ಫ್ಯಾಕ್ಟ್‌ಚೆಕ್‌: ಟಿಡಿಪಿ ಸಮ್ಮಿಶ್ರ ಸರ್ಕಾರ 999 ಪವರ್‌ಸ್ಟಾರ್ ಸುಪೀರಿಯರ್ ವಿಸ್ಕಿಯನ್ನು ಬಿಡುಗಡೆ ಮಾಡಿದೆಯಾ?

ಟಿಡಿಪಿ ಸಮ್ಮಿಶ್ರ ಸರ್ಕಾರ 999 ಪವರ್‌ಸ್ಟಾರ್ ಸುಪೀರಿಯರ್ ವಿಸ್ಕಿಯನ್ನು ಬಿಡುಗಡೆ ಮಾಡಿದೆಯಾ?

Update: 2024-07-16 18:46 GMT

 999 Powerstar Superior whisky

ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ತೆಲುಗು ದೇಶಂ ಪಕ್ಷವು ರಾಜ್ಯದ ಮದ್ಯ ನೀತಿಯನ್ನು ಪರಿಶೀಲಿಸುತ್ತಿದೆ ಅಷ್ಟೇ ಅಲ್ಲ ಮದ್ಯದ ಅಂಗಡಿಗಳಲ್ಲಿ ಕಡಿಮೆ ಬೆಲೆಯಲ್ಲಿ ಎಲ್ಲಾ ಬ್ರ್ಯಾಂಡ್‌ಗಳ ಮದ್ಯವನ್ನು ನೀಡುವ ಸಾಧ್ಯತೆಯಿದೆ. ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಚುನಾವಣಾ ಪ್ರಚಾರದ ವೇಳೆ ಗುಣಮಟ್ಟದ ಮದ್ಯವನ್ನು ಕೊಡುವುದಾಗಿ ಭರವಸೆ ನೀಡಿದ್ದರು. ಈಗ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ಹೊಸ ಸರ್ಕಾರವು ರಾಜ್ಯ ಮದ್ಯ ನೀತಿಯನ್ನು ಜಾರಿಗೆ ತರಲು ಕಾತುರದಿಂದ ಕಾಯುತ್ತಿದ್ದಾರೆ.

ʼಪವರ್ ಸ್ಟಾರ್ ವಿಸ್ಕಿ.. ಸಮ್ಮಿಶ್ರ ಸರ್ಕಾರದಲ್ಲಿ ಹೊಸ ಬ್ರಾಂಡ್! ಗುಣಮಟ್ಟದ ಮದ್ಯ ಎಂದು ಸಾರ್ವಜನಿಕರನ್ನು ಖುಷಿಪಡಿಸಲು ಪವರ್ ಸ್ಟಾರ್ ಹೆಸರಲ್ಲಿ ವಿಸ್ಕಿ ತಂದಿರುವ ಚಂದ್ರಬಾಬು ಸರ್ಕಾರ್ ಎಂದು ಹಲವು ಮಂದಿ ಪೋಸ್ಟ್ ಮಾಡಿದ್ದಾರೆ.

ತೆಲುಗಿನಲ್ಲಿ ‘పవర్ స్టార్ విస్కీ.. కూటమి ప్రభుత్వంలో కొత్త బ్రాండ్! నాణ్యమైన మద్యం అంటూ జనసైనికుల్ని మెప్పించేలా పవర్ స్టార్ పేరుతో విస్కీని తెరపైకి తెచ్చిన చంద్రబాబు సర్కార్’ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್‌ನ್ನು ಹಂಚಿಕೊಳ್ಳಲಾಗಿದೆ

ಕನ್ನಡಕ್ಕೆ ಅನುವಾದಿಸಿದಾಗ, "ಪವರ್ ಸ್ಟಾರ್ ವಿಸ್ಕಿ, ಸಮ್ಮಿಶ್ರ ಸರ್ಕಾರದಲ್ಲಿ ಹೊಸ ಬ್ರ್ಯಾಂಡ್! ಜನಸಾಮಾನ್ಯರನ್ನು ಮೆಚ್ಚಿಸಲು ಗುಣಮಟ್ಟದ ಮದ್ಯವನ್ನು ಚಂದ್ರಬಾಬು ನಾಯ್ಡು ಸರ್ಕಾರ ಪವರ್ ಸ್ಟಾರ್ ಹೆಸರಿನಲ್ಲಿ ವಿಸ್ಕಿಯನ್ನು ಬಿಡುಗಡೆ ಮಾಡಿದೆ.

Full View

ಫ್ಯಾಕ್ಟ್‌ಚೆಕ್‌

ವೈರಲ್ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಲಿಕ್ಕರ್ ಬ್ರ್ಯಾಂಡ್ 999 ಪವರ್ ಸ್ಟಾರ್ ಸುಪೀರಿಯರ್ ವಿಸ್ಕಿ ಆಂಧ್ರಪ್ರದೇಶದಲ್ಲಿ ಹೊಸ ಮದ್ಯದ ಬ್ರ್ಯಾಂಡ್ ಅಲ್ಲ. ಇದನ್ನು ಆಂಧ್ರಪ್ರದೇಶ ಮತ್ತು ಭಾರತದ ಇತರ ರಾಜ್ಯಗಳಲ್ಲಿ ಹಲವು ವರ್ಷಗಳಿಂದ ಮಾರಾಟ ಮಾಡಲಾಗುತ್ತದೆ.

ನಾವು '999 Powertar Superior Whisky' ಟ್ರೇಡ್‌ಮಾರ್ಕ್ ನೋಂದಣಿಗಾಗಿ ಹುಡುಕಿದೆವು. QuickCompany, TradeMarking.in ವೆಬ್‌ಸೈಟ್‌ಗಳಲ್ಲಿ 'ಗ್ರೇಟ್ ಗ್ಯಾಲಿಯನ್ ಲಿಮಿಟೆಡ್' ಎಂಬ ಕಂಪನಿಯ ಹೆಸರಿನಡಿಯಲ್ಲಿ ನಾವು ಟ್ರೇಡ್‌ಮಾರ್ಕ್ ಅನ್ನು ಕಂಡುಕೊಂಡಿದ್ದೇವೆ .

ಮೇ 13, 2020 ರಂದು TV5 ತೆಲುಗು ಪ್ರಕಟಿಸಿದ ಯೂಟ್ಯೂಬ್‌ ಚಾನೆಲ್‌ನಲ್ಲಿ ಈ 2019 ರಲ್ಲಿ YSRCP ಸರ್ಕಾರ ರಚನೆಯಾದ ನಂತರ ಆಂಧ್ರಪ್ರದೇಶದಲ್ಲಿ ಪರಿಚಯಿಸಲಾದ ಹೊಸ ಆಲ್ಕೋಹಾಲ್ ಬ್ರಾಂಡ್‌ಗಳ ಕುರಿತಾದಂತ ವಿಡಿಯೋವನ್ನು ನಾವು ಕಂಡುಕೊಂಡೆವು. ವಿಡಿಯೋವಿಗೆ ಶೀರ್ಷಿಕೆಯಾಗಿ ಆಂಕರ್ ಬ್ರಾಂಡ್ ಹೆಸರು '999 ಪವರ್ ಸ್ಟಾರ್ ಸುಪೀರಿಯರ್' ಎಂದು ಬರೆದು ಪೋಸ್ಟ್‌ ಮಾಡಲಾಗಿತ್ತು

Full View

ವೆಬ್ ದುನಿಯಾ ಲೇಖನದ ಪ್ರಕಾರ ಪವರ್ ಸ್ಟಾರ್ ಮದ್ಯವನ್ನು 2022ರಲ್ಲಿ ವೈಎಸ್‌ಆರ್‌ಸಿಪಿ ಆಡಳಿತಾವಧಿಯಲ್ಲಿ ಆಂಧ್ರಪ್ರದೇಶದಲ್ಲಿ ಈ ಮದ್ಯದ ಬ್ರಾಂಡ್ ಅನ್ನು ಪರಿಚಯಿಸಲಾಯಿತು ಎಂದು ಲೇಖನದಲ್ಲಿ ಹೇಳಲಾಗಿದೆ.

999 ಪವರ್‌ಸ್ಟಾರ್ ವಿಸ್ಕಿಯ ಚಿತ್ರದೊಂದಿಗೆ ʼಡೈಲಿ ಪೋಸ್ಟ್ ಪಂಜಾಬಿʼ ನಲ್ಲಿ ಪ್ರಕಟವಾದ ಲೇಖನವನ್ನು ನಾವು ಕಂಡುಕೊಂಡಿದ್ದೇವೆ. "ಪಂಜಾಬ್‌ನಲ್ಲಿ ವ್ಯಕ್ತಿಯೊಬ್ಬರಿಂದ 999 ಪವರ್‌ಸ್ಟಾರ್ ವಿಸ್ಕಿ ಬ್ರಾಂಡ್ ಮದ್ಯದ 15 ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಅಬಕಾರಿ ಇಲಾಖೆ ವರದಿ ಮಾಡಿರುವುದನ್ನು ನಾವು ಈ ಲೇಖನದಲ್ಲಿ ನೋಡಬಹುದು.

ಆಂಧ್ರಪ್ರದೇಶದಲ್ಲಿ ಹೊಸ ಸರ್ಕಾರ ರಚನೆಯಾದ ನಂತರ ʼ999 ಪವರ್‌ಸ್ಟಾರ್ ಸುಪೀರಿಯರ್ʼ ವಿಸ್ಕಿಯನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ ಎಂಬ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ.'999 ಪವರ್ ಸ್ಟಾರ್ ಸುಪೀರಿಯರ್ ವಿಸ್ಕಿ' ಆಂಧ್ರಪ್ರದೇಶದಲ್ಲಿ ಹೊಸ ಬ್ರ್ಯಾಂಡ್ ಅಲ್ಲ. ಇದು ಹಲವು ವರ್ಷಗಳಿಂದ ಆಂಧ್ರಪ್ರದೇಶ ಮತ್ತು ಇತರ ರಾಜ್ಯಗಳ ಮಾರುಕಟ್ಟೆಯಲ್ಲಿ ಲಭ್ಯವಿದೆ.

Claim :  ಟಿಡಿಪಿ ಸಮ್ಮಿಶ್ರ ಸರ್ಕಾರ 999 ಪವರ್‌ಸ್ಟಾರ್ ಸುಪೀರಿಯರ್ ವಿಸ್ಕಿಯನ್ನು ಬಿಡುಗಡೆ ಮಾಡಿದೆಯಾ?
Claimed By :  Social Media Users
Fact Check :  False
Tags:    

Similar News