ಫ್ಯಾಕ್ಟ್ಚೆಕ್: ಪ್ರಿಯಾಂಕ ಗಾಂಧಿ ವಕ್ಫ್ ಮಸೂದೆ ವಿರುದ್ಧ ಪ್ರತಿಭಟನೆಯನ್ನು ನಡೆಸಿದ್ದಾರೆ ಎಂದು 2022ರ ವಿಡಿಯೋವನ್ನು ಹಂಚಿಕೆ
ಪ್ರಿಯಾಂಕ ಗಾಂಧಿ ವಕ್ಫ್ ಮಸೂದೆ ವಿರುದ್ಧ ಪ್ರತಿಭಟನೆಯನ್ನು ನಡೆಸಿದ್ದಾರೆ ಎಂದು 2022ರ ವಿಡಿಯೋವನ್ನು ಹಂಚಿಕೆ

Claim :
ಪ್ರಿಯಾಂಕ ಗಾಂಧಿ ವಕ್ಫ್ ವಿರುದ್ಧ ಪ್ರತಿಭಟನೆಯನ್ನು ನಡೆಸಿದ್ದಾರೆFact :
ವೈರಲ್ ವಿಡಿಯೋ 2022 ರಲ್ಲಿ ದೇಶಾದ್ಯಂತ ಹೆಚ್ಚಾದ ಹಣದುಬ್ಬರದ ವಿರುದ್ಧದ ಪ್ರತಿಭಟನೆಗೆ ಸಂಬಂಧಿಸಿದ್ದು
ವಕ್ಫ್ ತಿದ್ದುಪಡಿ ಮಸೂದೆಯನ್ನು ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಅಂಗೀಕರಿಸಲಾಗಿದೆ. ಹೀಗಾಗಿ ದೇಶಾದ್ಯಂತ ಈ ಕುರಿತು ಪರ ವಿರೋಧದ ಚರ್ಚೆ ಆರಂಭಗೊಂಡಿದೆ. ಪ್ರಿಯಾಂಕಾ ಗಾಂಧಿ ಅವರು ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಪ್ರತಿಭಟಿಸುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಅನೇಕ ಬಳಕೆದಾರರು ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ವೈರಲ್ ವಿಡಿಯೋದಲ್ಲಿ ಪ್ರಿಯಾಂಕ ಗಾಂಧಿಯವರು ಕಪ್ಪು ಉಡುಪಿನಲ್ಲಿ ಪ್ರತಿಭಟನೆ ಒಂದರಲ್ಲಿ ಭಾಗವಹಿಸುತ್ತಿರುವುದು ಮತ್ತು ಪೊಲೀಸ್ ಅಧಿಕಾರಿಗಳು ಅವರನ್ನು ಸುತ್ತುವರೆದಿರುವುದು ಕಂಡುಬಂದಿದೆ. ಈ ವಿಡಿಯೋ ನೋಡಿದ ಹಲವರು ಪ್ರಿಯಾಂಕಾ ಗಾಂಧಿ ಅವರು ವಕ್ಫ್ ಬಿಲ್ಲಿನ ವಿರುದ್ಧ ಬಹಳ ದೊಡ್ಡ ಮಟ್ಟದ ಪ್ರತಿಭಟನೆಯನ್ನು ನಡೆಸಿದ್ದಾರೆ ಎಂದು ಭಾವಿಸಿ, ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಏಪ್ರಿಲ್ 04, 2025ರಂದು ಎಕ್ಸ್ ಖಾತೆದಾರರೊಬ್ಬರು ʼकाँग्रेस वक्फ बिल पर भाजपा सरकार को बेल्ट ट्रीटमेंट दे रही है। जयराम रमेश ने कहा है कि वक्फ बिल के खिलाफ हम सुप्रीम कोर्ट में जाएंगे। वक्फ बिल जमीनों को लूटने के लिए लाया गया है, इसके खिलाफ कांग्रेस सड़क से लेकर संसद तक पर प्रदर्शन करेगी।ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼವಕ್ಫ್ ಮಸೂದೆಯಲ್ಲಿ ಕಾಂಗ್ರೆಸ್ ಬಿಜೆಪಿ ಸರ್ಕಾರಕ್ಕೆ ಬೆಲ್ಟ್ ಟ್ರೀಟ್ಮೆಂಟ್ ನೀಡುತ್ತಿದೆ. ವಕ್ಫ್ ಮಸೂದೆಯ ವಿರುದ್ಧ ಸುಪ್ರೀಂ ಕೋರ್ಟ್ಗೆ ಹೋಗುತ್ತೇವೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ. ಭೂಮಿಯನ್ನು ಲೂಟಿ ಮಾಡಲು ವಕ್ಫ್ ಮಸೂದೆಯನ್ನು ತರಲಾಗಿದೆ, ಕಾಂಗ್ರೆಸ್ ಇದರ ವಿರುದ್ಧ ಬೀದಿಗಳಿಂದ ಸಂಸತ್ತಿನವರೆಗೆ ಪ್ರತಿಭಟಿಸುತ್ತದೆʼ ಎಂದು ಬರೆದಿರುವುದನ್ನು ನೋಡಬಹುದು.
ವೈರಲ್ ಆದ ಸುದ್ದಿಯ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಏಪ್ರಿಲ್ 04, 2025ರಂದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮಿಳಿನಲ್ಲಿ ʼவக்ஃப் மசோதாவில் பாஜக அரசுக்கு காங்கிரஸ் பெல்ட் ட்ரீட்மென்ட் அளித்து வருகிறது. வக்ஃப் மசோதாவை எதிர்த்து உச்ச நீதிமன்றம் செல்வோம் என்று ஜெய்ராம் ரமேஷ் கூறியுள்ளார். நிலங்களை அபகரிப்பதற்காக வக்ஃப் மசோதா கொண்டு வரப்பட்டதை கண்டித்து காங்கிரஸ் தெருக்களில் இறங்கி நாடாளுமன்றம் வரை போராட்டம் நடத்தும் பிரியங்கா காந்தி MPʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼವಕ್ಫ್ ಮಸೂದೆಯಲ್ಲಿ ಕಾಂಗ್ರೆಸ್ ಬಿಜೆಪಿ ಸರ್ಕಾರಕ್ಕೆ ಬೆಲ್ಟ್ ಟ್ರೀಟ್ಮೆಂಟ್ ನೀಡುತ್ತಿದೆ. ವಕ್ಫ್ ಮಸೂದೆಯನ್ನು ವಿರೋಧಿಸಿ ಸುಪ್ರೀಂ ಕೋರ್ಟ್ಗೆ ಹೋಗುತ್ತೇವೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ. ಭೂಸ್ವಾಧೀನಕ್ಕಾಗಿ ವಕ್ಫ್ ಮಸೂದೆಯನ್ನು ಮಂಡಿಸುವುದನ್ನು ಖಂಡಿಸಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಬೀದಿಗಿಳಿದು ಸಂಸತ್ತಿನವರೆಗೆ ಪ್ರತಿಭಟನೆ ನಡೆಸಿದರುʼ ಎಂದು ಬರೆದಿರುವುದನ್ನು ನೋಡಬಹುದು. (ಆರ್ಕೈವ್)
ಏಪ್ರಿಲ್ 04, 2025ರಂದು, ಇನ್ಸ್ಟಾಗ್ರಾಮ್ ಖಾತೆದಾರರೊಬ್ಬರು ʼकाँग्रेस वक्फ बिल पर भाजपा सरकार को बेल्ट ट्रीटमेंट दे रही है। जयराम रमेश ने कहा है कि वक्फ बिल के खिलाफ हम सुप्रीम कोर्ट में जाएंगे।ʼ ಎಂಬ ಶಿರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼವಕ್ಫ್ ಮಸೂದೆಯಲ್ಲಿ ಕಾಂಗ್ರೆಸ್ ಬಿಜೆಪಿ ಸರ್ಕಾರಕ್ಕೆ ಬೆಲ್ಟ್ ಟ್ರೀಟ್ಮೆಂಟ್ ನೀಡುತ್ತಿದೆ. ವಕ್ಫ್ ಮಸೂದೆಯ ವಿರುದ್ಧ ಸುಪ್ರೀಂ ಕೋರ್ಟ್ಗೆ ಹೋಗುತ್ತೇವೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.ʼ ಎಂದು ಬರೆದಿರುವುದನ್ನು ನೋಡಬಹುದು.
ಮತ್ತೊಂದು ವಿಡಿಯೋವನ್ನು ನೀವಿಲ್ಲಿ, ಇಲ್ಲಿ ನೋಡಬಹುದು.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವೈರಲ್ ವಿಡಿಯೋ 2022 ರಲ್ಲಿ ದೇಶಾದ್ಯಂತ ಹೆಚ್ಚಾದ ಹಣದುಬ್ಬರದ ವಿರುದ್ಧದ ಪ್ರತಿಭಟನೆಗೆ ಸಂಬಂಧಿಸಿದ್ದು. ಪ್ರಿಯಾಂಕ ಗಾಂಧಿ ವಕ್ಫ್ ವಿರುದ್ಧ ಪ್ರತಿಭಟನೆಯನ್ನು ನಡೆಸಿದ್ದಾರೆ ಎಂದು ಹರಿದಾಡುತ್ತಿರುವ ಸುದ್ದಿಯಲ್ಲಿ ಸತ್ಯಾಂಶವಿಲ್ಲ.
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಆಗಸ್ಟ್ 5, 2022 ರಂದು 'ದಿ ಟೈಮ್ಸ್ ಆಫ್ ಇಂಡಿಯಾʼ ತನ್ನ ಎಕ್ಸ್ ಖಾತೆಯಲ್ಲಿ ʼ#Congress leader Priyanka Gandhi Vadra sits on a protest with other leaders and workers of the party outside the AICC HQʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಚೇರಿಯ ಹೊರಗೆ ಇತರ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಪ್ರತಿಭಟನೆಯಲ್ಲಿ ಕುಳಿತಿದ್ದಾರೆʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಆಗಸ್ಟ್ 05, 2022 ರಂದು ದಿ ನ್ಯೂಸ್ ನ್ಯಾಷನಲ್ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ʼकाले कपड़े में सड़क पर उतरी Priyanka Gandhi, Police ने लिया हिरासत में। देखें वीडियोʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಮಾಡಿದ್ದಾರೆ. ಹಿಂದಿ ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ " ಪ್ರಿಯಾಂಕ ಗಾಂಧಿ ಕಪ್ಪು ಬಟ್ಟೆ ಧರಿಸಿ ರಸ್ತೆಗೆ ಬಂದರು, ಪೊಲೀಸರು ಅವರನ್ನು ವಶಕ್ಕೆ ಪಡೆದರುʼ ಎಂಬ ವಿಡಿಯೋ ವರದಿಯನ್ನು ಹಂಚಿಕೊಂಡಿದ್ದಾರೆ
ಆಗಸ್ಟ್ 05, 2022 ರಂದು ಪ್ರಕಟವಾದ ಎನ್ಡಿಟಿವಿಯ ವೀಡಿಯೊ ವರದಿಯೊಂದು ನಮಗೆ ಕಂಡುಬಂದಿತು.ಇದು ವೈರಲ್ ಕ್ಲಿಪ್ನಲ್ಲಿ ಕಂಡುಬರುವ ಅದೇ ದೃಶ್ಯಗಳನ್ನು ಒಳಗೊಂಡಿದೆ. ʼPriyanka Gandhi Vadra Sits On Road In Protest, Cops Surround Herʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಲಾಗಿದೆ. ‘ಪ್ರಿಯಾಂಕ ಗಾಂಧಿ ಪ್ರತಿಭಟನೆ ಸಂದರ್ಭ ರಸ್ತೆಯಲ್ಲಿ ಕುಳಿತಿದ್ದಾರೆ, ಪೊಲೀಸರು ಅವರನ್ನು ಸುತ್ತುವರೆದರು’ಎಂದು ಶೀರ್ಷಿಕೆ ನೀಡಲಾಗಿದೆ. ವರದಿಯ ಪ್ರಕಾರ, ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರದ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಸಚಿನ್ ಪೈಲಟ್ ಮತ್ತು ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಬಂಧಿಸಲಾಯಿತು. ಪೊಲೀಸರು ಪ್ರಿಯಾಂಕಾ ಗಾಂಧಿಯನ್ನು ಬಂಧಿಸಲು ಪ್ರಯತ್ನಿಸುತ್ತಿರುವಾಗ ಅವರು ರಸ್ತೆಯಲ್ಲಿ ಕುಳಿತರು’’ ಎಂದು ಹೇಳಲಾಗಿದೆ. ಇದರಿಂದ ವೈರಲ್ ವೀಡಿಯೊ ವಕ್ಫ್ ತಿದ್ದುಪಡಿ ಮಸೂದೆಗೆ ಸಂಬಂಧಿಸಿಲ್ಲ ಎಂದು ಇದು ಸ್ಪಷ್ಟವಾಗುತ್ತದೆ.
ಹಿಂದೂಸ್ಥಾನ್ ಟೈಮ್ಸ್ ಆಗಸ್ಟ್ 05, 2022 ರಂದು ಸುದ್ದಿ ಪ್ರಕಟಿಸಿರುವುದು ಕೂಡ ನಮಗೆ ಸಿಕ್ಕಿದೆ. ಇದರಲ್ಲಿ ನೀಡಿರುವ ಮಾಹಿತಿ ಪ್ರಕಾರ, ಕಾಂಗ್ರೆಸ್ ಪಕ್ಷವು ಬೆಲೆ ಏರಿಕೆ ಮತ್ತು ಜಿಎಸ್ಟಿ ವಿರುದ್ಧ ಪ್ರತಿಭಟನೆ ನಡೆಸಿತು. ರಾಹುಲ್ ಗಾಂಧಿ ಸೇರಿದಂತೆ ಕೆಲ ಕಾಂಗ್ರೆಸ್ ನಾಯಕರನ್ನು ಬಂಧಿಸಲಾಗಿದೆ. ಪ್ರಿಯಾಂಕಾ ಗಾಂಧಿ ವಾದ್ರಾ ರಸ್ತೆಯಲ್ಲಿ ಕುಳಿತು ಬಂಧನವನ್ನು ವಿರೋಧಿಸಿದರು. ಅಲ್ಲದೆ ವಾದ್ರಾ ಪೊಲೀಸ್ ಬ್ಯಾರಿಕೇಡ್ಗಳನ್ನು ಕೆಡವಿ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಬಳಿಕ ಅವರನ್ನೂ ಬಂಧಿಸಲಾಯಿತು. ಮಲ್ಲಿಕಾರ್ಜುನ ಖರ್ಗೆ, ಜೈರಾಮ್ ರಮೇಶ್ ಮತ್ತು ರಂಜೀತ್ ರಂಜನ್ ಸೇರಿದಂತೆ ಹಲವಾರು ಸಂಸದರನ್ನು ಬಂಧಿಸಲಾಗಿದೆ. ಸಾಂಕೇತಿಕ ಪ್ರತಿಭಟನೆಯಾಗಿ ಅನೇಕ ಕಾಂಗ್ರೆಸ್ ಸದಸ್ಯರು ಕಪ್ಪು ಬಟ್ಟೆ ಧರಿಸಿದ್ದರು’’ ಎಂದು ವರದಿ ಮಾಡಲಾಗಿದೆ.
ಟಿವಿ9 ಕನ್ನಡ ಆಗಸ್ಟ್ 5, 2022ರಂದು ವೈರಲ್ ವಿಡಿಯೋದ ಸ್ಕ್ರೀನ್ ಶಾಟ್ನೊಂದಿಗೆ ‘‘ಪ್ರತಿಭಟನೆ ನಡೆಸುತ್ತಿದ್ದ ಪ್ರಿಯಾಂಕಾ ಗಾಂಧಿಯನ್ನು ರಸ್ತೆಯಲ್ಲೇ ದರದರನೆ ಎಳೆದೊಯ್ದ ಪೊಲೀಸರು; ವಿಡಿಯೋ ವೈರಲ್’’ ಎಂಬ ಹೆಡ್ಲೈನ್ ಮೂಲಕ ಸುದ್ದಿ ಪ್ರಕಟಿಸಿದೆ. ವರದಿಯಲ್ಲಿ ʼಬೆಲೆ ಏರಿಕೆ ಮತ್ತು ಜಿಎಸ್ಟಿ ವಿರುದ್ಧ ಕಾಂಗ್ರೆಸ್ ತನ್ನ ಪ್ರತಿಭಟನೆಯನ್ನು ತೀವ್ರಗೊಳಿಸಿದೆ. ಈ ನಡುವೆ ದೆಹಲಿಯಲ್ಲಿ ನಾಟಕೀಯ ದೃಶ್ಯಗಳು ಕಾಣಿಸಿಕೊಂಡಿದ್ದು, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಿಯಾಂಕಾ ಗಾಂಧಿ ಅವರನ್ನು ವಶಕ್ಕೆ ಪಡೆಯಲು ಹೋದಾಗ ಅವರು ಸಹಕರಿಸಲು ನಿರಾಕರಿಸಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ರಸ್ತೆಯಲ್ಲೇ ಕುಳಿತು ಪ್ರಿಯಾಂಕಾ ಗಾಂಧಿ ಮತ್ತೆ ಪ್ರತಿಭಟನೆಗೆ ಮುಂದಾದರು. ಇದರಿಂದ ಪೊಲೀಸ್ ಸಿಬ್ಬಂದಿ ಪ್ರಿಯಾಂಕಾ ಗಾಂಧಿ ಅವರನ್ನು ರಸ್ತೆಯಲ್ಲೇ ದರದರನೆ ಎಳೆದುಕೊಂಡು ಹೋಗಿ ಕಾರಿನೊಳಗೆ ತಳ್ಳಿದರು. ಪ್ರತಿಭಟನೆಯ ಸಂಕೇತವಾಗಿ ಇತರ ಪಕ್ಷದ ನಾಯಕರಂತೆ ಕಪ್ಪು ಬಟ್ಟೆಯನ್ನು ಧರಿಸಿದ್ದ ಪ್ರಿಯಾಂಕಾ ಗಾಂಧಿ ಮೊದಲು ಬ್ಯಾರಿಕೇಡ್ಗಳ ಮೇಲೆ ಹತ್ತಿದರು. ಅಲ್ಲಿ ಅವರು ಸ್ವಲ್ಪ ಸಮಯದವರೆಗೆ ಧರಣಿ ನಡೆಸಿದರು. ನಂತರ ಪೊಲೀಸರು ಆಗಮಿಸಿ ಅವರನ್ನು ಬಂಧಿಸಲು ಮುಂದಾದರು. ಅದಕ್ಕೆ ಪ್ರಿಯಾಂಕಾ ಒಪ್ಪದಿದ್ದಾಗ ಅವರನ್ನು ಎಳೆದುಕೊಂಡು ಹೋಗಲಾಯಿತುʼ ಎಂದು ವರದಿ ಮಾಡಲಾಗಿದೆ.
ಟಿವಿ9 ತೆಲುಗು ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಆಗಸ್ಟ್ 5, 2022 ರಂದು ‘‘ಕಾಂಗ್ರೆಸ್ ಧರಣಿ.. ಪ್ರಿಯಾಂಕಾ ಗಾಂಧಿಯನ್ನ ಬಲವಂತವಾಗಿ ಎಳೆದುಕೊಂಡು ಹೋದ ಪೊಲೀಸರು’’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಸುದ್ದಿ ಪ್ರಕಟಿಸಿದೆ.
ವೈರಲ್ ವೀಡಿಯೊ ಮತ್ತು ಸುದ್ದಿ ವರದಿಯ ನಡುವಿನ ಹೋಲಿಕೆಗಳನ್ನು ಎತ್ತಿ ತೋರಿಸುವ ಸಂಯೋಜನೆಯ ಚಿತ್ರವನ್ನು ನೀವಿಲ್ಲಿ ನೋಡಬಹುದು.
ಈ ವರದಿಗಳ ಕುರಿತು ಹಲವು ಕೀ ವರ್ಡ್ಗಳನ್ನು ಬಳಸಿ ಈ ಬಗ್ಗೆ ಇನ್ನಷ್ಟು ಸ್ಪಷ್ಟತೆಯನ್ನು ಪಡೆಯಲು ನಾವು ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಆಗಸ್ಟ್ ತಿಂಗಳ 2022 ರಂದು ಕಾಂಗ್ರೆಸ್ ಪಕ್ಷವು ದೇಶಾದ್ಯಂತ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆಯನ್ನು ನಡೆಸಿತು, ಬಹುತೇಕ ವರದಿಗಳಲ್ಲಿ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಬಂಧಿಸಲಾಯಿತು. ಆದರೆ ಪ್ರಿಯಾಂಕ ಗಾಂಧಿ ವಾದ್ರ ಅವರನ್ನು ರಸ್ತೆಯಲ್ಲಿ ಕುಳಿತು ಬಂಧಿಸುವುದನ್ನು ವಿರೋಧಿಸಿದ ನಂತರ ಅವರನ್ನು ವಶಕ್ಕೆ ಪಡೆಯಲಾಯಿತು ಎಂಬ ವರದಿಗಳು ಕಂಡುಬಂದಿದೆ.
ಹೆಚ್ಚುವರಿಯಾಗಿ, ಮುಸ್ಲಿಂ ದಾನ ಮಾಡಿದ ಆಸ್ತಿಗಳ ನಿರ್ವಹಣೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಪ್ರಸ್ತಾಪಿಸುವ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಆಗಸ್ಟ್ 2024 ರಲ್ಲಿ ಲೋಕಸಭೆಯಲ್ಲಿ ಪರಿಚಯಿಸಲಾಯಿತು. ಇದನ್ನು ಏಪ್ರಿಲ್ 02, 2025 ರಂದು ಲೋಕಸಭೆಯಲ್ಲಿ ಅಂಗೀಕರಿಸಲಾಯಿತು , 288 ಸಂಸದರು ಪರವಾಗಿ ಮತ್ತು 232 ಸಂಸದರು ವಿರುದ್ಧವಾಗಿ ಮತ ಚಲಾಯಿಸಿದರು, ಮತ್ತು ನಂತರ ಏಪ್ರಿಲ್ 04, 2025 ರಂದು ರಾಜ್ಯಸಭೆಯಲ್ಲಿ 128 ಮತಗಳು ಪರವಾಗಿ ಮತ್ತು 95 ವಿರುದ್ಧವಾಗಿ ಮತ ಚಲಾಯಿಸಲಾಯಿತು . ಪ್ರಿಯಾಂಕಾ ಗಾಂಧಿ ಅಧಿವೇಶನಕ್ಕೆ ಹಾಜರಾಗಲಿಲ್ಲ ಮತ್ತು ಮಸೂದೆಯ ಮೇಲೆ ಮತ ಚಲಾಯಿಸಲಿಲ್ಲ ಎಂದು ವರದಿಗಳು ಸೂಚಿಸುತ್ತವೆ. ಇದಲ್ಲದೆ, ಪ್ರಿಯಾಂಕಾ ಗಾಂಧಿ ಒಳಗೊಂಡ ಯಾವುದೇ ವಕ್ಫ್ ಸಂಬಂಧಿತ ಪ್ರತಿಭಟನೆಯ ಬಗ್ಗೆ ನಮಗೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಆದ್ದರಿಂದ, ವೈರಲ್ ವೀಡಿಯೊ ವಕ್ಫ್ ತಿದ್ದುಪಡಿ ಮಸೂದೆಗೆ ಸಂಬಂಧಿಸಿಲ್ಲ.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವೈರಲ್ ವಿಡಿಯೋ 2022 ರಲ್ಲಿ ದೇಶಾದ್ಯಂತ ಹೆಚ್ಚಾದ ಹಣದುಬ್ಬರದ ವಿರುದ್ಧದ ಪ್ರತಿಭಟನೆಗೆ ಸಂಬಂಧಿಸಿದ್ದು. ಪ್ರಿಯಾಂಕ ಗಾಂಧಿ ವಕ್ಫ್ ವಿರುದ್ಧ ಪ್ರತಿಭಟನೆಯನ್ನು ನಡೆಸಿದ್ದಾರೆ ಎಂದು ಹರಿದಾಡುತ್ತಿರುವ ಸುದ್ದಿಯಲ್ಲಿ ಸತ್ಯಾಂಶವಿಲ್ಲ