ಫ್ಯಾಕ್ಟ್ ಚೆಕ್: ಹಮಾಸ್ ಉಗ್ರಗಾಮಿಗಳು ಪ್ಯಾರಾಚೂಟ್ಗಳ ಮೂಲಕ ಇಸ್ರೇಲ್ಗೆ ಪ್ರವೇಶಿಸುತ್ತಿದ್ದಾರೆ ಎನ್ನುವ ಸುದ್ದಿ ಸುಳ್ಳು
ಹಮಾಸ್ ಉಗ್ರಗಾಮಿಗಳು ಪ್ಯಾರಾಚೂಟ್ಗಳ ಮೂಲಕ ಇಸ್ರೇಲ್ಗೆ ಪ್ರವೇಶಿಸುತ್ತಿದ್ದಾರೆ ಎನ್ನುವ ಸುದ್ದಿ ಸುಳ್ಳು
Claim :
ಹಮಾಸ್ ಉಗ್ರಗಾಮಿಗಳು ಪ್ಯಾರಾಚೂಟ್ಗಳ ಮೂಲಕ ಇಸ್ರೇಲ್ಗೆ ಪ್ರವೇಶಿಸುತ್ತಿದ್ದಾರೆ.Fact :
ಪ್ಯಾರಾಚೂಟ್ಗಳ ಮೂಲಕ ಇಳಿಯುತ್ತಿರುವ ವೀಡಿಯೋ ಈಜಿಪ್ಟ್ ಸೇನಾ ಪಡೆಗೆ ಸಂಬಂಧಿಸಿದೆ.
ಒಂದಡೆ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಯುದ್ದ ನಡೆಯುತ್ತಿದ್ದರೆ, ಇನ್ನೋಂದಡೆ ಹಮಾಸ್ ಭಯೋತ್ಪಾದಕರು ಪ್ಯಾರಾಚೂಟ್ನ ಸಹಾಯದಿಂದ ಇಸ್ರೇಲ್ಗೆ ಪ್ರವೇಶಿಸುತ್ತಿದ್ದಾರೆಂಬ ವೀಡಿಯೋ ವೈರಲ್ ಆಗುತ್ತಿದೆ.
@sam ಎನ್ನುವ ಖಾತೆದಾರರು ತಮ್ಮ X ಖಾತೆಯಲ್ಲಿ ʼಪ್ಯಾಲೇಸ್ಟಿನಿಯನ್ ಸ್ವಾತಂತ್ರ್ಯ ಯೋಧರು ಇಸ್ರೇಲ್ಗೆ ಪ್ರವೇಶಿಸುತ್ತಿದ್ದಾರೆʼ ಎಂದು ಕ್ಯಾಪ್ಷನ್ ನೀಡಿ ಪೋಸ್ಟ್ನ್ನು ಶೇರ್ಮಾಡಿದ್ದಾರೆ.
ಫ್ಯಾಕ್ಟ್ ಚೆಕ್
ಹಲವು ಖಾತೆದಾದರು ವೈರಲ್ ಆಗುತ್ತಿರುವ ವೀಡಿಯೋ ಇಸ್ರೇಲ್ಗೆ ಸಂಬಂಧಿಸಿದ್ದಲ್ಲ ಖಚಿತಪಡಿಸಿದ್ದಾರೆ.
ಈ ವೀಡಿಯೋ ಈಜಿಪ್ಟ್ ನಲ್ಲಿ ಸೇನಾ ತರಬೇತಿಯ ಭಾಗವಾಗಿ ತೆಗೆದಂತಹ ವಿಡಿಯೋ.
ವೈರಲ್ ಆದ ವೀಡಿಯೋದಲ್ಲಿ ಕಾಣುವ ಕಟ್ಟಡದ ಮೇಲಿರುವ ಪದಗಳನ್ನು ಗೂಗಲ್ ಲೆನ್ಸ್ ಮೂಲಕ ಅನುವಾದಿಸಿದಾಗ, ಭವನದ ಮೇಲೆ "ಮಿಲಿಟರಿ ಕಾಲೇಜು" ಎಂದು ಬರೆದಿತ್ತು.
ನಾವು Google ಮ್ಯಾಪ್ ಮೂಲಕ ಈ ಸ್ಥಳ ಯಾವುದೆಂದು ಹುಡುಕಿದಾಗ, ನಮಗೆ ಕಂಡು ಬಂದಿದ್ದು ಈ ಸ್ಥಳ ಈಜಿಪ್ಟ್ನಲ್ಲಿರುವ ಮಿಲಿಟರಿ ತರಬೇತಿ ಅಕಾಡೆಮಿಗೆ ಸಂಬಂಧಿಸಿದ್ದು ಎಂದು. ನಂತರ ವೈರಲ್ ಆದ ವೀಡಿಯೋ ಮತ್ತು ಇಜಿಪ್ಟ್ನ ಮಿಲಿಟರಿ ಅಕಾಡೆಮಿಯ ಚಿತ್ರವನ್ನು ಹೋಲಿಸಿದಾಗ ಇವೆರಡು ಒಂದೇ ಚಿತ್ರ ಎಂದು ಗಮನಿಸಿದ್ದವು.
ಯಾವ ಸಂದರ್ಭದಲ್ಲಿ ಈ ವೀಡಿಯೋ ತೆಗೆದಿದ್ದಾರೆಂಬುದು ನಮಗೆ ಕಂಡುಹಿಡಿಯಲು ಸಾಧ್ಯವಾಗದಿದ್ದರೂ, ವೈರಲ್ ಆದ ವೀಡಿಯೊ ಇಸ್ರೇಲ್ಗೆ ಸಂಬಂಧಿಸಿಲ್ಲ ಎನ್ನುವುದಂತು ಖಚಿತ ಪಡಿಸಿಕೊಂಡೆವು. ಈಜಿಪ್ಟ್ನ ಸೇನಾ ತರಬೇತಿಯ ಭಾಗವಾಗಿ ಮಾಡಿದಂತಹ ವೀಡಿಯೋವನ್ನು, ಹಮಾಸ್ ಉಗ್ರಗಾಮಿಗಳು ಪ್ಯಾರಾಚೂಟ್ಗಳನ್ನು ಬಳಸಿ ಇಸ್ರೇಲ್ಗೆ ಪ್ರವೇಶಿಸುತ್ತಿದ್ದಾರೆಂದು ತಪ್ಪು ಮಾಹಿತಿಯನ್ನು ಕೆಲವು ಖಾತೆದಾರರು ಹಂಚಿಕೊಳ್ಳುತ್ತಿದ್ದಾರೆ.