ಫ್ಯಾಕ್ಟ್ಚೆಕ್: ಶಿಮ್ಲಾದಲ್ಲಿ ಹಿಮಪಾತದ ಚಿತ್ರವಿದು ಎಂದು ಎಐನಿಂದ ರಚಿಸಿದ ಚಿತ್ರ ಹಂಚಿಕೆ
ಶಿಮ್ಲಾದಲ್ಲಿ ಹಿಮಪಾತದ ಚಿತ್ರವಿದು ಎಂದು ಎಐನಿಂದ ರಚಿಸಿದ ಚಿತ್ರ ಹಂಚಿಕೆ
Claim :
ಶಿಮ್ಲಾದಲ್ಲಿ ತಾಜಾ ಹಿಮಪಾತವು ನಗರವನ್ನು ಇನ್ನಷ್ಟು ಆಕರ್ಷಕವಾಗಿಸಿದೆFact :
ಶಿಮ್ಲಾದಲ್ಲಿ ಹಿಮಪಾತದ ಚಿತ್ರಗಳನ್ನು ಎಐ ಮೂಲಕ ರಚಿಸಲಾಗಿದೆ
ಭಾರತದ ಹಿಮಾಚಲಪ್ರದೇಶದಲ್ಲಿರುವ ಶಿಮ್ಲಾ ಒಂದು ಗಮ್ಯ ತಾಣ. ಭಾರತದ ಹಿಮಾಚಲ ರಾಜ್ಯದ ರಾಜಧಾನಿ ಮತ್ತು ಸುತ್ತಮುತ್ತಲಿನ ಪ್ರವಾಸಿ ರೆಸಾರ್ಟ್ಗಳು ಡಿಸೆಂಬರ್ ಆರಂಭದಲ್ಲಿ ಮೊದಲ ಹಿಮಪಾತವಾಗಿದೆ, ಇದರಿಂದಾಗಿ ಹೋಟೆಲ್ ಉದ್ಯಮವು ದಶಕಗಳಲ್ಲಿ ಮೊದಲ ಬಾರಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಸ್ವಾಗತಿಸಿದೆ. “ಶಿಮ್ಲಾ ಮತ್ತು ಅದರ ಹತ್ತಿರದ ಪ್ರದೇಶಗಳು ಲಘು ಹಿಮಪಾತವನ್ನು ಅನುಭವಿಸಿವೆ ಮತ್ತು ಇದು ಶಿಮ್ಲಾ ಪಟ್ಟಣದಲ್ಲಿ ಋತುವಿನ ಮೊದಲ ಹಿಮಪಾತವಾಗಿದೆ. ಇದರಿಂದ ತಾಪಮಾನವು ಭಾರತದ ಉತ್ತರ ಭಾಗಗಳಲ್ಲಿ ಮತ್ತಷ್ಟು ಇಳಿಯುವ ನಿರೀಕ್ಷೆಯಿದೆ. ಉತ್ತರ ಕಾಶ್ಮೀರದ ಕುಪ್ವಾರ ಮತ್ತು ಬಾರಾಮುಲ್ಲಾ ಜಿಲ್ಲೆಗಳಲ್ಲೂ ಹಿಮಪಾತವಾಗಿದೆ. ಹಿಮಾಚಲ ಪ್ರದೇಶದ ವಿವಿಧ ಸ್ಥಳಗಳಲ್ಲಿ ಹೆಚ್ಚಿನ ಹಿಮ ಮತ್ತು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಶಿಮ್ಲಾದ ಕಟ್ಟಡಗಳು ಮತ್ತು ಪರ್ವತಗಳ ಮೇಲೆ ಹಿಮ ಆವೃತವಾಗಿದೆ ಎಂಬ ಶೀರ್ಷಿಕೆಯೊಂದಿಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ʼಪಹರಿ ಕಲ್ಚರ್ʼ ಎಂಬ ಫೇಸ್ಬುಕ್ ಖಾತೆದಾರರು ತಮ್ಮ ಖಾತೆಯಲ್ಲಿ ʼFresh snowfall in Shimla has made the city more attractiveʼ ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿರುವುದನ್ನು ನಾವು ನೋಡಬಹುದು.
ವೈರಲ್ ಆದ ಚಿತ್ರದ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು
ʼದೇವ್ ಭೂಮಿ ಹಿಮಾಚಲ್ʼ ಎಂಬ ಫೇಸ್ಬುಕ್ ಖಾತೆದಾರರು ʼsnowfall in shimla 8 dec 2024. first snowfall of the seasonʼ ಎಂಬ ಶೀರ್ಷಿಕೆಯೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ
ಫ್ಯಾಕ್ಟ್ಚೆಕ್
ವೈರಲ್ ಆದ ಚಿತ್ರ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವಾಗಿ ಶಿಮ್ಲಾದಲ್ಲಿ ಹಿಮಪಾತದ ಚಿತ್ರಗಳನ್ನು ಎಐ ಮೂಲಕ ರಚಿಸಲಾಗಿದೆ
ನಾವು ವೈರಲ್ ಆದ ಚಿತ್ರದ ಬಗ್ಗೆ ಸತ್ಯಾಂಶವನ್ನು ತಿಳಿಯಲು ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಈ ಚಿತ್ರಕ್ಕೆ ಸಂಬಂಧಿಸಿದ ಯಾವುದೇ ಸುದ್ದಿಯೂ ಸಿಗಲಿಲ್ಲ. ನಂತರ ವೈರಲ್ ಆದ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಚಿತ್ರದಲ್ಲಿ ಕಾಣುವ ಕಟ್ಟಡಗಳ ವಿನ್ಯಾಸವನ್ನು ನೋಡಿದರೆ, ವಾಸ್ತವಾಗಿರುವ ಹಾಗೆ ಇರಲಿಲ್ಲ.
ನಾವು ಚಿತ್ರವನ್ನು ನಾವು ಚಿತ್ರವನ್ನು ಎಐ ಇಮೇಜ್ ಡಿಟೆಕ್ಷನ್ ಟೂಲ್ ʼಹೈವ್ ಮಾಡರೇಶನ್ʼ ನಲ್ಲಿ ಫೊಟೋವನ್ನು ಪರಿಶೀಲಿಸಿದೆವು. ಪರಿಶೀಲನೆಯಲ್ಲಿ ನಮಗೆ ಈ ಚಿತ್ರ 99.9 ಪ್ರತಿಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ತಿಳಿದುಬಂದಿತು.
ಚಿತ್ರ 01
ಚಿತ್ರ 02
Wasitai.com ನಲ್ಲಿ ಚಿತ್ರವನ್ನು ಪರೀಶಿಲಿಸಿದಾಗ ಅಲ್ಲಿಯೂ ಸಹ ಈ ಚಿತ್ರ ಎಐ ಬಳಸಿ ರಚಿಸಿರುವುದು ಎಂದು ಸಾಭಿತಾಯಿತು.
ಚಿತ್ರ 01
ಚಿತ್ರ 02
ಮತ್ತೋಂದು ಎಐ ಇಮೇಜ್ ಡಿಟೆಕ್ಷನ್ ಟೂಲ್ ಆದ ʼಟ್ರೂ ಮಿಡಿಯಾʼದಲ್ಲಿ ಪರಿಶೀಲಿಸಿದೆವು. ನಮಗೆ ಈ ಫೋಟೋವು 100 ಪ್ರತಿಶತ AI- ರಚಿತವಾಗಿದೆ ಎಂದು ಕಂಡುಬಂದಿದೆ ಮತ್ತು ವಿಶ್ಲೇಷಣೆಯು ಮಿಡ್ ಜರ್ನಿಯಿಂದ ಚಿತ್ರವನ್ನು ರಚಿಸಲಾಗಿದೆ ಎಂದು ತಿಳಿದುಬಂದಿದೆ.
ನಾವು ಮತ್ತಷ್ಟು ಮಾಹಿತಿಯನ್ನು ಕಲೆಹಾಕಲು ಶಿಮ್ಲಾದಲ್ಲಿ ಮೊದಲ ಹಿಮಪಾತ ಎಂಬ ಕೀವರ್ಡ್ನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಎನ್ಡಿಟಿವಿ ವೆಬ್ಸೈಟ್ನಲ್ಲಿ ʼShimla Sees Its First December Snow In 20 Years, Lowest Temperature Hits 2.5 Degrees Celsiusʼ ಎಂಬ ಹೆಡ್ಲೈನ್ನೊಂದಿಗೆ ವರದಿಯಾಗಿರುವುದನ್ನು ನೋಡಬಹುದು.
ʼದಿ ತತ್ವ ಇಂಡಿಯಾʼ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ʼShimla and its surrounding tourist destinations witnessed a rare early December snowfall on Sunday, marking the season’s first snow and breaking a decades-long trend. The snowfall has turned the hill station and nearby areas like Kufri and Narkanda into picturesque winter wonderlands, sparking excitement among locals and tourists alikeʼ ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿರುವುದನ್ನು ನಾವು ನೋಡಬಹುದು.
ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಡಿಸಂಬರ್ ಆರಂಭದಲ್ಲಿ ಭಾನುವಾರ ರಾತ್ರಿ ಮೊದಲ ಹಿಮಪಾತವಾಗಿದೆ, ಗಿರಿಧಾಮ ಮತ್ತು ಸಮೀಪದ ಪ್ರದೇಶಗಳಾದ ಕುಫ್ರಿ ಮತ್ತು ನರಕಂದ ಸ್ಥಳವು ಚಳಿಗಾಲದಲ್ಲಿ ಸುಂದರವಾದ ಅದ್ಭುತ ಸ್ಥಳವಾಗಿ ಪರಿವರ್ತನೆಯಾಗಿದೆ. ಇದರಿಂದ ಅಲ್ಲಿರುವ ಸ್ಥಳೀಯರು ಮತ್ತು ಪ್ರವಾಸಿಗರಲ್ಲಿ ಉತ್ಸಾಹವನ್ನು ಹುಟ್ಟುಹಾಕಿದೆʼ ಎಂದು ಬರೆದು ಪೊಸ್ಟ್ ಮಾಡಿದ್ದಾರೆ.
ನ್ಯೂಸ್18 ಕನ್ನಡ ವೆಬ್ಸೈಟ್ನಲ್ಲಿʼ ಡಿಸೆಂಬರ್ ಮೊದಲ ವಾರದಲ್ಲೇ ಶಿಮ್ಲಾದಲ್ಲಿ ಹಿಮಪಾತ; ಪ್ರವಾಸಿಗರ ಸ್ವರ್ಗ ಈಗ ಹೇಗೆ ಕಾಣ್ತಿದೆ ಗೊತ್ತಾ?ʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಲಾಗಿದೆ. ವರದಿಯಲ್ಲಿ ʼಭಾರತದ ಹಿಮಾಚಲ ರಾಜ್ಯದ ರಾಜಧಾನಿ ಮತ್ತು ಸುತ್ತಮುತ್ತಲಿನ ಪ್ರವಾಸಿ ರೆಸಾರ್ಟ್ಗಳು ಡಿಸೆಂಬರ್ ಆರಂಭದಲ್ಲಿ ಭಾನುವಾರ ರಾತ್ರಿ ಮೊದಲ ಹಿಮಪಾತವಾಗಿದೆ, ಇದರಿಂದಾಗಿ ಹೋಟೆಲ್ ಉದ್ಯಮವು ದಶಕಗಳಲ್ಲಿ ಮೊದಲ ಬಾರಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಸ್ವಾಗತಿಸಿದೆ. “ಶಿಮ್ಲಾ ಮತ್ತು ಅದರ ಹತ್ತಿರದ ಪ್ರದೇಶಗಳು ಲಘು ಹಿಮಪಾತವನ್ನು ಅನುಭವಿಸಿವೆ ಮತ್ತು ಇದು ಶಿಮ್ಲಾ ಪಟ್ಟಣದಲ್ಲಿ ಋತುವಿನ ಮೊದಲ ಹಿಮಪಾತವಾಗಿದೆ” ಎಂದು ಇಲ್ಲಿನ ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು IANS ಗೆ ತಿಳಿಸಿದ್ದಾರೆʼ ಎಂದು ವರದಿಯಾಗಿರುವುದನ್ನು ನೋಡಬಹುದು.
ಸಾಮಾಜಿಕ ಜಾಲತಾಣದಲ್ಲಿ ಕೆಲವರು ತಮ್ಮ ಖಾತೆಗಳಲ್ಲಿ ಶಿಮ್ಲಾದ ಹಿಮಪಾತವನ್ನು ಚಿತ್ರಿಸಿರುವ ಫೋಟೋಗಳನ್ನು ಮತ್ತು ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು.
ʼಸದ್ವಿ ಅಮ್ರಿತಾʼ ಎಂಬ ಎಕ್ಸ್ ಖಾತೆಯಲ್ಲಿ ʼSnowflakes falling, creating magic in the air. First Snowfall in #Shimla. 8 Dec, 2024" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
ಡಿಸಂಬರ್ 09, 2024ರಂದು ʼಸ್ಟೋರಿʼ ಎಂಬ ಎಕ್ಸ್ ಖಾತೆದಾರರು ತಮ್ಮ ಖಾತೆಯಲ್ಲಿ ʼHimachal Pradesh Sets In White Sheet of Snow. Mountains Blossomʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ನೋಡಬಹುದು
ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಈ ಡಿಸೆಂಬರ್ನಲ್ಲಿ ಶಿಮ್ಲಾ ಹಿಮಪಾತಕ್ಕೆ ಸಾಕ್ಷಿಯಾಗಿರುವುದು ನಿಜವಾಗಿದ್ದರೂ, ವೈರಲ್ ಚಿತ್ರವು ನಿಜವಲ್ಲ. ವೈರಲ್ ಆದ ಚಿತ್ರಗಳನ್ನು ಎಐ ಟೂಲ್ನ ಮೂಲಕ ರಚಿಸಲಾಗಿದೆ.