ಫ್ಯಾಕ್ಟ್‌ಚೆಕ್‌: ಚೀನಾದ ಟಿಯಾಂಜಿನ್‌ನಲ್ಲಿ ಪ್ರಾರಂಭವಾಗಲಿದೆ ವಿಶ್ವದ ಅತಿದೊಡ್ಡ ಗ್ರಂಥಾಲಯ. ಗ್ರಂಥಾಲಯಕ್ಕೆ ಬಿ.ಆರ್‌ ಅಂಬೇಡ್ಕರ್‌ ಎಂದು ಹೆಸರಿಟ್ಟಿದ್ದಾರೆಯೇ?

ಚೀನಾದ ಟಿಯಾಂಜಿನ್‌ನಲ್ಲಿ ಪ್ರಾರಂಭವಾಗಲಿದೆ ವಿಶ್ವದ ಅತಿದೊಡ್ಡ ಗ್ರಂಥಾಲಯ. ಗ್ರಂಥಾಲಯಕ್ಕೆ ಬಿ.ಆರ್‌ ಅಂಬೇಡ್ಕರ್‌ ಎಂದು ಹೆಸರಿಟ್ಟಿದ್ದಾರೆಯೇ?

Update: 2023-12-26 05:30 GMT

Tianjin Benhai Library

ಅಕ್ಟೋಬರ್ 14, 2023ರಂದು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ʼಸ್ಟ್ಯಾಚು ಆಫ್‌ ಈಕ್ವಾಲಿಟಿ' ಎಂಬ ಹೆಸರಿನ ಡಾ ಬಿ.ಆರ್ ಅಂಬೇಡ್ಕರ್ ಅವರ 19 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣೆ ಮಾಡಿದರು. ಈ ಪ್ರತಿಮೆ ಭಾರತದ ಹೊರಗೆ ನಿರ್ಮಾಣವಾದಂತಹ ಅಂಬೇಡ್ಕರ್ ಅವರ ಅತಿದೊಡ್ಡ ಪ್ರತಿಮೆ ಮೇರಿಲ್ಯಾಂಡ್‌ನ ಅಕೋಕೀಕ್‌ನಲ್ಲಿರುವ ಅಂಬೇಡ್ಕರ್ ಇಂಟರ್‌ನ್ಯಾಶನಲ್ ಸೆಂಟರ್‌ನಲ್ಲಿದೆ.

ಅಮೇರಿಕಾದಲ್ಲಿರುವ ಗ್ರಂಥಾಲಯಕ್ಕೆ ಭಾರತದ ಸಂವಿಧಾನದ ಪಿತಾಮಹ ಎಂದೇ ಹೆಸರುವಾಸಿಯಾದ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರಿನಲ್ಲಿ ನಿರ್ಮಿಸಲಾಗಿದೆ.ಜಗತ್ತಿನಲ್ಲೇ ಅತಿ ದೊಡ್ಡ ಗ್ರಂಥಾಲಯವೆಂದೇ ಹೆಸರುವಾಸಿಯಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

“भारत देश के मशिहा Dr. भीम राव अम्बेदकर जी के नाम अमेरिका ने खोला विश्व का सबसे बडा पुस्तकालय!! शर्म करो मेरे देश के गद्दारों जिस इंसान की तुम मूर्तिया तोड़ते हो उसकी विदेश में कितनी इज्जत है!! जय भीम जय भारत जय संविधान धम्म प्रभात" ಎಂಬ ಶೀರ್ಷಿಕೆಯೊಂದಿಗೆ ಫೋಟೋವನ್ನು ವೈರಲ್‌ ಮಾಡಲಾಗಿದೆ.

ಭಾರತದಲ್ಲಿ ಡಾ. ಬಿಆರ್‌ ಅಂಬೇಡ್ಕರ್‌ ಅವರ ಪ್ರತಿಮೆಯನ್ನು ನಾಶ ಮಾಡುವುದು ಅಧವಾ ಹೊಡೆದು ಹಾಕುವುದು, ಪರತಿಮೆಯನ್ನು ಕೆಡವುದು ಮಾಡುತ್ತಾರೆ ಆದರೆ ಅದೇ ವ್ಯಕ್ತಿಯನ್ನು ವಿದೇಶದಲ್ಲಿ ಸನ್ಮಾನಿಸಿ ಭಾರತೀಯ ಐಕಾನ್ ಡಾ. ಭೀಮ್ ರಾವ್ ಅಂಬೇಡ್ಕರ್ ಗ್ರಂಥಾಲಯವನ್ನು ತೆರೆದಿದ್ದಾರೆ. ಭಾರತೀಯರಿಗೆ ನಾಚಿಕೆಯಾಗಬೇಕು, ಜೈ ಭೀಮ್. ಜೈ ಭಾರತ್” ಎಂದು ಫೋಟೋಗಳಿಗೆ ಶೀರ್ಷಿಕೆಯನ್ನೀಡಿ ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಪೋಸ್ಟ್‌ ಮಾಡುತ್ತಿದ್ದಾರೆ.

Full View

Full View

Full View

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ಆದ ಪೋಸ್ಟ್‌ನಲ್ಲಿ ಕಾಣಿಸುತ್ತಿರುವುದು ಅಮೇರಿಕಾದಲ್ಲಿರುವ ಗ್ರಂಥಾಲಯವಲ್ಲ ಬದಲಿಗೆ ಇದು ಚೈನಾದಲ್ಲಿರುವ ಗ್ರಂಥಾಲಯ. ಈ ಗ್ರಂಥಾಲಯಕ್ಕೆ ಡಾ. ಬಿ. ಆರ್‌ ಅಂಬೇಡ್ಕರ್‌ ಎಂದು ಸಹ ಹೆಸರಿಡಲಿಲ್ಲ.

ವೈರಲ್‌ ಆದ ಫೋಟೋವಿನಲ್ಲಿರುವ ಸತ್ಯಾಂಶವನ್ನು ತಿಳಿಯಲು ನಾವು ಕೆಲವು ಕೀವರ್ಡ್‌ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಡಾ. ಬಿ.ಆರ್‌ ಅಂಬೇಡ್ಕರ್‌ ಲೈಬ್ರರಿ ಎಂದು ಹುಡುಕಾಟ ನಡೆಸಿದಾಗ ನಮಗೆ ಫಲಿತಾಂಶವಾಗಿ ಭಾರತ ದೇಶದ ಹೊರಗೆ ಅಂಬೇಡ್ಕರ್‌ರವರ ಬಹುದೊಡ್ಡ ಪ್ರತಿಮೆ ಇದೆ ಎಂದು ತಿಳಿದು ಬಂದಿತು. ಅಂಬೇಡ್ಕರ್ ಇಂಟರ್‌ನ್ಯಾಶನಲ್ ಸೆಂಟರ್‌ನಲ್ಲಿ (ಎಐಸಿ) ಸ್ಥಾಪಿಸಿರುವ ಅಂಬೇಡ್ಕರ್‌ ಪ್ರತಿಮೆಯನ್ನು ಬಿಟ್ಟು ಬೇರೆ ಯಾವ ಸುದ್ದಿಯೂ ನಮಗೆ ಕಂಡುಬಂದಿಲ್ಲ.

ನಾವು ಚಿತ್ರದ ಬಗ್ಗೆ ಮತ್ತಷ್ಟು ಅಳವಾಗಿ ಸುದ್ದಿಯನ್ನು ತಿಳಿಯಲು ನಾವು ಗೂಗಲ್‌ನ ಮೂಲಕ ರಿವರ್ಸ್‌ ಸರ್ಚ್‌ ಮಾಡಿದಾಗ ನಮಗೆ ಕೆಲವೊಂದು ಚಿತ್ರಗಳು ಕಂಡುಬಂದಿತು.

ನವಂಬರ್‌ 2017ರಲ್ಲಿ ಪ್ರಕಟವಾದ ಇಂಡಿಯಾ.ಕಾಂ ವರದಿಯ ಪ್ರಕಾರ ವಿಶ್ವದಲ್ಲೇ ಅತಿ ದೊಡ್ಡ ಗ್ರಂಥಾಲಯ ಚೈನಾದ ಟಿಯಾಂಜಿನ್‌ನಲ್ಲಿ ಟಿಯಾಂಜಿನ್ ಬಿನ್ಹೈ ಲೈಬ್ರರಿ ಎಂದು ಕಂಡುಕೊಂಡೆವು.

ಈ ಗ್ರಂಥಾಲಯವನ್ನು ಡಚ್ ಕಂಪನಿ MVRDV ಟಿಯಾಂಜಿನ್ ಅರ್ಬನ್ ಪ್ಲಾನಿಂಗ್ ಮತ್ತು ಡಿಸೈನ್ ಇನ್ಸ್ಟಿಟ್ಯೂಟ್ ಸ್ಟಾರ್ಕಿಟೆಕ್ಟ್‌ ಅವರ ಜೊತೆಗೂಡಿ ನಿರ್ಮಿಸಲಾಗಿದೆ. ಟಿಯಾಂಜಿನ್ ಬಿನ್ಹೈ ಗ್ರಂಥಾಲಯದಲ್ಲಿ ಬರೋಬ್ಬರಿ 1.2 ಮಿಲಿಯನ್‌ಯಷ್ಟು ಪುಸ್ತಕಗಳಿರುವುದು ಕಂಡುಬಂದಿದೆ.

ಮಾರ್ಚ್‌ 10,2018ರಂದು ಚಿತ್ರೀಕರಿಸಿದ್ದ ವಿಡಿಯೋವನ್ನು ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿದ್ದರು. ಅಪ್‌ಲೋಡ್‌ ಆದ ವಿಡಿಯೋದಲ್ಲಿ ಚೈನಾದ ಟಿಯಾಂಜಿನ್‌ನಲ್ಲಿ ಟಿಯಾಂಜಿನ್ ಬಿನ್ಹೈ ಲೈಬ್ರರಿಯನ್ನು ಚಿತ್ರೀಕರಿಸಿದನ್ನು ನಾವು ನೋಡಬಹುದು. ಈ ಗ್ರಂಥಾಲಯವನ್ನು ನೋಡಲು ಸ್ವರ್ಗದಂತೆ ಭಾಸವಾಗುತ್ತಂತೆ ಅಷ್ಟೇ ಅಲ್ಲ ಈ ಗ್ರಂಧಾಲಯವನ್ನು 33,700 ಚದರ ಮೀಡರ್‌ಗಳ ವಿಸ್ರೀರ್ಣದಲ್ಲಿ ಕಟ್ಟಲಾಗಿದೆ. ಈ ಗ್ರಂಥಾಲಯದಲ್ಲಿ 1.2 ಮಿಲಿಯನಷ್ಟು ಪುಸ್ತಕಗಳಿರುವುದು ನಾವು ನೋಡಬಹುದು ಇದನ್ನು ಡಚ್ ಕಂಪನಿ MVRDV ಟಿಯಾಂಜಿನ್ ಅರ್ಬನ್ ಪ್ಲಾನಿಂಗ್ ಮತ್ತು ಡಿಸೈನ್ ಇನ್ಸ್ಟಿಟ್ಯೂಟ್ ಸ್ಟಾರ್ಕಿಟೆಕ್ಟ್‌ ಈ ಯೋಜನೆಯನ್ನು ರೂಪಿಸಿದೆ. ಈ ಗ್ರಂಥಾಲಯಕ್ಕೆ "ದಿ ಐ" ಎಂದು ಹೆಸರಿಟ್ಟಿದ್ದಾರೆ.

ಗ್ರಂಥಾಲಯದ ಆಕರ ಗ್ರಂಥಾಲಯದ ರೀತಿ ಭಾಸವಾಗುತ್ತದೆ. ಮಧ್ಯ ಭಾಗದಲ್ಲಿ ದೊಡ್ಡ ಭೂಗೋಳವೊಂದಿದೆ ಅದರೊಳಗೊಂದು ಸಭಾಂಗಣವಿದೆ. ಇಷ್ಟೇ ಅಲ್ಲ ಈ ಗ್ರಂಥಾಲಯ ಬಹಳಷ್ಟು ವೈಶಿಷ್ಟತೆಗಳನ್ನು ಸಹ ಹೊಂದಿದೆ. ಬಹಳಷ್ಟು ಕಾಳಜಿ ವಹಿಸಿ ಮಕ್ಕಳಿಗೆ ಮತ್ತು ಶಿಕ್ಷಣಕ್ಕೆ ಮೀಸಲಾತಿ ಮಾಡಿ ಈ ಗ್ರಂಥಾಲಯವನ್ನು ನಿರ್ಮಾಣ ಮಾಡಲಾಗಿದೆ.

2017ರಲ್ಲಿ ಪ್ರಾರಂಭವಾಗ ಈ ಗ್ರಂಥಾಲಯವನ್ನು ನೋಡಲು ಸಾಕ್ಷು ಪ್ರವಾಸಿಗರು ಪ್ರತಿದಿನ ಧಾವಿಸುತ್ತಾರೆ. ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್‌ ಮಾಡಲು ಈ ಸ್ಥಳ ಉತ್ತಮವೆಂದರೆ ಇಪ್ಪಲ್ಲ.

Full View

ಎಮ್‌ವಿಆರ್‌ಡಿವಿ ವೆಬ್‌ಸೈಟ್‌ನಲ್ಲಿ ಪ್ರಕಡವಾಗಿರುವ ಕೆಲವೊಂದು ಫೋಟೋಗಳಿವು.

ಹೀಗಾಗಿ ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಚಿತ್ರ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲ ಬದಲಿಗೆ ಚೀನಾದ ಟಿಯಾಂಜಿನ್ ಬಿನ್ಹೈ ಲೈಬ್ರರಿಯದ್ದು. ಡಾ. ಬಿ.ಆರ್‌.ಅಂಬೇಡ್ಕರ್‌ ಹೆಸರಿನಲ್ಲಿ ಯಾವುದೇ ಗ್ರಂಥಾಲಯವನ್ನು ನಿರ್ಮಿಸಿಲ್ಲ.

Claim :  The viral image shows the world’s largest library in the name of Dr. B. R. Ambedkar, opened in the United States of America.
Claimed By :  Social Media Users
Fact Check :  False
Tags:    

Similar News