ಫ್ಯಾಕ್ಟ್‌ಚೆಕ್: ಭಾರತದ ಪ್ರಧಾನಿ ನರೇಂದ್ರ ಮೋದಿ ಜಿ7 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡನ್‌ರೊಂದಿಗೆ ಹಸ್ತಲಾಘವ ಮಾಡಿದರು
ಭಾರತದ ಪ್ರಧಾನಿ ನರೇಂದ್ರ ಮೋದಿ ಜಿ7 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡನ್‌ರೊಂದಿಗೆ ಹಸ್ತಲಾಘವ ಮಾಡಿದರು
ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನರೇಂದ್ರ ಮೋದಿ ಜಿ7 ಸಭೆಗಾಗಿ ಇಟಲಿಗೆ ತೆರಳಿದ್ದರು. ಇಟಲಿಯ ಅಪುಲಿಯಾ ಪ್ರದೇಶದ ಫಾಸಾನೊಗೆ ಆಹ್ವಾನಿಸಲಾದ 12 ದೇಶಗಳಲ್ಲಿ ಭಾರತವೂ ಒಂದು. ಮೆಲೋನಿ ಮೊದಲ ಬಾರಿಗೆ G7 ಅನ್ನು ಉದ್ದೇಶಿಸಿ ಪೋಪ್ ಫ್ರಾನ್ಸಿಸ್ ಅವರನ್ನು ಆಹ್ವಾನಿಸಿದ್ದಾರೆ ಹಾಗೆ ಇಟಾಲಿಯನ್ ಪಿಎಂ ಮೆಲೋನಿ ಗ್ಲೋಬಲ್ ಸೌತ್ ಅನ್ನು ಜಿ7 ನೊಂದಿಗೆ ಪಾಲುದಾರಿಕೆ ಮಾಡಲು ಪರಿಗಣಿಸಿದ್ದಾರೆ.
ತಮ್ಮ ಪ್ರವಾಸದ ವೇಳೆ ಮೋದಿ ಅವರು ಫ್ರಾನ್ಸ್, ಜರ್ಮನಿ, ಜಪಾನ್, ಇಟಲಿ ಮತ್ತು ಯುಕೆ ನಾಯಕರನ್ನು ಭೇಟಿ ಮಾಡಿ ಯುಎಸ್ ಅಧ್ಯಕ್ಷ ಬಿಡೆನ್ ಮತ್ತು ಕೆನಡಾದ ಪ್ರಧಾನಿ ಟ್ರುಡೊ ಅವರೊಂದಿಗೆ ಅಧಿಕೃತ ಸಭೆ ನಡೆಸಿ ಮಾತುಕತೆ ನಡೆಸಿದರು.
ಇದೇ ವೇಳೆ ಪ್ರಧಾನಿ ಮೋದಿ ಮತ್ತೊಬ್ಬ ವ್ಯಕ್ತಿಯೊಂದಿಗೆ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾರತದ ಚುನಾವಣೆಯಲ್ಲಿ ಅಮೆರಿಕ ಹಸ್ತಕ್ಷೇಪ ಮಾಡಿದೆ ಹೀಗಾಗಿ ಆ ದೇಶಕ್ಕೆ ನಮ್ಮ ಶಕ್ತಿ ತೋರಿಸಲು ಜೋ ಬಿಡನ್ ಅವರೊಂದಿಗೆ ಕೈಕುಲುಕಲು ಮೋದಿ ನಿರಾಕರಿಸಿದರು ಎಂಬ ಪೋಸ್ಟ್‌ಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. .
“जो बाईडेन से हाथ न मिलाकर मोदी जी ने अमेरिका को उसकी औकात दिखा दी हमारे चुनावों में दखलअंदाजी का नतीज़ा औकात दिखा देंगे दुनिया के सामने !! ಹಿಂದಿಯಲ್ಲಿ ಪೋಸ್ಟ್ ವೈರಲ್ ಆಗುತ್ತಿದೆ.
जो बाईडेन से हाथ न मिलाकर मोदी जी ने
— अक्स (@VickyAarya007) June 15, 2024
अमेरिका को उसकी औकात दिखा दी
हमारे चुनावों में दखलअंदाजी का नतीज़ा
औकात दिखा देंगे दुनिया के सामने !! pic.twitter.com/tQ4kqR1XyK
जो बाईडेन से हाथ न मिलाकर मोदी जी ने
— इंदु (@Congress_Indira) June 15, 2024
अमेरिका को उसकी औकात दिखा दी
हमारे चुनावों में दखलअंदाजी का नतीज़ा
औकात दिखा देंगे दुनिया के सामने !!#GiorgiaMeloni #Melodi #G72024 #G7meeting #G7ITALY #Bhabhi #selfie #Modi #JoeBiden pic.twitter.com/U0i1T1i0n9
जो बाईडेन से हाथ न मिलाकर मोदी जी ने
— OP SEvDa 'RAMPURA' (@OpSewda) June 15, 2024
अमेरिका को उसकी औकात दिखा दी
हमारे चुनावों में दखलअंदाजी का नतीज़ा
औकात दिखा देंगे दुनिया के सामने !! pic.twitter.com/TC4lR4xZQf
जो बाईडेन से हाथ न मिलाकर मोदी जी ने अमेरिका को उसकी औकात दिखा दी हमारे चुनावों में दखलअंदाजी का नतीज़ा औकात दिखा देंगे दुनिया के सामने !!😂😂😂 pic.twitter.com/2vAQMy0eun
— Chatar Singh (@ChatarS68244467) June 16, 2024
उत्तराखंड के रुद्रप्रयाग में एक सड़क दुर्घटना में हुई जनहानि अत्यंत दुःखद व दुर्भाग्यपूर्ण है।
— Yogi Adityanath (@myogiadityanath) June 15, 2024
मेरी संवेदनाएं शोकाकुल परिजनों के साथ हैं।
प्रभु श्री राम से प्रार्थना है कि दिवंगत पुण्यात्माओं को सद्गति और घायलों को शीघ्र स्वास्थ्य लाभ प्रदान करें।
ಫ್ಯಾಕ್ಟ್‌ಚೆಕ್
ವೈರಲ್ ಆದ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ವೀಡಿಯೊದಲ್ಲಿರುವ ವ್ಯಕ್ತಿ ಯುಎಸ್ ಅಧ್ಯಕ್ಷ ಜೋ ಬಿಡನ್ ಅಲ್ಲ.
ವೈರಲ್ ವಿಡಿಯೋವಿನಲ್ಲಿರುವ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ನಾವು ವೀಡಿಯೊದಿಂದ ಹೊರತೆಗೆಯಲಾದ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಉಪಯೋಗಿಸಿ ಹುಡಕಾಟ ನಡೆಸಿದೆವು.ಹುಡುಕಾಟದಲ್ಲಿ, ವೈರಲ್ ವೀಡಿಯೊದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಯನ್ನು ತೋರಿಸುವ ದೀರ್ಘವಾದ ವೀಡಿಯೊವನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ಇರುವ ನಾಯಕರನ್ನು ವೇದಿಕೆಗೆ ಕರೆದುಕೊಂಡು ಹೋಗುವಂತಹ ಕೆಲಸಗಳನ್ನು ಮಾಡುವುದನ್ನು ಕಾಣಬಹುದು. 'President Erdogan in Italy for the G7 Leaders Summit' ಎಂಬ ಶೀರ್ಷಿಕೆಯೊಂದಿಗೆ ಆ ವೀಡಿಯೊದಲ್ಲಿ ಹಂಚಿಕೊಂಡಿದ್ದರು.
‘Biden awkwardly salutes Italian Prime Minister Giorgis Meloni as he arrives at G7 Summit’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು. ಹಂಚಿಕೊಳ್ಳಲಾದ ವಿಡಿಯೋವಿನಲ್ಲಿ ಅದೇ ವ್ಯಕ್ತಿ ಯುಎಸ್ ಅಧ್ಯಕ್ಷ ಜೋ ಬಿಡನ್ ಅವರನ್ನು ವೇದಿಕೆಯತ್ತ ಕರೆದೊಯ್ಯುತ್ತಿರುವುದನ್ನು ನಾವು ಗಮನಿಸಿದೆವು.
G7 ಶೃಂಗಸಭೆಯ ಅಧಿಕೃತ Flickr ಖಾತೆಯಲ್ಲಿ US ಅಧ್ಯಕ್ಷ ಜೋ ಬಿಡೆನ್ ಅವರೊಂದಿಗೆ ವ್ಯಕ್ತಿಯ ಕೆಲವು ಚಿತ್ರಗಳನ್ನು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು.
ವೈರಲ್ ವೀಡಿಯೊದಿಂದ ತೆಗೆದ ಸ್ಕ್ರೀನ್‌ಶಾಟ್ ಮತ್ತು ಫ್ಲಿಕರ್‌ನಲ್ಲಿ ಪ್ರಕಟವಾದ ಚಿತ್ರಗಳ ನಡುವಿನ ಹೋಲಿಕೆ ಚಿತ್ರಗಳು ಇಲ್ಲಿದೆ.
It's always a pleasure to meet @POTUS @JoeBiden. India and USA will keep working together to further global good ಎಂಬ ಶರ್ಷಿಕೆಯನ್ನೀಡಿ ನರೇಂದ್ರ ಮೋದಿಯವರು ತಮ್ಮ ಅಧಿಕೃತ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು.
ಭಾರತದ ಪ್ರಧಾನಿ ಮೋದಿ ಅವರು ಅಮೇರಿಕಾ ಅಧ್ಯಕ್ಷ ಜೋ ಬಿಡನ್ ಅವರೊಂದಿಗೆ ಮೋದಿ ಹಸ್ತಲಾಘವ ಮಾಡುತ್ತಿರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ @POTUS @JoeBiden ಅವರನ್ನು ಭೇಟಿಯಾಗಲು ಯಾವಾಗಲೂ ಸಂತೋಷವಾಗುತ್ತದೆ. ಜಾಗತಿಕ ಒಳಿತಿಗಾಗಿ ಭಾರತ ಮತ್ತು ಯುಎಸ್ಎ ಒಟ್ಟಾಗಿ ಕೆಲಸ ಮಾಡುತ್ತಲೇ ಇರುತ್ತವೆ' ಎಂಬ ಶೀರ್ಷಿಕೆಯೊಂದಿಗೆ ನರೇಂದ್ರ ಮೋದಿ ಪೋಸ್ಟ್ ಮಾಡಿದ್ದಾರೆ.
It's always a pleasure to meet @POTUS @JoeBiden. India and USA will keep working together to further global good. 🇮🇳🇺🇸 pic.twitter.com/Xzyvp5cLCq
— Narendra Modi (@narendramodi) June 14, 2024
ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ಯುಎಸ್ ಅಧ್ಯಕ್ಷ ಜೋ ಬಿಡನ್ ಅಲ್ಲ. ಜಿ7 ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬಿಡನ್ ಅವರೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದರು ಎಂಬ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ.