ಫ್ಯಾಕ್ಟ್‌ಚೆಕ್‌: ರಾಮಮಂದಿರವನ್ನು ಕೆಡವಿ ಮಸೀದಿಯನ್ನು ನಿರ್ಮಾಣ ಮಾಡುವುದಾಗಿ ರಾಹುಲ್‌ ಗಾಂಧಿ ವಾಗ್ವಾದ ನೀಡಿಲ್ಲ.

ರಾಮಮಂದಿರವನ್ನು ಕೆಡವಿ ಮಸೀದಿಯನ್ನು ನಿರ್ಮಾಣ ಮಾಡುವುದಾಗಿ ರಾಹುಲ್‌ ಗಾಂಧಿ ವಾಗ್ವಾದ ನೀಡಿಲ್ಲ.

Update: 2024-11-21 16:16 GMT

ಕೇರಳದ ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಇಪ್ಪತ್ತೆರೆಡು ಸೆಕೆಂಡುಗಳಿರುವ ಈ ವಿಡಿಯೋವನ್ನು ಗಮನಿಸಿದರೆ, ವಿಡಿಯೋದಲ್ಲಿ ಮೊದಲು ಅಯೋಧ್ಯೆಯ ರಾಮಮಂದಿರವನ್ನು ನೋಡಬಹುದು ನಂತರ ರಾಮಮಂದಿರವನ್ನು ಧ್ವಂಸ ಮಾಡಿ ಬಾಬರಿ ಮಸೀದಿಯನ್ನು ಕಟ್ಟಿರುವುದನ್ನು ನಾವು ವೈರಲ್‌ ಆದ ವಿಡಿಯೋದಲ್ಲಿ ನೋಡಬಹುದು. ವಿಡಿಯೋ ಕೊನೆಯಲ್ಲಿ ರಾಹುಲ್‌ ಗಾಂಧಿಯ ಚಿತ್ರದೊಂದಿಗೆ ʼವಯನಾಡ್‌ ಕಾಂಗ್ರೆಸ್‌ ಸಮಿತಿʼ ರಾಹುಲ್ ಗಾಂಧಿಗೆ ಮತ ನೀಡುವಂತೆ ಮನವಿ ಮಾಡಿದೆ ಎಂದು ಕ್ಯಾಪ್ಷನ್‌ ಬರುವುದನ್ನು ನೋಡಬಹುದು. ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರೊಂದಿಗೆ ಪ್ರಚಾರ ಮಾಡುವಾಗ ವಯನಾಡನ್ನು ಜಾಗತಿಕ ಪ್ರವಾಸಿ ತಾಣವಾಗಿ ಪರಿವರ್ತಿಸುತ್ತೇವೆ ಎಂದು ಪ್ರತಿಜ್ಞೆ ಮಾಡಿದರು. ಸಾಮಾಜಿಕ ಬಳಕೆದಾರರು ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ಪರವಾಗಿ ಮತ ಚಲಾಯಿಸಲು ಕಾಂಗ್ರೆಸ್ ರಾಮಮಂದಿರದ ಬದಲಿಗೆ ಮಸೀದಿಯ ವಿಡಿಯೋವನ್ನು ಮಾಡಿದೆ ಎಂದು ಕ್ಯಾಪ್ಷನ್‌ನ್ನೀಡಿ ಹಂಚಿಕೊಳ್ಳುತ್ತಿದ್ದಾರೆ.

ನವಂಬರ್‌ 12, 2024ರಂದು ʼಮಲ್ಲಿಕಾರ್ಜುನ ಏನ್‌1986ʼ ಎಂಬ ಎಕ್ಸ್‌ ಖಾತೆದಾರ "ಕಾಂಗ್ರೆಸ್ ಪಕ್ಷವು ತನ್ನ ವಯನಾಡ್ ಲೋಕಸಭಾ ಸ್ಥಾನಕ್ಕಾಗಿ " ಹಿಂದೂ ಧರ್ಮದ ರಾಮಮಂದಿರ ದೇವಸ್ಥಾನವನ್ನು ಹೊಡೆದು ಹಾಕಿ ಮುಸ್ಲಿಂ ಧರ್ಮದ ಮಸೀದಿಯನ್ನು ಕಟ್ಟುತ್ತೇವೆ " ಎಂದು ಜಾಹೀರಾತು ವಿಡಿಯೋ ಮಾಡಿ ರಾಜಾರೋಷವಾಗಿ ಹಾಕಿದ್ದಾರೆ ನೋಡಿ. ಕಾಂಗ್ರೆಸ್ ಪಕ್ಷವು ಹಿಂದೂ ವಿರೋಧಿ ಪಕ್ಷ, ದೇಶ ದ್ರೋಹಿ ಮತ್ತು ಧರ್ಮ ದ್ರೋಹಿ ಪಕ್ಷ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ" ಎಂಬ ಶೀರ್ಷಿಕೆಯೊಂದಿಗೆ ವಿಡಿಯೊವನ್ನು ಹಂಚಿಕೊಂಡಿರುವುದನ್ನು ನೋಡಬಹುದು.

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು


ಜಯಣ್ಣ ಪಿಎಂ ಎಂಬ ಫೇಸ್‌ಬುಕ್‌ ಖಾತೆದಾರರ "ಕಾಂಗ್ರೆಸ್ ತನ್ನ ವಯನಾಡ್ ಲೋಕಸಭಾ ಸ್ಥಾನಕ್ಕಾಗಿ ಯಾವ ರೀತಿಯ ಜಾಹೀರಾತು ಮಾಡಿದೆ ಎಂಬುದನ್ನು ನೋಡಿ, ಇದನ್ನು ಎಲ್ಲಾ ಹಿಂದೂಗಳಿಗೆ ಕಳುಹಿಸಿ ಮತ್ತು ಅವರ ಕಣ್ಣುಗಳನ್ನು ತೆರೆಯಿರಿ" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದರು.

Full View

ಮ್ಯೂಸಿಕ್‌ ಧುನ್‌ ಎಂಬ ಯೂಟ್ಯೂಬ್‌ ಖಾತೆದಾರರು ಸಹ ವೈರಲ್‌ ಆದ ವಿಡಿಯೋವನ್ನು ಹಂಚಿಕೊಂಡು ʼಕೇರಳಾದಲ್ಲಿ ರಾಹುಲ್‌ ಗಾಂಧಿಯ ಗೆಲುವು ನಿಶ್ಚಯʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Full View


Full View

 ಫ್ಯಾಕ್ಟ್‌ಚೆಕ್‌

ವೈರಲ್‌ ಆದ ವಿಡಿಯೋ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಯನಾಡ್ ಕಾಂಗ್ರೆಸ್ ಸಮಿತಿ ಈ ರೀತಿಯ ಯಾವುದೇ ವಿಡಿಯೋವನ್ನು ಹಂಚಿಕೊಂಡಿಲ್ಲ. ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ವ್ಯಕ್ತಿಯ ವಿರುದ್ದ ಎರ್ನಾಕುಲಂ ಗ್ರಾಮಾಂತರ ಸೈಬರ್‌ ಪೊಲೀಸ್‌ ಸ್ಟೇಷನ್‌ನಲ್ಲಿ ದೂರು ದಾಖಲು ಮಾಡಿದರು. ವಿಡಿಯೋವನ್ನು ಹಂಚಿಕೊಂಡ ವ್ಯಕ್ತಿಯ ವಿರುದ್ದ ಪ್ರಕರಣ ದಾಖಲಾಗಿ ಆತನನ್ನು ಬಂಧಿಸಲಾಗಿದೆ.

ನಾವು ವೈರಲ್‌ ಆದ ವಿಡಿಯೋನಲ್ಲಿರುವ ಸತ್ಯಾಂಶವನ್ನು ತಿಳಿಯಲು ನಾವು ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌ ಮಾಡಿದೆವು. ಹುಡುಕಾಟದಲ್ಲಿ ನಮಗೆ ಏಪ್ರಿಲ್‌ 26, 2024ರಂದು ʼಎಎನ್‌ಐʼ ವೆಬ್‌ಸೈಟ್‌ನಲ್ಲಿ ʼCongress lodges police complaint against 'fake video' of Rahul Gandhi circulated on social mediaʼ ಎಂಬ ಶೀರ್ಷಿಕೆಯೊಂದಿಗೆ ವರದಿಯಾಗಿರುವುದನ್ನು ನಾವು ನೋಡಬಹುದು. ವರದಿಯ ಪ್ರಕಾರ ದೇಶದ ಧಾರ್ಮಿಕ ಸಾಮರಸ್ಯವನ್ನು ಹಾಳು ಮಾಡುವ ಉದ್ದೇಶದಿಂದ ವಯನಾಡ್ ಜಿಲ್ಲಾ ಕಾಂಗ್ರೆಸ್ ಸಮಿತಿಯ ಹೆಸರಿನಲ್ಲಿ ನಕಲಿ ವಿಡಿಯೋ ಹಂಚಿಕೊಂಡಿರುವುದನ್ನು ಗಮನಿಸಿ ವಿಡಿಯೋ ಹಂಚಿಕೊಂಡಿರುವವರ ವಿರುದ್ದ ದೂರು ದಾಖಲು ಮಾಡಿದೆ. ಜೊತೆಗೆ ಪಕ್ಷದ ಘಟಕದ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ರಾಹುಲ್ ಗಾಂಧಿ ‘ನಕಲಿ ವೀಡಿಯೋ’ಗೆ ಸಂಬಂಧಿಸಿದಂತೆ ಕಾಂಗ್ರೆಸ್ ವಯನಾಡ್ ಜಿಲ್ಲಾ ಸಮಿತಿ ಎರ್ನಾಕುಲಂ ಗ್ರಾಮಾಂತರ ಸೈಬರ್‌ ಪೊಲೀಸ್‌ ಸ್ಟೇಷನ್‌ನಲ್ಲಿ ದೂರು ನೀಡಲಾಗಿದೆ. ಹಾಗೆ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಹಾಕುವಂತೆ ಮನವಿ ಮಾಡಿದೆ ಎಂದು ವರದಿಯಾಗಿದೆ.


ಏಪ್ರಿಲ್‌ 27, 2024ರಂದು ʼRa_Bies 3.0ʼ ಎಂಬ ಎಕ್ಸ್‌ ಖಾತೆದಾರ ʼEveryone in congress including its creative social media team is scoring self goal. Rahul was anyway winning this seat but it will damage them in other parts of the nationʼ ಎಂಬ ಶೀರ್ಷಿಕೆಯನ್ನೀಡಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಏಪ್ರಿಲ್‌ 26,2024ರಂದು ವಯನಾಡ್‌ ಕಾಂಗ್ರೆಸ್‌ ಸಮಿತಿಯು ವಯನಾಡ್‌ನ ಕಲ್ಪೆಟ್ಟಾದ ಪೊಲೀಸರಿಗೆ ಸಲ್ಲಿಸಿದ ದೂರಿನ ಪ್ರತಿಯನ್ನು ನಾವು ಕಂಡುಕೊಂಡಿದ್ದೇವೆ. ಮಲಯಾಳಂನಲ್ಲಿರು ಈ ದೂರನ ಪ್ರತಿಯಲ್ಲಿ ʼಕಾಂಗ್ರಸ್‌ ಪಕ್ಷದ ಸಾಮರಸ್ಯವನ್ನು ಮತ್ತು ಪ್ರತಿಷ್ಟೆಯನ್ನು ಹಾಳುಮಾಡಲು ಉದ್ದೇಶ ಪೂರ್ವಕವಾಗಿ ಈ ವಿಡಿಯೋವನ್ನು ತಯಾರಿಸಿದ್ದಾರೆ. ವಿಡಿಯೋವನ್ನು ಸೃಷ್ಟಿಸಿದ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಲಬೇಕು ಹಾಗೆ ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಗಳಿಂದ ತೆಗೆದುಹಾಕಿಸುವಂತೆ ವಿನಂತಿಸಿಕೊಂಡಿರುವುದು ದೂರಿನಲ್ಲಿದೆ.


ಕಾಂಗ್ರಸ್‌ ಕೇರಳಾ ಎಕ್ಸ್‌ ಖಾತೆಯಲ್ಲಿ ʼBJP tries to make fake propaganda videos by portraying Rahul Gandhi as propagating hatred but they failed miserably. Communal hatred is the last thing an Indian would associate with Rahul Gandhi. We won't spare anyone who tries to divide society for their selfish gains" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವುದನ್ನು ನಾವು ನೋಡಬಹುದು.

ಮೇ 04, 2024ರಂದು ʼದಿ ನ್ಯೂ ಇಂಡಿಯಾ ಎಕ್ಸ್‌ಪ್ರೆಸ್‌ʼ ವರದಿಯ ಪ್ರಕಾರ ವೈರಲ್‌ ವಿಡಿಯೋ ಹಂಚಿಕೊಂಡ ಆರೋಪಿ ಮುವಾಟ್ಟಳಪುಳ ನಿವಾಸಿಯಾದ ರಾಜೇಶ್‌ ಜಿ ನಾಯರ್‌ನ ವಿರುದ್ದ ಕೇರಳಾದ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಲ್ಲಿದೆ.


ಹೀಗಾಗಿ ವೈರಲ್‌ ಆದ ವಿಡಿಯೋ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಯನಾಡ್ ಕಾಂಗ್ರೆಸ್ ಸಮಿತಿ ಈ ರೀತಿಯ ಯಾವುದೇ ವಿಡಿಯೋವನ್ನು ಹಂಚಿಕೊಂಡಿಲ್ಲ. ಈ ವಿಡಿಯೋವನ್ನು ಹಂಚಿಕೊಂಡ ವ್ಯಕ್ತಿಯ ವಿರುದ್ದ ಪ್ರಕರಣ ದಾಖಲಾಗಿ ಆತನನ್ನು ಬಂಧಿಸಲಾಗಿದೆ. ಆದರೆ ಮತ್ತೊಮ್ಮೆ ವಯನಾಡ್‌ ಜಿಲ್ಲಾ ಕಾಂಗ್ರೆಸ್‌ ಸಮಿತಿ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

Claim :  ರಾಮಮಂದಿರವನ್ನು ಕೆಡವಿ ಮಸೀದಿಯನ್ನು ನಿರ್ಮಾಣ ಮಾಡುವುದಾಗಿ ರಾಹುಲ್‌ ಗಾಂಧಿ ವಾಗ್ವಾದ ನೀಡಿಲ್ಲ.
Claimed By :  Social Media Users
Fact Check :  False
Tags:    

Similar News