಂದು ತಿಳಿಸಲಾಗಿದೆ.

ತೆಲಂಗಾಣ ಟುಡೆ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ತರಬೇತಿ ಪೂರ್ಣಗೊಳಿಸಿದ 106 ಅಭ್ಯರ್ಥಿಗಳಿಗೆ ತೆಲಂಗಾಣ ಅಲ್ಪಸಂಖ್ಯಾತರ ಹಣಕಾಸು ನಿಗಮ ಫಲಾನುಭವಿಗಳಿಗೆ ಉಚಿತ ಕಾರುಗಳನ್ನು ಒದಗಿಸಿದೆ

ಇದರಿಂದ ಸಾಬೀತಾಗಿರುವುದೇನೆಂದರೆ ತೆಲಂಗಾಣ ಸರ್ಕಾರ ಮುಸ್ಲೀಂ ಅಲ್ಪಸಂಖ್ಯಾತರಿಗೆ ಮಾತ್ರ ಉಚಿತ ಕಾರುಗಳನ್ನ ನೀಡಿದೆ ಎಂದು ಹರಿದಾಡುತ್ತಿರುವ ಸುದ್ದಿ ಸುಳ್ಳು. ರಾಜ್ಯದಲ್ಲಿನ ವಿವಿಧ ಸಮುದಾಯಗಳಿಗೆ ಜನರು ಈ ಕಾರ್ಯಕ್ರಮದ ಉಪಯೋಗವನ್ನು ಪಡೆಯುತ್ತಿದ್ದಾರೆ.


Claim :  Free car distribution only to Muslims in Telangana. The government is giving away incentives to the Muslim community using Taxpayer money
Claimed By :  Social Media Users
Fact Check :  False
Tags:    

Similar News