ರಸ್ತೆಯ ಬದಿಯಲ್ಲಿರುವ ನೀರಿನ ಫೌಂಟೌನ್‌ನಲ್ಲಿ ಮಹಿಳೆಯೊಬ್ಬರು ಬಟ್ಟೆ ಒಗೆಯುತ್ತಿರುವ ವಿಡಿಯೋವಿನ ಸತ್ಯಾಂಶವೇನು?
ರಸ್ತೆಯ ಬದಿಯಲ್ಲಿರುವ ನೀರಿನ ಫೌಂಟೌನ್‌ನಲ್ಲಿ ಮಹಿಳೆಯೊಬ್ಬರು ಬಟ್ಟೆ ಒಗೆಯುತ್ತಿರುವ ವಿಡಿಯೋವಿನ ಸತ್ಯಾಂಶವೇನು?
ತೆಲಂಗಾಣ ಜಿಲ್ಲೆಯಲ್ಲಿ ಪ್ರಾದೇಶಿಕ ಪಕ್ಷವಾದ ಬಿಆರ್‌ಎಸ್‌ನ್ನು ಸೋಲಿಸಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು. ಚುನಾವಣೆಗೂ ಮುನ್ನ ಮತದಾರರಿಗೆ ನೀಡಿದ್ದ ‘ಆರು ಖಾತ್ರಿ’ ಭರವಸೆಯನ್ನು ನಿಭಾಯಿಸಲು ಕಾಂಗ್ರೆಸ್ ಪಕ್ಷ ಹರಸಾಹಸ ಮಾಡುತ್ತಿದೆ.ಜಿಲ್ಲೆಯಲ್ಲಿರುವ ಸಮಸ್ಯೆಗಳನ್ನು ನಿಭಾಯಿಸುವುದರ ಜೊತೆಗೆ, ತೆಲಂಗಾಣದಲ್ಲಿ ವಿಫಲವಾದ ಮಾನ್ಸೂನ್‌ನಿಂದ ಬಹುತೇಕ ಎಲ್ಲಾ ಪ್ರಮುಖ ಜಲಾಶಯಗಳು ಒಣಗುತ್ತಿವೆ ಇದರಿಂದ ನೀರಿನ ಕೊರತೆಯನ್ನು ಸಹ ಎದುರಿಸುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ತೆಲಂಗಾಣದ ಹೈದರಾಬಾದ್‌ನಲ್ಲಿನ ಕ್ರಾಸ್ ಜಂಕ್ಷನ್‌ನಲ್ಲಿರುವ ನೀರಿನ ಫೌಂಟೇನ್‌ನಲ್ಲಿ ಮಹಿಳೆಯೊಬ್ಬರು ಬಟ್ಟೆ ಒಗೆಯುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲಲಿ ಹಂಚಿಕೊಂಡು ವಿಡಿಯೋವಿಗೆ ಶೀರ್ಷಿಕೆಯಾಗಿ ತೆಲುಗಿನಲ್ಲಿ “ఇండ్లల్లో నీళ్లు లేక రోడ్డుపై ఉన్న వాటర్ ఫౌంటెన్ వద్ద బట్టలు ఉతుక్కుంటున్న తెలంగాణ మహిళలు. ఇట్లాంటి దౌర్భాగ్యమైన పాలన అందిస్తున్న గుంపుమేస్త్రి సన్నాసికి కర్రు కాల్చి వాతపెడితే తప్ప సిగ్గురాదు... #ప్రజాపాలన @revanth_anumula” ಎಂದು ಬರೆದು ಪೋಸ್ಟ್ ಮಾಡಲಾಗಿದೆ.
ವೈರಲ್ ಪೋಸ್ಟ್‌ನ್ನು ಕನ್ನಡಕ್ಕೆ ಅನುವಾದಿಸಿದಾಗ “ತೆಲಂಗಾಣ ಜಿಲ್ಲೆಯ ಮಹಿಳೆಯರು ತಮ್ಮ ಮನೆಗಳಲ್ಲಿ ನೀರಿಲ್ಲದ ಕಾರಣ ರಸ್ತೆಯ ಬದಿಯಲ್ಲಿರುವನೀರಿನ ಫೌಂಟೇನ್‌ನಲ್ಲಿ ಬಟ್ಟೆ ಒಗೆಯುತ್ತಿದ್ದಾರೆ. ಇಂಥಹ ನಾಚಿಕೆ ಪಡುವಂತಹ ಹೀನಾಯ ಆಡಳಿತವನ್ನು ಇದುವರೆಗೂ ಯಾರೂ ಕಂಡಿಲ್ಲ.ನಾಚಿಕೆಯಾಗ ಬೇಕು ಕಾಂಗ್ರೆಸ್ ಆಡಳಿತಕ್ಕೆ. # ಪ್ರಜಾಪಾಲನ @revanth_ anumula ” ಎಂದು ಬರೆದು ಪೋಸ್ಟ್ ಮಾಡಿದ್ದರು.
ಫ್ಯಾಕ್ಟ್‌ಚೆಕ್
ವೈರಲ್ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ರಸ್ತೆಯ ಬದಿಯಲ್ಲಿರುವ ಫೌಂಟೇನ್‌ನಲ್ಲಿ ಬಟ್ಟೆ ಒಗೆಯುತ್ತಿರುವ ಮಹಿಳೆ ತೆಲಂಗಾಣ ಜಿಲ್ಲೆಯ ಮಹಿಳೆಯಲ್ಲ, ವೈರಲ್ ವಿಡಿಯೋದಲ್ಲಿ ಕಾಣುವ ಮಹಿಳೆ ಆಂಧ್ರಪ್ರದೇಶದ ನಿಡದವೋಲು ಗ್ರಾಮಕ್ಕೆ ಸೇರಿದವರು.
ವೈರಲ್ ವಿಡಿಯೋವಿನ ಸತ್ಯಾಂಶವನ್ನು ತಿಳಿಯಲು ನಾವು ವಿಡಿಯೋವಿನ ಕೆಲವು ಕೀಫ್ರೇಮ್‌ಗಳನ್ನು ಉಪಯೋಗಿಸಿ ಗೂಗಲ್‌ನ ರಿವರ್ಸ್ ಇಮೇಜ್‌ನ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಸಾಮಾಜಿಕ ಮಾದ್ಯಮಗಳಲ್ಲಿ ಪೋಸ್ಟ್ ಮಾಡಲಾದ ಕೆಲವಷ್ಟು ವಿಡಿಯೋಗಳು ಕಾಣಿಸಿದವು. ವಿಡಿಯೋವಿಗೆ ಶೀರ್ಷಿಕೆಯಾಗಿ "“Nidadavolu lo water fountain pedite battalu wash chesukuntunaru” ಎಂದು ಬರೆದು ಪೋಸ್ಟ್ ಮಾಡಲಾಗಿತ್ತು. ಶೀರ್ಷಿಕೆಯನ್ನು ನಾವು ಕನ್ನಡಕ್ಕೆ ಅನುವಾದಿಸಿದಾಗ " ಆಂಧ್ರ ಪ್ರದೇಶದ ನಿಡದವೊಲುವಿನಲ್ಲಿ ಫೌಂಟೇನ್‌ನ್ನು ಸ್ಥಾಪಿಸಿದರೆ ಅದರಲ್ಲಿ ಜನರು ಬಟ್ಟೆಯನ್ನು ಒಗೆಯುತ್ತಿದ್ದಾರೆ" ಎಂದು ಬರೆದಿದ್ದನ್ನು ನಾವು ಕಂಡುಕೊಂಡೆವು.
ವೈರಲ್ ವಿಡಿಯೋವಿನ ಬಗ್ಗೆ ಮತ್ತಷ್ಟು ಸತ್ಯಾಂಶವನ್ನು ತಿಳಿಯಲು ವೈರಲ್ ವೀಡಿಯೊವಿನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಳ್ಳುವ ತೆಲುಗು ನ್ಯೂಸ್ ಆರ್ಟಿಕಲ್‌ನಲ್ಲಿರುವ ವರದಿಯನ್ನು ನಾವು ಕಂಡುಕೊಂಡೆವು. ಇದರಲ್ಲಿ ಮಹಿಳೆಯೊಬ್ಬರು ನೀರಿನ ಕಾರಂಜಿ ಬಳಸಿ ಬಟ್ಟೆ ತೊಳೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆಂಧ್ರಪ್ರದೇಶದ ನಿಡದವೋಲು ಅಭಿವೃದ್ಧಿಯ ಭಾಗವಾಗಿ ಆಂಧ್ರಪ್ರದೇಶ ಪ್ರವಾಸೋದ್ಯಮ ಇಲಾಖೆ ಗಣೇಶ ಚೌರಸ್ತಾವಿಲ್ಲಿ ನೀರಿನ ಫೌಂಟೇನ್‌ನ್ನು ನಿರ್ಮಿಸಲಾಗಿತ್ತು, ಅಲ್ಲಿ ಮಹಿಳೆಯೊಬ್ಬರು ಬಟ್ಟೆ ಒಗೆಯುತ್ತಿದ್ದು ದೃಶ್ಯವನ್ನು, ಕಾರಂಜಿ ನೋಡಲು ಬಂದ ಪ್ರವಾಸಿಗರು ಫೋಟೋವನ್ನು ತೆಗೆದು ತಮ್ಮ ಸಾಮಾಜಿಲ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು ಎಂದು ಲೇಖನದಲ್ಲಿ ಬರೆಯಲಾಗಿದೆ.
ಸಮಯಂ ತೆಲುಗು ವೆಬ್‌ಸೈಟ್‌ನ ವರದಿಯ ಪ್ರಕಾರ , ನಿಡದವೋಲುವಿನ ಶಾಸಕ ಜಿ.ಶ್ರೀನಿವಾಸುಲು ನಾಯ್ಡು ಗಣಪತಿ ಸೆಂಟರ್‌ನಲ್ಲಿ ನೀರಿನ ಫೌಂಟೇನ್‌ನ್ನು ಉದ್ಘಾಟಿಸಿದರು.
ಇದರಿಂದ ಸಾಭೀತಾಗಿರುವುದೇನೆಂದರೆ, ರಸ್ತೆಯ ಬದಿಯಲ್ಲಿರುವ ಫೌಂಟೇನ್‌ನಲ್ಲಿ ಬಟ್ಟೆ ಒಗೆಯುತ್ತಿರುವ ಮಹಿಳೆ ತೆಲಂಗಾಣ ಜಿಲ್ಲೆಯ ಮಹಿಳೆಯಲ್ಲ, ವೈರಲ್ ವಿಡಿಯೋದಲ್ಲಿ ಕಾಣುವ ಮಹಿಳೆ ಆಂಧ್ರಪ್ರದೇಶದ ನಿಡದವೋಲು ಗ್ರಾಮಕ್ಕೆ ಸೇರಿದವರು. ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ