ಫ್ಯಾಕ್ಟ್‌ಚೆಕ್: ಬೆಂಗಳೂರಿನಲ್ಲಿ 420 ನಂಬರಿನ ಹೊಸ ಮಾರ್ಗ ಪರಿಚಯಿಸಿರುವ ಫೋಟೊ ನಕಲಿ
ವೈರಲ್ ಆಗಿರುವ ಫೋಟೋವನ್ನು ತಿದ್ದಲಾಗಿದ್ದು, ಮೂಲಚಿತ್ರದಲ್ಲಿ ಬಸ್ ನಂ. 365 ಎಂದಿದ್ದು ನ್ಯಾಷನಲ್ ಪಾರ್ಕ್ ಮಾರ್ಗ ಎಂದು ಕನ್ನಡದಲ್ಲಿ ಬರೆಯಲಾಗಿದೆ.
420 ನಂಬರಿನ ಬಸ್ ಫೋಟೋವೊಂದು ವೈರಲ್ ಆಗಿದ್ದು, ಕರ್ನಾಟಕ ಸರ್ಕಾರ ಬೆಂಗಳೂರಿನಲ್ಲಿ ಈ ಹೊಸ ಬಸ್ ಮಾರ್ಗವನ್ನು ಪರಿಚಯಿಸಲಾಗಿದೆ ಎಂದು ಪ್ರತಿಪಾದಿಸಿದೆ. ಅಲ್ಲದೆ ಈ ಬಸ್ ಸೇವೆಯು ವಿಧಾನಸೌಧದಿಂದ ಹೊರಟು ಪರಪ್ಪನ ಅಗ್ರಹಾರಕ್ಕೆ ತಲುಪುತ್ತದೆ ಎಂದು ಹೇಳಿದೆ.
ಫೋಟೋದೊಂದಿಗೆ ಇರುವ ಟಿಪ್ಪಣಿಯಲ್ಲಿ, " ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಹೊರಡುವ ಮತ್ತು ತಲುಪುವ ಸ್ಥಳದ ಸ್ಪಷ್ಟನೆ ಯೋಜನೆಯೊಂದಿಗೆ ಬಸ್ ಮಾರ್ಗವನ್ನು ಆರಂಭಿಸಲಾಗಿದೆ. ಮಾರ್ಗ ಸಂಖ್ಯೆ 420 ವಿಧಾನಸೌದಿಂದ ಹೊರಟು ಪರಪ್ಪನ ಅಗ್ರಹಾರ (ಕೇಂದ್ರ ಕಾರಾಗೃಹ) ತಲುಪುತ್ತದೆ" ಎಂದು ಬರೆಯಲಾಗಿದೆ.
ವಿಧಾನಸೌಧ, ಬೆಂಗಳೂರಿನಲ್ಲಿರುವ ಶಾಸಕಾಂಗ ಭವನ. ಪರಪ್ಪನ ಅಗ್ರಹಾರ ಬೆಂಗಳೂರಿನ ಕೇಂದ್ರ ಕಾರಾಗೃಹವಿರುವ ಸ್ಥಳಿದು ರಾಜ್ಯದ ಅತಿ ದೊಡ್ಡ ಕಾರಾಗೃಹ.
ವೈರಲ್ ಆಗಿರುವ ಪೋಸ್ಟ್, 420 ಬಸ್ ಮಾರ್ಗವನ್ನು ಆರಂಭಿಸಿರುವುದು ಕರ್ನಾಟಕ ಸರ್ಕಾರ ಅತ್ಯಂತ ಸಮಂಜಸವಾಗಿದೆ ಎಂದು ಹೇಳಿದ್ದು, ವಿಧಾನಸೌಧದಲ್ಲಿರುವ ರಾಜಕಾರಣಿಗಳು ಬಂಧನಕ್ಕೆ ಒಳಗಾದಾಗ ನೇರವಾಗಿ ಪರಪ್ಪನ ಅಗ್ರಹಾರಕ್ಕೆ ಒಯ್ಯಬಹುದು ಎಂದು ವ್ಯಂಗ್ಯವಾಗಿ ಪ್ರತಿಪಾದಿಸಿದೆ.
ಆರ್ಕೈವ್ ಆಗಿರುವ ಪೋಸ್ಟ್‌ನ ಲಿಂಕ್ ಇಲ್ಲಿದೆ
ಫ್ಯಾಕ್ಟ್‌ಚೆಕ್
ಈ ಪ್ರತಿಪಾದನೆ ತಪ್ಪು. ಕರ್ನಾಟಕ ಸರ್ಕಾರವು ವಿಧಾನಸೌಧದಿಂದ ಪರಪ್ಪನ ಅಗ್ರಹಾರಕ್ಕೆ 420 ನೇ ನಂಬರಿನ ಮಾರ್ಗವನ್ನು ಆರಂಭಿಸಿಲ್ಲ. ಬೆಂಗಳೂರಿನಲ್ಲಿ ಈ ನಂಬರಿನ ಬಸ್ ಸೇವೆ ಕಾರ್ಯಾಚರಣೆ ಮಾಡುತ್ತಿಲ್ಲ. ಈ ವೈರಲ್ ಪೋಸ್ಟ್‌ನಲ್ಲಿ ಬಳಸಿರುವ ಫೋಟೋ ಮಾರ್ಪಾಡು ಮಾಡಿರುವಂತಹದ್ದು.
ಬೆಂಗಳೂರಿನ ಬಸ್ ಮಾರ್ಗಗಳ ವಿವರಗಳಿಗೆ ನಾವು ಹುಡುಕಾಟ ನಡೆಸಿದಾಗ, 420ನೇ ಬಸ್ ಮಾರ್ಗ ಕಾರ್ಯನಿರ್ವಹಿಸುತ್ತಿರುವ ಯಾವುದೇ ವಿವರ ಸಿಗಲಿಲ್ಲ. ನಂತರ ವಿಧಾನಸೌಧದಿಂದ ಪರಪ್ಪನ ಅಗ್ರಹಾರ ಜೈಲು ನಡುವೆ ಸಂಚರಿಸುವ ಬಸ್ ಮಾರ್ಗದ ವಿವರಗಳಿಗಾಗಿ ಹುಡುಕಿದಾಗ ಕೆಲವು ಬಸ್‌ಗಳು ಸಂಚರಿಸುತ್ತಿರುವುದು ತಿಳಿದು ಬಂತು. ಆದರೆ ಆ ಯಾವ ಬಸ್‌ಗಳ ನಂಬರ್ 420 ಆಗಿಲ್ಲ ಎಂಬುದು ದೃಢಪಟ್ಟಿತು.
ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ವೈರಲ್ ಪೋಸ್ಟ್‌ನಲ್ಲಿರುವ ಚಿತ್ರದ ಮೂಲ ಫೋಟೋ ರೈಸಿಂಗ್ ಸಿಟಿಜನ್ ಎಂಬ ಬ್ಲಾಗ್‌ನಲ್ಲಿ 2009ರ ಆಗಸ್ಟ್‌ನಲ್ಲಿ ಪ್ರಕಟವಾಗಿದ್ದನ್ನು ಪತ್ತೆ ಮಾಡಿದೆವು. ಈ ಬ್ಲಾಗ್ ಬರಹ ಬಿಎಂಟಿಸಿ ಪರಿಷ್ಕರಣೆಗೊಳ್ಳಲಿದೆ ಎಂದು ಹೇಳಿತ್ತು.
ಇದೇ ಫೋಟೋ ಬಿಎಂಟಿಸಿ ವೋಲ್ವೊ ಬಸ್‌ಗಳ ಸೋಷಿಯಲ್ ಮೀಡಿಯಾ ಖಾತೆಯಲ್ಲಿ 2022ರ ಸೆಪ್ಟೆಂಬರ್‍ನಲ್ಲಿ ಪ್ರಕಟವಾಗಿದ್ದನ್ನು ಗುರುತಿಸಿದೆವು.
ಮೂಲಚಿತ್ರದಲ್ಲಿ ಬಸ್ ನಂಬರ್ 365 ಎಂದಿದ್ದು ನ್ಯಾಷನಲ್ ಪಾರ್ಕ್ ಮಾರ್ಗ ಎಂದು ಕನ್ನಡದಲ್ಲಿ ಬರೆಯಲಾಗಿದೆ.
ವೈರಲ್ ಆಗಿರುವ ಫೋಟೋವನ್ನು ತಿದ್ದಲಾಗಿದ್ದು, ಬಸ್ ನಂಬರ್‍ವನ್ನು ವಿಡಂಬನೆ ಮಾಡಲೆಂದು ಬಳಸಲಾಗಿದೆ. ಹಾಗಾಗಿ ಈ ಪ್ರತಿಪಾದನೆ ಸುಳ್ಳು.