ಫ್ಯಾಕ್ಟ್ ಚೆಕ್: ಗ್ರಾಮೀಣ ಉದ್ಯಮಿತಾ ವಿಕಾಸ ನಿಗಮ ವೆಬ್‌ಸೈಟ್‌ನಲ್ಲಿ ಸರ್ಕಾರಿ ಉದ್ಯೋಗ ಹುದ್ದೆಗಳ ಕುರಿತು ಬಂದಿರುವಂತಹ ಜಾಹೀರಾತು ಸುಳ್ಳು
ಗ್ರಾಮೀಣ ಉದ್ಯಮಿತಾ ವಿಕಾಸ ನಿಗಮ ವೆಬ್‌ಸೈಟ್‌ನಲ್ಲಿ ಸರ್ಕಾರಿ ಉದ್ಯೋಗ ಹುದ್ದೆಗಳ ಕುರಿತು ಬಂದಿರುವಂತಹ ಜಾಹೀರಾತು ಸುಳ್ಳು
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಕ್ಕೆ ಸಂಬಂಧಿಸಿದ, ಗ್ರಾಮೀಣ ಉದ್ಯಮ ವಿಕಾಸ್ ನಿಗಮ್ ಹೆಸರಿನ ವೆಬ್‌ಸೈಟ್‌ನ ಜಾಹೀರಾತಿನಲ್ಲಿ 2 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿಯಿದೆ. ಈ ಹುದ್ದೆ ಬೇಕಾದವರು 435ರೂ ಪಾವತಿಸಿ ನೊಂದಣಿ ಮಾಡಿಕೊಳ್ಳಬಹುದು, ನೋಂದಣಿ ಮಾಡಿಕೊಂಡಿರುವ ಶುಲ್ಕವನ್ನ ಮರುಪಾವತಿಸಲಾಗುವುದಿಲ್ಲ ಎಂದು ಪ್ರಕಟಿಸಿದೆ.
ರಾಜಸ್ಥಾನದಲ್ಲಿ ಗ್ರಾಮ ಉದ್ಯಮಿತಾ ಮಿತ್ರ ಹುದ್ದೆಗೆ 5450 ಪೋಸ್ಟ್‌ಗಳು ಖಾಲಿಯಿದೆ, ಬ್ಲಾಕ್ ಉದ್ಯಮಿತಾ ವಿಕಾಸ ಅಧಿಕಾರಿ ಹುದ್ದಗೆ 1950 ಪೋಸ್ಟ್‌ಗಳು, ಡಾಟಾ ಎಂಟ್ರಿ ಹುದ್ದೆಗೆ 950 ಪೋಸ್ಟ್‌ಗಳು ಮತ್ತು ಮಲ್ಟೀ ಟಾಸ್ಕಿಂಗ್ ಸ್ಟಾಫ್ ಹುದ್ದೆಗಾಗಿ 1750 ಪೋಸ್ಟ್‌ಗಳು ಖಾಲಿ ಇದೆ. ಜೊತೆಗೆ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿಯೂ ಸಹ ಸರ್ಕಾರಿ ಹುದ್ದೆ ಖಾಲಿಯಿದೆ. ಈ ಹುದ್ದೆಯಲ್ಲಿ ಕೆಲಸ ಮಾಡಲು ಬಯಸುವವರು ಅಕ್ಟೋಬರ್ 9, 2023ರ ಒಳಗೆ ಅಪ್ಲಿಕೇಶನ್ ಹಾಕಬೇಕು. ತಿಂಗಳಿಗೆ 17,500 - 21,500ರೂ ವರಗೆ ದುಡಿಯಬಹುದು ಎಂಬ ಪ್ರಕಟನೆಯನ್ನು ಹೊರಡಿಸಿತ್ತು.
ಫ್ಯಾಕ್ಟ್ ಚೆಕ್
ಮೊದಲನೆಯದಾಗಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ಗೂ ಪ್ರಕಟಿಸಿರುವ ವೆಬ್‌ಪೇಜ್‌ಗೂ ಯಾವುದೇ ಸಂಬಂಧ ಇಲ್ಲ . ಯಾಕೆಂದರೆ ಯಾವುದೇ ಸರ್ಕಾರಿ ವೆಬ್‌ಪೇಜ್‌ಗೆ ಹೋದರೂ, ಆ ಪೇಜ್ ಸರ್ಕಾರದ ಮುಖಪುಟಕ್ಕೆ ಅಥವಾ ಸರ್ಕಾರದ ಅಧಿಕೃತ ವೆಬ್‌ಸೈಟ್‌ಗೆ ಹಿಂದಿರುಗುತ್ತದೆ. ಆದರೆ, ಈ ವೆಬ್‌ಪೇಜ್ ಹಿಂದಿರುಗಲಿಲ್ಲ. ಅಷ್ಟೇ ಅಲ್ಲದೇ ಎಲ್ಲಾ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳಲ್ಲಿ ಕಡ್ಡಾಯವಾಗಿ ಭಾರತ ಸರ್ಕಾರದ ಲಾಂಛನವಿರುತ್ತದೆ ಆದರೆ ಈ ವೆಬ್‌ಸೈಟ್‌ನಲ್ಲಿ ಭಾರತ ಸರ್ಕಾರದ ಲಾಂಛನವೂ ಕಂಡುಬಂದಿಲ್ಲ.
ಹೀಗಾಗಿ guvn.co.in ವೆಬ್‌ಸೈಟ್ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಕ್ಕೆ ಸಂಬಂಧಿಸಿದ ಸರ್ಕಾರದ ಅಧಿಕೃತ ವೆಬ್‌ಸೈಟ್ ಅಲ್ಲ ಎಂದು ಪರಿಗಣಿಸಲಾಗಿದೆ.
ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (ಪಿಐಬಿ) ಫ್ಯಾಕ್ಟ್ ಚೆಕ್ ಮಾಡಿದ ನಂತರ ಪತ್ರಿಕಾ ಪ್ರಕಟನೆಯಲ್ಲಿ, ಈ ವೆಬ್‌ಸೈಟ್ ನಕಲಿ ಎಂದು ಬಹಿರಂಗಪಡಿಸಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಕ್ಕಾಗಲೀ, ಗ್ರಾಮೀಣ ಉದ್ಯಮಿತಾ ವಿಕಾಸ ನಿಗಮ ವೆಬ್‌ಸೈಟ್‌ಗಾಗಲೀ ಯಾವುದೇ ಸಂಬಂಧವಿಲ್ಲ. ಸೈಬರ್ ಕ್ರೈಮ್ ಮತ್ತು ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಜೊತೆಗೂಡಿ ಈ ವೆಬ್‌ಸೈಟ್‌ನ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಪಿಐಬಿ ಹೇಳಿದೆ.
ನಕಲಿ ವೆಬ್‌ಸೈಟ್ ನಿರ್ಬಂಧಿಸಿ ಮತ್ತು ವೆಬ್‌ಸೈಟ್‌ನ ಮಾಲೀಕರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ಅಧಿಕೃತವಾಗಿ ಹೇಳಿದೆ.