ಫ್ಯಾಕ್ಟ್ಚೆಕ್: ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್ ಆಪಲ್ ಏರ್ಪಾಡ್ಗಳ ಉತ್ಪಾದನಾ ಘಟಕವನ್ನು ಬೆಂಗಳೂರಿಗೆ ಸ್ಥಳಾಂತರಿಸಲು ಫ್ಯಾಕ್ಸ್ಕಾನ್ ಸಂಸ್ಥೆಗೆ ಪತ್ರವನ್ನು ಬರೆದಿಲ್ಲ.
ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್ ಆಪಲ್ ಏರ್ಪಾಡ್ಗಳ ಉತ್ಪಾದನಾ ಘಟಕವನ್ನು ಬೆಂಗಳೂರಿಗೆ ಸ್ಥಳಾಂತರಿಸಲು ಫ್ಯಾಕ್ಸ್ಕಾನ್ ಸಂಸ್ಥೆಗೆ ಪತ್ರವನ್ನು ಬರೆದಿಲ್ಲ.
Claim :
ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಪಲ್ ಏರ್ಪಾಡ್ ಉತ್ಪಾದನಾ ಘಟಕವನ್ನು ಹೈದರಾಬಾದ್ನಿಂದ ಬೆಂಗಳೂರಿಗೆ ಸ್ಥಳಾಂತರಿಸುವಂತೆ ಫಾಕ್ಸ್ಕಾನ್ ಗ್ರೂಪ್ಗೆ ಪತ್ರ ಬರೆದಿದ್ದಾರೆ.Fact :
ಡಿಕೆ ಶಿವಕುಮಾರ್ ಫಾಕ್ಸ್ಕಾನ್ ಗ್ರೂಪ್ಗೆ ಯಾವುದೇ ಪತ್ರ ಬರೆದಿಲ್ಲ.
ಐಫೋನ್ ತಯಾರಕರು ವೈರ್ಲೆಸ್ ಇಯರ್ಬಡ್ಸ್-ಏರ್ ಪಾಡ್ಗಳನ್ನು ಹೈದರಾಬಾದ್ನಲ್ಲಿರುವ ಫ್ಯಾಕ್ಸ್ಕಾನ್ ಕಂಪನಿಯಲ್ಲಿ ತಯಾರಿಸಲು ಸಜ್ಜಾಗಿದೆ. 2024ರ ವೇಳೆಗೆ ಬೃಹತ್ ಉತ್ಪಾದನೆಯನ್ನು ಪ್ರಾರಂಭಿಸುವ ನಿರೀಕ್ಷೆಯಲ್ಲೂ ಸಹ ಇದೆ.
Han Hai Precision Industry (Foxconn Technology Group) ಅಧ್ಯಕ್ಷರಾದ ಯಂಗ್ ಲುರನ್ನು ಉದ್ದೇಶಿಸಿ ಹೇಳಿರುವಂತಹ ಎರಡು ಪುಟಗಳ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ಪತ್ರದಲ್ಲಿ "ನಮ್ಮ ಸರ್ಕಾರದ ಪರವಾಗಿ ಕೋರುವುದೇನೆಂದರೆ, ನಿಮ್ಮ Apple AirPods ಕಂಪನಿಯನ್ನು ಬೆಂಗಳೂರಿಗೆ ಸ್ಥಳಾಂತರಿಸಿ, ಇದರಿಂದ ಅನೇಕ ಪ್ರಯೋಜನೆಗಳಿವೆ. ಸಿಲಿಕಾನ್ ಸಿಟಿಯಾದ ಬೆಂಗಳೂರು ಈಗಾಗಲೇ ಸಾಕಷ್ಟು ಅಭಿವೃದ್ದಿಯಾಗಿದೆ. ಇದರಿಂದ ನಿಮ್ಮ ಕಂಪನಿಗೂ ಸಾಕಷ್ಟು ಉಪಯೋಗಗಳು ಆಗುತ್ತವೆ. ಅಷ್ಟೇ ಅಲ್ಲ ಬೆಂಗಳೂರಿಗೆ ಸ್ಥಳಾಂತರಿಸಿದರೆ ಅಂತರಾಷ್ಟ್ರೀಯ ಮನ್ನಣೆಯೂ ಸಿಗುತ್ತದೆ" ಎಂದು ಬರೆದಿರುವ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೈದರಾಬಾದ್ನಲ್ಲಿರುವ ಸಾಕಷ್ಟು ಅಂತರರಾಷ್ಟ್ರೀಯ ಕಂಪನಿಗಳು ಬೆಂಗಳೂರಿಗೆ ಸ್ಥಳಾಂತರಿಸಲು ಆಸಕ್ತಿ ತೋರಿಸುತ್ತಿವೆ. ನಿಮ್ಮ ಕಂಪನಿಯೂ ಸಹ ಬೆಂಗಳೂರಿಗೆ ಸ್ಥಳಾಂತರಿಸಿದರೆ ನಿಮಗೆ ಇಲ್ಲಿ ಯಾವುದೇ ಅಡ್ಡಿಯಾಗುವುದಿಲ್ಲವೆಂದು ಭರವಸೆ ನೀಡುತ್ತೇನೆ.ಎಂದು ಪತ್ರದಲ್ಲಿ ತಿಳಿಸಲಾಗಿದೆ.
ತೆಲಂಗಾಣದ ಮಾಹಿತಿ ಮತ್ತು ತಂತ್ರಜ್ಞಾನ ಮತ್ತು ಕೈಗಾರಿಕಾ ಸಚಿವ ಕೆಟಿ ರಾಮರಾವ್ ಹೈದರಾಬಾದ್ನಲ್ಲಿರುವ ಆಪಲ್ ಏರ್ಪಾಡ್ಸ್ ಸಂಸ್ಥೆಯಾದ ಫಾಕ್ಸ್ಕಾನ್ ಸಂಸ್ಥೆಯನ್ನು ಸ್ಥಳಾಂತರಗೊಳಿಸಲು ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪತ್ರ ಬರೆದಿದ್ದಾರೆ ಎಂದು ಕೆಟಿಆರ್ ಆರೋಪಿಸಿದ್ದಾರೆ.
ಈ ಹೇಳಿಕೆ ನೀಡಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗುತ್ತಿದೆ.
ಸುರುಕುಂತಿ ಶ್ರೀನಿವಾಸ್ ಎನ್ನುವ X ಬಳಕೆದಾರ ತನ್ನ ಖಾತೆಯಲ್ಲಿ “Wake up #Telangana! Conspiracy webbed by DK to relocate global companies from #Hyderabad to #Bangalore Karnataka Congress leader DK Shivakumar has written a letter to the CEO of the company to move Foxconn, the company that manufactures Apple Airpods, from Hyderabad to Bangalore. This would further intensify if Congress is voted to power in Telangana. All the companies that come to Hyderabad will be diverted to Bangalore.” ಎಂಬ ಶೀರ್ಷಿಕೆಯನ್ನು ನೀಡಿ ಪೋಸ್ಟ್ ಮಾಡಿದ್ದರು. ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆಶಿ ತೆಲಂಗಾಣ ಪ್ರಜೆಗಳನ್ನು ಮೋಸ ಮಾಡುತ್ತಿದ್ದಾರೆ ಎಂಬ ಶೀರ್ಷಿಕೆಯನ್ನು ನೀಡಿ ಪೋಸ್ಟ್ ಮಾಡಿದ್ದರು.
ಫ್ಯಾಕ್ಟ್ ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಫಾಕ್ಸ್ಕಾನ್ಗೆ ಪತ್ರ ಬರೆದಿಲ್ಲ. ಆಪಲ್ ಏರ್ಪಾಡ್ ಉತ್ಪಾದನಾ ಘಟಕವನ್ನು ಹೈದರಾಬಾದ್ನಿಂದ ಬೆಂಗಳೂರಿಗೆ ಸ್ಥಳಾಂತರಿಸಲು ಫಾಕ್ಸ್ಕಾನ್ ಗ್ರೂಪ್ಗೆ ಪತ್ರ ಬರೆದಿದ್ದೇನೆ ಎಂಬ ನಕಲಿ ಪತ್ರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಬಗ್ಗೆ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ತಮ್ಮ X ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ನಕಲಿ ಪತ್ರವನ್ನು ಮಾಡಿದವರ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಿದ್ದಾನೆ ಎಂದು ಪೋಸ್ಟ್ನಲ್ಲಿ ಬರೆದಿದ್ದಾರೆ.
thenewsminute.com ಪ್ರಕಾರ, ನವಂಬರ್ 4ರಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಫ್ಯಾಕ್ಸ್ಕಾನ್ ಕಂಪನಿಯನ್ನು ಹೈದರಾಬಾದ್ನಿಂದ ಬೆಂಗಳೂರಿಗೆ ವರ್ಗಾವಣೆ ಕೋರಿ ಪತ್ರ ಬರೆದಿದ್ದಾರೆ ಎಂಬ ನಕಲಿ ಸಂದೇಶ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಏರ್ಪಾಡ್ಗಳ ತಯಾರಿಕಾ ಘಟಕವನ್ನು ಹೈದರಾಬಾದ್ನಿಂದ ಬೆಂಗಳೂರಿಗೆ ಸ್ಥಳಾಂತರಿಸುವಂತೆ ಕರ್ನಾಟಕದ ಉಪಮುಖ್ಯಮಂತ್ರಿ ಫಾಕ್ಸ್ಕಾನ್ ಇಂಡಸ್ಟ್ರೀಸ್ಗೆ ಪತ್ರವನ್ನು ಬರೆದಿಲ್ಲ. ಹರಿದಾಡುತ್ತಿರುವ ಪತ್ರ ನಕಲಿ