ಫ್ಯಾಕ್ಟ್‌ ಚೆಕ್: ಮೊಹಮ್ಮದ್‌ ರಫಿ ಯುನ್‌ನಲ್ಲಿ ಒಂದೇ ಒಂದು ಇಂಗ್ಲೀಷ್‌ ಹಾಡುನ್ನು ಹಾಡಿದ್ದಾರೆ ಎಂಬ ಸುದ್ದಿ ಸುಳ್ಳು.

ಮೊಹಮ್ಮದ್‌ ರಫಿ ಯುನ್‌ನಲ್ಲಿ ಒಂದೇ ಒಂದು ಇಂಗ್ಲೀಷ್‌ ಹಾಡುನ್ನು ಹಾಡಿದ್ದಾರೆ ಎಂಬ ಸುದ್ದಿ ಸುಳ್ಳು.

Update: 2023-11-04 18:24 GMT

ಸಂಗೀತ ದಿಗ್ಗಜ ಮೊಹಮ್ಮದ್‌ ರಫಿ ಹಾಡಿರುವಷ್ಟು ಹಾಡು ಬೇರೆ ಭಾಷೆಗಳಲ್ಲಿ ಯಾವ ಗಾಯಕನೂ ಹಾಡಿಲ್ಲ. ಹಿನ್ನಲೆ ಗಾಯಕನಾಗಿರುವ ರಫಿ ಪ್ರಮುಖವಾಗಿ ಹಿಂದಿ ಚಲನಚಿತ್ರಗಳಲ್ಲಿ ಹಾಡಿರುವುದನ್ನು ನಾವು ಕೇಳಿರಬಹುದು. ಕೇವಲ ಹಿಂದಿಯಲ್ಲಿಯಷ್ಟೇ ಅಲ್ಲ ಉರ್ದು,ತೆಲುಗು, ಮರಾಠಿ, ಬೋಜಪುರಿ, ಪಂಜಾಬ್‌ ಮತ್ತಿತರ ಭಾಷೆಗಳಲ್ಲೂ ಹಾಡನ್ನು ಹಾಡಿದ್ದಾರೆ.

ರಾಮು ಜಿಎಸ್‌ವಿ ಎನ್ನುವ X ಖಾತೆದಾರ ತಮ್ಮ ಪೋಸ್ಟ್‌ನಲ್ಲಿ "1970ರಲ್ಲಿ ಮೊಹಮ್ಮದ್‌ ರಫಿ ಯುನ್‌ನಲ್ಲಿ ಇಂಗ್ಲೀಷ್‌ನಲ್ಲಿ ಹಾಡಿರುವ ಏಕೈಕ ಹಾಡಿದು. ಹಾಡಿನ ಸಾಹಿತ್ಯ ಹಾಗೂ ಹಾಡಿನ ಮೂಲಕ ನೀಡಿದ ಸಂದೇಶವನ್ನು ನೀಡಿದ ಎಲ್ಲರಿಗೂ ಅಭಿನಂದನೆಗಳು. ಎಲ್ಲರೂ ಈ ಹಾಡನ್ನು ಕೇಳಿಸಿಕೊಂಡು ಆನಂದಿಸಿ ಎಂಬ ಶೀರ್ಷೀಕೆಯೊಂದಿಗೆ ಹಂಚಿಕೊಂಡಿದ್ದಾರೆ.

ಈ ವೀಡಿಯೋವನ್ನು ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲೂ ಕೆಲವು ಖಾತೆದಾರರು ಹಂಚಿಕೊಂಡಿದ್ದಾರೆ.

ವೀಡಿಯೊ 1

ವೀಡಿಯೊ 2

ವೀಡಿಯೊ 3

ಈ ವಿಡಿಯೋ X ಜಾಲತಾಣದಲ್ಲಿ ಜುಲೈ 2023ರಲ್ಲಿ ವೈರಲ್‌ ಆಗಿತ್ತು.

ಫ್ಯಾಕ್ಟ್‌ ಚೆಕ್‌

ವೈರಲ್‌ ಆದ ವೀಡಿಯೋವಿನಲ್ಲಿರುವ ಸುದ್ದಿ ಸುಳ್ಳು. ಹಿನ್ನಲೆ ಗಾಯಕರಾದ ಮೊಹಮ್ಮದ್‌ ರಫಿ ಇಂಗ್ಲೀಷ್‌ ಭಾಷೆಯಲ್ಲಿ ಮಾತ್ರವಲ್ಲದೇ ಪರ್ಷಿಯನ್‌, ಡಚ್, ಕ್ರಿಯೊಲ್ ಇತ್ತಿತರ ಭಾಷೆಗಳಲ್ಲೂ ಹಾಡನ್ನು ಹಾಡಿದ್ದಾರೆ. ಇಂಗ್ಲಿಷ್‌ನಲ್ಲಿ ಎರಡು ಹಾಡಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ.

ಯುನ್‌ನಲ್ಲಿ ಮೊಹಮ್ಮದ್‌ ರಫಿರವರ ಕಾರ್ಯಕ್ರಮ ಎಂಬ ಕೀವರ್ಡ್‌ನ ಮೂಲಕ ನಾವು ಹುಡುಕಿದಾಗ ನಮಗೆ ಯಾವುದೇ ಲಿಂಕ್‌ಗಳೂ ಸಿಗಲಿಲ್ಲ. ವಿಶ್ವಸಂಸ್ಥೆ ಯಾವುದೇ ರೀತಿಯ ಹಾಡಿನ ರೆಕಾರ್ಡಿಂಗ್‌ನ್ನು ಮಾಡಿಸಿರುವ ದಾಖಲೆಗಳಿಲ್ಲ.

Scroll.in ವೆಬ್‌ಸೈಟ್‌ನ ಪ್ರಕಾರ, ಸಂಗೀತ ಸಂಯೋಜಕರಾದ ಶಂಕರ್‌ ಜೈಕಿಶನ್‌ 1968ರಲ್ಲಿ ಚಲನಚಿತ್ರದ ಹಾಡನ್ನು ಹಾಡಲು ಸಂಪರ್ಕಿಸುವ ಬದಲಿಗೆ ಇಂಗ್ಲೀಷ್‌ನ ಆಲ್ಬಮ್‌ ಹಾಡನ್ನು ಹಾಡಲು ಸಂಪರ್ಕಿಸಿದಾಗ ಗಾಯಕ ಹಿಂಜರಿದರಂತೆ. ಮೊಹಮ್ಮದ್‌ ರಫಿಯವರ ಅಭಿಮಾನಿ ಮೇವರಿಕ್‌ ಚಿತ್ರದ ನಟ ಮತ್ತು ಬರಹಗಾರನಾದ ಹರೀಂದ್ರನಾಥ್‌ ಚಟ್ಟೋಪಾಧ್ಯಾಯ ಹಾಡಿಗೆ ಸಾಹಿತ್ಯವನ್ನು ಬರೆದು ರಫಿರವರನ್ನ ಒಪ್ಪಿಸಿದ್ದರಂತೆ. ಎರಡು ಹಾಡುಗಳಾದ, 1966ರಲ್ಲಿ ಬಿಡುಗಡೆಗೊಂಡ ಸೂರಜ್‌ ಚಿತ್ರದಲ್ಲಿನ ʼಬಹರೂನ್‌ ಫೂಲ್‌ ಬರ್ಸಾವೂʼ ಮತ್ತು 1965ರಲ್ಲಿ ಬಿಡಗಡೆಯಾದ ಹುಮ್ನಾಮ್‌ ಚಿತ್ರದ ʼಹಮ್‌ ಕಾಲೇ ಹೈ ತೋ ಕ್ಯಾ ಹುವಾ" ಈ ಎರಡೂ ಹಾಡುಗಳೂ ಇಂಗ್ಲೀಷ್‌ನಲ್ಲಿ ರೂಪಾಂತರಗೊಳಿಸಲಾಗಿದೆ.

ಮೊಹಮ್ಮದ್‌ ರಫಿ ಹಾಡಿರುವ ಎರಡು ಹಾಡಿನ ಲಿಂಕ್‌ಗಳು ಇಲ್ಲಿವೆ.

Full View


Full View

ಈ ಹಿಂದೆ ಪ್ಲೇಬ್ಯಾಕ್‌ ಸಿಂಗರ್‌ ಆಗಿದ್ದ ಮಹಮ್ಮದ್‌ ರಫಿ ಇಂಗ್ಲೀಷ್‌ ಭಾಷೆಯಲ್ಲೂ ಅನೇಕ ಹಾಡುಗಳನ್ನ ಹಾಡಿದ್ದಾರೆ. ಸಿನಿಮಾಗಳಲ್ಲಿ ಎರಡು ಹಾಡನ್ನು ಹಾಡಿದ್ದಾರೆ. ಚಲನಚಿತ್ರಗಳಲ್ಲಿ ಬಿಟ್ಟು ಕೆಲವೊಂದಷ್ಟು ಆಲ್ಬಮ್‌ ಹಾಡುಗಳನ್ನೂ ಸಹ ಹಾಡಿದ್ದಾರೆ.

ಹೀಗಾಗಿ ವೈರಲ್‌ ಆದ ಸುದ್ದಿ ಸುಳ್ಳು. 

Claim :  The video features the only English song sung by Mohammed Rafi at the UN in 1970
Claimed By :  facebook users
Fact Check :  Misleading
Tags:    

Similar News