ಫ್ಯಾಕ್ಟ್ಚೆಕ್: ರೋಲ್ಸ್ ರಾಯ್ಸ್ ಕಾರಿನ ಮೇಲೆ ಬಂಡೆಕಲ್ಲು ಹಾಕಿದರೂ ಏನೋ ಆಗೋದಿಲ್ಲ ಎಂದು ಎಐ ವಿಡಿಯೋ ಹಂಚಿಕೆ
ರೋಲ್ಸ್ ರಾಯ್ಸ್ ಕಾರಿನ ಮೇಲೆ ಬಂಡೆಕಲ್ಲು ಹಾಕಿದರೂ ಏನೋ ಆಗೋದಿಲ್ಲ ಎಂದು ಎಐ ವಿಡಿಯೋ ಹಂಚಿಕೆ

Claim :
ರೋಲ್ಸ್ ರಾಯ್ಸ್ ಕಾರಿನ ಮೇಲೆ ಬಂಡೆಕಲ್ಲು ಹಾಕಿದರೂ ಕಾರಿಗೆ ಯಾವುದೇ ರೀತಿಯಾದ ಹಾನಿಯಾಗುವುದಿಲ್ಲFact :
ವೈರಲ್ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ರೋಲ್ಸ್ ರಾಯ್ಸ್ಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ರೋಲ್ಸ್ ರಾಯ್ಸ್ ಕಾರಿನ ಮೇಲೆ ಬಂಡೆ ಅಗೆಯುವ ಯಂತ್ರವೊಂದು ಬೃಹತ್ ಬಂಡೆಯನ್ನು ಬೀಳಿಸುತ್ತಿರುವುದನ್ನು ದೃಶ್ಯವನ್ನು ನಾವೀ ವಿಡಿಯೋವಿನಲ್ಲಿ ನೋಡಬಹುದು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ಬಂಡೆಯು ವಾಹನಕ್ಕೆ ಹಾನಿಯಾಗದಂತೆ ಸಣ್ಣ ತುಂಡುಗಳಾಗಿ ಚೂರುಚೂರಾಗುವುದನ್ನು ನೋಡಬಹುದು, ಇದು ರೋಲ್ಸ್ ರಾಯ್ಸ್ ಕಾರಿನ ಶಕ್ತಿ ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣದ ಬಳಕೆದಾರು ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ರೋಲ್ಸ್ ರಾಯ್ಸ್ ಕಾರು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ ಎಂದು ಕೂಡ ಶೇರ್ ಮಾಡುತ್ತಿದ್ದಾರೆ.
ಮಾರ್ಚ್ 22, 2025ರಂದು ಯೂಟ್ಯೂಬ್ ಖಾತೆದಾರರೊಬ್ಬರು ರೋಲ್ಸ್ ರಾಯ್ಸ್ ಕಾರ್ನ ಮೇಲೆ ಬಂಡೆ ಕಲ್ಲು ಬೀಳುವ ವಿಡಿಯೋವನ್ನು ಹಂಚಿಕೊಂಡು ʼWill this Rolls-Royce survive the impact?ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು
ಮಾರ್ಚ್ 05, 2025ರಂದು ಯೂಟ್ಯೂಬ್ ಖಾತೆದಾರರೊಬ್ಬರು ʼRolls Royce Intact Under Excavator's Rock #excavator #rollsroyce #carʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
ಈ ವಿಡಿಯೋ ನೋಡಿದ ಹಲವು ಮಂದಿ ಇದು ನಿಜವಾದ ವಿಡಿಯೋ ಎಂದು ಭಾವಿಸಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ಹಲವರು ರೋಲ್ಸ್ ರಾಯ್ಸ್ ಕಾರು ಕೇವಲ ಶ್ರೀಮಂತರಿಂದ ಮಾತ್ರ ಕೊಂಡುಕೊಳ್ಳಲು ಸಾಧ್ಯ, ಮಧ್ಯಮ ವರ್ಗದವರು ಕೊಂಡುಕೊಳ್ಳುವ ಕಾರುಗಳಿಗೆ ಈ ಸೌಲಭ್ಯ ಸಿಗುವುದೇ ಇಲ್ಲ ಎಂದು ಬೇಸರದಿಂದ ಕಮೆಂಟ್ಗಳನ್ನು ಮಾಡುತ್ತಿದ್ದಾರೆ. ವೈರಲ್ ಆದ ವಿಡಿಯೋಗಳನ್ನು ನೀವಿಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಫ್ಯಾಕ್ಟ್ಚೆಕ್
ವೈರಲ್ ಆದ ವಿಡಿಯೋ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ವೈರಲ್ ಆದ ವಿಡಿಯೋವನ್ನು ಕೃತಕ ಬುದ್ದಿಮತ್ತೆಯಿಂದ (ಎಐ) ರಚಿಸಲಾಗಿದೆ.
ನಾವು ವೈರಲ್ ಆದ ವಿಡಿಯೋವಿನ ಬಗ್ಗೆ ಸತ್ಯಾಂಶವನ್ನು ತಿಳಿಯಲು ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಇದೇ ವಿಡಿಯೋವನ್ನು ಸಾಕಷ್ಟು ಸಾಮಾಜಿಕ ಜಾಲತಾಣದ ಬಳಕೆದಾರರು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು. ಫೆಬ್ರವರಿ 28, 2025ರಂದು, ʼರಿಯಲಿಸ್ಟಿಕ್ ಎಐ ವಿಡ್ʼ ಎಂಬ ಯೂಟ್ಯೂಬ್ ಖಾತೆಯಲ್ಲಿ ವೈರಲ್ ಆದ ಮೂಲ ವಿಡಿಯೋವಿರುವುದನ್ನು ನಾವು ಕಂಡುಕೊಂಡೆವು. ಈ ಚಾನೆಲ್ನ ಅಬೋಟ್ನಲ್ಲಿ ʼTaking AI to the next level of realismʼ ಎಂದು ಬರೆದಿರುವುದನ್ನು ನೋಡಬಹುದು.
ಹಾಗೆ ʼಅಯೋಬ್ ಎನ್ನಚಾಟ್ʼ ಎಂಬ ಹೆಸರಿರುವುದನ್ನು ನಾವಿಲ್ಲಿ ನೋಡಿದೆವು. ಗೂಗಲ್ನಲ್ಲಿ ಈ ಹೆಸರಿನ ಮುಖಾಂತರ ನಾವು ಹುಡಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ʼಉಡೈಮೀʼ ಎಂಬ ವೆಬ್ಸೈಟ್ನಲ್ಲಿ ʼಎನ್ನಚಾಟ್ ಅಯೋಬ್ʼ ಒಬ್ಬರು ಪ್ರೋಫೇಷಿನಲ್ ಗ್ರಾಫಿಕ್ ಡಿಸೈನರ್ ಎಂದು ಬರೆದಿರುವುದನ್ನು ನೋಡಬಹುದು. ಅಬೋಟ್ ಮೀ ಅಲ್ಲಿ ʼನಾನು ವೃತ್ತಿಪರ ಗ್ರಾಫಿಕ್ ಡಿಸೈನರ್ ಮತ್ತು ಸೃಜನಶೀಲ ನಿರ್ದೇಶಕ. 8 ವರ್ಷಗಳಿಗೂ ಹೆಚ್ಚಿನ ಅನುಭವ ಹೊಂದಿರುವ ಪ್ರಿಂಟ್ ಆನ್ ಡಿಮ್ಯಾಂಡ್ ಮಾರಾಟಗಾರʼ ಎಂದು ಬರೆದಿರುವುದನ್ನು ನೋಡಬಹುದು.
ಇದನ್ನೇ ನಾವು ಸುಳಿವಾಗಿ ಬಳಸಿಕೊಂಡು ವೈರಲ್ ಆದ ವಿಡಿಯೋವಿನ ವಿವಿಧ ಫ್ರೇಮ್ಗಳನ್ನು ಉಪಯೋಗಿಸಿ ಎಐ ಡಿಟೆಕ್ಟರ್ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್ ಟೂಲ್ ʼಸೈಟ್ ಇಂಜಿನ್ʼ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್ ಆದ ವಿಡಿಯೋ 97% ಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.
ಈ ಮಾಹಿತಿಯನ್ನು ಮತ್ತಷ್ಟು ಖಚಿತ ಪಡಿಸಿಕೊಳ್ಳಲು ನಾವು ಎಐ ಇಮೇಜ್ ಡಿಟೆಕ್ಷನ್ ಟೂಲ್ ʼಹೈವ್ ಮಾಡರೇಶನ್ʼ ನಲ್ಲಿ ಫೊಟೋವನ್ನು ಪರಿಶೀಲಿಸಿದೆವು. ಪರಿಶೀಲನೆಯಲ್ಲಿ ನಮಗೆ ಈ ಚಿತ್ರ 99% ಪ್ರತಿಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ತಿಳಿದುಬಂದಿತು.
ಮತ್ತೋಂದು ಎಐ ಡಿಟೆಕ್ಟರ್ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್ ಟೂಲ್ ʼವಾಸ್ ಇಟ್ ಎಐʼ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ವಿಡಿಯೋ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವಾಗಿ ವೈರಲ್ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ.