ಫ್ಯಾಕ್ಟ್ ಚೆಕ್ : ನಕ್ಷತ್ರದ ಗುರುತಿರುವ 500 ರೂ. ನೋಟು ನಕಲಿಯಲ್ಲ
ಸಾಮಾಜಿಕ ಜಾಲತಾಣದ ಬಳಕೆದಾರರು 500 ರೂ ನೋಟಿನಲ್ಲಿ ಸರಣಿಯ ಸಂಖ್ಯೆಯೊಂದಿಗೆ ನಕ್ಷತ್ರದ ಗುರುತಿದ್ದಲ್ಲಿ ಅದು ನಕಲಿ ಎಂದು ಪ್ರತಿಪಾದಿಸಿದ್ದಾರೆ.
ಸಾಮಾಜಿಕ ಜಾಲತಾಣದ ಬಳಕೆದಾರರು 500 ರೂ ನೋಟಿನಲ್ಲಿ ಸರಣಿಯ ಸಂಖ್ಯೆಯೊಂದಿಗೆ ನಕ್ಷತ್ರದ ಗುರುತು ಇದ್ದಲ್ಲಿ ಅದನ್ನು ನಕಲಿ ಎಂದು ಪರಿಗಣಿಸಬೇಕೆಂದು ಪ್ರತಿಪಾದಿಸಿದ್ದಾರೆ.
ಅನೇಕ ನೆಟಿಜೆನ್‌ಗಳು, " ನಕ್ಷತ್ರದ ಗುರುತಿರುವ 500 ರೂ ನೋಟು ಮಾರ್ಕೆಟ್‌ನಲ್ಲಿ ಹರಿದಾಡುತ್ತಿವೆ. ಇವು ನಕಲಿ ನೋಟುಗಳು. ನಕಲಿ ನೋಟುಗಳನ್ನು ಹೊಂದಿರುವ ಬೀದಿ ವ್ಯಾಪಾರಿಗಳ ಸಂಖ್ಯೆಯೂ ಮಾರ್ಕೆಟ್‌ನಲ್ಲಿ ಹೆಚ್ಚಾಗಿದೆ" ಎಂದು ಬರೆದುಕೊಂಡಿದ್ದಾರೆ.
ಅಂತಹ ಕೆಲವು ಪೋಸ್ಟ್‌ಗಳು ಇಲ್ಲಿವೆ. ಆರ್ಕೈವ್‌ನಲ್ಲಿರುವ ಕೆಲವು ಪೋಸ್ಟ್‌ಗಳಿಗೆ ಇಲ್ಲಿ, ಇಲ್ಲಿ, ಮತ್ತು ಇಲ್ಲಿ ಕ್ಲಿಕ್ ಮಾಡಿ.
https://www.facebook.com/groups/339540540996171/posts/822387289378158/
ಫ್ಯಾಕ್ಟ್‌ಚೆಕ್
ಭಾರತೀಯ ರಿಸರ್ವ್ ಬ್ಯಾಂಕ್, ನಕ್ಷತ್ರದ ಗುರುತಿರುವ ನೋಟುಗಳು ಇತರೆ 500 ರೂ. ನೋಟಿನಂತೆ ಕಾನೂನು ಬದ್ಧ ನೋಟು ಎಂದು ಸ್ಪಷ್ಟಪಡಿಸಿದೆ. "ನಕ್ಷತ್ರದ ಗುರುತಿನೊಂದಿಗೆ ಮುದ್ರಿತವಾಗಿರುವ ನೋಟುಗಳು, ಲೋಪದೋಷದೊಂದಿಗೆ ಮುದ್ರಿತವಾಗಿದ್ದ 500 ರೂ. ಗಳ ಬದಲಿಗೆ ಹೊರತಂದಂತಹವು. ಹಾಗಾಗಿ ನೋಟಿನ ಸರಣಿ ಸಂಖ್ಯೆಯಲ್ಲಿ ನಕ್ಷತ್ರದ ಗುರುತನ್ನು ಸೇರಿಸಲಾಗಿದೆ. ಇವು ಲೋಪವಿರುವ ನೋಟುಗಳ ಬದಲಿಗೆ, 100 ನೋಟುಗಳ ಕಂತಿನಲ್ಲಿ ಸರಣಿ ಸಂಖ್ಯೆಯೊಂದಿಗೆ ಮುದ್ರಿಸಲಾಗಿದೆ" ಎಂದು ಆರ್‍ಬಿಐ ತಿಳಿಸಿದೆ.
ಆರ್‍ಬಿಐನ ಅಧಿಕೃತ ವೆಬ್ ತಾಣದಲ್ಲಿ, "2006ರಲ್ಲಿ ಆರ್‍ಬಿಐ ಸ್ಟಾರ್ ಸರಣಿ ಇರುವ ಸಂಖ್ಯಾ ಪದ್ಧತಿಯನ್ನು ಅನುಸರಿಸಿತು. ಇವು ಲೋಪವಿರುವ ನೋಟುಗಳನ್ನು ಬದಲಿಗೆ ಪರಿಚಯಿಸಲಾಯಿತು. ಸ್ಟಾರ್ ಸರಣಿಯ ನೋಟುಗಳು, ಇತರೆ ನೋಟುಗಳಂತೆಯೇ ಕಾನೂನು ಬದ್ಧವಾಗಿದ್ದು, ಇದರಲ್ಲಿ ಸಂಖ್ಯೆಯ ಜಾಗದಲ್ಲಿ ನಕ್ಷತ್ರದ ಗುರುತು ಸೇರಿಸಲಾಗಿರುತ್ತದೆ.
2006ರಲ್ಲಿ ಆರ್‍ಬಿಐ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲೂ ಕೂಡ, " ಸ್ಟಾರ್ ಸರಣಿಯ ನೋಟುಗಳು ಇತರೆ ಬ್ಯಾಂಕ್ ನೋಟುಗಳಂತೆಯೇ ಇರುತ್ತವೆ. ಆದರೆ ಹೆಚ್ಚುವರಿಯಾಗಿ ನಕ್ಷತ್ರದ ಗುರುತು ಇರುತ್ತದೆ. ಈ ನೋಟುಗಳನ್ನು ಸಾರ್ವಜನಿಕರು ಇತರೆ ನೋಟುಗಳಂತೆ ವಿನಿಮಯ ಮಾಡಿಕೊಳ್ಳಬಹುದು" ಎಂದು ಹೇಳಿತ್ತು.
ಬ್ಯಾಂಕ್ ಈ ಹೇಳಿಕೆಯನ್ನು ಟ್ವಿಟರ್‍ನಲ್ಲೂ ಹಂಚಿಕೊಂಡಿತ್ತು.