ಫ್ಯಾಕ್ಟ್ಚೆಕ್: ವಾಟ್ಸಾಪ್ ಮತ್ತು ಫೋನ್ ಕರೆಗಳ ಹೊಸ ಸಂವಹನ ನಿಯಮದ ನಕಲಿ ಸಂದೇಶ ವೈರಲ್
ವಾಟ್ಸಾಪ್ ಮತ್ತು ಫೋನ್ ಕರೆಗಳ ಹೊಸ ಸಂವಹನ ನಿಯಮದ ನಕಲಿ ಸಂದೇಶ ವೈರಲ್
Claim :
ನಾಳೆಯಿಂದ ವಾಟ್ಸಾಪ್ ಮತ್ತು ಫೋನ್ ಕರೆಗಳ ಹೊಸ ಸಂವಹನ ನಿಯಮಗಳು ಜಾರಿಯಾಗಲಿದೆFact :
ಸಾಮಾನ್ಯ ನಾಗರಿಕರ ಕರೆಗಳನ್ನು ರೆಕಾರ್ಡ್ ಮಾಡುವ ಬಗ್ಗೆ ಸರ್ಕಾರವು ಯಾವುದೇ ನಿಯಮಗಳನ್ನು ಜಾರಿಮಾಡಿಲ್ಲ
ಫೇಸ್ಬುಕ್ ಮಾಲೀಕತ್ವದ ವಾಟ್ಸ್ಆ್ಯಪ್ ಮೆಸೇಜಿಂಗ್ ಅಪ್ಲಿಕೇಷನ್ ಅನ್ನು ಬಳಸುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಭಾರತದಲ್ಲೇ ಪ್ರತಿ ತಿಂಗಳು ವಾಟ್ಸ್ಆ್ಯಪ್ ಅನ್ನು 200 ಕೋಟಿಗೂ ಅಧಿಕ ಮಂದಿ ಉಪಯೋಗಿಸುತ್ತಿದ್ದಾರೆ. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಇನ್ಫ್ರೋಗ್ರಾಫಿಕ್ ನ್ಯೂಸ್ಪೇಪರ್ ಕ್ಲಿಪ್ಪಿಂಗ್ವೊಂದು ವೈರ್ ಆಗಿದೆ. ಸಾಮಾಜಿಕ ಬಳಕೆದಾರರು ಶೀರ್ಷಿಕೆಯಾಗಿ ಸರ್ಕಾರವು ಹೊಸ ಸಂವಹನ ನಿಯಮಗಳನ್ನು ಜಾರಿಗೆ ತರಲು ಯೋಜಿಸಿದೆ ಅದೇನಂದರೆ ಸಂವಹನ ನಿಯಮಗಳನ್ನು ಅಡಿಯಲ್ಲಿ ಎಲ್ಲಾ ಕರೆಗಳು ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳು ಇನ್ನು ಮುಂದೆ ಸರ್ಕಾರದ ಮೇಲ್ವಿಚಾರಣೆಗೆ ಒಳಪಟ್ಟಿರುತ್ತವೆ. ವಾಟ್ಸ್ಆ್ಯಪ್ ಮತ್ತು ಫೋನ್ ಕರೆಗಳಿಗೆ ಹೊಸ ಸಂವಹನ ನಿಯಮಗಳು ನಾಳೆಯಿಂದಲೇ ಜಾರಿಗೆ ಬರಲಿವೆ ಎಂಬ ಶೀರ್ಷಿಕೆಯೊಂದಿಗಿರುವುದನ್ನು ನಾವು ನೋಡಬಹುದು.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪೋಸ್ಟ್ನಲ್ಲಿ ʼविशेषआग्रह, "जो भी भाई बहन किसी भी ग्रुप के एडमिन है। विशेष रूप से पढ़कर आप जितने भी* *ग्रुपो मे जुडे हुए हो। सभी ग्रुपो और सदस्यो को यह संदेश भेजे। ताकि किसी से भूलवश गलती न हो। जनहित मे सभी के लिए" ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼವಿಶೇಷ ವಿನಂತಿಗಳು, ಅಕ್ಕ ತಂಗಿಯರೇ ಅಣ್ಣ ತಮ್ಮಂದೀರಾ, ನೀವು ಯಾವುದೇ ವಾಟ್ಸಾಪ್ ಗುಂಪಿನ ನಿರ್ವಾಹಕರಾದರೂ ಈ ಕೆಳಗಿನ ಮೆಸೇಜನ್ನು ಓದಿ ಮತ್ತು ಷೇರ್ ಮಾಡಿ. ಇದರಿಂದ ಯಾರೂ ಯಾವುದೇ ತಪ್ಪು ಮಾಡುವುದಿಲ್ಲ. ಎಂಬ ಶೀರ್ಷಿಕೆಯೊಂದಿಗೆ ಮಾಹಿತಿಯನ್ನು ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು.
ವೈರಲ್ ಆದ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು.
ʼಹೆಲ್ತಿ ಟಿಪ್ಸ್ʼ ಎಂಬ ಫೇಸ್ಬುಕ್ ಖಾತೆದಾರರು ತನ್ನ ಖಾತೆಯಲ್ಲಿ ʼಪ್ರಸ್ತುತ ಯಾವುದೇ ರಾಜಕೀಯ ಅಥವಾ ಧಾರ್ಮಿಕ ವಿಷಯದ ಕುರಿತು ಸಂದೇಶಗಳನ್ನು ಬರೆಯುವುದು ಅಥವಾ ಕಳುಹಿಸುವುದು ಅಪರಾಧ, ಹಾಗೆ ಮಾಡುವುದರಿಂದ ವಾರಂಟ್ ಇಲ್ಲದೆ ಬಂಧನಕ್ಕೆ ಕಾರಣವಾಗಬಹುದು, ಎಲ್ಲಾ ಕರೆಗಳನ್ನು ರೆಕಾರ್ಡ್ ಮಾಡಲಾಗುತ್ತದೆ, ಆದರೆ ಮೇಲ್ವಿಚಾರಣೆಗೆ ಮೂರು ವ್ಯವಸ್ಥೆಗಳಿವೆ. ವಾಟ್ಸ್ಆ್ಯಪ್ನಲ್ಲಿ ಮೂರು ಟಿಕ್ ಮಾರ್ಕ್ ಇದೆ ಎಂಬ ಕುರಿತು ಕೂಡ ಕ್ಲೈಮ್ಗಳನ್ನು ಮಾಡಲಾಗಿದೆ.
01. ಎಲ್ಲಾ ಕರೆಗಳನ್ನು ರೆಕಾರ್ಡ್ ಮಾಡಲಾಗುತ್ತದೆ.
02. ಎಲ್ಲಾ ಕರೆ ರೆಕಾರ್ಡಿಂಗ್ಗಳನ್ನು ಸೇವ್ ಮಾಡಲಾಗುತ್ತಿದೆ.
03. ವಾಟ್ಸಾಪ್, ಫೇಸ್ಬುಕ್, ಟ್ವಿಟರ್ ಮತ್ತು ಎಲ್ಲಾ ಸಾಮಾಜಿಕ ಮಾಧ್ಯಮಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ.
04. ಎಲ್ಲರಿಗೂ ಶೇರ್ ಮಾಡಿ.
05. ನಿಮ್ಮ ಎಲ್ಲಾ ಮೊಬೈಲ್ನ ಸಾಧನಗಳನ್ನು ಸಚಿವಾಲಯ ವ್ಯವಸ್ಥೆಗೆ ಸಂಪರ್ಕಿಸಲಾಗುತ್ತದೆ.
06. ಯಾರಿಗೂ ತಪ್ಪು ಸಂದೇಶ ಕಳುಹಿಸದಂತೆ ಎಚ್ಚರವಹಿಸಿ.
07. ನಿಮ್ಮ ಮಕ್ಕಳು, ಸಹೋದರರು, ಸಂಬಂಧಿಕರು, ಸ್ನೇಹಿತರು, ಪರಿಚಯಸ್ಥರಿಗೆ ಸಾಮಾಜಿಕ ತಾಣಗಳನ್ನು ಕಡಿಮೆ ಬಳಸಲು ಹೇಳಿ.
08. ಸರ್ಕಾರ ಅಥವಾ ಪ್ರಧಾನ ಮಂತ್ರಿಯ ಮುಂದೆ ರಾಜಕೀಯ ಅಥವಾ ಪ್ರಚಲಿತ ವಿದ್ಯಮಾನಗಳ ಕುರಿತು ನಿಮ್ಮ ಯಾವುದೇ ಪೋಸ್ಟ್ಗಳು ಅಥವಾ ವೀಡಿಯೊಗಳು... ಇತ್ಯಾದಿ. ಕಳುಹಿಸಬೇಡಿ
09. ಪ್ರಸ್ತುತ ಯಾವುದೇ ರಾಜಕೀಯ ಅಥವಾ ಧಾರ್ಮಿಕ ವಿಷಯದ ಕುರಿತು ಯಾವುದೇ ಸಂದೇಶವನ್ನು ಷೇರ್ ಮಾಡಿದರೆ ವಾರಂಟ್ ಇಲ್ಲದೆ ಬಂಧನಕ್ಕೆ ಒಳಗಾಗುತ್ತೀರ.
10. ಪೊಲೀಸರು ನೋಟಿಸ್ ನೀಡಿ ಗಂಭೀರವಾದ ಕ್ರಮವನ್ನು ಕೈಗೊಳ್ಳಲಾಗುತ್ತಿದೆ.
11. ದಯವಿಟ್ಟು ನೀವೆಲ್ಲರೂ, ನಿಮ್ಮ ಗುಂಪಿನ ಸದಸ್ಯರು, ನಿರ್ವಾಹಕರು, ದಯವಿಟ್ಟು ಈ ವಿಷಯವನ್ನು ಪರಿಗಣಿಸಿ.
12. ತಪ್ಪು ಸಂದೇಶ ಕಳುಹಿಸದಂತೆ ಎಚ್ಚರವಹಿಸಿ ಮತ್ತು ಎಲ್ಲರಿಗೂ ಈ ವಿಷಯವನ್ನು ತಿಳಿಸಿ.
13. ದಯವಿಟ್ಟು ಇದನ್ನು ಹಂಚಿಕೊಳ್ಳಿ. ಗುಂಪುಗಳು ಹೆಚ್ಚು ಜಾಗೃತರಾಗಿರಬೇಕು ಮತ್ತು ಜಾಗರೂಕರಾಗಿರಬೇಕು. ಜವಾಬ್ದಾರಿಯುತ ನಾಗರಿಕರಾಗಿರಿ ಮತ್ತು ಅದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ... ಸಾಧ್ಯವಾದಷ್ಟು ಬೇಗ ಮುಂದಿನ ಗುಂಪಿಗೆ ಕಳುಹಿಸುವುದು ಮುಖ್ಯʼ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಹೊಸ ಸಂವಹನ ನಿಯಮಗಳ ಅಡಿಯಲ್ಲಿ, ಯಾವುದೇ ಸಾಮಾನ್ಯ ನಾಗರಿಕರ ಕರೆಗಳನ್ನು ರೆಕಾರ್ಡ್ ಮಾಡುವ ಬಗ್ಗೆ ಸರ್ಕಾರವು ಯಾವುದೇ ನಿಯಮಗಳನ್ನು ಮಾಡಿಲ್ಲ
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ವೈರಲ್ ಅದ ಪೊಸ್ಟ್ಗೆ ಕುರಿತ ಕೆಲವು ಕೀವರ್ಡ್ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ದೈನಿಕ್ ಭಾಸ್ಕರ್ ಪ್ರಕಟಿಸಿರುವ ವರದಿಯೊಂದು ಕಂಡುಬಂದಿತು. ʼटेलीकम्युनिकेशन बिल लोकसभा के बाद राज्यसभा से पास:बायोमेट्रिक पहचान से ही सिम मिलेगी, फर्जी सिम लेने पर 3 साल जेल; 50 लाख जुर्मानाʼ ಎಂಬ ಶೀರ್ಷಿಕೆಯೊಂದಿಗೆ ವರದಿಯಾಗಿರುವುದನ್ನು ನಾವಿಲ್ಲಿ ನೋಡಬಹುದು. ವರದಿಯಲ್ಲಿ ಸರ್ಕಾರವು ಯಾವುದೇ ರಾಜಕೀಯ ಅಥವಾ ಧಾರ್ಮಿಕ ವಿಷಯದ ಬಗ್ಗೆ ಮೆಸೇಜ್ಗಳನ್ನು ಬರೆಯುವುದು ಅಥವಾ ಕಳುಹಿಸುವುದು ಅಪರಾಧ ಎಂದು ಸರ್ಕಾರವು ಯಾವುದೇ ನಿಯಮಗಳನ್ನು ತಂದಿಲ್ಲ ಎಂದು ಉಲ್ಲೇಖವಾಗಿದೆ ಮತ್ತು ಇದರಲ್ಲಿ “ಟೆಲಿಕಮ್ಯುನಿಕೇಷನ್ ಬಿಲ್” ಅನ್ನು 2023 ರಲ್ಲಿ ಸಂಸತ್ತು ಅಂಗೀಕರಿಸಿದೆ ಎಂದು ಹೇಳಲಾಗಿದೆ.
ಇಂಡಿಯನ್ ಟೆಲಿಗ್ರಾಫ್ ಆಕ್ಟ್, 1885 ಮತ್ತು ಇಂಡಿಯನ್ ವೈರ್ಲೆಸ್ ಟೆಲಿಗ್ರಾಫಿ ಆಕ್ಟ್, 1933 ರ ಬದಲಿಗೆ ಈ ಮಸೂದೆಯನ್ನು ತರಲಾಯಿತು. ದೂರಸಂಪರ್ಕ ಮಸೂದೆ, 2023 ರ ನಿಬಂಧನೆಗಳ ಪ್ರಕಾರ, ರಾಜ್ಯದ ಭದ್ರತೆ, ಇತರ ದೇಶಗಳೊಂದಿಗಿನ ಸೌಹಾರ್ದ ಸಂಬಂಧಗಳು, ಕಾನೂನು ಮತ್ತು ಸುವ್ಯವಸ್ಥೆ ಮತ್ತು ಹಿಂಸಾಚಾರದ ಪ್ರಚೋದನೆಯ ಆಧಾರದ ಮೇಲೆ ಮಾತ್ರ ಎರಡು ಅಥವಾ ಹೆಚ್ಚಿನ ವ್ಯಕ್ತಿಗಳ ನಡುವಿನ ಸಂದೇಶಗಳನ್ನು ತಡೆಹಿಡಿಯಬಹುದು, ಮೇಲ್ವಿಚಾರಣೆ ಮಾಡಬಹುದು ಅಥವಾ ನಿರ್ಬಂಧಿಸಬಹುದು . ಹೊಸ ಮಸೂದೆಯಲ್ಲಿ ಸಿಮ್ ಕಾರ್ಡ್ ವಂಚನೆಗೆ 3 ವರ್ಷ ಜೈಲು ಮತ್ತು 50 ಲಕ್ಷ ರೂಪಾಯಿಗಳಷ್ಟು ದಂಡ ವಿಧಿಸಬಹುದು. ಎಂದು ದೂರಸಂಪರ್ಕ ಮಸೂದೆಯನ್ನು ಡಿಸೆಂಬರ್ 20 ರಂದು ಲೋಕಸಭೆ ಮತ್ತು ಡಿಸೆಂಬರ್ 21 ರಂದು ರಾಜ್ಯಸಭೆ ಅನುಮೋದಿಸಿತು. ಇದನ್ನು ಡಿಸಂಬರ್ 24, 2023ರಂದು ರಾಷ್ಟ್ರಪತಿ ದ್ರೌಪದಿ ಮುರ್ಮುರವರು ಅನುಮೋದನೆ ನೀಡಿದರು.
ಜೂನ್ 21, 2024 ರಂದು ಕೇಂದ್ರ ಸರ್ಕಾರವು ದೂರಸಂಪರ್ಕ ಕಾಯ್ದೆಯ ಸೆಕ್ಷನ್ 1, 2, 10 ರಿಂದ 30, 42 ರಿಂದ 44, 46, 47, 50 ರಿಂದ 58, 61 ರವರೆಗೆ ತಿದ್ದುಪಡಿ ಮಾಡಿದೆ ಎಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಪತ್ರಿಕಾ ಪ್ರಕಟಣೆ ತಿಳಿಸಿದೆ ಹಾಗೆ 62 ಅನ್ನು ಕಾರ್ಯಗತಗೊಳಿಸಲು ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿರುವುದನ್ನು ನಾವಿಲ್ಲಿ ನೋಡಬಹುದು.
ಏಪ್ರಿಲ್ 7, 2024ರಂದು ಪಿಐಬಿ ಫ್ಯಾಕ್ಟ್ಚೆಕ್ ವೈರಲ್ ಆದ ಸುದ್ದಿಯ ಬಗ್ಗೆ ಫ್ಯಾಕ್ಟ್ಚೆಕ್ ಮಾಡಿರುವುದನ್ನು ನಾವಿಲ್ಲಿ ನೋಡಬಹುದು.
ಅಷ್ಟೇ ಅಲ್ಲ, ಈ ವೈರಲ್ ಸಂದೇಶದಲ್ಲಿ ವಾಟ್ಸಾಪ್ಗೆ ಸಂಬಂಧಿಸಿದ ಮೂರು ಟಿಕ್ಗಳನ್ನು ಕ್ಲೈಮ್ ಮಾಡಲಾಗಿದೆ. ಮೂರು ನೀಲಿ ಟಿಕ್ಗಳು ಎಂದರೆ ಸರ್ಕಾರದಿಂದ ಸಂದೇಶ ಟಿಪ್ಪಣಿ. ಎರಡು ನೀಲಿ ಮತ್ತು ಒಂದು ಕೆಂಪು ಉಣ್ಣಿ ಎಂದರೆ ಸರ್ಕಾರವು ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬಹುದು. ವೈರಲ್ ಆದ ಸುದ್ದಿಯ ಬಗ್ಗೆ ಪರಿಶೀಲಿಸಲು, ನಾವು ವಾಟ್ಸ್ಪ್ನಲ್ಲಿರುವ ʼಎಫ್ಎಕ್ಯೂʼ ವಿಭಾಗದಲ್ಲಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ವಾಟ್ಸ್ಪ್ನಲ್ಲಿ ಮೂರು ಟಿಕ್ ಮಾರ್ಕ್ಗಳಿಗೆ ಯಾವುದೇ ಆಯ್ಕೆಯಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಟಿಕ್ ಎಂದರೆ, ನಿಮ್ಮ ಸಂದೇಶವನ್ನು ಯಶಸ್ವಿಯಾಗಿ ಕಳುಹಿಸಲಾಗಿದೆ. ಎರಡು ಟಿಕ್ ಎಂದರೆ, ನಿಮ್ಮ ಸಂದೇಶವನ್ನು ಸ್ವೀಕರಿಸುವವರ ಫೋನ್ ಅಥವಾ ಅವರ ಯಾವುದೇ ಲಿಂಕ್ ಮಾಡಲಾದ ಸಾಧನಗಳಿಗೆ ಯಶಸ್ವಿಯಾಗಿ ತಲುಪಿಸಲಾಗಿದೆ. ಮತ್ತು ಎರಡು ನೀಲಿ ಉಣ್ಣಿ ಎಂದರೆ ಸ್ವೀಕರಿಸುವವರು ನಿಮ್ಮ ಸಂದೇಶವನ್ನು ಓದಿದ್ದಾರೆ ಎಂದರ್ಥ. ವಾಟ್ಸ್ಪ್ ಸಂದೇಶಗಳನ್ನು ಎಂಡ್-ಟು-ಎಂಡ್ ಎನ್ಕ್ರಿಪ್ಟ್ ಮಾಡಲಾಗಿದ್ದು, ಇದರಿಂದ ಇಬ್ಬರು ವ್ಯಕ್ತಿಗಳ ನಡುವೆ ಸಂದೇಶಗಳನ್ನು ಕಳುಹಿಸುವುದನ್ನು ಮೂರನೇ ವ್ಯಕ್ತಿ ನೋಡುವುದಿಲ್ಲ ಎಂದು ಸ್ಪಷ್ಟವಾಗಿದೆ
ವೈರಲ್ ಆದ ಸುದ್ದಿಯಲ್ಲಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಹೊಸ ಸಂವಹನ ನಿಯಮಗಳ ಅಡಿಯಲ್ಲಿ, ಯಾವುದೇ ಸಾಮಾನ್ಯ ನಾಗರಿಕರ ಕರೆಗಳನ್ನು ರೆಕಾರ್ಡ್ ಮಾಡುವ ಬಗ್ಗೆ ಸರ್ಕಾರವು ಯಾವುದೇ ನಿಯಮಗಳನ್ನು ಮಾಡಿಲ್ಲವಾಟ್ಸಾಪ್ ಮತ್ತು ಫೋನ್ ಕರೆಗಳ ಹೊಸ ಸಂವಹನ ನಿಯಮದ ನಕಲಿ ಸಂದೇಶ ವೈರಲ್