ಫ್ಯಾಕ್ಟ್‌ಚೆಕ್‌: ಕರ್ನಾಟಕದ ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ್ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರಾ?

ಕರ್ನಾಟಕದ ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ್ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರಾ?

Update: 2024-06-12 18:52 GMT

BLDEA

ಏಪ್ರಿಲ್ 26 ಮತ್ತು ಮೇ 7, 2024 ರಂದು ಕರ್ನಾಟಕ ಲೋಕಸಭೆ ಚುನಾವಣೆ ಎರಡನೇ ಮತ್ತು ಮೂರನೇ ಹಂತಗಳಲ್ಲಿ ನಡೆಸಲಾಯಿತು. ಕರ್ನಾಟಕವು ಒಟ್ಟು 28 ಲೋಕಸಭಾ ಸ್ಥಾನಗಳನ್ನು ಹೊಂದಿದೆ.

ಬಿಜಾಪುರ ಲಿಂಗಾಯತ ಜಿಲ್ಲಾ ಶೈಕ್ಷಣಿಕ ಸಂಘದ (ಬಿಎಲ್‌ಡಿಇಎ) ಅಧ್ಯಕ್ಷ ಮತ್ತು ಕಾಂಗ್ರೆಸ್ ಮುಖಂಡ ಎಂ.ಬಿ.ಪಾಟೀಲ್ ಅವರು ಕಾಂಗ್ರೆಸ್‌ನ ಪ್ರಮುಖ ಲಿಂಗಾಯತ ನಾಯಕ. ಇವರು ಬಿಜೆಪಿ ಪಕ್ಷದವರಾದರೂ, 2023ರ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಸಮುದಾಯವು ಕಾಂಗ್ರೆಸ್‌ಗೆ ಬೆಂಬಲವನ್ನು ತೋರಿಸಿತು.

ಕರ್ನಾಟಕದಲ್ಲಿ ಚುನಾವಣೆ ಗೆಲ್ಲಲು 'ಹಿಂದೂಗಳನ್ನು ವಿಭಜಿಸಿ ಮತ್ತು ಮುಸ್ಲಿಮರನ್ನು ಒಗ್ಗೂಡಿಸುವ' ನೀತಿಯನ್ನು ಅಳವಡಿಸಿಕೊಳ್ಳುವಂತೆ ಬಿಎಲ್‌ಡಿಇಎ ಅಧ್ಯಕ್ಷ ಎಂ.ಬಿ.ಪಾಟೀಲ್ ಸೋನಿಯಾ ಗಾಂಧಿ ಅವರಿಗೆ ಪತ್ರವವೊಂದು ಬರೆದಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸೋನಿಯಾ ಗಾಂಧಿಯನ್ನು ಉದ್ದೇಶಿಸಿ ದಿನಾಂಕ 10/7/2017ರಂದು ಹಳೆಯ ಪತ್ರವನ್ನು BLDE ಅಸೋಸಿಯೇಶನ್‌ನ ಲೆಟರ್‌ಹೆಡ್‌ನಲ್ಲಿ ಬರೆಯಲಾಗಿತ್ತು. ಕರ್ನಾಟಕದಲ್ಲಿ 2018ರ ವಿಧಾನಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಕುರಿತು ಗ್ಲೋಬಲ್ ಕ್ರಿಶ್ಚಿಯನ್ ಕೌನ್ಸಿಲ್ ಮತ್ತು ವರ್ಲ್ಡ್ ಇಸ್ಲಾಮಿಕ್ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಎಂ.ಬಿ.ಪಾಟೀಲ್ ಅವರು ಇತರ ಸಚಿವರೊಂದಿಗೆ ಸಮಗ್ರ ಚರ್ಚೆ ನಡೆಸಿದ್ದಾರೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಈ ಪತ್ರವು ಮೇ 2024 ರಲ್ಲಿ "ಎಚ್ಚರಿಕೆಯಿಂದ ನೋಡಿ, ಮುಂದೆ ಕಾಂಗ್ರೆಸ್ ಯಾವ ಮಟ್ಟಕ್ಕೆ ಹೋಗಬಹುದು " ಎಂಬ ಶೀರ್ಷಿಕೆಯೊಂದಿಗೆ ಪತ್ರವು ವೈರಲ್‌ ಆಗಿದೆ. ಅಷ್ಠ ಅಲ್ಲ ಬಿಜೆಪಿಯನ್ನು ಸೋಲಿಸಬೇಕಾದರೆ ಹಿಂದೂಗಳನ್ನು ವಿಭಜಿಸಬೇಕು ಎಂದು ಕರ್ನಾಟಕ ಕಾಂಗ್ರೆಸ್ ಸಚಿವ ಎಂ.ಬಿ.ಪಾಟೀಲ್ ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ. ಹಿಂದೂಗಳನ್ನು ವಿಭಜಿಸಲು ಗ್ಲೋಬಲ್ ಕ್ರಿಶ್ಚಿಯನ್ ಕೌನ್ಸಿಲ್ ಮತ್ತು ವರ್ಲ್ಡ್ ಇಸ್ಲಾಮಿಕ್ ಆರ್ಗ್‌ನ ಸಹಾಯವನ್ನು ತೆಗೆದುಕೊಳ್ಳುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಪತ್ರದಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ಆದ ಪತ್ರ ನಕಲಿಯದ್ದು.

ನಾವು BLDE ಅಸೋಸಿಯೇಷನ್, ಸೋನಿಯಾ ಗಾಂಧಿಗೆ ​​ಎಂಬಿ ಪಾಟೀಲ್ ಪತ್ರ ಎಂಬ ಕೀವರ್ಡ್ ಬಳಸಿ ಹುಡುಕಿದಾಗ, ನಮಗೆ ಅದು ನಕಲಿ ಪತ್ರ ಎಂಬ ವರದಿಗಳು ಕಂಡುಬಂದಿತು.

ಏಪ್ರಿಲ್ 2019 ರಲ್ಲಿ ಪ್ರಕಟವಾದ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ , ಹಿಂದೂಗಳನ್ನು ಜಾತಿಯ ಆಧಾರದ ಮೇಲೆ ವಿಭಜಿಸಲು ಕಾಂಗ್ರೆಸ್ ಚುನಾವಣಾ ತಂತ್ರವನ್ನು ಸುಳ್ಳು ಆರೋಪದ ಪತ್ರದನ್ನು ಭಿತ್ತರಿಸಿದೆ ಎಂದು ರಾಜ್ಯ ಗೃಹ ಸಚಿವ ಎಂಬಿ ಪಾಟೀಲ್ ಪೊಲೀಸರಿಗೆ ದೂರು ದಾಖಲಿಸಿದ್ದರು. 2017-2018ರಲ್ಲಿ ಪ್ರತ್ಯೇಕ ಲಿಂಗಾಯತ ಗುರುತಿನ ಆಂದೋಲನದ ಬಗ್ಗೆ ಬರೆದಿರುವ ನಕಲಿ ಪತ್ರವೊಂದು ಸಿಕ್ಕಿತ್ತು, ಹೀಗಾಗಿ ಎಂಬಿ ಪಾಟೀಲ್‌ ನಕಲಿ ಪತ್ರವನ್ನು ಬಿತ್ತರಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.

ಕರ್ನಾಟಕದ ಸಚಿವ ಎಂ.ಬಿ.ಪಾಟೀಲ್ ಕೂಡ ಏಪ್ರಿಲ್‌ 2019ರಲ್ಲಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ನಕಲಿ ಪತ್ರವನ್ನು ಹಂಚಿಕೊಂಡಿದ್ದರು. ನಕಲಿ ಪತ್ರವನ್ನು ಹಂಚಿಕೊಂಡು ಈ ನಕಲಿ ಪತ್ರವನ್ನು ಪ್ರಕಟಿಸಿದವರ ವಿರುದ್ದ ಫೋರ್ಜರಿ ಕೇಸನ್ನು ಹಾಕಿ ಕಾನೂನು ಬದ್ದವಾಗಿ ಕ್ರಮ ಕೈಗೊಳ್ಳುತ್ತೇನೆ ಎಂದು ಪೋಸ್ಟ್‌ ಮಾಡಿದ್ದರು. ನರ ಬೆಂಬಲವನ್ನು ಕಳೆದುಕೊಂಡಿರುವುದರಿಂದ ಬಿಜೆಪಿಯ ಹತಾಶೆಯಿಂದ ನಕಲಿ ಪತ್ರಗಳ ಮೇಲೆ ಅವಲಂಬಿತರಾಗಿದ್ದಾರೆ ಎಂದು ಬರೆದುಕೊಂಡಿದ್ದರು.

Full View

ಹಾಗಾಗಿ ವೈರಲ್ ಆಗಿರುವ ಪತ್ರ ನಕಲಿಯಾಗಿದ್ದು, ಪ್ರಸ್ತುತ ಬಿಎಲ್‌ಡಿಇಎ ಮತ್ತು ಕರ್ನಾಟಕ ಸರ್ಕಾರದ ಸಚಿವ ಎಂ.ಬಿ.ಪಾಟೀಲ್ ಅವರು ಸೋನಿಯಾ ಗಾಂಧಿ ಅವರಿಗೆ ಹಿಂದೂಗಳ ಮೇಲೆ 'ವಿಭಜನೆ ರಾಜಕಾರಣ' ಮಾಡಲು ಮತ್ತು ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರ ಸಹಾಯ ಪಡೆಯುವ ಬಗ್ಗೆ ಯಾವುದೇ ಪತ್ರವನ್ನು ಬರೆದಿಲ್ಲ.

Claim :  ಕರ್ನಾಟಕದ ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ್ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರಾ?
Claimed By :  Social Media Users
Fact Check :  False
Tags:    

Similar News