ಫ್ಯಾಕ್ಟ್ಚೆಕ್: ಲಾಸ್ ಏಂಜಲೀಸ್ ಬೆಂಕಿಗೆ ಆಹುತಿಯಾಗುತ್ತಿದೆ ಎಂದು ಎಐ ರಚಿತ ವಿಡಿಯೋ ಹಂಚಿಕೆ
ಲಾಸ್ ಏಂಜಲೀಸ್ ಬೆಂಕಿಗೆ ಆಹುತಿಯಾಗುತ್ತಿದೆ ಎಂದು ಎಐ ರಚಿತ ವಿಡಿಯೋ ಹಂಚಿಕೆ
Claim :
ಇದು ಹಾಲಿವುಡ್ ಗ್ರಾಫಿಕ್ಸ್ ಅಲ್ಲ. ಬೆಂಕಿಗೆ ಆಹುತಿಯಾಗುತ್ತಿರುವ ಲಾಸ್ ಏಂಜಲೀಸ್Fact :
ವೈರಲ್ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ
ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ನಲ್ಲಿ ಕಾಡ್ಗಿಚ್ಚು ಸರ್ವಸ್ವವನ್ನೂ ನಾಶಪಡಿಸಿದೆ. ಕೋಟ್ಯಂತರ ಮೌಲ್ಯದ ಆಸ್ತಿ ಸುಟ್ಟು ಬೂದಿಯಾಯಿತು. ಮನೆಗಳು, ವ್ಯಾಪಾರ ಮಳಿಗೆಗಳು ಎಲ್ಲವೂ ಸುಟ್ಟು ಕರಕಲಾಗಿವೆ. ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ಹೊತ್ತಿಕೊಂಡಿರುವ ಭೀಕರ ಕಾಡ್ಗಿಚ್ಚು ಅಪಾರ ಹಾನಿಯುಂಟುಮಾಡಿದೆ. ಮುಗಿಲೆತ್ತರಕ್ಕೆ ಚಿಮ್ಮುತ್ತಿರುವ ಜ್ವಾಲೆ ನೆರೆಯ ಪ್ರದೇಶಗಳಿಗೂ ವ್ಯಾಪಿಸುತ್ತಿದೆ. ಸುತ್ತಲಿನ ಹಾಲಿವುಡ್ ಪ್ರದೇಶದಿಂದ ಜನರನ್ನು ಸ್ಥಳಾಂತರಿಸುವ ಕಾರ್ಯಕ್ಕೆ ರಕ್ಷಣಾ ಸಿಬ್ಬಂದಿ ಚಾಲನೆ ನೀಡಿದ್ದಾರೆ. ಈವರೆಗೆ 12,300 ಮನೆಗಳು ಉರಿದುಹೋಗಿದ್ದು, 2 ಲಕ್ಷ ಜನ ಸ್ಥಳಾಂತರ ಭೀತಿ ಎದುರಿಸುತ್ತಿದ್ದಾರೆ. ಈ ನಡುವೆ ಎರಡು ಲಕ್ಷ ಜನರನ್ನು ಸ್ಥಳಾಂತರಕ್ಕೆ ಆದೇಶಿಸಲಾಗಿದೆ. 1,80,000 ಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಪ್ರದೇಶಗಳಿಗೆ ತೆರಳಿದ್ದಾರೆ.
ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಲಾಸ್ ಏಂಜಲೀಸ್ಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿದೆ. ಈ 31 ಸೆಕೆಂಡ್ಗಳ ವೀಡಿಯೊವಿನಲ್ಲಿ 6 ವಿಭಿನ್ನ ದೃಶ್ಯಗಳಿರುವುದನ್ನು ನಾವು ಗಮನಿಸಬಹುದು ಹೊಂದಿದೆ. ಉರಿಯುತ್ತಿರುವ ಜ್ವಾಲೆಗಳು ವೀಡಿಯೊದಾದ್ಯಂತ ಕಂಡುಬರುತ್ತವೆ. ವೈರಲ್ ಆದ ದೃಶ್ಯಗಳು ಲಾಸ್ ಏಂಜಲೀಸ್ಗೆ ಸಂಬಂಧಿಸಿದ್ದು ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರು ತಮ್ಮ ಖಾತೆಗಳಲ್ಲಿ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಾರೆ.
ʼಕುಮಾರ್ ಪಾವಡಾ ಶೆಟ್ಟಿʼ ಎಂಬ ಇನ್ಸ್ಟಾಗ್ರಾಮ್ ಖಾತೆದಾರ ತನ್ನ ಖಾತೆಯಲ್ಲಿ ವೈರಲ್ ಆದ ವಿಡಿಯೋವನ್ನು ಹಂಚಿಕೊಂಡು ʼಲಾಸ್ ಏಂಜಲೀಸ್ನಲ್ಲಿ ಕಾಡ್ಗಿಚ್ಚು, ಹಾಲಿವುಡ್ ಸೇರಿದಂತೆ ಸಾವಿರಾರು ಮನೆಮಠಗಳು ಬೆಂಕಿಗಾಹುತಿ,12 ಲಕ್ಷ ಕೋಟಿ ರೂ,ಗಳ ನಷ್ಟʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು.
ನಾಗರಾಜ್ ಪಿ ಎಸ್ ಎಂಬ ಫೇಸ್ಬುಕ್ ಖಾತೆದಾರ ತನ್ನ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡು ʼಇದು ಹಾಲಿವುಡ್ ಗ್ರಾಫಿಕ್ಸ್ ಅಲ್ಲ. ಬೆಂಕಿಗೆ ಆಹುತಿಯಾಗುತ್ತಿರುವ ಲಾಸ್ ಏಂಜಲೀಸ್ʼ ಎಂಬ ಶೀರ್ಷಿಕೆಯನ್ನು ನೀಡಿ ಹಂಚಿಕೊಂಡಿದ್ದಾರೆ
ಮತ್ತಷ್ಟು ವಿಡಿಯೋಗಳನ್ನು ನೀವಿಲ್ಲಿ, ಇಲ್ಲಿ ನೋಡಬಹುದು.
ಫ್ಯಾಕ್ಟ್ಚೆಕ್
ವೈರಲ್ ಆದ ವಿಡಿಯೋ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವಾಗಿ ವೈರಲ್ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ.
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ವೈರಲ್ ಆದ ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಉಪಯೋಗಿಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಜಿಯೋಲಜಿ ಸೈನ್ಸ್ ಎಂಬ ಎಕ್ಸ್ ಖಾತೆರಾರರೊಬ್ಬರು ತಮ್ಮ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡು ʼThe fires in Los Angeles continue @ai_creatiionsʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು
ಇದೇ ವಿಡಿಯೋವನ್ನು ಎನ್ಡಿಟಿವಿಯ ಹಿರಿಯ ಪತ್ರಕರ್ತ ʼಉಮರ್ ಶಂಕರ್ ಸಿಂಗ್ʼ ತನ್ನ ಎಕ್ಸ್ ಖಾತೆದಾರರ ತನ್ನ ಖಾತೆಯಲ್ಲಿ ʼThis video was created with AI, as evident in the details shown throughout. Please do not spread misinformation during this difficult time for Californiaʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದರು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಈ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ. ಕ್ಯಾಲಿಫೋರ್ನಿಯಾ ಈಗ ಅತಿದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿರುವ ಈ ಸಮಯದಲ್ಲಿ ಇಂತಹ ವದಂತಿಗಳನ್ನು ಹರಡಬೇಡಿʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
ಇದನ್ನೇ ನಾವು ಸುಳಿವಾಗಿ ಬಳಸಿಕೊಂಡು ವೈರಲ್ ಆದ ವಿಡಿಯೋವಿನ ವಿವಿಧ ಫ್ರೇಮ್ಗಳನ್ನು ಉಪಯೋಗಿಸಿ ಎಐ ಡಿಟೆಕ್ಟರ್ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ನಾವು ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದರಲ್ಲಿ ಆರು ಫ್ರೇಮ್ಗಳಿದೆ. ಮೊದಲನೇ ಫ್ರೇಮ್ನಲ್ಲಿ ಮರಗಳಿಂದ ಕೂಡಿದ ರಸ್ತೆಯನ್ನು ನೋಡಬಹುದು. ಎರಡನೇ ಫ್ರೇಮ್ನಲ್ಲಿ ಬೆಂಕಿಯ ಮದ್ಯೆ ಕಾರುಗಳ ಲೈಟನ್ನು ನೋಡಬಹುದು. ಮೂರನೇ ಫ್ರೇಮ್ನಲ್ಲಿ ಹೊಗಯನ್ನೊಳಗೊಂಡ ಬೆಂಕಿ ಆವರಿಸಿರುವುದನ್ನು ನೋಡಬಹುದು. ನಾಲ್ಕನೇ ಫ್ರೇಮ್ನಲ್ಲಿ ಬೆಂಕಿಯ ಜ್ವಾಲೆ ಬೆಟ್ಟದ ತುದಿಯನ್ನು ಆವರಿಸಿರುವುದನ್ನು ಕಾಣಬಹುದು. ಐದನೇ ಫ್ರೇಮ್ನಲ್ಲಿ ಬೆಟ್ಟದ ತುದಿಯನ್ನು ಬೆಂಕಿ ಆವರಿಸಿರುವುದನ್ನು ನಗರ ಬೆಂಕಿಯಿಂದ ಹೊತ್ತಿ ಉರಿಯುತ್ತಿರುವುದನ್ನು ನೋಡಬಹುದು. ಇನ್ನು ಆರನೇ ಫ್ರೇಮ್ನಲ್ಲಿ ಆರೆಂಜ್ ಬಣ್ಣದಲ್ಲಿರುವ ಬೆಂಕಿಯೊಂದಿಗೆ ಮುಳಿಗಿರುವ ನಗರವನ್ನು ನೋಡಬಹುದು. ಈ ಆರು ಫ್ರೇಮ್ಗಳಲ್ಲಿ ಆರನೇ ಫ್ರೇಮ್ನ್ನು ಬಿಟ್ಟು , ಮೊದಲ ಐದು ಫ್ರೇಮ್ಗಳನ್ನು ಎಐ ಮೂಲಕ ರಚಿಸಲಾಗಿದೆ ಎಂದು ಸಾಭಿತಾಗಿದೆ.
ಈ ಮಾಹಿತಿಯನ್ನು ಮತ್ತಷ್ಟು ಖಚಿತ ಪಡಿಸಿಕೊಳ್ಳಲು ನಾವು ಎಐ ಇಮೇಜ್ ಡಿಟೆಕ್ಷನ್ ಟೂಲ್ ʼಹೈವ್ ಮಾಡರೇಶನ್ʼ ನಲ್ಲಿ ಫೊಟೋವನ್ನು ಪರಿಶೀಲಿಸಿದೆವು. ಪರಿಶೀಲನೆಯಲ್ಲಿ ನಮಗೆ ಈ ಚಿತ್ರ 99.3 ಪ್ರತಿಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ತಿಳಿದುಬಂದಿತು.
ಹೀಗಾಗಿ ವೈರಲ್ ಆದ ವಿಡಿಯೋ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವಾಗಿ ವೈರಲ್ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ.