ಫ್ಯಾಕ್ಟ್ಚೆಕ್: 2024ರ ಸಾರ್ವತ್ರಿಕ ಚುನಾವಣೆಗೆ ಅರುಣಾಚಲ ಪ್ರದೇಶದಿಂದ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದಾರಾ?
2024ರ ಸಾರ್ವತ್ರಿಕ ಚುನಾವಣೆಗೆ ಅರುಣಾಚಲ ಪ್ರದೇಶದಿಂದ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದಾರಾ?
Claim :
ಚೀನಾ ಕೋಪಗೊಳ್ಳಬಹುದು ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಅರುಣಾಚಲ ಪ್ರದೇಶದಲ್ಲಿ ಯಾವುದೇ ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡಿಲ್ಲFact :
ಅರುಣಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದೆ
ದೇಶದಲ್ಲಿ ಚುನಾವಣಾ ಕಾವು ಜೋರಾಗಿದೆ. ವಿವಿಧ ಪಕ್ಷಗಳ ಅಭ್ಯರ್ಥಿಗಳು ಮತದಾರರ ಮನೆ-ಮನೆಗಳಿಗೂ ತೆರಳಿ, ಹಾಗೂ ಸಾಮಾಜಿಕ ಮಾಧ್ಯಮಗಳಲ್ಲೂ ಪ್ರಚಾರವನ್ನು ಪ್ರಾರಂಭಿಸಿದ್ದಾರೆ. ಇದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ನಕಲಿ ಮಾಹಿತಿಗಳೂ ಸಹ ಹರಿದಾಡುತ್ತಿದೆ. ಇತ್ತೀಚಿಕೆ ಚುನಾವಣೆಗೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ಪೋಸ್ಟ್ನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಪೋಸ್ಟ್ಗೆ ಶೀರ್ಷಿಕೆಯಾಗಿ “ಕಾಂಗ್ರೆಸ್ ಪಕ್ಷ ಅರುಣಾಚಲ ಪ್ರದೇಶದಲ್ಲಿ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲ ಏಕೆಂದರೆ ಚೀನಾ ಕೋಪಗೊಳ್ಳಬಹುದು ಇದರಿಂದ 2009ರಲ್ಲಿ ಕಾಂಗ್ರೆಸ್ ಮತ್ತು ಚೀನೀ ಕಮ್ಯುನಿಸ್ಟ್ ಪಾರ್ಟಿ ನಡುವೆ ಸಹಿ ಹಾಕಲಾದ ತಿಳುವಳಿಕಾ ಒಪ್ಪಂದವನ್ನು ಉಲ್ಲಂಘಿಸಿದಂತಾಗುತ್ತದೆ" ಎಂಬ ಶೀರ್ಷಿಕೆಯನ್ನೀಡಿ ಪೋಸ್ಟ್ ಮಾಡಿದ್ದರು.
One view
— dr.dilip j raichura (@dilipraichura) April 5, 2024
👇
Congress didn't field any candidate in Arunachal Pradesh because China might get angry and also because it will be a breach of the 2009 MoU signed between the Congress and the Chinese Communist Party.
Also, despite starting in the North East,
👇
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಮುಂಬರುವ ಚುನಾವಣೆಗೆ ಅರುಣಾಚಲ ಪ್ರದೇಶದ ಅಸೆಂಬ್ಲಿ ಮತ್ತು ಸಂಸದೀಯ ಕ್ಷೇತ್ರಗಳಿಂದ ಕಾಂಗ್ರೆಸ್ ಪಕ್ಷ ಈಗಾಗಲೇ ಅಭ್ಯರ್ಥಿಗಳನ್ನು ಘೋಷಿಸಿದೆ.
ವೈರಲ್ ಸುದ್ದಿಯ ಅಸಲಿಯತ್ತನ್ನು ತಿಳಿಯಲು ನಾವು ಗೂಗಲ್ನಲ್ಲಿ ಅರುಣಾಚಲ ಪ್ರದೇಶದ ಕಾಂಗ್ರೆಸ್ ಅಭ್ಯರ್ಥಿಗಳು ಎಂಬ ಕೀವರ್ಡ್ನ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದ ಫಲಿತಾಂಶವಾಗಿ ಅರುಣಾಚಲ 24 ವೆಬ್ಸೈಟ್ ಪ್ರಕಟಿಸಿದ ಲೇಖನವೊಂದು ಕಂಡುಕೊಂಡೆವು. ಲೇಖನದ ಪ್ರಕಾರ: “ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ನಬಮ್ ತುಕಿ ಅರುಣಾಚಲ ಪಶ್ಚಿಮ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಪರ ನಾಮನಿರ್ದೇಶನ ಮಾಡಿದ್ದಾರೆ, ಅಲ್ಲಿನ ಹಾಲಿ ಸಂಸದ ಮತ್ತು ಕೇಂದ್ರ ಸಚಿವ ಕಿರಣ್ ರಿಜಿಜು ಅವರ ಎದುರು ಚುನಾವಣೆಯಲ್ಲಿ ನಿಲ್ಲಲಿದ್ದಾರೆ. ಅಷ್ಟೇ ಅಲ್ಲ, ಬೋಸಿರಾಮ್ ಸಿರಾಮ್ ಅರುಣಾಚಲ ಪೂರ್ವ ಕ್ಷೇತ್ರದಿಂದ ಹಾಲಿ ಬಿಜೆಪಿ ಸಂಸದರ ವಿರುದ್ಧ ಕಣಕ್ಕಿಳಿಸಲಾಗಿದೆ” ಎಂದು ವರದಿಯಾಗಿದೆ.
ನಬಮ್ ತುಕಿಯವರ ಬಗ್ಗೆ ತಿಳಿಯಲು ನಾವು ಅವರ ಹೆಸರನ್ನು ಗೂಗಲ್ನಲ್ಲಿ ಹುಡುಕಿದಾಗ ನಮಗೆ ಮಾರ್ಚ್ 26, 2024 ರಂದು, ಅರುಣಾಚದ ಕಾಂಗ್ರೆಸ್ನ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿರುವ ಪೋಸ್ಟ್ನಲ್ಲಿ, 2024ರ ಲೋಕಸಭೆ ಚುನಾವಣೆಗಾಗಿ ಅರುಣಾಚಲ ಪಶ್ಚಿಮ ಸಂಸದೀಯ ಕ್ಷೇತ್ರಕ್ಕೆ ಶ್ರೀ ನಬಮ್ ತುಕಿ ಅವರು ನಾಮಪತ್ರ ಸಲ್ಲಿಸುತ್ತಿದ್ದಾರೆ ಎಂದು ಹೇಳಲಾದ ಪೋಸ್ಟ್ವೊಂದನ್ನು ನಾವು ಕಂಡುಕೊಂಡೆವು.
Filling of 1st phase of nomination papers of Shri @NabamtukiAP , INC MP candidate for Lok Sabha Election-2024 for 1-Arunachal West Parliamentary Constituency has been done successfully today. 2nd phase of filling his nomination papers will be done tomorrow@RahulGandhi @kharge pic.twitter.com/jnDIznDSsE
— Arunachal Congress (@INCArunachal) March 26, 2024
ECI ವೆಬ್ಸೈಟ್ನಲ್ಲಿ ಅಭ್ಯರ್ಥಿಗಳ ಅಫಿಡವಿಟ್ ಪಟ್ಟಿಯನ್ನು ಪರಿಶೀಲಿಸಿವಾಗ, ನಬಮ್ ತುಕಿ ಮತ್ತು ಬೋಸಿರಾಮ್ ಸಿರಾಮ್ ಎಂಬ ಎರಡೂ ನಾಮಪತ್ರಗಳನ್ನು ಅಂಗೀಕರಿಸಲಾಗಿರುವುದನ್ನು ನಾವು ಕಂಡುಕೊಂಡೆವು.
2024ರ ಅರುಣಾಚಲ ಪ್ರದೇಶದ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಅಧಿಕೃತವಾಗಿ ಅರ್ಹತೆ ಪಡೆದಿರುವ INC ಶಾಸಕ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಅರುಣಾಚಲ ಕಾಂಗ್ರೆಸ್ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದವು.
Final list of INC MLAs officially qualified to contest in the State Assembly Election-2024 in Arunachal Pradesh @INCIndia @RahulGandhi@kharge @kcvenugopalmp@Jairam_Ramesh @SupriyaShrinate @DrAChellaKumar @NabamtukiAP @BosiramSiram@techitagi pic.twitter.com/NIuTcol8gm
— Arunachal Congress (@INCArunachal) March 30, 2024
ಇಂಡಿಯನ್ ಎಕ್ಸ್ಪ್ರೆಸ್ನಲ್ಲೂ ಸಹ "ಅರುಣಾಚಲ ಪ್ರದೇಶದ ಕಾಂಗ್ರೆಸ್ ವಿಧಾನಸಭೆಗೆ ಸೇರಿದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ" ಎಂಬ ಶೀರ್ಷಿಕೆಯೊಂದಿಗೆ ವರದಿಯನ್ನು ಪ್ರಕಟಿಸಿತ್ತು .
ಅರುಣಾಚಲ ಟೈಮ್ಸ್ ವರದಿಯ ಪ್ರಕಾರ " ಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ಗಾಗಿ ತುಕಿ ಸ್ಪರ್ಧಿಸಲಿದ್ದಾರೆ" ಎಂದು ವರದಿಯಾಗಿತ್ತು.
ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಮುಂಬರುವ ಸಾರ್ವತ್ರಿಕ ಚುನಾವಣೆಗೆ ಅರುಣಾಚಲ ಪ್ರದೇಶದ ವಿಧಾನಸಭಾ ಮತ್ತು ಸಂಸತ್ತಿನ ಎರಡೂ ಕ್ಷೇತ್ರಗಳ ಅಭ್ಯರ್ಥಿಗಳನ್ನು ಕಾಂಗ್ರೆಸ್ ಈಗಾಗಲೇ ಘೋಷಿಸಿದೆ