ಫ್ಯಾಕ್ಟ್ಚೆಕ್: ಕಂಗನಾ ರಣಾವತ್ಗೆ ಕಪಾಳಮೋಕ್ಷ ಮಾಡಿದ ಸಿಐಎಸ್ಎಫ್ ಕಾನ್ಸ್ಟೆಬಲ್ ಕುಲ್ವಿಂದರ್ ಕೌರ್ ಇನ್ನೂ ಅಮಾನತಿನಲ್ಲಿದ್ದಾರಾ?
ಕಂಗನಾ ರಣಾವತ್ಗೆ ಕಪಾಳಮೋಕ್ಷ ಮಾಡಿದ ಸಿಐಎಸ್ಎಫ್ ಕಾನ್ಸ್ಟೆಬಲ್ ಕುಲ್ವಿಂದರ್ ಕೌರ್ ಇನ್ನೂ ಅಮಾನತಿನಲ್ಲಿದ್ದಾರಾ?
Claim :
ಕಂಗನಾ ರಣಾವತ್ಗೆ ಕಪಾಳಕ್ಕೆ ಹೊಡೆದ ಕಾನ್ಸ್ಟೆಬಲ್ ಕುಲ್ವಿಂದರ್ ಕೌರ್ ಮತ್ತೆ ತಮ್ಮ ಕೆಲಸಕ್ಕೆ ಸೇರ್ಪಡೆಯಾಗಿದ್ದಾರೆ.Fact :
ಕುಲ್ವಿಂದರ್ ಕೌರ್ ಅವರನ್ನು ವಿಧಿ ನಿರ್ವಹಣೆಗೆ ಇನ್ನು ಸಿಐಎಸ್ಎಫ್ಗೆ ಸೇರಿಸಲಾಗಿಲ್ಲ. ಆಕೆಯನ್ನು ಇನ್ನು ತನಿಖೆ ಮಾಡಲಾಗುತ್ತಿದೆ.
ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಕಾನ್ಸ್ಟೆಬಲ್ ಕುಲ್ವಿಂದರ್ ಕೌರ್, ಜೂನ್ 2024 ರಂದು ಚಂಡೀಗಢ ವಿಮಾನ ನಿಲ್ದಾಣದಲ್ಲಿ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರನೌತ್ಗೆ ಕಪಾಳಕ್ಕೆ ಹೊಡೆದಿದ್ದರು. ಏರ್ಪೋರ್ಟ್ನ ಸೆಕ್ಯೂರಿಟಿ ಹೋಲ್ಡ್ ಏರಿಯಾದಲ್ಲಿ ಕಂಗನಾ ಕಪಾಳ ಮೋಕ್ಷ ಮಾಡಿದ್ದ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಸಹ ವೈರಲ್ ಆಗಿತ್ತು.
ಕೃಷಿ ಕಾನೂನುಗಳ ವಿರುದ್ಧ ಕಂಗನಾ ರಣಾವತ್ ನಕಾರಾತ್ಮಕವಾಗಿ ಹೇಳಿಕೆಯನ್ನು ನೀಡಿದ್ದ ಕಾರಣ ಕಾನ್ಸ್ಟೆಬಲ್ ಕುಲ್ವಿಂದರ್ ಕೌರ್ ಕಂಗಾನಾಗೆ ಕಪಾಳಕ್ಕೆ ಹೊಡೆದಿದ್ದರು. ಈ ಘಟನೆಯ ನಂತರ ಕೌರ್ ವಿರುದ್ಧ ಹಲ್ಲೆ ಪ್ರಕರಣ ದಾಖಲಿಸಿ, ಆಕೆಯನ್ನು ಕೆಲಸದಿಂದ ಅಮಾನತು ಮಾಡಿ, ಇದೀಗ ವಿಚಾರಣೆಯನ್ನು ನಡೆಸಲಾಗುತ್ತಿದೆ.
ಇದೆಲ್ಲದರ ನಡುವೆ, ಕೌರ್ ಅವರನ್ನು ಸಿಐಎಸ್ಎಫ್ಗೆ ಮರುಸೇರ್ಪಡೆಸಲಾಗಿದೆ ಎಂಬ ಪೋಸ್ಟ್ಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
#BreakingNews
— ajam khan (@azambaba99) July 4, 2024
कंगना रनौत को थप्पड़ मारने वाली CISF जवान 'कुलविंदर कौर' की नौकरी बहाल pic.twitter.com/A3NkfTLrWo
कंगना रनौत को थप्पड़ मारने वाली CISF जवान 'कुलविंदर कौर' की नौकरी बहाल#kangnaranaut #kalvinderkaur pic.twitter.com/qf5DJs1Zl3
— KASIM HASAN (@kashimkhan008) July 3, 2024
कंगना रनौत को थप्पड़ मारने वाली CISF जवान 'कुलविंदर कौर' की नौकरी बहाल pic.twitter.com/Sr40yj5CAg
— Ebadur Rahman (@ebadur_rahman07) July 4, 2024
कंगना रनौत को थप्पड़ मारने वाली CISF जवान 'कुलविंदर कौर' की नौकरी बहाल pic.twitter.com/aVotAhK3T9
— Bolta Hindustan (@BoltaHindustan) July 3, 2024
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಕಂಗನಾ ರಣಾವತ್ಗೆ ಕಪಾಳಮೋಕ್ಷ ಮಾಡಿದ ಸಿಐಎಸ್ಎಫ್ ಕಾನ್ಸ್ಟೆಬಲ್ಗೆ ಇನ್ನೂ ಮರುಸೇರ್ಪಡೆ ಆಗಿಲ್ಲ ಆಕೆಯನ್ನು ಇನ್ನು ತನಿಖೆ ಮಾಡುತ್ತಿದ್ದಾರೆ.
ಈ ವಿಷಯದ ಕುರಿತು ನಾವು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳನ್ನು ಹುಡುಕಿದೆವು. ಹುಡುಕಾಟದಲ್ಲಿ ನಮಗೆ,, ಸಿಐಎಸ್ಎಫ್ ವದಂತಿಗಳನ್ನು ನಿರಾಕರಿಸಿದೆ ಎಂಬ ಲೇಖನಗಳು ಕಂಡುಬಂದವು. ಕಾನ್ಸ್ಟೆಬಲ್ ಕುಲ್ವಿಂದರ್ ಕೌರ್ ಇನ್ನೂ ಅಮಾನತಿನಲ್ಲಿದ್ದಾರೆ. ಇಲಾಖೆಯು ಇನ್ನು ತನಿಖೆಯನ್ನು ನಡೆಸುತ್ತಿದೆ ಎಂದು ವರದಿ ಮಾಡಿದ್ದರು.
ANI X ನ ಖಾತೆಯಲ್ಲಿ CISF ಹೇಳಿಕೆಯನ್ನು ಪ್ರಕಟಿಸಿತು. “CISF constable Kulwinder Kaur, who allegedly slapped BJP MP Kangana Ranaut, is still suspended and a departmental inquiry against her is still on: CISF”" ಎಂದು ಪೋಸ್ಟ್ ಮಾಡಲಾಗಿದೆ. "ಬಿಜೆಪಿ ಸಂಸದೆ ಕಂಗನಾ ರನೌತ್ ಅವರನ್ನು ಹೊಡೆದ ಸಿಐಎಸ್ಎಫ್ ಕಾನ್ಸ್ಟೆಬಲ್ ಕುಲ್ವಿಂದರ್ ಕೌರ್ ಇನ್ನೂ ಅಮಾನತಿನಲ್ಲಿದ್ದಾರೆ. ಅವರ ವಿರುದ್ಧ ಇಲಾಖಾ ವಿಚಾರಣೆಯನ್ನು ಇನ್ನೂ ನಡೆಸುತ್ತಿದೆ: ಸಿಐಎಸ್ಎಫ್" ಎಂದು ಸಿಐಎಸ್ಎಫ್ ಹೇಳಿಕೆಯನ್ನು ನೀಡಿದೆ.
CISF constable Kulwinder Kaur, who allegedly slapped BJP MP Kangana Ranaut, is still suspended and a departmental inquiry against her is still on: CISF
— ANI (@ANI) July 3, 2024
ಬ್ಯುಸಿನೆಸ್ ಸ್ಟ್ಯಾಂಡರ್ಡ್ನ ವರದಿಯ ಪ್ರಕಾರ ಕೌರ್ ಅವರನ್ನು ಬೆಂಗಳೂರಿಗೆ ವರ್ಗಾಯಿಸಲಾಗಿದೆ ಎಂದು ಕೆಲವು ಮಾಧ್ಯಮ ವರದಿಮಾಡಿದ್ದರು ಆದರೆ, ಕೌರ್ ಇನ್ನು ಸಿಐಎಸ್ಎಫ್ ಅವರು ಅಮಾನತು ಮಾಡಿದೆ ಅಷ್ಟೇ ಅಲ್ಲ ಸಿಐಎಸ್ಎಫ್ ಇಲಾಖೆ ಇನ್ನು ವಿಚಾರಣೆಯನ್ನು ಮಾಡುತ್ತಿದೆ ಎಂದು ಸ್ಪಷ್ಟನೆ ನೀಡಿದೆ.
ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರ ಕೆನ್ನೆಗೆ ಬಾರಿಸಿದ್ದ ಸಿಐಎಸ್ಎಫ್ ಕಾನ್ಸ್ಟೆಬಲ್ ಕುಲ್ವಿಂದರ್ ಕೌರ್ ಅವರನ್ನು ಮತ್ತೆ ನೇಮಕ ಮಾಡಲಾಗಿದೆ ಎಂಬ ಹೇಳಿಕೆಐಲ್ಲಿ ಯಾವುದೇ ಸತ್ಯಾಂಶವಿಲ್ಲ. ಕಾನ್ಸ್ಟೆಬಲ್ ಕುಲ್ವಿಂದರ್ ಕೌರ್ ಇನ್ನೂ ಅಮಾನತಿನಲ್ಲಿದ್ದಾರೆ. ಅವರ ವಿರುದ್ಧ ಇಲಾಖಾ ವಿಚಾರಣೆಯನ್ನು ಇನ್ನೂ ನಡೆಸುತ್ತಿದೆ.