ಫ್ಯಾಕ್ಟ್ಚೆಕ್: ಜೂನಿಯರ್ ಎನ್ಟಿಆರ್ ಶರ್ಟ್ ಮೇಲೆ ಟಿಡಿಪಿ ಚಿಹ್ನೆಯನ್ನು ಧರಿಸಿ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂಬುದು ವಾಸ್ತವವೇ?
ಜೂನಿಯರ್ ಎನ್ಟಿಆರ್ ಶರ್ಟ್ ಮೇಲೆ ಟಿಡಿಪಿ ಚಿಹ್ನೆಯನ್ನು ಧರಿಸಿ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂಬುದು ವಾಸ್ತವವೇ?
Claim :
ಜೂನಿಯರ್ ಎನ್ಟಿಆರ್ ಟಿಡಿಪಿಯ ಚುನಾವಣಾ ಚಿಹ್ನೆಯಿರುವ ಶರ್ಟ್ ಧರಿಸಿ ರಾಜಕೀಯ ಪಕ್ಷಕ್ಕೆ ಬೆಂಬಲಿಸುತ್ತಿದ್ದಾರೆFact :
ವೈರಲ್ ಆದ ಚಿತ್ರದಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಚಿತ್ರದಲ್ಲಿ ಎನ್ಟಿಆರ್ ಟಿಡಿಪಿ ಚಿಹ್ನೆಯಿರುವ ಶರ್ಟ್ ಧರಿಸಿಲ್ಲ. ಚಿತ್ರವನ್ನು ಮಾರ್ಫ್ ಮಾಡಲಾಗಿದೆ.
ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯು ಮೇ 13, 2024 ರಂದು ನಡೆಯಲಿದ್ದು, ಅದೇ ದಿನದಂದು ಲೋಕಸಭೆ ಚುನಾವಣೆಯೂ ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗವು ಘೋಷಿಸಿದೆ. ಆಂಧ್ರ ಪ್ರದೇಶದಲ್ಲಿರುವ 175 ವಿಧಾನಸಭೆ ಸ್ಥಾನಗಳಿದಿದ್ದು ಅದರಲ್ಲಿ 29 ಸ್ಥಾನಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿಡಲಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಟಿಡಿಪಿ, ಬಿಜೆಪಿ ಮತ್ತು ಜನಸೇನಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು, ವೈಎಸ್ಆರ್ಸಿ ಪಕ್ಷದ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ.
ಟಾಲಿವುಡ್ ನಟ ಜೂನಿಯರ್ ಎನ್ಟಿಆರ್ ಮುಂಬರುವ ವಿಧಾನಸಭಾ ಚುನಾವಣೆಗೆ ಟಿಡಿಪಿ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ, ಹೀಗಾಗಿ ಟಿಡಿಪಿ ಪಕ್ಷದ ಸೈಕಲ್ ಚಿಹ್ನೆ ಹೊಂದಿರುವ ಶರ್ಟ್ ಧರಿಸಿರುವ ಚಿತ್ರವು ಎಂಬ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೆಲವು ಮಾಧ್ಯಮದಾರರು ಸಾಮಾಜಿಕ ಖಾತೆಯಲ್ಲಿ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
పిల్ల హుక్ పేటీఎం గాళ్ల కోసం….
— MalathiReddy 2.0 (@Malaathi_Reddi) April 22, 2024
క్లారిటీ వచ్చేసింది గా….
మన రక్తం…మన బిడ్డ..🔥🔥🔥 pic.twitter.com/bIiQRi2KAH
Tarak anna YCP ki vote veyyandani hint isthunnada? pic.twitter.com/eNO18Kag3W
— Manager Anna (@managergaru) April 22, 2024
ಒಂದು ಚಿತ್ರದಲ್ಲಿ ಟಿಡಿಪಿ ಚಿಹ್ನೆ ಮತ್ತು ಇನ್ನೊಂದು ಚಿತ್ರದಲ್ಲಿ ವೈಎಸ್ಆರ್ಸಿ ಪಕ್ಷದ ಚಿಹ್ನೆಯಿರುವ ಚಿತ್ರವನ್ನು ಅಭಿಮಾನಿಗಳು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Edhi bagundho genuine ga cheppandi pic.twitter.com/Ku9I2MbIc3
— 🌊Venky🐯ⱽᵃˢᵗᵘⁿⁿᵃ (@Tarockfreak) April 22, 2024
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಜೂನಿಯರ್ ಎನ್ ಟಿಆರ್ ಚಿತ್ರವನ್ನು ಮಾರ್ಫ್ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಜೂನಿಯರ್ ಎನ್ಟಿಆರ್ ಯಾವುದೇ ಪಕ್ಷಕ್ಕೆ ಬೆಂಬಲಿಸುವಂತಹ ಶರ್ಟ್ ಧರಿಸಿಲ್ಲ.
ನಾವು ಸುದ್ದಿಯಲ್ಲಿ ನಿಜಾಂಶವನ್ನು ತಿಳಿಯಲು ನಾವು ಫೋಟೋವನ್ನು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಏಪ್ರಿಲ್ 21, 2024ರಂದು ಬರೆದಿರುವ ಸಾಕಷ್ಟು ವರದಿಗಳು ಕಂಡುಬಂದಿತು.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ "ಹೃತಿಕ್ ರೋಷನ್ ಜೊತೆ ವಾರ್-2 ಚಿತ್ರೀಕರಣಕ್ಕಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಸಮಯದಲ್ಲಿ ಪಾಪರಾಜಿಗಳು ಈ ಚಿತ್ರವನ್ನು ಕ್ಲಿಕ್ ಮಾಡಿದ್ದಾರೆ" ವಿಡಿಯೋವಿನಲ್ಲಿ ನಟ ಬಿಳಿ ಶರ್ಟ್, ಡೆನಿಮ್ ಜೀನ್ಸ್, ಕಪ್ಪು ಸನ್ಗ್ಲಾಸ್, ಮತ್ತು ಕಪ್ಪು ಸ್ನೀಕರರ್ನ್ನು ಧರಿಸಿದ್ದಾರೆ.
ಇದೇ ಚಿತ್ರವನ್ನು ನ್ಯೂಸ್ 18 ಸಹ ಇದೇ ಚಿತ್ರವನ್ನು ಹಂಚಿಕೊಂಡಿತ್ತು. ಸುದ್ದಿ ಸಂಸ್ಥೆ ANI ಮುಂಬೈ ವಿಮಾನ ನಿಲ್ದಾಣದಲ್ಲಿ ಜೂನಿಯರ್ ಎನ್ಟಿಆರ್ ಬಂದಿಳಿದಾಗ ಚಿತ್ರೀಕರಿಸಿದ ವೀಡಿಯೊವಿಗೆ "Jr NTR flaunts trendy ensemble at Mumbai airport" ಎಂಬ ಶೀರ್ಷಿಕೆಯೊಂದಿಗೆ ಯೂಟ್ಯೂಬ್ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ವೈರಲ್ ಆದ ಚಿತ್ರದಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಚಿತ್ರದಲ್ಲಿ ಎನ್ಟಿಆರ್ ಟಿಡಿಪಿ ಚಿಹ್ನೆಯಿರುವ ಶರ್ಟ್ ಧರಿಸಿಲ್ಲ. ಚಿತ್ರವನ್ನು ಮಾರ್ಫ್ ಮಾಡಲಾಗಿದೆ.