ಫ್ಯಾಕ್ಟ್ಚೆಕ್: ಮೊದಲ ಬಾರಿಗೆ ಆಸ್ಟ್ರೇಲಿಯಾ ಪರ ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದು ಗ್ಲೆನ್ ಮ್ಯಾಕ್ಸ್ ವೆಲ್ ಅಲ್ಲ, ಬೆಲಿಂಡಾ ಕ್ಲಾರ್ಕ್.
ಮೊದಲ ಬಾರಿಗೆ ಆಸ್ಟ್ರೇಲಿಯಾ ಪರ ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದು ಗ್ಲೆನ್ ಮ್ಯಾಕ್ಸ್ ವೆಲ್ ಅಲ್ಲ, ಬೆಲಿಂಡಾ ಕ್ಲಾರ್ಕ್.
Claim :
ಏಕದಿನ ಇತಿಹಾಸದಲ್ಲಿ ದ್ವಿಶತಕ ಸಿಡಿಸಿದ ಮೊದಲ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಎಂಬ ಸುದ್ದಿ ವೈರಲ್Fact :
ಮೊದಲ ಬಾರಿಗೆ ಆಸ್ಟ್ರೇಲಿಯಾ ಪರ ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದು ಗ್ಲೆನ್ ಮ್ಯಾಕ್ಸ್ ವೆಲ್ ಅಲ್ಲ, ಮಾಜಿ ಕ್ರಿಕೇಟಿಗ ಬೆಲಿಂಡಾ ಕ್ಲಾರ್ಕ್.
2023ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾದ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್ವೆಲ್ "ಒಡಿಐ ಇತಿಹಾಸದಲ್ಲೇ ಮೊದಲ ಬಾರಿಗೆ ದ್ವಿಶತಕವನ್ನು ಗಳಿಸಿದ್ದಾರೆ" ಎಂದು ಸಾಮಾಜಿಕ ಜಾಲಜಾಣದಲ್ಲಿ ವೈರಲ್ ಆಗಿದೆ.
ಮಝೀರ್ ಅರ್ಶದ್ ಎಂಬ X ಖಾತೆದಾರ ತನ್ನ ಖಾತೆಯಲ್ಲಿ " ಗ್ಲೇನ್ ಮ್ಯಾಕ್ಸ್ವೆಲ್ ಇತಿಹಾಸದಲ್ಲೇ ಮೊದಲ ಬಾರಿಗೆ ದ್ವಿಶತಕವನ್ನು ಗಳಿಸಿದ್ದಾರೆ ಎಂದು ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು.
ಫ್ಯಾಕ್ಟ್ ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಒಡಿಐನಲ್ಲಿ ದ್ವಿಶತಕ ಗಳಿಸಿದ ಮೊದಲ ಆಟಗಾರ ಮ್ಯಾಕ್ಸ್ವೆಲ್ ಅಲ್ಲ.
2010 ರಲ್ಲಿ ಪ್ರಕಟವಾದ ಇಂಡಿಯಾ ಟುಡೇ ವರದಿಯ ಪ್ರಕಾರ ದ್ವಿಶತಕ ಬಾರಿಸಿದ ಮೊದಲ ಆಸ್ಟ್ರೇಲಿಯಾದ ಪ್ಲೇಯರ್ ಬೆಲಿಂಡಾ ಕ್ಲಾರ್ಕ್ ಎಂದು ಪ್ರಕಟವಾದ ಸುದ್ದಿ ಕೋಲಾಹಲ ಸೃಷ್ಟಿಸಿತ್ತು. ಮಾಜಿ ಕ್ರಿಕೆಟಿಗ ಬೆಲಿಂಡಾ ಕ್ಲಾರ್ಕ್ 1997ರಲ್ಲಿ ನಡೆದ ವಿಶ್ವಕಪ್ ಇನ್ನಿಂಗ್ಸ್ನಲ್ಲಿ 200 ಕ್ಕೂ ಹೆಚ್ಚು ರನ್ ಗಳಿಸಿದ ಆಸ್ಟ್ರೇಲಿಯಾದ ಮೊದಲ ಆಟಗಾರ್ತಿ.
ಇದನ್ನೇ ಸುಳಿವಾಗಿ ತೆಗೆದುಕೊಂಡು ಆನ್ಲೈನ್ನಲ್ಲಿ ಹುಡುಕಿದಾಗ ನಮಗೆ ESPN Cricinfo ವೆಬ್ಸೈಟ್ನಲ್ಲೂ ಅದೇ ರೀತಿಯ ಮಾಹಿತಿ ಸಿಕ್ಕಿತು. ಡಿಸೆಂಬರ್ 16, 1997 ರಂದು ಮುಂಬೈನಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಡೆನ್ಮಾರ್ಕ್ ನಡುವಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರ್ತಿ ಬೆಲಿಂಡಾ ಕ್ಲಾರ್ಕ್ 155 ಎಸೆತಗಳಲ್ಲಿ 229 ರನ್ ಗಳಿಸಿ ಸೋಲದೆಕೊನೆಯ ತನಕ ಉಳಿದಿದ್ದರು ಎಂದು ವರದಿಯಾಗಿತ್ತು.
ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ವರ್ಡ್ಕಪ್ನಲ್ಲಿ ಬೆಲಿಂಡಾ ಕ್ಲಾರ್ಕ್ ಮೊದಲ ಬಾರಿಗೆ ದ್ವಿಶತಕ ಗಳಿಸಿದ್ದರು ಎಂದು ಆಸ್ಟ್ರೇಲಿಯಾ ದೃಢಪಡಿಸಿತ್ತು.
ಆದರೆ, ಆಸ್ಟ್ರೇಲಿಯಾ ಪುರುಷರ ಕ್ರಿಕೆಟ್ನಲ್ಲಿ ಮೊದಲ ಬಾರಿಗೆ ದ್ವಿಶತಕ ಗಳಿಸಿದ ಆಟಗಾರ ಮ್ಯಾಕ್ಸ್ವೆಲ್ ಎಂದು ಹಲವು ವರದಿಗಳು ಉಲ್ಲೇಖಿಸಿವೆ. ಪುರುಷರ ODIಗಳಲ್ಲಿ ದ್ವಿಶತಕ ಬಾರಿಸಿದ ಮೊದಲ ವ್ಯಕ್ತಿ ಮ್ಯಾಕ್ಸ್ವೆಲ್ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ODI ಇತಿಹಾಸದಲ್ಲಿ ಮೊದಲ ಬಾರಿಗೆ ದ್ವಿಶತಕ ಬಾರಿಸಿದ ಆಸ್ಟ್ರೇಲಿಯನ್ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಅಲ್ಲ ಆದರೆ ಪುರುಷರ ಕ್ರಿಕೆಟ್ನ ODIಗಳಲ್ಲಿ ಆಸ್ಟ್ರೇಲಿಯಾ ಪರವಾಗಿ ದ್ವಿಶತಕ ಗಳಿಸಿದ ಮೊದಲ ಆಟಗಾರ ಮ್ಯಾಕ್ಸ್ ವೆಲ್ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ವೈರಲ್ ಆದ ಸುದ್ದಿ ಸುಳ್ಳು