ಫ್ಯಾಕ್ಟ್ಚೆಕ್ : ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಶಾರುಖ್ ಖಾನ್ ಬಾಲ್ಯದ ಫೋಟೋಗಳು ಎಐನ ಮೂಲಕ ರಚಿಸಲಾಗಿದೆಯಾ?
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಶಾರುಖ್ ಖಾನ್ ಬಾಲ್ಯದ ಫೋಟೋಗಳು ಎಐನ ಮೂಲಕ ರಚಿಸಲಾಗಿದೆಯಾ?
Claim :
ಸಾಮಾಜಿಕ ಜಾಲತಾಣದಲ್ಲಿ ಶಾರುಖ್ ಖಾನ್ ಬಾಲ್ಯದ ಚಿತ್ರ ವೈರಲ್Fact :
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಶಾರುಖ್ ಖಾನ್ ಬಾಲ್ಯದ ಚಿತ್ರ ಕೃತಕ ಬುದ್ದಿಮತ್ತೆಯಿಂದ ರಚಿಸಲಾಗಿದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರೆಟಿಗಳ ಬಾಲ್ಯದ ಪೋಟೋಗಳು ಆಗಾಗ ಚರ್ಚೆಗೀಡಾಗುತ್ತಲೇ ಇರುತ್ತವೆ. ಕೆಲವರು ಈ ಫೋಟೋಗಳ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರೆ ಇನದನು ಕೆಲವರು ಫೋಟೋವನ್ನು ನಿಜವೆಂದು ಶೇರ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಎಐನ ಮೂಲಕ ರಚಿಸಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಕೆಲವರು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯನ್ನು ವೈರಲ್ ಮಾಡುತ್ತಿದ್ದಾರೆ. ತಂತ್ರಜ್ಞಾನದಿಂದ ಈಗ ಯಾರ ಚಿತ್ರವನ್ನಾದರೂ ಸುಲಭವಾಗಿ ಬದಲಿಸಬಹುದು.
ಶಾರುಖ್ ಖಾನ್ ದೇಶದ ಸ್ಟಾರ್ ಹೀರೋಗಳಲ್ಲಿ ಒಬ್ಬರು. ಪ್ರಪಂಚದಾದ್ಯಾಂತ ಸಾಕಷ್ಟು ಪ್ಯಾನ್ಸ್ ಫಾಲೋವರನ್ಸ್ನ್ನು ಹೊಂದಿರುವ ಈ ಸ್ಟಾರ್ ನಟನ ಬಾಲ್ಯದ ಕೆಲವು ಚಿತ್ರಗಳು ವೈರಲ್ ಆಗಿವೆ.
ಫ್ಯಾಕ್ಟ್ಚೆಕ್:
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ನಾವು ಕಂಡುಕೊಂಡೆವು.
ವೈರಲ್ ಆದ ಚಿತ್ರವನ್ನು ನಾವು ಗೂಗಲ್ ರಿವರ್ಸ್ ಇಮೇಜ್ ಮೂಲಕ ಹುಡುಕಿದಾಗ ನಮಗೆ ಫಿಲ್ಮೀಫೇರ್ ಮ್ಯಾಗಜೀನ್ ವೆಬ್ಸೈಟ್ನಲ್ಲಿ ಆಗಸ್ಟ್ 31,2023ರಂದು ಅಪ್ಲೋಡ್ ಮಾಡಲಾದ ಫೋಟೋ ಗ್ಯಾಲರಿಯಲ್ಲಿ ಶಾರುಖ್ ಖಾನ್ಗೆ ಸಂಬಂಧಿಸಿದ ಫೋಟೋವೊಂದು ಕಂಡುಬಂದಿತು. ಈ ಚಿತ್ರವನ್ನು ಎಐನ ಮೂಲಕ ರಚಿಸಲಾಗಿದೆ ಎಂದು ವೆಬ್ಸೈಟ್ನಲ್ಲಿ ಬರೆಯಲಾಗಿತ್ತು. ಹಾಗಾಗಿ ವೈರಲ್ ಆದ ಫೋಟೋ ಒರಿಜಿನಲ್ ಫೋಟೋವಲ್ಲ ಎಐನ ಮೂಲಕ ರಚಿಸಲಾಗಿದೆ.
ವೈರಲ್ ಆದ ಚಿತ್ರಗಳು ಎಐನ ಮೂಲಕ ರಚಿಸಲಾಗಿದೆಯಾ ಎಂದು ತಿಳಿಯಲು ನಾವು ಹೈವ್ ಮಾಡರೇಶನ್ ಟೂಲನ್ನು ಬಳಸಿ ಹುಡುಕಿದೆವು. ಫಲಿತಾಂಶವಾಗಿ ನಮಗೆ ಈ ಚಿತ್ರ 88.9%ರಷ್ಟು ಈ ಚಿತ್ರವನ್ನು ಎಐನ ಮೂಲಕ ರಚಿಸಲಾಗಿದೆ ಎಂದು ನಾವು ತಿಳಿದುಕೊಂಡೆವು.
inuth.com ಮತ್ತು indiatvnews.com ಎಂಬ ವೆಬ್ಸೈಟ್ನಲ್ಲಿ ಶಾರುಖ್ ಖಾನ್ರವರ ಬಾಲ್ಯದ ಫೋಟೋಗಳು ನಮಗೆ ಕಂಡುಬಂದಿತು. ವೈರಲ್ ಆದ ಫೋಟೋ ಮತ್ತು ಶಾರುಖ್ರ ಬಾಲ್ಯದ ಫೋಟೋವನ್ನು ಎರಡು ಹೋಲಿಸಿ ನೋಡಿದಾಗ ನಮಗೆ ಈವೆರಡು ಚಿತ್ರಗಳು ಭಿನ್ನವಾಗಿದೆ ಎಂದು ತಿಳಿಯಿತು.
ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಚಿತ್ರವನ್ನು ಎಐನ ಮೂಲಕ ರಚಿಸಲಾಗಿದೆ. ವಾಸ್ತವವಾಗಿ ಅದು ಶಾರುಖ್ ಖಾನ್ ಚಿತ್ರವಲ್ಲ