ಫ್ಯಾಕ್ಟ್ ಚೆಕ್: ಆಕ್ಟೋಪಸ್ ಕಾರಿನ ಮೇಲೆ ಹತ್ತಿ ಕಾರಿನ ಗ್ಲಾಸ್ ಧ್ವಂಸ ಮಾಡಿರುವ ವೀಡಿಯೋ ವೈರಲ್.
ಆಕ್ಟೋಪಸ್ ಕಾರಿನ ಮೇಲೆ ಹತ್ತಿ ಕಾರಿನ ಗ್ಲಾಸ್ ಧ್ವಂಸ ಮಾಡಿರುವ ವೀಡಿಯೋ ವೈರಲ್.
2023, ಸೆಪ್ಟಂಬರ್‌ನಲ್ಲಿ ಬಂತಂತಹ ಮಳೆಯಿಂದಾಗಿ ನ್ಯೂಯಾರ್ಕ್ ನಗರದ ಅನೇಕ ಭಾಗಗಳಲ್ಲಿ ಪ್ರವಾಹ ಉಂಟಾಗಿ ರಸ್ತೆಗಳೆಲ್ಲಾ ಜಲಾವೃತವಾಗಿತ್ತು. ಆ ಪ್ರವಾಹದಿಂದಾಗಿ ನ್ಯೂಯಾರ್ಕ್ ನಗರದ ಕಾರ್ ಪಾರ್ಕಿಂಗ್‌ನಲ್ಲಿ ಒಂದು ಆಕ್ಟೋಪಸ್ ಕಾರಿನ ಮೇಲೆ ಹತ್ತಿ ಕಾರನ್ನು ಧ್ವಂಸ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ನ್ಯೂಯಾರ್ಕ್‌ನಲ್ಲಿ ಭಾರಿ ಪ್ರವಾಹದಿಂದಾಗಿ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದ್ದಾರೆ. ನೀವೇನಾದರೂ ನಿಮ್ಮ ಕಾರ್‌ಪಾರ್ಕಿಂಗ್‌ಗೆ ಹೋಗೋ ಹಾಗಿದ್ದರೆ ಎಚ್ಚರದಿಂದಿರಿ ಎಂದು ಬರೆದುಕೊಂಡಿದ್ದಾರೆ ಹಾಗೆ ಆಕ್ಟೋಪಸ್ ಕಾರನ್ನು ಧ್ವಂಸ ಮಾಡುತ್ತಿರುವ ವೀಡಿಯೋ ಒಂದನ್ನ ಸೇರಿಸಿ ತಮ್ಮ X ಖಾತೆಯಲ್ಲಿ upuknews ಹಂಚಿಕೊಂಡಿದ್ದಾರೆ.
ಆಲ್ಡಿಚ್ ಎಂಬುವವರು ಸಹ ಇದೇ ಪೋಸ್ಟ್‌ಅನ್ನು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ರಿಲೇ ರಾಬರ್ಟ್ ಸಹ ಈ ವಿಡಿಯೋವನ್ನು ತಮ್ಮ X ಖಾತೆಯಲ್ಲಿ ಹಂಚಿಕೊಂಡು ನಿಮ್ಮ ಕಾರ್ ಪಾರ್ಕಿಂಗ್ ಪ್ರದೇಶದಲ್ಲಿ ಎಚ್ಚರದಿಂದಿರಿ ಎಂದು ಬರೆದುಕೊಂಡಿದ್ದಾರೆ.
ಫ್ಯಾಕ್ಟ್‌ಚೆಕ್
ವೈರಲ್‌ಆಗುತ್ತಿರುವ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ.
ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಈ ಕಾರಿನ ನಂಬರ್‌ಪ್ಲೇಟ್‌ಇಂಗ್ಲೀಷ್‌ನಲ್ಲಿ ಇರಲಿಲ್ಲ.
ವಿಡಿಯೋದಲ್ಲಿ ಬರುವ ಕಾರ್ ನಂಬರ್‌ಪ್ಲೇಟ್‌ನ ಸ್ಕ್ರೀನ್‌ಶಾಟ್ ತೆಗೆದುಕೊಂಡು ಪರಿಶೀಲಿಸಿದಾಗ ನಮಗೆ ಗೊತ್ತಾಗಿದ್ದು, ಈ ನಂಬರ್‌ಪ್ಲೇಟ್ ಅರೇಬಿಯಾದಲ್ಲಿದೆಯಂದು. ಈ ಬಿಳಿ ಬಣ್ಣದ ಎಸ್.ಯು.ವಿ ಕಾರಿನ ಲೈಸನ್ಸ್‌ಪ್ಲೇಟ್ ಮೇಲೆ "Qatar@ghost3dee" ಎಂದು ಅರೇಬಿಯಾದಲ್ಲಿ ಬರೆಯಲಾಗಿತ್ತು. ವೈರಲ್‌ಆದ ವೀಡಿಯೋದಲ್ಲಿ @ghost3dee ಎಂದು ಕಾಣುವ ವಾಟರ್‌ಮಾರ್ಕ್‌ಇತ್ತು.
ಈ ವಾಟರ್‌ಮಾರ್ಕ್‌ನಲ್ಲಿರುವ ಖಾತೆದಾರರ ಹೆಸರನ್ನು ಇನ್‌ಸ್ಟ್ರಾಗ್ರಾಮ್‌ನಲ್ಲಿ ಹುಡುಕಿದಾಗ @ghost3dee ಎಂಬ ಇನ್‌ಸ್ಟ್ರಾಗ್ರಾಮ್‌ಖಾತೆಯನ್ನು ಕಂಡುಕೊಂಡೆವು. ಆತನ ಬಯೋವಿನಲ್ಲಿ ಆತ ಕಂಪ್ಯೂಟರ್‌ಗ್ರಾಫಿಕ್ಸ್‌ನಲ್ಲಿ ವಿಶೇಷ ತರಬೇತಿ ಹೊಂದಿರುವುದಾಗಿ, ಹಾಗೆ ಸಿಜಿ ಜರ್ನಲಿಸ್ಟ್ ಇನ್‌ಕತಾರ್ ಎಂದು ಬರೆದುಕೊಂಡಿದ್ದರು.
ಇನ್ನ ಇನ್ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿ, ನೀವು ನಿಮ್ಮ ಕಾರನ್ನು ಪಾರ್ಕಿಂಗ್‌ನಲ್ಲಿ ಪಾರ್ಕ ಮಾಡಿದಾದ, ಒಂದು ದೊಡ್ಡ ಆಕ್ಟೋಪಸ್ ನಿಮ್ಮ ಕಾರನ್ನು ನಾಶ ಮಾಡಿದರೆ ಎಂದು ಕ್ಯಾಪ್ಷನ್ ನೀಡಿದ್ದಾರೆ. ಜೊತೆಗೆ ಈ ವೀಡಿಯೋವನ್ನು ಸಿ.ಜಿಯಲ್ಲಿ ಮಾಡಲು ತೆಗೆದುಕೊಂಡ ಮುನ್ನಚ್ಚರಿಕೆ ಮತ್ತು ಈ ವಿಡಿಯೋವನ್ನ ಹೇಗೆ ಮಾಡಿದರು ಎಂದು ವಿವರಿಸಿದ್ದಾರೆ.
ಸೌಂಡ್ ಬೈ - @audioflag
ವೀಡಿಯೋ ಫ್ರೇಮ್ ರೆಂಡರ್: @snaprenderfarm ಎಂದು ಪೋಸ್ಟ್ ಮಾಡಿದ್ದಾರೆ.
snaprender.farm ಎನ್ನುವ ಸಾಫ್ಟ್‌ವೇರ್ ಅನ್ನು ಬಳಸಿ ವಿಡಿಯೋವನ್ನು ರೆಂಡರ್ ಮಾಡಿದ್ದೇನೆ. snaprenderfarm, ಡಿಸೈನರ್‌ಗಳಿಗೆ, ಆರ್ಕಿಡೆಕ್‌ಗಳಿಗೆ, ಆನಿಮೇಟರ್ಸ್‌ಗಳಿಗೆ ಬಹಳ ಸುಲಭವಾಗಿ, ವೇಗವಾಗಿ ಕಲಿಯುವ ಮಾರ್ಗವನ್ನು ಕಲಿಸುತ್ತದೆ.
ಕೇವಲ ಇನ್ಸ್ಟಾಗ್ರಾಮ್‌ನಲ್ಲಿ ಮಾತ್ರವಲ್ಲದೇ @ghost3dee ಎಂಬ ಯೂಟ್ಯೂಬ್ ಖಾತೆಯಲ್ಲೂ ಸಹ ಈ ವಿಡಿಯೋವನ್ನು ನಾವು ಕಂಡುಕೊಂಡೆವು.
ಈ ಖಾತೆದಾರರ ಅಕೌಂಟ್‌ನಲ್ಲಿ ಕಂಪ್ಯೂಟರ್ ಸೃಷ್ಟಿಸಿದ ಸಾಕಷ್ಟು ವೀಡಿಯೋಗಳಿವೆ.
ಆದ್ದರಿಂದ, ಇತ್ತೀಚೆಗೆ ನ್ಯೂಯಾರ್ಕ್ ನಗರದಲ್ಲಿ ಸಂಭವಿಸಿದ ಭಾರೀ ಪ್ರವಾಹದ ಸಂದರ್ಭದಲ್ಲಿ ಆಕ್ಟೋಪಸ್ ಕಾರಿನ ಮೇಲೆ ಹತ್ತಿ ಅದನ್ನು ನಾಶಪಡಿಸುತ್ತಿರುವ ವೈರಲ್ ವೀಡಿಯೊದಲ್ಲಿ ಯಾವುದೇ ಸತ್ಯಾಂಶವಿಲ್ಲ. ಈ ವೀಡಿಯೊವನ್ನು CGIನಿಂದ ರಚಿಸಲ್ಪಟ್ಟಿದೆ.