ಫ್ಯಾಕ್ಟ್ಚೆಕ್: ಚಿರಂಜೀವಿ ಮತದಾನ ಮಾಡಲು ಮತದಾರರು ಬರುವ ಸಾಲಿನಲ್ಲಿ ಬರದೆ ವಿಶೇಷವಾಗಿ ಬೇರೆ ಸಾಲಿನಲ್ಲಿ ಬಂದಂತಹ ವಿಡಿಯೋ ವೈರಲ್
ಚಿರಂಜೀವಿ ಮತದಾನ ಮಾಡಲು ಮತದಾರರು ಬರುವ ಸಾಲಿನಲ್ಲಿ ಬರದೆ ವಿಶೇಷವಾಗಿ ಬೇರೆ ಸಾಲಿನಲ್ಲಿ ಬಂದಂತಹ ವಿಡಿಯೋ ವೈರಲ್
Claim :
ತೆಲಂಗಾಣದಲ್ಲಿ ನಡೆದ 2024ರ ಲೋಕಸಭಾ ಚುನಾವಣೆಯ ಸಮಯದಲ್ಲಿ ನಟ ಚಿರಂಜೀವಿ ಮತದಾನ ಮಾಡಲು ಬಂದಾಗ ವಿಶೇಷ ಸಾಲಿನಲ್ಲಿ ಬಂದು ಮತದಾನ ಮಾಡಿದ್ದರುFact :
ವೈರಲ್ ಆಗಿರುವ ವಿಡಿಯೋ ಹಳೆಯದು, ಇದನ್ನು 2014 ರ ಚುನಾವಣೆಯ ಸಮಯದಲ್ಲಿ ಚಿತ್ರೀಕರಿಸಲಾಗಿದೆ. 2024 ರ ಚುನಾವಣೆಯ ಸಮಯದಲ್ಲಿ, ಚಿರಂಜೀವಿ ಯಾವುದೇ ಸಮಸ್ಯೆಗಳಿಲ್ಲದೆ ಮತದಾನ ಮಾಡಿದರು.
ಮೇ 13, 2024ರಂದು ತೆಲಂಗಾಣದಲ್ಲಿ 2024 ರ ಲೋಕಸಭಾ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ 66ರಷ್ಟು ಮತದಾನವಾಗಿತ್ತು. ಗ್ರೇಟರ್ ಹೈದರಾಬಾದ್ ತನ್ನ ನಾಲ್ಕು ಕ್ಷೇತ್ರಗಳಾದ ಹೈದರಾಬಾದ್, ಸಿಕಿಂದ್ರಾಬಾದ್, ಮಲ್ಕಾಜ್ಗಿರಿ ಮತ್ತು ಚೆವೆಲ್ಲಾಗಳಲ್ಲಿ ಅತಿ ಕಡಿಮೆ ಮತದಾನವಾಗಿದೆ. ಮತದಾನ ಮಾಡಲು ಟಾಲಿವುಡ್ ಸೆಲೆಬ್ರೆಟಿಗಳು, ಗಣ್ಯರು ಬೆಳಂಬೆಳ್ಳಿಗೆ ಬಂದು ಮತ ಚಲಾಯಿಸಿದರು . ಚಿರಂಜೀವಿ, ಅಲ್ಲು ಅರ್ಜುನ್, ಜೂನಿಯರ್ ಎನ್ಟಿಆರ್ ಮೊದಲಾದ ಗಣ್ಯರು ಮತದಾನ ಮಾಡಿದ್ದರು.
2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹೈದರಾಬಾದ್ನಲ್ಲಿ ಮತದಾನ ಮಾಡಲು ಬಂದ ನಟ ಚಿರಂಜೀವಿ ಸರತಿ ಸಾಲಿನಲ್ಲಿ ಬರದೇ ವಿಶೇಷ ಸಾಲಿನಲ್ಲಿ ಬರಲು ಯತ್ನಿಸಿದಾಗ ಅಲ್ಲಿರುವ ವ್ಯಕ್ತಿಯೊಬ್ಬರು ಸರತಿ ಸಾಲಿನಲ್ಲಿ ಬಂದು ಮತಚಲಾಯಿಸಿ ನಿಮಗೆ ವಿಶೇಷ ಸ್ಥಾನ ಮಾನ ಏಕೆ ಎಂದು ಹೇಳುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಟ ಚಿರಂಜೀವಿಯನ್ನು ಪ್ರಶ್ನಿಸಿದ ವ್ಯಕ್ತಿಯನ್ನು ಎಎನ್ಐ ಸಂದರ್ಶನ ಮಾಡಿತ್ತು.
ವೈರಲ್ ವಿಡಿಯೋವನ್ನು ಕೆಲವು ಸಾಮಾಜಿಕ ಮಾಧ್ಯಮದ ಖಾತೆದಾರರು,"@KChiruTweets ಮತ್ತು ಅವರ ಮಗ RRR ನಟ @AlwaysRamCharan ರನ್ನು ಸಾಮಾನ್ಯ ಪ್ರಜೆಗಳು ಅವರಿಗೆ ದೊರೆಯುತ್ತಿರುವ ವಿಶೇಷ ಸ್ಥಾನಮಾನದ ಬಗ್ಗೆ ಪ್ರಶ್ನಿಸುತ್ತಿದ್ದಾರೆ" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನನ್ನು ಹಂಚಿಕೊಂಡಿದ್ದಾರೆ.
.@KChiruTweets and his son RRR actor @AlwaysRamCharan questioned by common man in polling booth for breaking line
— . (@alanatiallari_) May 13, 2024
good to see common man standing up and voice out these privileged. pic.twitter.com/ZkBAGYLWMR
ಕೆಲವು ಬಳಕೆದಾರರು ಅದೇ ವೀಡಿಯೊವನ್ನು “Chiranjeevi jumped queue at a polling booth Jubilee Hills and were taken aback #APElections2024 #VoteForGlass” ತೆಲುಗು ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ
Chiranjeevi Jumped Queue at a Polling booth Jubilee Hills and was taken Aback 🤭🤭 #APElections2024 #VoteForGlass pic.twitter.com/UxXpCY3oGh
— . (@_TarakTweets) May 13, 2024
ಫ್ಯಾಕ್ಟ್ಚೆಕ್:
ವೈರಲ್ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆಗಿರುವ ವಿಡಿಯೋ ಹಳೆಯದು, ಇದನ್ನು 2014 ರ ಚುನಾವಣೆಯ ಸಮಯದಲ್ಲಿ ಚಿತ್ರೀಕರಿಸಲಾಗಿದೆ. 2024 ರ ಚುನಾವಣೆಯ ಸಮಯದಲ್ಲಿ, ಚಿರಂಜೀವಿ ಯಾವುದೇ ಸಮಸ್ಯೆಗಳಿಲ್ಲದೆ ಮತದಾನ ಮಾಡಿದರು.
ನಾವು ವಿಡಿಯೋವಿನಲ್ಲಿರುವ ಸತ್ಯಾಂಶವನ್ನು ತಿಳಿಯಲು 2024ರ ಚುನಾವಣೆಯಲ್ಲಿ ಚಿರಂಜೀವಿ ಮತದಾನ ಮಾಡಿದ ಸುದ್ದಿ ವರದಿಗಳಿಗಾಗಿ ನಾವು ಹುಡುಕಿದಾಗ, ಚಿರಂಜೀವಿ ಅವರು ಮತ ಚಲಾಯಿಸಿದ ಕೆಲವು ವೀಡಿಯೊಗಳು ನಮಗೆ ಕಾಣಿಸಿತು. ವೈರಲ್ ಆದ ವೀಡಿಯೋದಲ್ಲಿ ಚಿರಂಜೀವಿ ತೊಟ್ಟಂತಹ ಬಟ್ಟೆ ವಿಭಿನ್ನವಾಗಿರುವುದನ್ನು ನಾವು ಕಂಡುಕೊಂಡೆವು.
ಮೇ 13, 2024 ರಂದು CNBC-TV18 ಪ್ರಕಟಿಸಿದ ವೀಡಿಯೊದಲ್ಲಿ, ಚಿರಂಜೀವಿ ತಮ್ಮ ಕುಟುಂಬದೊಂದಿಗೆ ಬಂದಂತಹ ನಟ ಮತ ಚಲಾಯಿಸುವ ಸರತಿ ಸಾಲಿನಲ್ಲಿ ನಿಂತಿರುವುದನ್ನು ನಾವು ನೋಡಬಹುದು.
ಹೆಚ್ಚಿನ ಮಾಹಿತಿಯನ್ನು ಕಲೆಹಾಕಲು ನಾವು ಗೂಗಲ್ ರಿವರ್ಸ್ ಇಮೇಜ್ ಸರ್ಚ್ನ ಮೂಲಕ ವೈರಲ್ ವೀಡಿಯೊದಿಂದ ಹೊರತೆಗೆಯಲಾದ ಕೆಲವು ಕೀಫ್ರೇಮ್ಗಳೊಂದಿಗೆ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ 2014ರಲ್ಲಿ ನಡೆದಂತಹ ಘಟನೆಯ ವಿಡಿಯೋ ನಮಗೆ ಕಾಣಿಸಿತು. ಈ ವಿಡಿಯೋವಿನಲ್ಲಿ ನಟ ಚಿರಂಜೀವಿ ಸರತಿ ಸಾಲಿನಲ್ಲಿ ಬರದೇ ವಿಶೇಷ ಸಾಲಿನಲ್ಲಿ ಬರುವುದನ್ನು ನಾವು ಕಾಣಬಹುದು.
ಮೇ 1, 2014 ರಂದು ಎನ್ಡಿಟಿವಿಯ ಯೂಟ್ಯೂಬ್ ಚಾನೆಲ್ನಲ್ಲಿ ವೈರಲ್ ವಿಡಿಯೋವನ್ನು ನೋಡಬಹುದು. ವೈರಲ್ ವಿಡಿಯೋಗೆ "Applause as NRI stops Chiranjeevi from jumping voters' queue" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ನೋಡಬಹುದು
ಇದೇ ವಿಡಿಯೋವನ್ನು ಕೆಲವು ತೆಲುಗು ಯೂಟ್ಯೂಬ್ ಚಾನೆಲ್ಗಳೂ ಹಂಚಿಕೊಂಡಿರುವುದನ್ನು ಕಾಣಬಹುದು. ಹೈದರಾಬಾದ್ನ ಜುಬಿಲಿ ಹಿಲ್ಸ್ನ ಮತಗಟ್ಟೆಯೊಂದರಲ್ಲಿ ಚಿರಂಜೀವಿ ಸರತಿ ಸಾಲಿನಲ್ಲಿ ಬರದೇ ವಿಶೇಷ ಸಾಲಿನಲ್ಲಿ ಬರುವಾಗ ಅಲ್ಲಿಗೆ ಬಂದಂತಹ ಮತದಾರರು ನಿಮಗೆ ಮಾತ್ರ ವಿಶೇಷ ಸ್ಥಾನಮಾನ ಬೇಕಾ ಎಂದು ಪ್ರಶ್ನೆ ಮಾಡುತ್ತಿರುವ ವಿಡಿಯೋವನ್ನು ವಿ6 ನ್ಯೂಸ್ ತನ್ನ ಯ್ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡಿದೆ.
ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸಾಭೀತಾಗಿದೆ. ವೈರಲ್ ಆಗಿರುವ ವಿಡಿಯೋ ಇತ್ತೀಚಿನದಲ್ಲ, ಹಳೆಯದ್ದು, ಇದನ್ನು 2014 ರ ಚುನಾವಣೆಯ ಸಮಯದಲ್ಲಿ ಚಿತ್ರೀಕರಿಸಲಾಗಿದೆ. 2024ರ ಚುನಾವಣೆಯ ಸಮಯದಲ್ಲಿ, ಚಿರಂಜೀವಿ ಯಾವುದೇ ಸಮಸ್ಯೆಗಳಿಲ್ಲದೆ ಮತದಾನ ಮಾಡಿದರು.