ಫ್ಯಾಕ್ಟ್‌ಚೆಕ್‌: ಮನೆಯ ಬಳಿ ಬಸ್‌ ನಿಲ್ಲಿಸದಿದ್ದಕ್ಕೆ ಮುಸ್ಲಿಮರ ಗುಂಪೊಂದು ಬಿಎಮ್‌ಟಿಸಿ ಬಸ್ಸಿನ ಮೇಲೆ ಕಲ್ಲುತೂರಾಟ ನಡೆಸಿಲ್ಲ

ಮನೆಯ ಬಳಿ ಬಸ್‌ ನಿಲ್ಲಿಸದಿದ್ದಕ್ಕೆ ಮುಸ್ಲಿಮರ ಗುಂಪೊಂದು ಬಿಎಮ್‌ಟಿಸಿ ಬಸ್ಸಿನ ಮೇಲೆ ಕಲ್ಲುತೂರಾಟ ನಡೆಸಿಲ್ಲ

Update: 2024-11-29 07:00 GMT

Surat rally 2019

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಚುನಾವಣೆ ವೇಳೆ ಘೋಷಿಸಿದಂತಹ ಗ್ಯಾರಂಟಿ ಯೋಜನೆಗಳನ್ನು ಒಂದೋದಾಗಿ ಜಾರಿಗೆ ತಂದಿತು. ಐದು ಗ್ಯಾರಂಟಿಗಳ ಪೈಕಿ ಜನರನ್ನು ಮೊದಲು ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ನೀಡುವ ಶಕ್ತಿ ಯೋಜನೆಯನ್ನು ಜಾರಿಗೊಳಿಸಿತು. ಮಹಿಳೆಯರಿಗೆ ಕರ್ನಾಟಕ ಸರ್ಕಾರ ನೀಡಿದ ಉಚಿತ ಬಸ್‌ ಸೌಲಭ್ಯದ ಪರಿಣಾಮವಿದು ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್‌ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ "ಮುಸ್ಲಿಂ ಮಹಿಳೆಯೊಬ್ಬರು ಮನೆಯ ಮುಂದೆ ಬಸ್ಸನ್ನು ನಿಲ್ಲಿಸಲು ಕೇಳಿದಾಗ ಡ್ರೈವರ್‌ ನಿರಾಕರಿಸಿದರು. ಇದರ ಪರಿಣಾಮ ಏನೆಂದು ನೀವೆ ನೋಡಿ" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ʼಅಲ್ಪ ಜ್ಞಾನಿʼ ಎಂಬ ಫೆಸ್‌ಬುಕ್‌ ಖಾತೆದಾರ, ನವಂಬರ್‌ 19, 2024ರಂದು "ಬೆಂಗಳೂರಿನಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಬಸ್ಸು ನಿಲ್ಲಿಸಲು ವಿನಂತಿಸಿದಳು. ಡ್ರೈವರ್‌ ಮತ್ತು ಕಂಡಕ್ಟರ್ ಬಸ್‌ನ್ನು ನಿಗದಿತ ನಿಲ್ದಾಣದಲ್ಲಿ ಮಾತ್ರ ನಿಲ್ಲಿಸುವುದು ನಿಮಗೆ ಏಲ್ಲಿ ಬೇಕು ಅಲ್ಲಿ ನಿಲ್ಲಿಸಲ್ಲ ಎಂದು ಹೇಳಿದರು ಅವಳ ಒತ್ತಾಯಕ್ಕೆ ಮಣಿಯಲಿಲ್ಲ. ಆಗ ಈ ಮುಸ್ಲಿಂ ಮಹಿಳೆ ತನ್ನ ಜನರನ್ನು ಕರೆತಂದು ಈ ದೃಶ್ಯವನ್ನು ಸೃಷ್ಟಿಸಿದ್ದಾಳೆ . ಈ ಕೊಂಗ್ರೇಸ್ ಸರ್ಕಾರ ಸಿದ್ದುವಿನ ತುಷ್ಠಿಕರಣದಿಂದ ಎಂತಹ ದಯನೀಯ ಪರಿಸ್ಥಿತಿಯಲ್ಲಿದೆ ನಮ್ಮ ಬೆಂಗಳೂರು. ದೇಶದ ಸಂಪತ್ತನು ಕಾಪಾಡುವ ನಮ್ಮ ದೇಶದ ಪ್ರಜೆಗಳು" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.



Full View

ನವಂಬರ್‌ 17, 2024ರಂದು ಇದೇ ವಿಡಿಯೋವನ್ನು ʼಸಂಧ್ಯಾ ಗೌಡʼ ಎಂಬ ಫೇಸ್‌ಬುಕ್‌ ಖಾತೆಯಲ್ಲಿ "ಬೆಂಗಳೂರಿನಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಬಸ್ಸ ನಿಲ್ಲಿಸಲು ವಿನಂತಿಸಿದಳು ಚಾಲಕಮತ್ತು ಕಂಡಕ್ಟರ್ ಬಸ್ ಅನ್ನು ನಿಗದಿತ ನಿಲ್ದಾಣದಲ್ಲಿ ಮಾತ್ರ ನಿಲ್ಲಿಸುವುದು ನಿಮ್ಗೆ ಏಲ್ಲಿ ಬೇಕು ಅಲ್ಲಿ ನಿಲ್ಲಿಸಲ್ಲ ಅಂತ ಹೇಳಿದರು ಅವಳ ಒತ್ತಾಯಕ್ಕೆ ಮಣಿಯಲಿಲ್ಲ. ಆಗ ಈ ಮುಸ್ಲಿಂ ಮಹಿಳೆ ತನ್ನ ಜನರನ್ನು ಕರೆತಂದು ಈ ದೃಶ್ಯವನ್ನು ಸೃಷ್ಟಿಸಿದ್ದಾಳೆ . ಈ ಕೊಂಗ್ರೇಸ್ ಸರ್ಕಾರ ಸಿದ್ದುವಿನ ತುಷ್ಠಿಕರಣದಿಂದ ಎಂತಹ ದಯನೀಯ ಪರಿಸ್ಥಿತಿಯಲ್ಲಿದೆ ನಮ್ಮ ಬೆಂಗಳೂರು. ಅನುಭವಿಸೋ ಹಿಂದೂ ಅನುಭವಿಸು, ಇದು ಬರೀ ಆರಂಭ ಅಷ್ಟೇ, ನೀನು ಬಿಟ್ಟಿ ಭಾಗ್ಯಗಳಿಗೆ ಮರುಳಾದರೆ ಮುಂದೆ ಒಂದು ದಿನ ನೀನು ಈ ಭೂಮಿ ಮೇಲೆ ನಶಿಸಿ ಹೋಗುತ್ತೀಯಾ" ಎಂಬ ಶೀರ್ಷಿಕೆಯನ್ನೀಡಿ ವೈರಲ್‌ ಆದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Full View

ನವೆಂಬರ್ 18, 2024ರಂದು ಇದೇ ವೀಡಿಯೊವನ್ನು ಮತ್ತಬ್ಬ ಫೇಸ್‌ಬುಕ್‌ ಖಾತೆದಾರ ಹಂಚಿಕೊಂಡು, ‘‘ಸಾಕ ಇನ್ನು ಬೇಕಾ. ಬೆಂಗಳೂರಿನಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಬಸ್ ನಿಲ್ಲಿಸಲು ವಿನಂತಿಸಿದಳು ಚಾಲಕ ಮತ್ತು ಕಂಡಕ್ಟರ್ ಬಸ್ ಅನ್ನು ನಿಗದಿತ ನಿಲ್ದಾಣದಲ್ಲಿ ಮಾತ್ರ ನಿಲ್ಲಿಸುವುದು ನಿಮ್ಗೆ ಏಲ್ಲಿ ಬೇಕು ಅಲ್ಲಿ ನಿಲ್ಲಿಸಲ್ಲ ಅಂತ ಹೇಳಿದರು. ಅವಳ ಒತ್ತಾಯಕ್ಕೆ ಮಣಿಯಲಿಲ್ಲ. ಆಗ ಈ ಮುಸ್ಲಿಂ ಮಹಿಳೆ ತನ್ನ ಜನರನ್ನು ಕರೆತಂದು ಈ ದೃಶ್ಯವನ್ನು ಸೃಷ್ಟಿಸಿದ್ದಾಳೆ. ಈ ಕೊಂಗ್ರೇಸ್ ಸರ್ಕಾರ ಸಿದ್ದುವಿನ ತುಷ್ಠಿಕರಣದಿಂದ ಎಂತಹ ದಯನೀಯ ಪರಿಸ್ಥಿತಿಯಲ್ಲಿದೆ ನಮ್ಮ ಬೆಂಗಳೂರು’’ ಎಂದು ಶೀರ್ಷಿಕೆಯನ್ನೀಡಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ

Full View

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್‌ ಆದ ವಿಡಿಯO ಕರ್ನಾಟಕಕ್ಕೆ ಸೇರಿದ್ದಲ್ಲ. 2019ರಲ್ಲಿ ಗುಜರಾತ್‌ನ ಸೂರತ್‌ನಲ್ಲಿ ನಡೆದ ಘಟನೆಯ ದೃಶ್ಯಗಳನ್ನು ಕರ್ನಾಟಕದಲ್ಲಿ ಮುಸ್ಲಿಮರಿಂದ ಬಸ್ಸಿನ ಮೇಲೆ ಕಲ್ಲು ತೂರಾಟ ಎಂಬ ಶೀರ್ಷಿಕೆಯೊಂದಿಗೆ ತಪ್ಪು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ನಾವು ವೈರಲ್‌ ಆದ ವಿಡಿಯೋವಿನಲ್ಲಿ ಕಾಣುವ ಕೆಲವು ಪ್ರಮುಖ ಕೀಫ್ರೇಮ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌ನ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಬೆಂಗಳೂರಿಗೆ ಸಂಬಂಧಿಸಿದ್ದು ಎಂಬಂತಹ ಮಾಹಿತಿ ಎಲ್ಲಿಯೂ ಕಾಣಸಿಗಲಿಲ್ಲ. ಹಾಗಿದ್ದರೆ ಈ ಘಟನೆ ಎಲ್ಲಿ ನಡೆದಿದೆ ಎಂದು ಮತ್ತಷ್ಟು ಸರ್ಚ್ ಮಾಡಿದಾಗ, ಘಟನೆ ಗುಜರಾತ್‌ನ ಸೂರತ್‌ನಲ್ಲಿ ನಡೆದಿದೆ ಎಂದು ಕೆಲವು ಪ್ರಮುಖ ವೆಬ್‌ಸೈಟ್‌ಗಳಲ್ಲಿ ವೈರಲ್‌ ಆದ ಸುದ್ದಿಗೆ ಸಂಬಂಧಿಸಿದ ಕೆಲವು ಮಾಹಿತಿಗಳು ಮತ್ತು ವಿಡಿಯೋಗಳು ಕಾಣಿಸಿತು.

ಜುಲೈ 5, 2019ರಂದು ʼಎಎನ್‌ಐʼ ತನ್ನ ಎಕ್ಸ್‌ ಖಾತೆಯಲ್ಲಿ ʼSurat: 4-5 policemen injured after a clash broke out when police tried to stop people from taking out rally in Nanpura area, today. Section 144 (prohibits assembly of more than 4 people in an area) has been imposed in the area. The rally didn't have permissionʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ಸೂರತ್‌ನ ನಾನ್ಪುರದಲ್ಲಿ ಸೆಕ್ಷನ್‌ 144 ಜಾರಿಯಿದ್ದರೂ, ಅನುಮತಿ ಇಲ್ಲದೆ ರ್ಯಾಲಿ ನಡೆಸುತ್ತಿದ್ದ ಜನರನ್ನು ತಡೆಯಲು ಪೊಲೀಸರು ಪ್ರಯತ್ನಿಸಿದಾಗ ಜನರ ಮತ್ತು ಪೊಲೀಸರ ನಡೆವೆ ನಡೆದ ಘರ್ಷಣೆಯಲ್ಲಿ 4-5 ಪೊಲೀಸರು ಗಾಯಗೊಂಡಿದ್ದಾರೆ" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ಜುಲೈ 5, 2019 ರಂದು ‘‘ದಿವ್ಯಾಂಗ್ ನ್ಯೂಸ್’’ ಯೂಟ್ಯೂಬ್‌ ಚಾನೆಲ್‌ನಲ್ಲಿ ಇದೇ ವಿಡಿಯೋವನ್ನು ನಾವು "Surat l Police fire tear gas shells as rally against mob lynching incidents turns violent" ಎಂಬ ಶೀರಿಕೆಯೊಂದಿಗಿರುವ ವಿಡಿಯೋವನ್ನು ಕಂಡುಕೊಂಡಿದ್ದೇವೆ. ಚಾನಲ್ ಪ್ರಕಾರ, ಸೂರತ್‌ನಲ್ಲಿ ಗುಂಪು ಹತ್ಯೆ ಘಟನೆಗಳ ವಿರುದ್ಧದ ರ್ಯಾಲಿ ಹಿಂಸಾಚಾರಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಆಶ್ರುವಾಯುವನ್ನು ಹಾರಿಸಿದ್ದಾರೆ" ಎಂದು ವರದಿಯಾಗಿದೆ.

Full View

ಸೆಪ್ಟಂಬರ್‌ 26, 2023ರಂದು ʼಕರ್ನಾಟಕ ಸ್ಟೇಟ್‌ ಪೊಲೀಸ್‌ ಫ್ಯಾಕ್ಟ್‌ಚೆಕ್‌ʼ ವೆಬ್‌ಸೈಟ್‌ನಲ್ಲಿ "Old Video of Bus Vandalisation in Surat falsely linked to Karnataka" ಎಂಬ ಶೀರ್ಷಿಕೆಯೊಂದಿಗೆ ಫ್ಯಾಕ್ಟ್‌ಚೆಕ್‌ ವರದಿಯನ್ನು ಹಂಚಿಕೊಂಡಿರುವುದನ್ನು ನಾವು ನೋಡಬಹುದು. ವರದಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಳೆಯ ವಿಡಿಯೋವನ್ನು ಕರ್ನಾಟಕದ್ದು ಎಂದು ಹಂಚಿಕೊಳ್ಳುತ್ತಿದ್ದಾರೆ. ವೈರಲ್‌ ಆದ ವಿಡಿಯೋ 2019ರಲ್ಲಿ ಗುಜರಾತ್‌ನ ಸೂರತ್‌ನಲ್ಲಿ ನಡೆದ ಘಟನೆಯನ್ನು ಕರ್ನಾಟಕದ ಬಸ್‌ ಮೇಲೆ ಮುಸ್ಲಿಮರು ಕಲ್ಲು ತೂರಾಟ ಮಾಡಿದ್ದಾರೆ ಎಂಬ ಸುಳ್ಳು ಸುದ್ದಿಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.


ಜುಲೈ 05, 2019ರಲ್ಲಿ ʼTV9 ಗುಜರಾತಿʼ ಯೂಟ್ಯೂಬ್‌ ಚಾನೆಲ್‌ನಲ್ಲಿ ʼRally against mob lynching incidents turns violent in Surat, police force deployed | Tv9GujaratiNewsʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ʼABP ಅಸ್ಮಿತಾʼ ಯೂಟ್ಯೂಬ್‌ ಚಾನೆಲ್‌ನಲ್ಲಿ ʼViolence erupted after a rally against mob lynchingʼ ಎಂಬ ಹೆಡ್‌ಲೈನ್‌ನೊಂಡಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋವಿನಲ್ಲಿ ʼಗುಜರಾತಿನ ಸೂರತ್‌ನಲ್ಲಿ ಗುಂಪು ಹತ್ಯೆಯ ವಿರುದ್ಧ ನಡೆದ ಶಾಂತಿಯುತ ಪ್ರತಿಭಟನೆ ಇದ್ದಕ್ಕಿದ್ದಂತೆ ಹಿಂಸಾತ್ಮಕ ತಿರುವು ಪಡೆದುಕೊಂಡಿತು. ಅಲ್ಲಿ ನೆರೆದಿದ್ದ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ ಪರಿಣಾಮವಾಗಿ ಜನರ ಗುಂಪು ಕಲ್ಲು ತೂರಾಟ ನಡೆಸಿತು. ಕಳೆದ ತಿಂಗಳು ಯುವಕರನ್ನು ಗುಂಪು ಹತ್ಯೆ ಮಾಡಿದ ಘಟನೆ ನಡೆದಿತ್ತು. ಯುವಕನಿಗೆ ಥಳಿಸುತ್ತಿರುವಾಗ ನೂರಾರು ಜನರು ಗ್ರಾಮದಲ್ಲಿ ನಿಂತು ದೃಶ್ಯ ವೀಕ್ಷಿಸಿದರು. ಈ ಘಟನೆ ದಾಹೋದ್ ಜಿಲ್ಲೆಯ ಫತೇಪುರ ತೆಹಸಿಲ್‌ನಲ್ಲಿ ನಡೆದಿದೆ ಎಂದು ವರದಿಯಾಗಿರುವುದನ್ನು ನಾವು ನೋಡಬಹುದು.

Full View


Full View

ʼಇಂಡಿಯನ್‌ ಎಕ್ಸ್‌ಪ್ರೆಸ್‌ʼ ಜುಲೈ 5, 2019ರಂದು,ʼ Police open fire as clash breaks out with people protesting against mob lynchingʼ ಎಂಬ ಹೆಡ್‌ಲೈನ್‌ನೊಂಡಿಗೆ ವರದಿಯಾಗಿರುವುನ್ನು ನಾವು ಕಂಡುಕೊಂಡೆವು ಬಹುಮುಖ ಅಲ್ಪಸಂಖ್ಯಾತರ ವೇದಿಕೆಯ ಅಧ್ಯಕ್ಷ ವಕೀಲ ಬಾಬು ಪಠಾಣ್ ಮತ್ತು ಅವರ ಸಹಚರರು ತಬ್ರೇಜ್ ಅನ್ಸಾರಿಯವರ ಗುಂಪು ಹತ್ಯೆಯನ್ನು ಖಂಡಿಸಲು ರ್ಯಾಲಿಯನ್ನು ನಡೆಸಿದರು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿರುವುದನ್ನು ನಾವು ಈ ವರದಿಯಲ್ಲಿ ನೋಡಬಹುದು.


ಮೂಲ ವಿಡಿಯೋ ಮತ್ತು ವೈರಲ್‌ ಆದ ವಿಡಿಯೋವಿನಲ್ಲಿನ ಸ್ಕ್ರೀನ್‌ಶಾಟ್‌ನಲ್ಲಿರುವ ಒಂದೇ ಫ್ರೇಮ್‌ನ ಚಿತ್ರವನ್ನು ಇಲ್ಲಿ ನೋಡಬಹುದು.


ಇದರಿಂದ ಸಾಭೀತಾಗಿದ್ದೇನೆಂದರೆ ವೈರಲ್‌ ಆದ ವಿಡಿಯೋ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿತ್ತು. ವಾಸ್ತವವಾಗಿ ಈ ವಿಡಿಯೋ ಕರ್ಕಾಟಕದ ಬಿಎಂಟಿಸಿಯದಲ್ಲ, 2019ರಲ್ಲಿ ಸೂರತ್‌ನಲ್ಲಿ ನಡೆದ ಘಟನೆಯ ಹಳೆಯ ವೀಡಿಯೊವನ್ನು ಕರ್ನಾಟಕದಲ್ಲಿ ನಡೆದ ಘಟನೆ ಎಂಬ ಶೀರ್ಷಿಕೆಯನ್ನಿಡಿ ಹಂಚಿಕೊಳ್ಳಲಾಗುತ್ತಿದೆ.

Claim :  ಮನೆಯ ಬಳಿ ಬಸ್‌ ನಿಲ್ಲಿಸದಿದ್ದಕ್ಕೆ ಮುಸ್ಲಿಮರ ಗುಂಪೊಂದು ಬಿಎಮ್‌ಟಿಸಿ ಬಸ್ಸಿನ ಮೇಲೆ ಕಲ್ಲುತೂರಾಟ ನಡೆಸಿಲ್ಲ
Claimed By :  Social Media Users
Fact Check :  False
Tags:    

Similar News