ಫ್ಯಾಕ್ಟ್‌ಚೆಕ್‌: ಮಾವಿನ ಹಣ್ಣಿನಲ್ಲಿ ರಾಸಾಯನಿಕ ಚುಚ್ಚುಮದ್ದಿನ ಮೂಲಕ ಕಲಬೆರಕೆಯನ್ನು ಮಾಡಲಾಗುತ್ತಿದೆ ಎಂದು ತೋರಿಸುವ ವೀಡಿಯೊವಿನ ಅಸಲಿಯತ್ತೇನು?

ಮಾವಿನ ಹಣ್ಣಿನಲ್ಲಿ ರಾಸಾಯನಿಕ ಚುಚ್ಚುಮದ್ದಿನ ಮೂಲಕ ಕಲಬೆರಕೆಯನ್ನು ಮಾಡಲಾಗುತ್ತಿದೆ ಎಂದು ತೋರಿಸುವ ವೀಡಿಯೊವಿನ ಅಸಲಿಯತ್ತೇನು?

Update: 2024-07-27 20:07 GMT

mangoes

ಭಾರತದಲ್ಲಿ ಹಣ್ಣುಗಳು ಮತ್ತು ತರಕಾರಿಗಳ ಕಲಬೆರಕೆಯು ಸಾರ್ವಜನಿಕರ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತದೆ. ಹಣ್ಣುಗಳು ಮತ್ತು ತರಕಾರಿಗಳ ಕಲಬೆರಕೆ, ಕೃತಕ ಬಣ್ಣಗಳು, ರಾಸಾಯನಿಕ ಸಂರಕ್ಷಕಗಳು, ಕೀಟನಾಶಕಗಳ ಅವಶೇಷಗಳು, ಇತ್ಯಾದಿಗಳನ್ನು ಬಳಸಿ ವಿಷಕಾರಿಯಾಗಿಸುತ್ತಿದ್ದಾರೆ. ಭಾರತದಲ್ಲಿ ಬೇಸಿಗೆಕಾಲವನ್ನು ಮಾವಿನ ಕಾಲ ಎನ್ನಲಾಗುತ್ತದೆ ಈ ಕಾಲದಲ್ಲಿ ಮಾಗಿದ ಮಾವಿನಹಣ್ಣುಗಳನ್ನು ತಿನ್ನುವುದು ಸಾಮಾನ್ಯ.ಈ ಸಮಯದಲ್ಲಿ ಮಾವಿಗೆ ಬೇಡಿಕೆ ಹೆಚ್ಚಾಗುವುದರಿಂದ ಮಾವು ಉತ್ಪಾದಕರು ಹಣ್ಣನ್ನು ಪೂರೈಸಲು ಹಣ್ಣುಗಳಿಗೆ ಕೃತಕವಾಗಿ ಹಣ್ಣನ್ನು ಮಾಡುತ್ತಾರೆ.

ಮಾವಿನ ಹಣ್ಣಿಗೆ ಋತುಮಾನವಲ್ಲದ ಸಮಯದಲ್ಲೂ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತದೆ. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್‌ ಆಗಿತ್ತು ಆವಿಡಿಯೋವಿನಲ್ಲಿ ಒಬ್ಬ ವ್ಯಕ್ತಿ ಮಾವಿಗೆ ರಾಸಾಯನಿಕ ಚುಚ್ಚುಮದ್ದನ್ನು ಬಳಸಿ ಕೃತಕವಾಗಿ ಮಾವಿನ ಹಣ್ಣುಗಳನ್ನು ಮಾಗಿಸುತ್ತಿರುವುದನ್ನು ವಿಡಿಯೋವಿನಲ್ಲಿ ನಾವು ನೋಡಬಹುದು.ಆತ ಮಾವಿನಹಣ್ಣಿಗೆ ಹಳದಿ ಬಣ್ಣದ ದ್ರವವನ್ನು ಚುಚ್ಚುತ್ತಿರುವುದನ್ನು ಕಾಣಬಹುದು. ಒಬ್ಬ ಫೇಸ್ಬುಕ್ ಬಳಕೆದಾರರು ಈ ವೀಡಿಯೊವನ್ನು ತೆಲುಗಿನಲ್ಲಿ “మామిడి పండ్లలో కూడా కల్తీ ఇలా చేస్తారట” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ಮಾವಿನಹಣ್ಣುಗಳನ್ನೂ ಸಹ ಹೀಗೆ ಕಲಬೆರಕೆ ಮಾಡುತ್ತಿದ್ದಾರೆ" ಎಂದು ಬರೆಯಲಾಗಿತ್ತು.

Full View

Full View

Full View

Full View

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ವಿಡಿಯೋ ಒಂದು ಸ್ಕ್ರಿಪ್ಟ್‌ನ ಮೂಲಕ ಚಿತ್ರೀಕರಿಸಿಲಾಗಿದೆ.

ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಗಮನಿಸಿದಾಗ ನಾವು ವಿಡಿಯೋವಿನಲ್ಲಿ ಡಿಸ್ಕ್ಲೈಮರ್‌ ಎಂಬುವುದನ್ನು ಕಾಣಬಹುದು. the video shared on Facebook, we found a disclaimer flash on the screen stating “Disclaimer: This video is a complete fiction all the events in the videos are scripted and made for awareness purposes only. This does not promote any kind of activity or defame any kind of ritual. Any similarity to the living or dead or actual events is purely coincidental.” ಎಂದು ಬರೆದಿರುವುದನ್ನು ನಾವು ವಿಡಿಯೋವಿನಲ್ಲಿ ಕಾಣಬಹುದು.


ವಿಡಿಯೋವಿನಿಂದ ತೆಗೆದ ಕೆಲವು ಕೀಫ್ರೇಮ್‌ಗಳನ್ನು ಉಪಯೋಗಿಸಿ ನಾವು ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ʼದಿ ಸೋಷಿಯಲ್‌ ಮಿಡಿಯಾ ಜಂಕ್ಷನ್‌ʼ ಎಂಬ ಯೂಟ್ಯೂಬ್‌ ಚಾನೆಲ್‌ನಲ್ಲಿ ಜೂನ್‌ 20,2024ರಲ್ಲಿ ಹಿಂದಿ ಶೀರ್ಷಿಕೆಯೊಂದಿಗೆ ವೈರಲ್‌ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ನೋಡಬಹುದು. ಈ ವಿಡಿಯೋವಿನಲ್ಲಿ "ಮಾವಿನ ಹಣ್ಣುಗಳಿಗೆ ರಾಸಾಯನಿಕಗಳನ್ನು ಚುಚ್ಚಲಾಗಿದೆ" ಎಂದು ಪೋಸ್ಟ್‌ ಮಾಡಿದ್ದರು.

Full View

ಈ ಯೂಟ್ಯೂಬ್ ಚಾನೆಲ್‌ನಲ್ಲಿ ಮಾವಿನ ಹಣ್ಣಿನ್ನು ಕಲಬೆರಕೆ ಮಾಡುತ್ತಿರುವ ಬಗ್ಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.ವಿಡಿಯೋವಿನಲ್ಲಿ ಕಾಣುವ ವ್ಯಕ್ತಿ ಮಾವಿನಹಣ್ಣಿಗೆ ರಾಸಾಯನಿಕಗಳನ್ನು ಬೆರೆಸುತ್ತಾ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ವೀಡಿಯೋದಲ್ಲಿ ಕಾಣುವ ವ್ಯಕ್ತಿ ವಿಭಿನ್ನವಾಗಿದ್ದರೂ ಕಥೆಯ ಹಿನ್ನೆಲೆ ಮತ್ತು ಕಲ್ಪನೆ ಒಂದೇ. ಈ ವಿಡಿಯೋದಲ್ಲಿ ಮಾವಿನಹಣ್ಣಿಗೆ ಲಿಕ್ವಿಡ್ ಕಲರ್ ಹಾಕುತ್ತಿರುವ ವ್ಯಕ್ತಿ ಹಾಗೂ ಪೊಲೀಸ್ ಅಧಿಕಾರಿಯೊಬ್ಬರು ಈ ಬಗ್ಗೆ ಪ್ರಶ್ನಿಸುತ್ತಿರುವುದನ್ನು ವಿಡಿಯೋವಿನಲ್ಲಿ ನೋಡಬಹುದು.

Full View

ನಾವು ವೈರಲ್ ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಇತರ ವೀಡಿಯೊಗಳ ಸ್ಕ್ರೀನ್‌ಶಾಟ್‌ಗಳೊಂದಿಗೆ ಹೋಲಿಸಿದ್ದೇವೆ, ವೈರಲ್ ವೀಡಿಯೊದಲ್ಲಿ ಕಂಡುಬರುವ ವ್ಯಕ್ತಿಯು ಬೇರೆ ಬೇರೆ ಹಲವು ವೀಡಿಯೊಗಳಲ್ಲಿ ಕಾಣಿಸಿಕೊಂಡಿರುವುದನ್ನು ನಾವು ಕಂಡುಕೊಂಡಿದ್ದೇವೆ, ಈ YouTube ಚಾನಲ್ ವಿವಿಧ ಪಾತ್ರಗಳನ್ನು ನಿರ್ವಹಿಸುವ ಜನರೊಂದಿಗೆ ಸ್ಕ್ರಿಪ್ಟ್ ಮಾಡಿದ ವೀಡಿಯೊಗಳನ್ನು ಪ್ರಕಟಿಸುತ್ತದೆ ಎಂದು ಖಚಿತಪಡಿಸಲಾಗಿದೆ. ಸ್ಕ್ರೀನ್‌ಶಾಟ್‌ನ ಹೋಲಿಕೆ ಇಲ್ಲಿದೆ.


ಚಾನಲ್‌ನ ಮುಖ ಪುಟದ ಬಗ್ಗೆ ಬರೆದಿರುವುದನ್ನು ನಾವು ನೋಡಬಹುದು. ಈ ಚಾನೆಲ್‌ ಕೇವಲ ಮನರಂಜನೆಗಾಗಿ ಮತ್ತು ಸಾಮಾಜಿಕ ಪ್ರಯೋಗಗಳಿಗಾಗಿ ವೀಡಿಯೊಗಳನ್ನು ರಚಿಸಲಾಗುತ್ತದೆ ಎಂದು ಬರೆಯಲಾಗಿತ್ತು.

ಹೀಗಾಗಿ ವೈರಲ್‌ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ವೀಡಿಯೊ ಸ್ಕ್ರಿಪ್ಟ್ ಮಾಡಲ್ಪಟ್ಟಿದೆ, ಇದು ಜಾಗೃತಿ ಉದ್ದೇಶಗಳಿಗಾಗಿ YouTube ಚಾನಲ್ ಪ್ರಕಟಿಸಿಲಾಗಿದೆ.

Claim :  ಮಾವಿನ ಹಣ್ಣಿನಲ್ಲಿ ರಾಸಾಯನಿಕ ಚುಚ್ಚುಮದ್ದಿನ ಮೂಲಕ ಕಲಬೆರಕೆಯನ್ನು ಮಾಡಲಾಗುತ್ತಿದೆ ಎಂದು ತೋರಿಸುವ ವೀಡಿಯೊವಿನ ಅಸಲಿಯತ್ತೇನು?
Claimed By :  Social Media Users
Fact Check :  False
Tags:    

Similar News