ಫ್ಯಾಕ್ಟ್‌ಚೆಕ್: ಮುಸ್ಲಿಂ ಯುವತಿ ತನ್ನ ತಂದೆಯೊಂದಿಗೆ ದೈಹಿಕ ಸಂಬಂಧವನ್ನು ಹೊಂದಿದ್ದಾಳೆ ಎಂದು ಸ್ಕ್ರಿಪ್ಟೆಡ್ ವಿಡಿಯೋ ಹಂಚಿಕೆ
ಮುಸ್ಲಿಂ ಯುವತಿ ತನ್ನ ತಂದೆಯೊಂದಿಗೆ ದೈಹಿಕ ಸಂಬಂಧವನ್ನು ಹೊಂದಿದ್ದಾಳೆ ಎಂದು ಸ್ಕ್ರಿಪ್ಟೆಡ್ ವಿಡಿಯೋ ಹಂಚಿಕೆ;

ಬಹುತೇಕ ಎಲ್ಲಾ ಪ್ರಮುಖ ಧರ್ಮಗಳಲ್ಲಿ, ತಂದೆ ಮತ್ತು ಮಗಳ ನಡುವಿನ ವಿವಾಹವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ನೈತಿಕವಾಗಿ ತಪ್ಪು ಎಂದು ಪರಿಗಣಿಸಲಾಗಿದೆ. ಹಿಂದೂ ವಿವಾಹ ಕಾನೂನಿನ ಪ್ರಕಾರ, ಮಗಳು ತನ್ನ ಸ್ವಂತ ತಂದೆ ಅಥವಾ ಅಜ್ಜನನ್ನು ಮದುವೆಯಾಗುವಂತಿಲ್ಲ. ಅದೇ ರೀತಿ, ಒಬ್ಬ ತಾಯಿ ತನ್ನ ಮಗ ಅಥವಾ ಮೊಮ್ಮಗನನ್ನು ಮದುವೆಯಾಗಲು ಸಾಧ್ಯವಿಲ್ಲ. ಹಿಂದೂ ಸಂಪ್ರದಾಯದಲ್ಲಿ ಅಂತಹ ಬಂಧಗಳು ಅಸ್ತಿತ್ವದಲ್ಲಿಲ್ಲ. ಪವಿತ್ರವಾದ ಸಂಬಂಧಗಳಲ್ಲಿ ತಂದೆ ಮಗಳ ಸಂಬಂಧವೂ ಒಂದು. ಇಂತಹ ಪವಿತ್ರ ಬಂಧಕ್ಕೆ ಯಾರು ಕೂಡಾ ಕಳಂಕ ತರುವಂತಹ ಕೆಲಸ ಮಾಡಲಾರರು. ಆದ್ರೆ ಇಲ್ಲೊಂದು ಆಘಾತಕಾರಿ ಘಟನೆ ನಡೆದಿದ್ದು, ಯುವತಿಯೊಬ್ಬಳು ತನ್ನ ತಂದೆಯೊಂದಿಗೆ ದೈಹಿಹ ಸಂಬಂಧ ಹೊಂದಿದ್ದೇನೆ ಎಂದು ಹೇಳುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. 1.36 ನಿಮಿಷಗಳನ್ನೊಳಗೊಂಡ ಈ ವಿಡಿಯೋದಲ್ಲಿ ಬುರ್ಖಾ ಧರಿಸಿದ ಯುವತಿಯೊಬ್ಬಳು ಅಳುತ್ತಾ ಆಕೆ ಪ್ರತಿದಿನ ರಾತ್ರಿ ತನ್ನ ತಂದೆಯೊಂದಿಗೆ ದೈಹಿಕ ಸಂಬಂಧವನ್ನು ಹೊಂದಿದ್ದೀನಿ ಎಂದು ಹೇಳುತ್ತಿರುವುದನ್ನು ನಾವೀ ವಿಡಿಯೋದಲ್ಲಿ ನೋಡಬಹುದು. ಹಾಗೆ ಮುಸ್ಲಿಂ ಟೋಪಿ ಧರಿಸಿದ ವ್ಯಕ್ತಿಯೊಬ್ಬನು ತಾನು ತನ್ನ ಮಗಳೊಂದಿಗೆ ದೈಹಿಕ ಸಂಬಂಧವನ್ನು ಹೊಂದಿದ್ದೇನೆ ಎಂದು ಹೇಳುವುದನ್ನು ನೋಡಬಹುದು. ಈ ವಿಡಿಯೋವನ್ನು ಹಂಚಿಕೊಂಡ ಹಲವರು, ಇಸ್ಲಾಂ ಸಮುದಾಯದಲ್ಲಿ ಮಾತ್ರ ಇಂತಹ ಸಂಸ್ಕೃತಿಯನ್ನು ನೋಡಲು ಸಾಧ್ಯ ಎಂದು ಬರೆದುಕೊಂಡು ಕೋಮು ದ್ವೇಷವನ್ನು ಹರಡುವ ಕೆಲಸವನ್ನು ಮಾಡುತ್ತಿದ್ದಾರೆ.
ಫೆಬ್ರವರಿ 24, 2025ರಂದು ಎಕ್ಸ್ ಖಾತೆದಾರರೊಬ್ಬರು, ʼये मेरे अब्बू है| मेरे साथ रोज संबंध बना रहे हैʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಇವರು ನನ್ನ ತಂದೆ. ಇವರು ಪ್ರತಿದಿನ ನನ್ನ ಜೊತೆ ಸಂಬಂಧ ಹೊಂದುತ್ತಿದ್ದಾನೆʼ ಎಂದು ಬರೆದು ಪೊಸ್ಟ್ ಮಾಡಿರುವುದನ್ನು ನೋಡಬಹುದು.
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನಾವಿಲ್ಲಿ ನೋಡಬಹುದು.
ಮತ್ತೋಬ್ಬ ಎಕ್ಸ್ ಖಾತೆದಾರರೊಬ್ಬರು ʼमौज़ हब की खूबसूरती अल्ला | भी खुश मोहल्ला भी ख़ुश अब्बू भी ख़ुशʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ʼಮೌಜ್ ಹಬ್ ನ ಸೌಂದರ್ಯ, ಅಲ್ಲಾಹನು ಸಂತೋಷವಾಗಿದ್ದಾನೆ, ನೆರೆಹೊರೆಯವರು ಸಂತೋಷವಾಗಿದ್ದಾರೆ, ಅಪ್ಪ ಕೂಡ ಸಂತೋಷವಾಗಿದ್ದಾರೆʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನಾವಿಲ್ಲಿ ನೋಡಬಹುದು.
ಫ್ಯಾಕ್ಟ್‌ಚೆಕ್
ವೈರಲ್ ಆದ ವಿಡಿಯೋ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್ ಆದ ವಿಡಿಯೋ ನಿಜವಾಗಿ ನಡೆದ ಘಟನೆಯಲ್ಲ, ಇದೊಂದು ಸ್ಕ್ರಿಪ್ಟೆಡ್ ವಿಡಿಯೋ ಎಂದು ಸಾಭೀತಾಗಿದೆ. ನಾವು ವೈರಲ್ ಆದ ವಿಡಿಯೋವಿನಲ್ಲಿರುವ ಸತ್ಯಾಂಶವನ್ನು ತಿಳಿಯಲು ವೈರಲ್ ಆದ ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಹುಡುಕಾಟದಲ್ಲಿ ನಮಗೆ, ಫೆಬ್ರವರಿ 13, 2025ರಂದು ಯೂಟ್ಯೂಬ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ 7.51 ನಿಮಿಷದ ಸುದೀರ್ಘವದ ವಿಡಿಯೋವನ್ನು ಹಂಚಕೊಂಡಿದ್ದನ್ನು ನಾವು ಕಂಡುಕೊಂಡೆವು. ವಿಡಿಯೋವಿಗೆ ಶೀರ್ಷಿಕೆಯಾಗಿ ʼಶಾನ್ʼ ಎಂದು ಬರೆದಿರುವುದನ್ನು ನಾವಿಲ್ಲಿ ನೋಡಬಹುದು.
ಈ ವಿಸ್ತೃತ ವಿಡಿಯೋದಲ್ಲಿ 6 ಸೆಕೆಂಡ್‌ನ ಟೈಮ್ ಸ್ಟ್ಯಾಂಪ್‌ನಲ್ಲಿ ಈ ವಿಡಿಯೋವನ್ನು ಮನರಂಜನೆ ಉದ್ದೇಶಗಳಿಗಾಗಿ ಮಾತ್ರ ಮಾಡಲಾಗಿದೆ ಎಂದು ಸೂಚನೆ ನೀಡಿರುವುದನ್ನು ನೋಡಬಹುದು.
ನಾವು ಈ ಖಾತೆಯನ್ನು ಸಂಪೂರ್ಣವಾಗಿ ಪರಿಶೀಲಿಸಿದೆವು. ಈ ಯೂಟ್ಯೂಬ್ ಚಾನೆಲ್‌ನಲ್ಲಿ ಸಾಕಷ್ಟು ವಿಡಿಯೋಗಳು ಸ್ಕ್ರಿಪ್ಟ್ ಮಾಡಿರುವುದನ್ನು ನಮಗೆ ಕಂಡುಬಂದಿದೆ. ನಾವು ಅಶ್ವಿನಿ ಪಾಂಡೆಯವರ ಫೇಸ್‌ಬುಕ್ ಖಾತೆಯಲ್ಲಿ ʼಪರಿಚಯದʼ (about)ನಲ್ಲಿ ವಿಡಿಯೋಗಳನ್ನು ಕೇವಲ ಮನರಂಜನೆಯ ಉದ್ದೇಶಗಳಿಗಾಗಿ ಮಾಡಲಾಗಿದೆ ಎಂದು ಬರೆದಿರುವುದನ್ನು ನೋಡಬಹುದು.
ಅಶ್ವಿನಿ ಪಾಂಡೆ ಅವರ ಫೇಸ್‌ಬುಕ್ ಪುಟ ಮತ್ತು ಯೂಟ್ಯೂಬ್ ಚಾನೆಲ್‌ನಲ್ಲಿಯೂ ಸಹ ಇಂತಹ ಅನೇಕ ಸ್ಕ್ರಿಪ್ಟ್ ಮಾಡಿದ ವೀಡಿಯೊಗಳನ್ನು ಕಾಣಬಹುದು .
ಈ ಚಾನೆಲ್‌ನಲ್ಲಿರುವ ಸಾಕಷ್ಟು ವಿಡಿಯೋಗಳಲ್ಲಿ ಚಿಕ್ಕ ವಯಸ್ಸಿನರು ಅವರ ವಯಸಿಗಿಂತ ದೊಡ್ಡವರನ್ನು ಮದುವೆಯಾದರು ಅಥವಾ ದೊಡ್ಡವರು ಅವರಿಗಿನ ವಯಸ್ಸಿನಲ್ಲಿ ತುಂಬಾ ಚಿಕ್ಕವರನ್ನು ಮದುವೆಯಾಗಿರುವುದು ಮತ್ತಷ್ಟು ಕೆಲವು ಪ್ರಾಂಟ್ ವಿಡಿಯೋಗಳನ್ನು ಹಂಚಿಕೊಂಡಿರುವುದನ್ನು ನೋಡಬಹುದು.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ವಿಡಿಯೋ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ಹೇಳುವುದಾದರೆ ಮುಸ್ಲಿಂ ಯುವತಿ ತನ್ನ ತಂದೆಯೊಂದಿಗೆ ದೈಹಿಕ ಸಂಬಂಧವನ್ನು ಹೊಂದಿದ್ದೇನೆ ಎಂದು ಹೇಳಿಕೊಂಡಿರುವ ವಿಡಿಯೋ ನಾಟಕೀ ವಿಡಿಯೋವಾಗಿದೆ. ಈ ರೀತಿಯ ಹಲವು ಸ್ಕ್ರಿಪ್ಟ್ ಮಾಡಿದ ವಿಡಿಯೋವನ್ನು ಅಶ್ವಿನಿ ಪಾಂಡೆ ಎಂಬ ಯೂಟ್ಯೂಬ್ ಮತ್ತು ಫೇಸ್‌ಬುಕ್ ಖಾತೆಗಳಲ್ಲಿ ಹಂಚಿಕೊಂಡಿರುವುದು ಕಂಡುಬಂದಿದೆ.