ಫ್ಯಾಕ್ಟ್‌ಚೆಕ್: ಸಿನಿಮಾದಲ್ಲಿ ತೋರಿಸುವ ಹಾಗೆ ಕಾರಿನಲ್ಲಿ ಮಾಡುವ ಸಾಹಸ ದೃಶ್ಯಗಳು ಕಂಡುಬಂದಿದ್ದು ದೆಹಲಿಯಲ್ಲಿ ಅಲ್ಲ, ಬದಲಿಗೆ ಮೆಕ್ಸಿಕೋದಲ್ಲಿ
ಸಿನಿಮಾದಲ್ಲಿ ತೋರಿಸುವ ಹಾಗೆ ಕಾರಿನಲ್ಲಿ ಮಾಡುವ ಸಾಹಸ ದೃಶ್ಯಗಳು ಕಂಡುಬಂದಿದ್ದು ದೆಹಲಿಯಲ್ಲಿ ಅಲ್ಲ, ಬದಲಿಗೆ ಮೆಕ್ಸಿಕೋದಲ್ಲಿ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ಒಂದು ಕಾರು ಮತ್ತೊಂದು ಕೃಿಗೆ ಡಿಕ್ಕಿ ಹೊಡೆಯುವ ದೃಶ್ಯ ಮತ್ತು ಕಾರು ಜನರ ಮೇಲೆ ಹಾಯಿಸುವಂತಹ ಸಾಹಸಮಯವಾದ ದೃಶ್ಯವನ್ನು ನೋಡಬಹುದು.
ವೈರಲ್ ಆದ ವಿಡಿಯೋ ಭಾರತದ ರಾಜಧಾನಿ ನವದೆಹಲಿಯಲ್ಲಿ ಚಿತ್ರೀಕರಿಸಲಾಗಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಕಾರನ್ನು ತನಗೆ ಬೇಕಾದಂಗೆ ಓಡಿಸುವುದಲ್ಲದೇ ಬೇರೆ ಕಾರುಗಳಿಗೆ ಡಿಕ್ಕಿ ಹೊಡೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿದೆ.
https://www.facebook.com/DK9810790121/posts/332872359669052/
ಫ್ಯಾಕ್ಟ್‌ಚೆಕ್
ವೈರಲ್ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ.
ವೈರಲ್ ಆದ ವಿಡಿಯೋವಿನಲ್ಲಿರುವ ಸತ್ಯಾಂಶವನ್ನು ತಿಳಿಯಲು ನಾವು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಈ ವಿಡಿಯೋವನ್ನು ನಾವು ರೆಡ್ಡಿಟ್‌ನಲ್ಲಿರುವುದನ್ನು ಕಂಡು ಹಿಡಿದೆವು. ವಿಡಿಯೋವಿನ ಕಮೆಂಟ್‌ನಲ್ಲಿ ಈ ವಿಡಿಯೋ ಕುರಿತ ಮಾಹಿತಿಯೋ ಸಹ ಇತ್ತು.
ಸ್ಪಾನಿಷ್ ಮಿಡಿಯಾ ವರದಿಯ ಪ್ರಕಾರ ಡಿಸಂಬರ್ 3,2022ರಲ್ಲಿ ಈ ವಿಡಿಯೋವನ್ನು ಮೆಕ್ಸಿಕೋವಿನ ಅವ್ನಿಟಾ ಟೆಕ್ನೊಲ್ ಡ್ರೈವಿಂಗ್ ಕ್ಲಾಸ್‌ನಲ್ಲಿ ಇಬ್ಬರ ನಡುವೆ ನಡೆದ ಸಂಘರ್ಷಣ ಹಿಂಸಾತ್ಮಕವಾಗಿ ಬದಲಾಯಿತು. ನಡೆದ ಸಂಘರ್ಷಣದಲ್ಲಿ ಕೋಪಗೊಂಡ ವ್ಯಕ್ತಿಯೊಬ್ಬ ಮತ್ತೊಬ್ಬನ ಮೇಲೆ ಕಾರಿನ ಮೂಲಕ ಹಲ್ಲೆ ಮಾಡಲು ಯತ್ನಿಸಿದನು. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದಲ್ಲದೆ ಆತನನ್ನು ಬಂಧಿಸಿದ್ದಾರೆ.
ಈ ಘಟನೆಯನ್ನು ಸಾಕಷ್ಟು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಾರೆ ಇನ್ನು ಕೆಲವರು ಈ ಕುರಿತು ಲೇಖನಗಳನ್ನು ಬರೆದಿರುವುದನ್ನು ನಾವು ಕಂಡುಕೊಂಡೆವು. ಮೂಲಗಳ ಪ್ರಕಾರ ಈ ಜಗಳ ನಡೆದಿದ್ದು, ಟೊಲುಕಾದ ಅವೆನಿಡಾ ಟೆಕ್ನೊಲೊಜಿಕೊದಲ್ಲಿರುವ ಮೆಕ್‌ಡೊನಾಲ್ಡ್ಸ್ ಔಟ್‌ಲೆಟ್ ಮುಂದೆ.
Accidente en puente crisa, avenida Tecnológico Toluca en frente de Mc Donald
— Pachy Bautista (@pachybautista) December 4, 2022
Sábado 3 de Diciembre. pic.twitter.com/TMCrgqUpnR
ಇನ್ನಷ್ಟು ವರದಿಗಳಲ್ಲಿ ಕಾರಿನಿಂದ ಹಾನಿಗೊಳಗಾದ ವಾಹನಗಳು ಮತ್ತು ರಸ್ತೆಯನ್ನು ವಿಡಿಯೋವಿನಲ್ಲಿ ನೋಡಬಹುದು
ಡಿಸಂಬರ್ 4,2022ರಂದು ಮೆಕ್ಸಿಕೋವಿನ ಭಧ್ರತಾ ಸಿಬ್ಬಂದಿಗಳು ಈ ಘಟನೆಗೆ ಸಂಬಂಧಿಸಿದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂದಿದ್ದೇವೆ ಎಂದು ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು.
La #SSEdoméx informa que en relación al video difundido en redes sociales sobre un accidente de tránsito ocurrido en #Toluca, donde al parecer varias personas se encuentran involucradas. (1/2)
— Secretaría de Seguridad del Estado de México (@SS_Edomex) December 4, 2022
ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋ ಇತ್ತೀಚಿನದಲ್ಲ, ಈ ವಿಡಿಯೋ 2022ರದ್ದು. ಅಷ್ಟೇ ಅಲ್ಲ ಈ ವಿಡಿಯೋ ಭಾರತದಲ್ಲಿನ ದೆಹಲಿಯಲ್ಲಿ ಚಿತ್ರೀಕರಿಸಿಲ್ಲ ಬದಲಿಗೆ ಈ ವಿಡಿಯೋವನ್ನು ಮೆಕ್ಸಿಕೋ ನಗರದದ್ದು ಎಂದು ಸಾಭೀತಾಗಿದೆ.