ಫ್ಯಾಕ್ಟ್ಚೆಕ್: 76 ವರ್ಷದ ಮುಸ್ಲಿಂ ವ್ಯಕ್ತಿ 12 ಹಿಂದೂ ಯುವತಿಯನ್ನು ಮದುವೆಯಾಗಿಲ್ಲ
76 ವರ್ಷದ ಮುಸ್ಲಿಂ ವ್ಯಕ್ತಿ 12 ಹಿಂದೂ ಯುವತಿಯನ್ನು ಮದುವೆಯಾಗಿಲ್ಲ
Claim :
76 ವರ್ಷದ ಮುಸ್ಲಿಂ ವ್ಯಕ್ತಿಯೊಬ್ಬ 12 ವರ್ಷದ ಹಿಂದೂ ಹುಡುಗಿಯನ್ನು ನಾಲ್ಕನೇ ಬಾರಿಗೆ ಮದುವೆಯಾಗಿದ್ದಾನೆFact :
ವೈರಲ್ ಆದ ವಿಡಿಯೋ ನಿಜವಾಗಿ ನಡೆದ ಘಟನೆಯಲ್ಲ, ಇದೊಂದು ಸ್ಕ್ರಿಪ್ಟೆಡ್ ವಿಡಿಯೋ
ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿಗೆ ವಿಡಿಯೋವೊಂದನ್ನು ಸಾಮಾಜಿಕ ಬಳಕೆದಾರರು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ವಿಡಿಯೋವಿನಲ್ಲಿ ಹಳದಿ ಬಣ್ಣದ ಉಡುಪನ್ನು ತೊಟ್ಟಿರುವ ಒಬ್ಬ ಮುಸ್ಲಿಂ ವ್ಯಕ್ತಿ ಮತ್ತು ಬಾಲಕಿಯೊಬ್ಬಳು ಕುರ್ಚಿಯಲ್ಲಿ ಕೂತಿರುವುದನ್ನು ನೋಡಬಹುದು. ವಿಡಿಯೋದಲ್ಲಿ ಕಾಣುವ ವ್ಯಕ್ತಿ ಬಾಂಗ್ಲಾದೇಶದ 76 ವರ್ಷದ ಮೊಹಮ್ಮದ್ ರೋಝೋಬ್ ಅಲಿ ಎಂಬ ವ್ಯಕ್ತಿ 12 ವರ್ಷದ ಹಿಂದೂ ಹುಡುಗಿಯನ್ನು ನಾಲ್ಕನೇ ಬಾರಿಗೆ ಮದುವೆಯಾಗಿದ್ದಾರೆʼ ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಡಿಸಂಬರ್ 4, 2024ರಂದು ʼಒ.ಸಿ ಜೈನ್ʼ ಎಂಬುವ ಎಕ್ಸ್ ಖಾತೆದಾರರು ʼबांग्लादेश: 76वर्षीय मोहम्मद रोज़ोब अली ने 12 वर्ष की हिंदू लड़की से चौथी शादी की मोहम्मद रोजोब ने कहा, उसका कोई नहीं है; वह अनाथ है, इसलिए मैंने उसे अपनी पत्नी बना लिया. पहले परिवार के सभी सदस्यों की हत्या कर दी उसके उपरांत इसी तरह छोटी छोटी अबोध बच्चियों से निकाह कर रहे हैं। कल इसी तरह तुम्हारी बहन बेटी भी हो सकती हैं।ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಬಾಂಗ್ಲಾದೇಶದಲ್ಲಿ 76 ವರ್ಷದ ಮೊಹಮ್ಮದ್ ರೋಝೋಬ್ ಅಲಿ ಎಂಬ ವ್ಯಕ್ತಿ 12 ವರ್ಷದ ಹಿಂದೂ ಹುಡುಗಿಯನ್ನು ನಾಲ್ಕನೇ ಬಾರಿಗೆ ಮದುವೆಯಾಗಿದ್ದಾರೆ. ಆ ಹುಡುಗಿ ಅನಾಥೆ, ಆಕೆಗೆ ಯಾರೂ ಇಲ್ಲ ಆದ್ದರಿಂದ ನಾನು ಆಕೆಯನ್ನು ವಿವಾಹ ಮಾಡಿಕೊಂಡು ನನ್ನ ಹೆಂಡತಿಯಾಗಿ ಮಾಡಿಕೊಂಡೆ ಎಂದು ಮೊಹಮ್ಮದ್ ರೋಝೋಬ್ ಹೇಳಿದ್ದಾರೆ. ಇವರೆಲ್ಲಾ ಮೊದಲು ಮನೆಯವರನ್ನೆಲ್ಲ ಕೊಂದು ನಂತರ ಈ ರೀತಿ ಸಣ್ಣ ಪುಟ್ಟ ಮುಗ್ಧ ಹುಡುಗಿಯರನ್ನು ಮದುವೆಯಾಗುತ್ತಿದ್ದಾರೆ. ನಾಳೆ ನಿಮ್ಮ ತಂಗಿ ಮತ್ತು ಮಗಳು ಸಹ ಹೀಗೆ ಮಾಡಬಹುದು ಜಾಗೃತೆಯಿಂದಿರಿʼ ಎಂಬ ಶೀರ್ಷಿಕೆಯೊಂದಿಗಿರುವುದನ್ನು ನಾವು ನೋಡಬಹುದು.
ವೈರಲ್ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು
ʼಎಮ್ಕೆಡಿ ಬಿಡಿ ಟಿವಿʼ ಯೂಟ್ಯೂಬ್ ಚಾನೆಲ್ನಲ್ಲಿ ʼ৭৬ বছরের চাচা বিয়ে করছে ১২ বছরের তরুণীকে আলোড়ন সৃষ্টি করলো।ಎಂಬ ಶೀರ್ಷಿಕೆಯನ್ನೀಡಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼ76 ವರ್ಷದ ವ್ಯಕ್ತಿ 12 ವರ್ಷದ ಹುಡುಗಿಯನ್ನು ಮದುವೆಯಾಗುತ್ತಿದ್ದಾರೆʼಎಂದು ಬರೆದು ಪೊಸ್ಟ್ ಮಾಡಿದ್ದಾರೆ.
ಮತ್ತಷ್ಟು ವಿಡಿಯೋವನ್ನು ನೀವಿಲ್ಲಿ, ಇಲ್ಲಿ ನೋಡಬಹುದು.
ಫ್ಯಾಕ್ಟ್ಚೆಕ್
ವೈರಲ್ ಆದ ವಿಡಿಯೋ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದ್ದಾರೆ. ವೈರಲ್ ಆದ ವಿಡಿಯೋ ನಿಜವಾಗಿ ನಡೆದ ಘಟನೆಯಲ್ಲ, ಇದೊಂದು ಸ್ಕ್ರಿಪ್ಟೆಡ್ ವಿಡಿಯೋ ಎಂದು ಸಾಭೀತಾಗಿದೆ.
ನಾವು ವೈರಲ್ ಆದ ವಿಡಿಯೋವಿನಲ್ಲಿರುವ ಸತ್ಯಾಂಶವನ್ನು ತಿಳಿಯಲು ವೈರಲ್ ಆದ ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಹುಡುಕಾಟದಲ್ಲಿ ನಮಗೆ, ಸೆಪ್ಟಂಬರ್ 26, 2024ರಂದು ʼಎಮ್ಬಿ ಟಿವಿʼ ಯೂಟ್ಯೂಬ್ ಚಾನೆಲ್ನಲ್ಲಿ ವೈರಲ್ ಆದ ವಿಡಿಯೋವನ್ನು ಕಂಡುಕೊಂಡೆವು. ವಿಡಿಯೋವಿಗೆ ʼসাভার বাইপেলে ৭৬ বছরের চাচা ১২ বছরের মেয়েকে বিয়ে করে এখন নেট দুনিয়ায় ভাই-রালʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಸವರ್ ಬೈಪೆಲ್ನಲ್ಲಿ 76 ವರ್ಷದ ಹುಡುಗಿಗ ಚಿಕ್ಕಪ್ಪ, 12 ವರ್ಷದ ಹುಡುಗಿಯನ್ನು ವಿವಾಹವಾದರು ಈಗ ಜಗತ್ತಿಗೆ ಅವನು ಈಗ ಸೋದರ ಮಾವʼ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ನಾವು ವಿಡಿಯೋವನ್ನು ಹಂಚಿಕೊಂಡಿರುವ ʼಎಮ್ಬಿʼ ಯೂಟ್ಯೂಬ್ ಚಾನೆಲ್ನ್ನು ಪರಿಶೀಲಿಸಿದೆವು. ಯೂಟ್ಯೂಬ್ನ ʼಪರಿಚಯದʼ (about)ನಲ್ಲಿ ಮನೋರಂಜನೆಗಾಗಿರುವ ಚಾನೆಲ್ ಇದು ಎಂದು ತಿಳಿದು ಬಂದಿತು.
ಈ ಚಾನೆಲ್ನಲ್ಲಿರುವ ಸಾಕಷ್ಟು ವಿಡಿಯೋಗಳಲ್ಲಿ ಚಿಕ್ಕ ವಯಸ್ಸಿನರು ಅವರ ವಯಸಿಗಿಂತ ದೊಡ್ಡವರನ್ನು ಮದುವೆಯಾದರು ಅಥವಾ ದೊಡ್ಡವರು ಅವರಿಗಿನ ವಯಸ್ಸಿನಲ್ಲಿ ತುಂಬಾ ಚಿಕ್ಕವರನ್ನು ಮದುವೆಯಾದರು ಎಂಬ ಶೀರ್ಷಿಕೆಗೊಂದಿಗೆ ವಿಡಿಯೋಗಳನ್ನು ಹಂಚಿಕೊಂಡಿರುವುದನ್ನು ನೋಡಬಹುದು. ಈ ಚಾನೆಲ್ನಲ್ಲಿ ವಿಡಿಯೋ ಮಾಡುತ್ತಿರುವಾಗ ಒಬ್ಬ ವ್ಯಕ್ತಿ ಪ್ರಶ್ನೆ ಮಾಡುತ್ತಿರುವುದನ್ನು ನೋಡಬಹುದು. ಅಂದರೆ ಇದು ಸ್ಕ್ರಿಪ್ಟಿಂಗ್ ವಿಡಿಯೋ ಎಂದು ಗೊತ್ತಾಗುತ್ತದೆ. ಅಂತಹ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು.
ಈ ವಿಡಿಯೋದಲ್ಲಿ ಕಾಣುವ ಮಹಿಳೆಯನ್ನು ನಾವು ಬೇರೊಂದು ವಿಡಿಯೋವನಲ್ಲಿರುವುದನ್ನು ನಾವು ನೋಡಬಹುದು.
ಇದೇ ಚಾನೆಲ್ನಲ್ಲಿ ಕೆಲವು ಕಿರು ಚಿತ್ರಗಳು ಮತ್ತು ಮನರಂಜನೆಗಾಗಿ ಮಾಡಿರುವ ಕೆಲವು ವಿಡಿಯಗಳನ್ನು ಹಂಚಿಕೊಂಡಿರುವುದನ್ನು ನಾವು ನೋಡಬಹುದು. ಮನರಂಜನೆಗಾಗಿ ಈ ಚಾನೆಲ್ನಲ್ಲಿ ಮದುವೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳಿರುವುದನ್ನು ನಾವು ಕಾಣಬಹುದು. ಈ ವಿಡಿಯೋಗಳಲ್ಲಿ ಕಾಣಿಸುವ ಪ್ರಮುಖ ಪಾತ್ರಗಳಲ್ಲಿ ಕಾಣುವ ವ್ಯಕ್ತಿಗಳು ಹಿರಿಯ ವಯಸ್ಸಿನವರೇ ಇದ್ದಾರೆ.
ಮತ್ತಷ್ಟು ಹುಡುಕಾಟದಲ್ಲಿ ವೈರಲ್ ಆದ ವಿಡಿಯೋವನ್ನು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಖಾತೆಯಲ್ಲಿ ಅಪ್ಲೋಡ್ ಮಾಡಿರುವುದನ್ನು ನೋಡಬಹುದು. ಕೆಲವರು ಒಂದೇ ವಿಡಿಯೋವನ್ನು ಒಂದೇ ಬಾಕ್ಗ್ರೌಂಡ್ನಲ್ಲಿ ಪೊಸ್ಟ್ ಮಾಡಿದರೆ ಇನ್ನು ಕೆಲವರು ವಿಭಿನ್ನ ರೀತಿಯ ಬ್ಯಾಕ್ಗ್ರೌಂಡ್ನಲ್ಲಿ ಚಿತ್ರಿಸಲಾಗಿದೆ. ಆದರೆ ಎಲ್ಲಾ ವಿಡಿಯೋಗಳಲ್ಲಿ ಅದೇ ವ್ಯಕ್ತಿಗಳನ್ನು ಕಾಣಬಹುದು.
ದುಲಾಲ್ ಎಂಬ ಫೇಸ್ಬುಕ್ ಖಾತೆದಾರ ತನ್ನ ಖಾತೆಯಲ್ಲಿ ವೈರಲ್ ಆದ ವಿಡಿಯೋದಲ್ಲಿ ಕಾಣುವ ಜೋಡಿಯ ಒಂದೆರೆಡು ವಿಡಿಯೋವನ್ನು ಕಂಚಿಕೊಂಡಿದ್ದಾರೆ. ಒಂದೇ ಕಥಾಹಂದರನ್ನಿಟ್ಟುಕೊಂಡು ಬೇರೆ ಜೊಡಿಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆತ ಹಂಚಿಕೊಂಡಿರುವ ಒಂದು ವಿಡಿಯೋದಲ್ಲಿ ವೈರಲ್ ವಿಡಿಯೋದಲ್ಲಿ ಕಾಣುವ 12 ವರ್ಷದ ಹುಡುಗಿಯನ್ನು ನೋಡಬಹುದು.
ಇದೇ ವಿಡಿಯೋವನ್ನು ದಿಶಾ ಮಿಡಿಯಾ ಎಂಬ ಫೇಸ್ ಖಾತೆದಾರರೊಬ್ಬರು ಹಂಚಿಕೊಂಡಿರುವುದನ್ನು ಕಾಣಹುದು. ವೈರಲ್ ಆದ ವಿಡಿಯೋವನ್ನು ಈ ಚಾನೆಲ್ನಲ್ಲಿ ಸೆಪ್ಟಂಬರ್ 29, 2024ರಂದು ಹಂಚಿಕೊಂಡಿದ್ದಾರೆ. ಚಾನೆಲ್ನ ಮುಖಪುಟದ ಬಗ್ಗೆ ಇರುವ ಪರಿಚಯವನ್ನು ನೋಡಿದರೆ, ಈ ಚಾನೆಲ್ ಮನರಂಜನೆ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಈ ಚಾನೆಲ್ನಲ್ಲಿ ಸೃಷ್ಟಿಸಲಾಗಿದೆ ಎಂದು ಬರೆದಿರುವುದನ್ನು ನೋಡಬಹುದು.
ಹೀಗಾಗಿ ಇದರಿಂದ ಸಾಭಿತಾಗಿದ್ದೇನೆಂದರೆ, ವೈರಲ್ ಆದ ವಿಡಿಯೋ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದ್ದಾರೆ. ವೈರಲ್ ಆದ ವಿಡಿಯೋ ನಿಜವಾಗಿ ನಡೆದ ಘಟನೆಯಲ್ಲ, ಇದೊಂದು ಸ್ಕ್ರಿಪ್ಟೆಡ್ ವಿಡಿಯೋ.