ಫ್ಯಾಕ್ಟ್ಚೆಕ್: 2024ರ ಲೋಕಸಭಾ ಚುನಾವಣೆಯ ದಿನಾಂಕವಿರುವ ಸ್ಕ್ರೀನ್ ಶಾಟ್ನ ಅಸಲಿಯತ್ತೇನು?
2024ರ ಲೋಕಸಭಾ ಚುನಾವಣೆಯ ದಿನಾಂಕವಿರುವ ಸ್ಕ್ರೀನ್ ಶಾಟ್ನ ಅಸಲಿಯತ್ತೇನು?
Claim :
2024ರ ಲೋಕಸಭಾ ಚುನಾವಣೆಯ ದಿನಾಂಕ ಪಟ್ಟಿಯನ್ನು ಹೊಂದಿರುವ ವಾಟ್ಸ್ಪ್ ಸ್ಕ್ರೀನ್ ಶಾಟ್ ವೈರಲ್ ಆಗಿದೆ. ಈ ದಿನಾಂಕ ಪಟ್ಟಿಯನ್ನು ಚುನಾವಣಾ ಆಯೋಗವು ನೀಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕ್ಪಾಪ್ಷನ್ನೊಂದಿಗೆ ವೈರಲ್ ಮಾಡಲಾಗಿದೆFact :
2024ರ ಲೋಕಸಭಾ ಚುನಾವಣೆಯ ಕುರಿತು ಅಧಿಕೃತ ದಿನಾಂಕಗಳನ್ನು ಬಿಡುಗಡೆ ಮಾಡಲಾಗಿಲ್ಲ. ವಾಟ್ಸಾಪ್ನಲ್ಲಿ ವೈರಲ್ ಆಗುತ್ತಿರುವ ವೇಳಾಪಟ್ಟಿ ನಕಲಿಯದ್ದು.
ಲೋಕಸಭಾ ಚುನಾವಣೆಯ ದಿನಾಂಕಗಳನ್ನು ಚುನಾವಣಾ ಆಯೋಗವು ಮಾರ್ಚ್ 13ರಂದು ಪ್ರಕಟಿಸುವ ಸಾಧ್ಯತೆಯಿದೆ. ಸಾರ್ವತ್ರಿಕ ಚುನಾವಣೆಯ ಸಿದ್ಧತೆಯನ್ನು ಮೌಲ್ಯಮಾಪನ ಮಾಡಲು ಆಯೋಗವು ಅನೇಕ ರಾಜ್ಯಗಳಿಗೆ ಭೇಟಿ ನೀಡುತ್ತಿದೆ ಹಾಗೂ ಸಮಿತಿಯು ಕೆಲಸ ಪೋರ್ಣಗೊಂಡ ನಂತರ ಚುನಾವಣಾ ದಿನಾಂಕವನ್ನು ಪ್ರಕಟಿಸಲಾಗುವುದು. ಈ ನಡುವೆ ಇದೀಗ ಸಾಮಾಜಿಕ ಜಾಲತಾಣದಲ್ಲಿ 2024 ರ ಲೋಕಸಭಾ ಚುನಾವಣೆಯ ಮಹತ್ವದ ದಿನಾಂಕಗಳ ಪಟ್ಟಿಯನ್ನು ಒಳಗೊಂಡಿರುವ ಸಂದೇಶವೊಂದು ವಾಟ್ಸ್ಆಪ್ನ ಮೂಲಕ ಹರಿದಾಡುತ್ತಿದೆ.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ.
ವೈರಲ್ ಆದ ಸುದ್ದಿಯ ಕುರಿತು ಕೆಲವೊಂದು ಕೀವರ್ಡ್ಗಳ ಮೂಲಕ ನಾವು ಸಾಮಾಜಿಕ ಜಾಲತಾಣದಲ್ಲಿ ಹಾಗೂ ಗೂಗಲ್ನಲ್ಲಿ ಹುಡುಕಾಟ ನಡೆಸಿದೆವು. ನಮಗೆ ಈ ಕುರಿತಾದಂತಹ ಯಾವುದೇ ಅಧಿಕೃತ ಸೂಚನೆಗಳು ನಮಗೆ ಕಾಣಿಸಿಲ್ಲ. ಆದರೆ ನಾವು ಕೆಲವೊಂದು ಪ್ರತಿಷ್ಠಿತ ಮಾಧ್ಯಮಗಳಲ್ಲಿ ಬಂದಂತಹ ವರದಿಗಳನ್ನು ನಾವು ಕಂಡುಕೊಂಡೆವು. ಆ ವರದಿಗಳು ಇಲ್ಲಿವೆ.
ಚುನಾವಣಾ ಆಯೋಗವು ಮಾರ್ಚ್ 9 ಮತ್ತು ಮಾರ್ಚ್ 13 ರ ನಡುವೆ ಲೋಕಸಭಾ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆಯಿದೆ
ಅಷ್ಟೇ ಅಲ್ಲ ನಾವು ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ನಲ್ಲಿ ಚುನಾವಣೆ ಕುರಿತು ಏನಾದರೂ ಸುತ್ತೋಲೆ ಅಥವಾ ಪತ್ರಕಾ ಪ್ರಕಟಣೆಯಿದೆಯಾ ಎಂದು ಹುಡುಕಿದೆವು. ಆದರೆ ನಮಗೆ ಯಾವುದೇ ರೀತಿಯ ಫಲಿತಾಂಶ ಸಿಗಲಿಲ್ಲ. ಹೀಗಾಗಿ ನಮಗೆ ಇದರಿಂದ ಧೃಟೀಕೃತವಾಗಿದ್ದೇನೆಂದರೆ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲವೆಂದು.
ಭಾರತೀಯ ಚುನಾವಣಾ ಆಯೋಗವು ತನ್ನ ಎಕ್ಷ್ ಖಾತೆಯಲ್ಲಿ ಚುನಾವಣಾ ದಿನಾಂಕದ ಕುರಿತು ಅಧಿಕೃತ ಮಾಹಿತಿಯನ್ನ ಮತ್ತು ವೇಳಾಪಟ್ಟಿಯನ್ನು ಬಿಡುಗಡೆ ಮಾಡಿಲ್ಲ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸ್ಪಷ್ಟನೆ ನೀಡಿದೆ.
"#LokSabhaElections2024 ರ ವೇಳಾಪಟ್ಟಿಗೆ ಸಂಬಂಧಿಸಿದ ಸುಳ್ಳು ಸಂದೇಶವನ್ನು WhatsApp ನಲ್ಲಿ ಪ್ರಸಾರ ಮಾಡಲಾಗುತ್ತಿದೆ. ವೈರಲ್ ಆಗುತ್ತಿರುವ ಸುದ್ದಿ #ಸುಳ್ಳುಸುದ್ದಿಯೆಂದು ಹಾಗೆ #ECI ಅಧಿಕೃತವಾಗಿ ಯಾವುದೇ ದಿನಾಂಕಗಳನ್ನು ಘೋಷಿಸಿಲ್ಲ. ಚುನಾವಣೆ ಆಯೋಗವು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿತ್ತು.
A fake message is being shared on Whats app regarding schedule for #LokSabhaElections2024#FactCheck: The message is #Fake. No dates have been announced so far by #ECI.
— Election Commission of India (@ECISVEEP) February 24, 2024
Election Schedule is announced by the Commission through a press conference. #VerifyBeforeYouAmplify pic.twitter.com/KYFcBmaozE
ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. 2024 ರ ಲೋಕಸಭಾ ಚುನಾವಣೆಯ ಅಧಿಕೃತ ದಿನಾಂಕಗಳನ್ನು ಬಿಡುಗಡೆ ಮಾಡಲಾಗಿಲ್ಲ. ವಾಟ್ಸಾಪ್ನಲ್ಲಿ ಚಲಾವಣೆಯಲ್ಲಿರುವ ಸಾರ್ವತ್ರಿಕ ಚುನಾವಣೆ 2024 ರ ವೇಳಾಪಟ್ಟಿ ನಕಲಿಯಾದ್ದು.