ಫ್ಯಾಕ್ಟ್ ಚೆಕ್ : ರೀಫಂಡ್ಗಾಗಿ ತೆರಿಗೆ ಇಲಾಖೆಯ ಹೆಸರಿನಲ್ಲಿ ಬರುತ್ತಿರುವ ಮೆಸೇಜ್ ನಕಲಿ
ತೆರಿಗೆ ಇಲಾಖೆ ಹೆಸರಿನಲ್ಲಿ ಹರಿದಾಡುತ್ತಿರುವ ಮೆಸೇಜ್ಗೂ, ತೆರಿಗೆ ಇಲಾಖೆ ರೀಫಂಡ್ಗೂ ಸಂಬಂಧವಿಲ್ಲ
Claim :
ರೀಫಂಡ್ಗೆ ಸಂಬಂಧಿಸಿದಂತೆ ತೆರಿಗೆ ಇಲಾಖೆಯಿಂದ ಮೆಸೇಜ್Fact :
ಇದು ನಕಲಿ ಮೆಸೇಜ್
ಆದಾಯ ತೆರಿಗೆ ಇಲಾಖೆಯ ಹೆಸರಿನಲ್ಲಿ ಮೆಸೇಜ್ವೊಂದು ಹರಿದಾಡುತ್ತಿದ್ದು, ರೀಫಂಡ್ ಮೊತ್ತವನ್ನು ಪಡೆದುಕೊಳ್ಳಲು ಬ್ಯಾಂಕ್ ಖಾತೆಗಳ ವಿವರಗಳನ್ನು ನೀಡುವಂತೆ ಕೇಳುತ್ತಿದೆ. ಈ ಮೆಸೇಜ್ನೊಂದಿಗೆ ವಿವರಗಳನ್ನು ದಾಖಲಿಸಲು ವೆಬ್ಸೈಟ್ ಲಿಂಕ್ಅನ್ನು ನೀಡಲಾಗಿದೆ.
ಈ ಕುರಿತು ಅನೇಕರು ತೆಲುಗು ಪೋಸ್ಟ್ಗೆ ಸತ್ಯಾಸತ್ಯತೆ ತಿಳಿಸಲು ವಿನಂತಿಸಿಕೊಂಡಿದ್ದಾರೆ.
ಫ್ಯಾಕ್ಟ್ಚೆಕ್
ಈ ರೀತಿಯ ಮೆಸೇಜ್ಗಳ ವಾಸ್ತವದಲ್ಲಿ ವಂಚನೆಯ ಉದ್ದೇಶದೊಂದಿಗೆ ಹರಿದಾಡುತ್ತಿರುತ್ತವೆ. ಅನುಮಾನಸ್ಪದವಾಗಿರುವ ಈ ಸಂದೇಶಗಳಲ್ಲಿ ಮಾಹಿತಿ ದಾಖಲಿಸಲು ಕಳಿಸುವ ವೆಬ್ಸೈಟ್ ಲಿಂಕ್ಗಳು ಕೂಡ ಅಧಿಕೃತ ತಾಣಗಳಾಗಿರುವುದಿಲ್ಲ. ಬದಲಿಗೆ ನಕಲಿ ಹಾಗೂ ಇಲಾಖೆಗೆ ಸಂಬಂಧಪಡದ ವೆಬ್ತಾಣಗಳ ಲಿಂಕ್ಗಳಾಗಿರುತ್ತವೆ.
ಬಳಕೆದಾರರು ಗಮನಿಸಬೇಕಾದ ಮೊದಲ ಸಂಗತಿ, ಸರ್ಕಾರಿ ಸಂಸ್ಥೆ ಅಥವಾ ಇಲಾಖೆಯ ಹೆಸರಿನಲ್ಲಿ ಬರುವ ಸಂದೇಶಗಳಲ್ಲಿ ಇರುವ ವೆಬ್ತಾಣಗಳ ಲಿಂಕ್ಗಳು .gov.in ಎಂದು ಕೊನೆಯಾಗುತ್ತವೆ. ಇದು ವೆಬ್ತಾಣಗಳು ಭಾರತ ಸರ್ಕಾರಕ್ಕೆ ಸಂಬಂಧಿಸಿದ್ದು ಎಂದು ಸೂಚಿಸುತ್ತದೆ. ಆದರೆ ತೆರಿಗೆ ಇಲಾಖೆ ಹೆಸರಿನಲ್ಲಿ ಹರಿದಾಡುತ್ತಿರುವ ಮೆಸೇಜ್ನಲ್ಲಿ ವೆಬ್ತಾಣದ ಹೆಸರಿಲ್ಲ, ಅದು ಯಾವುದೇ ರೀತಿಯಲ್ಲಿ ಭಾರತ ಸರ್ಕಾರಕ್ಕೆ ಸಂಬಂಧಿಸಿಲ್ಲ ಎಂಬುದು ಗೋಚರಿಸುತ್ತದೆ.
ಸಾಮಾನ್ಯವಾಗಿ ಈ ರೀತಿಯ ಸೋಗಿನ ಮೆಸೇಜ್ಗಳು ಯುಆರ್ಎಲ್ಗಳನ್ನು ಚಿಕ್ಕದು ಮಾಡುವ ಸೇವೆಯನ್ನು ಬಳಸುತ್ತವೆ. ಇದರಿಂದಾಗಿ ಬಳಕೆದಾರರು ಸುಲಭವಾಗಿ ಇದು ಅಧಿಕೃತ ಲಿಂಕ್ ಇರಬಹುದು ಎಂದು ಬೇಸ್ತು ಬೀಳುತ್ತಾರೆ.
ತೆರಿಗೆ ಇಲಾಖೆ ಹೆಸರಿನಲ್ಲಿ ಹರಿದಾಡುತ್ತಿರುವ ಮೆಸೇಜ್ನಲ್ಲಿರುವ ಲಿಂಕ್ ಒಂದು ಆನ್ಲೈನ್ಬುಕ್ಸ್ಟೋರ್ನದ್ದಾಗಿದ್ದು, ಅದಕ್ಕೂ ತೆರಿಗೆ ಇಲಾಖೆ ರೀಫಂಡ್ಗೂ ಸಂಬಂಧವಿಲ್ಲ ಎಂಬುದನ್ನು ತೆಲುಗು ಪೋಸ್ಟ್ ಖಚಿತ ಪಡಿಸಿಕೊಂಡಿತು.
ಯಾವುದೇ ವ್ಯಕ್ತಿ ಈ ರೀತಿಯ ಲಿಂಕ್ಗಳ ಬಗ್ಗೆ ಎಚ್ಚರವಹಿಸಬೇಕು. ಒಂದು ವೇಳೆ ಇಂತಹ ಯಾವುದೇ ಅನುಮಾನಾಸ್ಪದ ವೆಬ್ತಾಣದಲ್ಲಿ ನಿಮ್ಮ ವಿವರಗಳನ್ನು ದಾಖಲಿಸಿದರೆ, ಆ ದಾಖಲೆಯನ್ನು ನಿಮ್ಮ ವಿರುದ್ಧ ಯಾವುದೇ ರೀತಿಯಲ್ಲಿ ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ವ್ಯಕ್ತಿಗತ ಮಾಹಿತಿಯ ಕಳವಿನ ಜೊತೆಗೆ, ಹಣಕಾಸಿನ ವಿವರಗಳೂ ಇರುವುದರಿಂದ ಎಚ್ಚರವಹಿಸುವುದು ಅತ್ಯಗತ್ಯ.
ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್, ಇಲಾಖೆಯೂ ತೆರಿಗೆದಾರರಿಂದ ಯಾವುದೇ ರೀತಿಯಲ್ಲಿ ಈ ಮೇಲ್ ಮೂಲಕ ವ್ಯಕ್ತಿಗತ ಮಾಹಿತಿ ಸಂಗ್ರಹಿಸುವುದಿಲ್ಲ, ಈ ಮೇಲ್ ಮೂಲಕ ಪಿನ್ ನಂಬರ್, ಪಾಸ್ವರ್ಡ್, ಅಥವಾ ಕ್ರೆಡಿಟ್ ಕಾರ್ಡ್, ಬ್ಯಾಂಕ್ ಅಥವಾ ಖಾತೆಗಳ ವಿವರಗಳನ್ನು ಕೇಳುವುದಿಲ್ಲ ಎಂದು ತಿಳಿಸಿದೆ.
2018ರಲ್ಲಿ ಸಿಇಆರ್ಟಿ ರೀತಿಯ ವಂಚನೆ ಕುರಿತು ಪತ್ರಿಕಾ ಹೇಳಿಕೆಯನ್ನು ನೀಡಿತ್ತು ಮತ್ತು ಈ ರೀತಿಯಲ್ಲಿ ಅನಧಿಕೃತ ತಾಣಗಳಲ್ಲಿ ನಮೂದಿಸುವ ವಿವರಗಳನ್ನು ಸೈಬರ್ ಅಪರಾಧಿಗಳು, ಗುರುತು ಕದಿಯುವುದಕ್ಕೆ, ಡಾರ್ಕ್ವೆಬ್ನಲ್ಲಿ ಮಾರಾಟ ಮಾಡುವುದಕ್ಕೆ ಅಥವಾ ತೆರಿಗೆ ಇಲಾಖೆ ಮಾಹಿತಿಯನ್ನು ತಿದ್ದುವುದಕ್ಕೆ ಬಳಕೆಯಾಗುವ ಸಾಧ್ಯತೆ ಇರುತ್ತದೆ ಎಚ್ಚರಿಸಿತ್ತು. (ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ)
ಜೊತೆಗೆ ಇಂತಹ ಅನುಮಾನಸ್ಪದ ಎಸ್ಎಂಎಸ್ ಅಥವಾ ಈ ಮೇಲ್ಗಳು ಬಂದಾಗ ಯಾವುದೇ ರೀತಿಯಲ್ಲೂ ಪ್ರತಿಕ್ರಿಯಿಸಬಾರದು ಎಂದು ಸೂಚಿಸುವ ಜೊತೆಗೆ ಅನುಸರಿಸಬೇಕಾದ ಭದ್ರತೆಯ ಕ್ರಮಗಳನ್ನು ತಿಳಿಸಿತ್ತು. ಅನುಮಾನಾಸ್ಪದ ಲಿಂಕ್ಗಳನ್ನು ಕ್ಲಿಕ್ ಮಾಡಿ, ಮಹತ್ವದ ಮಾಹಿತಿಯನ್ನು ನೀಡದಿರುವಂತೆ ಎಚ್ಚರಿಸಿತ್ತು. ಈ ಹಿನ್ನೆಲೆಯಲ್ಲಿ ತೆರಿಗೆ ಇಲಾಖೆ ಹೆಸರಿನಲ್ಲಿ ಹರಿದಾಡುತ್ತಿರುವ ಸಂದೇಶವು ನಕಲಿ.