ಫ್ಯಾಕ್ಟ್ಚೆಕ್: ಗೂಗಲ್ ಜೀ-ಮೇಲ್ ಸೇವೆಯನ್ನು ಸ್ಥಗಿತಗೊಳಿಸುತ್ತಿದೆ ಎಂಬ ಸುದ್ದಿಯ ಅಸಲಿಯತ್ತೇನು?
ಗೂಗಲ್ ಜೀ-ಮೇಲ್ ಸೇವೆಯನ್ನು ಸ್ಥಗಿತಗೊಳಿಸುತ್ತಿದೆ ಎಂಬ ಸುದ್ದಿಯ ಅಸಲಿಯತ್ತೇನು?
Claim :
ಗೂಗಲ್ ಜೀ-ಮೇಲ್ ಸೇವೆಯನ್ನು ಸ್ಥಗಿತಗೊಳಿಸುತ್ತಿದೆFact :
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಜಿ-ಮೇಲ್ ಗೂಗಲ್ ಸೇವೆಯನ್ನು ಸ್ಥಗಿತಗೊಳಿಸಿದ್ದೇವೆ ಎಂದು ಘೋಷಿಸಿಲ್ಲ.
ಇತ್ತೀಚಿಗೆ ಗೂಗಲ್ ಜಿ-ಮೇಲ್ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತದೆ ಎಂಬ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಗಸ್ಟ್ 1, 2024ರಿಂದ ಗೂಗಲ್ ತನ್ನೆಲ್ಲಾ ಜಿಮೇಲ್ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Gmail is officially coming to a close August 1st https://t.co/aJYAShZFN1
— Kc (@ThankGo06421417) February 22, 2024
ವೈರಲ್ ಆದ ಪೋಸ್ಟ್ನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸಾಕಷ್ಟು ಮಾಧ್ಯಮ ಬಳಕೆದಾರರು ವಿವಿಧ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ.
I have over 17,000 contacts saved in my Gmail, and Google is shutting down Gmail by August 1st ..🙄🫣 pic.twitter.com/7iIIYukChE
— ENOCK (@enocksmith84) February 22, 2024What would you use if Gmail did disappear?
— jhey ▲🐻🎈 (@jh3yy) February 23, 2024
Could literally do a leftpad on all of us... pic.twitter.com/RdEdw5p3FT
this is insane. I hate this company pic.twitter.com/pXBRezPAyX
— Daniel (@growing_daniel) February 22, 2024
ಫ್ಯಾಕ್ಟ್ಚೆಕ್
ವೈರಲ್ ಆದ ಪೋಸ್ಟ್ನಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ಸುದ್ದಿ ಹೆಚ್ಟಿಎಮ್ಎಲ್ಗೆ ಸಂಬಂಧಿಸಿದ್ದು. ಆ ಸುದ್ದಿಯನ್ನು ಎಡಿಟ್ ಮಾಡಿ ಹೀಗೆ ಪೋಸ್ಟ್ ಮಾಡಲಾಗುತ್ತಿದೆ.
ಸ್ಲೋ ಇಂಟರ್ನೆಟ್ ಸಂಪರ್ಕವಿರುವ ಪ್ರದೇಶಗಳಲ್ಲಿ ಸಾಮಾನ್ಯವಾಗಿ HTMLನ ಮೂಲಕ ಬ್ರೌಸರ್ಗಳನ್ನು ಉಪಯೋಗಿಸಲಾಗುತ್ತದೆ. ಹಳೆಯ ಬ್ರೌಸರ್ಗಳನ್ನು ಬಳಸುವವರಿಗೆ, HTML ವೀಕ್ಷಣೆಯು 2024 ರಿಂದ ಲಭ್ಯವಿರುವುದಿಲ್ಲ ಎಂದು ಜಿಮೇಲ್ ಹೆಲ್ಪ್ ಸೆಂಟರ್ ಜೀಮೇಲ್ ಬಳಕೆದಾರರಿಗೆ ಇದೇ ಬಗ್ಗೆ ಸ್ಪಷ್ಟನೆ ನೀಡಿದೆ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಗೂಗಲ್ ಅಧಿಕೃತವಾಗಿ ತನ್ನು ಎಕ್ಸ್ ಖಾತೆಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿದೆ. ʼಜೀ-ಮೇಲ್ನ್ನು ಗೂಗಲ್ ಸ್ಥಗಿತಗೊಳಿಸುತ್ತಿಲ್ಲ ಎಂದು ಪೋಸ್ಟ್ ಮಾಡಿದ್ದರು.
ಎನ್ಡಿಟಿವಿ ವರದಿಯ ಪ್ರಕಾರ ಜಿಮೇಲ್ ಸ್ಥಗಿತಗೊಳಿಸಲಾಗುತ್ತಿದೆ ಎಂದು ಗೂಗಲ್, ಬಳಕೆದಾರರಿಗೆ ಯಾವುದೇ ಮೇಲ್ ಕಳಿಸಿಲ್ಲ,ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ವರದಿ ಮಾಡಿತ್ತು.
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಎಬಿಪಿ ಲೈವ್ ಸಹ ವರದಿ ಮಾಡಿದೆ.
ಜಿಮೇಲ್ ಸ್ಥಗಿತಗೊಳ್ಳುತ್ತಿದೆ ಎಂಬ ಸುದ್ದಿ ಸುಳ್ಳು ಎಂದು ಬಿಬಿಸಿ ಸಹ ವರದಿ ಮಾಡಿದೆ.
ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಗೂಗಲ್, ಜಿಮೇಲ್ ಸೇವೆಯನ್ನು ಸ್ಥಗಿತಗೊಳಿಸುತ್ತೇವೆ ಎಂದು ಯಾವುದೇ ಪೋಸ್ಟ್ ಮಾಡಿಲ್ಲ.