ಫ್ಯಾಕ್ಟ್‌ಚೆಕ್‌: ಐಟಿಸಿ ಕಂಪನಿ ಹಲಾಲ್‌ ಪ್ರಮಾಣಿಕರಿಸಿದ ಆಶೀರ್ವಾದ್‌ ಹಿಟ್ಟನ್ನು ಭಾರತದಲ್ಲಿ ಮಾರಾಟ ಮಾಡುವುದಿಲ್ಲವೆಂದು ಸ್ಪಷ್ಟಪಡಿಸಿದೆ.

ಐಟಿಸಿ ಕಂಪನಿ ಹಲಾಲ್‌ ಪ್ರಮಾಣಿಕರಿಸಿದ ಆಶೀರ್ವಾದ್‌ ಹಿಟ್ಟನ್ನು ಭಾರತದಲ್ಲಿ ಮಾರಾಟ ಮಾಡುವುದಿಲ್ಲವೆಂದು ಸ್ಪಷ್ಟಪಡಿಸಿದೆ.

Update: 2023-12-09 08:53 GMT

Aashirvad Atta

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಆಶೀರ್ವಾದ್‌ ಹಿಟ್ಟಿನ ಪ್ಯಾಕಟ್‌ನ ಮೇಲೆ ಹಲಾಲ್ ಪ್ರಮಾಣೀಕೃತ ಲೋಗೋ ಇರುವುದನ್ನು ಇದೀಗ X ಖಾತೆಗಳಲ್ಲಿ ಖಾತೆದಾರರು ಹಂಚಿಕೊಳ್ಳುವುದನ್ನು ನಾವು ನೋಡಬಹುದು. ಹಾಗೆ ಐಟಿಸಿಯ ಎಲ್ಲಾ ಉತ್ಪನ್ನಗಳು ಹಲಾಲ್ ಪ್ರಮಾಣೀಕೃತವಾಗಿದೆ ಆದ್ದರಿಂದ ಎಲ್ಲರೂ ಈ ಉತ್ಪನ್ನಗಳನ್ನು ಬಹಿಷ್ಕರಿಸಿ ಎಂಬ ಸುದ್ದಿಯ ಇದೋಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

ಶೀರ್ಷಿಕೆಯಾಗಿ ಹಿಂದಿಯಲ್ಲಿ “Halal certified. #BoycottHalalProducts. ITC के सभी प्रोडक्ट्स (आशीर्वाद आटा) का आज से मेरे द्वारा पूर्णतया बहिष्कार। विकल्प ”

ಹಿಂದಿಯಲ್ಲಿರುವ ಶೀರ್ಷಿಕೆಯನ್ನು ಅನುವಾದಿಸಿದಾಗ "#ಹಲಾಲ್‌ ಪ್ರಮಾಣೀಕೃತ #ನಾನು ಎಲ್ಲಾ ITC ಉತ್ಪನ್ನಗಳಲ್ಲಿರುವ ಹಲಾಲ್ ಉತ್ಪನ್ನಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸುತ್ತೇನೆ" ಎಂದು ಬರೆಯಲಾಗಿತ್ತು.

ಫ್ಯಾಕ್ಟ್‌ಚೆಕ್‌:

ವೈರಲ್‌ ಆದ ಸುದ್ದಿ ಸುಳ್ಳು. ವೈರಲ್‌ ಆದ ಚಿತ್ರದಲ್ಲಿ ಕಾಣುವ ಆಶೀರ್ವಾದ್‌ ಆಟಾ ಕೇವಲ ಹಲಾಲ್‌ ಪ್ರಮಾಣಿಕರಿಸಿರುವ ದೇಶಗಳಿಗೆ ಮಾತ್ರ ರಫ್ತು ಮಾಡಲಾಗುತ್ತದೆ.

ನಾವು ಗೂಗಲ್‌ನಲ್ಲಿ ಆಶೀರ್ವಾದ್‌ ಆಟಾ ಎಂದು ಹುಡುಕಿದಾಗ ನಮಗೆ ಆಶೀರ್ವಾದ್‌ ಅವರ ಅಧಿಕೃತ ವೆಬ್‌ಸೈಟ್‌ ಲಿಂಕ್‌ ಸಿಕ್ಕಿತು. ಲಿಂಕ್‌ನಲ್ಲಿ ಹುಡುಕಿದಾಗ ಭಾರತದಲ್ಲಿ ಹಲಾಲ್ ಪ್ರಮಾಣೀಕರಿಸಿದ ಉತ್ಪನ್ನಗಳು ಯಾವುದೂ ಮಾರಾಟವಾಗುತ್ತಿರುವುದು ಕಂಡುಬಂದಿಲ್ಲ.

ನೋಮ್ಯಾಡ್‌ ಎಂಬ X ಖಾತೆದಾರ ಆಶೀರ್ವಾದ್‌ ಪ್ಯಾಕೆಟ್‌ನ ಚಿತ್ರವನ್ನು ಹಂಚಿಕೊಂಡು ಅದರಲ್ಲಿ ಕಾಣುವ ಹಲಾಲ್‌ ಲೋಗೋವನ್ನು ಹೈಲೇಟ್‌ ಮಾಡಿ ಆ ಚಿತ್ರಕ್ಕೆ ಶೀರ್ಷಿಕೆಯಾಗಿ "ನಾಚಿಕೆಯಾಗಬೇಕು @ITCCorpCom ಹಿಂದೂಗಳಿಗೆ ಉಗ್ರಗಾಮಿ ಗುಂಪುಗಳು ತಿನ್ನುವ ಹಲಾಲ್‌ ತಿನ್ನುವುವಂತೆ ಒತ್ತಾಯಿಸುತ್ತಿದ್ದಾರೆ" ಎಂದು ಪೋಸ್ಟ್‌ ಮಾಡಿದ್ದಾರೆ. ಈ ಪೋಸ್ಟ್‌ಗೆ ಪ್ರತ್ಯತ್ತರವಾಗಿ ಐಟಿಸಿ ಲಿಮಿಟೆಡ್‌ ರೀಟ್ವೀಟ್‌ ಮಾಡಿತ್ತು. ಟ್ವೀಟ್‌ನಲ್ಲಿ "ವೈರಲ್‌ ಆದ ಸುದ್ದಿ ಸುಳ್ಳು. ತಪ್ಪು ಮಾಹಿತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೈರಲ್‌ ಪೋಸ್ಟ್‌ನಲ್ಲಿ ಕಾಣಿಸುವ ಚಿತ್ರ ಹಳೆಯದ್ದು ಇತ್ತೀಚಿನಿದಲ್ಲ. ರಫ್ತು ಮಾಡಲು ಇಟ್ಟಿರುವ ಪ್ಯಾಕೆಟ್‌ಗಳು ಅವು. ಭಾರತದಲ್ಲಿ ಹಲಾಲ್‌ನ ಯಾವುದೇ ಉತ್ಪನ್ನಗಳನ್ನು ಐಟಿಸಿ ಮಾರಾಟ ಮಾಡುತ್ತಿಲ್ಲ ಎಂದು ಉತ್ತರಿಸಿದೆ. ಜೊತೆಗೆ ತಪ್ಪು ಸಂದೇಶಗಳನ್ನು ಯಾರೂ ತವಾನೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಯಾರಾದರೂ ಆಶೀರ್ವಾದ್ ಅಟ್ಟಾ ಅಥವಾ ಆಶೀರ್ವಾದದ ಯಾವುದೇ ಇತರ ಉತ್ಪನ್ನಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರವನ್ನು ತಿಳಿಯಲು ದಯವಿಟ್ಟು itccares@itc.in ಗೆ ಮೇಲ್‌ ಮಾಡಿ ಎಂದು ಪೋಸ್ಟ್‌ ಮಾಡಿದ್ದರು.

X ಖಾತೆಯಲ್ಲೂ ITC ಕೇರ್ಸ್ ಎಂಬ ಅಧಿಕೃತ ಟ್ವಿಟರ್‌ ಖಾತೆ ವೈರಲ್‌ ಆದ ಸುದ್ದಿಯನ್ನು ನಿರಾಕರಿಸಿದೆ. ವೈರಲ್‌ ಆದ ಫೋಡೋದಲ್ಲಿ ಕಾಣಿಸುತ್ತಿರುವುದು ಹಳೆಯ ಚಿತ್ರ ಎಂದು ಸ್ಪಷ್ಟಪಡಿಸಿದ್ದಾರೆ.

ಇದರಿಂದ ಸಾಭೀತಾಗಿರುವದೇನೆಂದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಸುದ್ದಿ ಸುಳ್ಳು. ಐಟಿಸಿ ಕಂಪನಿ ಹಲಾಲ್‌ ಪ್ರಮಾಣಿಕರಿಸಿದ ಆಶೀರ್ವಾದ್‌ ಹಿಟ್ಟನ್ನು ಭಾರತದಲ್ಲಿ ಮಾರಾಟ ಮಾರಾಟ ಮಾಡುತ್ತಿಲ್ಲ.

Claim :  ITC is selling its halal-certified products, like Aashirvad atta, in the Indian market. (ITC is selling its halal-certified products, like Aashirvad atta, in the Indian market.)
Claimed By :  X users
Fact Check :  False
Tags:    

Similar News