ಫ್ಯಾಕ್ಟ್ಚೆಕ್: ಪೊಲೀಸ್ಗೆ ಕಪಾಳಕ್ಕೆ ಹೊಡದ ವ್ಯಕ್ತಿ ತಮಿಳುನಾಡಿನ ಪ್ರಜೆ, ಆಂಧ್ರಪ್ರದೇಶಕ್ಕೆ ಸೇರಿದವರಲ್ಲ.
ಪೊಲೀಸ್ಗೆ ಕಪಾಳಕ್ಕೆ ಹೊಡದ ವ್ಯಕ್ತಿ ತಮಿಳುನಾಡಿನ ಪ್ರಜೆ, ಆಂಧ್ರಪ್ರದೇಶಕ್ಕೆ ಸೇರಿದವರಲ್ಲ.
Claim :
ಆಂಧ್ರಪ್ರದೇಶದ ವ್ಯಕ್ತಿಯೊಬ್ಬ ಪೊಲೀಸ್ಗೆ ಕಪಾಳ ಮೋಕ್ಷ ಮಾಡಿದ್ದಾರೆ.Fact :
ವೈರಲ್ ಆದ ಘಟನೆ 2017ರಲ್ಲಿ ಚೆನ್ನೈನಲ್ಲಿ ನಡೆದದ್ದು. ವೈರಲ್ ವಿಡಿಯೋಗೂ ಆಂಧ್ರಪ್ರದೇಶಕ್ಕೂ ಯಾವುದೇ ಸಂಬಂಧವಿಲ್ಲ.
ಮತದಾನದ ದಿನ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ. ಈ ನಡುವೆ ಆಂಧ್ರಪ್ರದೇಶದ ವಿವಿಧ ಪಕ್ಷಗಳ ಮುಖಂಡರು ಮತದಾರರನ್ನು ಓಲೈಸಲು ಮತ್ತು ಅವರ ಮತಗಳಿಂದ ಪಡೆಯಲು ತಮಗಾದಷ್ಟು ಪ್ರಯತ್ನವನ್ನು ಮಾಡುತ್ತಿದ್ದಾರೆ. ಪ್ರಚಾರದ ವೇಳೆ ಪಕ್ಷಗಳ ನಾಯಕರು ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವುದು, ರಸ್ತೆ ಬದಿಯ ಕ್ಯಾಂಟೀನ್ಗಳಲ್ಲಿ ದೋಸೆ ತಯಾರಿಸುವುದು, ವೃದ್ಧರಿಗೆ ಊಟ ಹಾಕುವುದು ಹೀಗೆ ಹಲವಾರು ಸಹಾಯ ಕಾರ್ಯಗಳನನ್ನು ಮಾಡಿ ಜನರಿಗೆ ನೆರವಾಗುವೆವು ಎಂಬ ನಂಬಿಕೆಯನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಇನ್ನೊಂದು ಕಡೆ ವಿರೋಧಿ ಪಕ್ಷಗಳು ಅವಕಾಶವಾದಿ ರಾಜಕಾರಣಕ್ಕಾಗಿ ಪ್ರತಿಸ್ಪರ್ಧಿಗಳನ್ನು ದೂಷಿಸುವುದನ್ನು ನಾವು ನೋಡಬಹುದು. ಬ್ಲೇಮ್ ಗೇಮ್ನ ಭಾಗವಾಗಿ, ಹಳೆಯ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲಾಗುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಕೆಲವು ಫೋಟೋಗಳನ್ನು ಮಾರ್ಫ್ ಮಾಡಿ ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಇಂತಹ ಸಾಮಾಜಿಕ ಮಾದ್ಯಮದಲ್ಲಿ ವೈರಲ್ ಆದ ವಿಡಿಯೋವಿನಲ್ಲಿ, ಒಬ್ಬ ವ್ಯಕ್ತಿ ಹಾಡ ಹಗಲೇ ಪೊಲೀಸರೊಬ್ಬರಿಗೆ ಕಪಾಳ ಮೋಕ್ಷ ಮಾಡಿದ ವಿಡಿಯೋ ವೈರಲ್ ಆಗಿದೆ. ಆ ವಿಡಿಯೋಗೆ ಶೀರ್ಷಿಕೆಯಾಗಿ ಆಂಧ್ರಪ್ರದೇಶದಲ್ಲಿ ನಡೆದ ಘಟನೆಯಿದು ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದರು.
ಅಂತಹ ಒಂದು ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಹಗಲು ನಡುರಸ್ತೆಯಲ್ಲಿ ಪೊಲೀಸರಿಗೆ ಕಪಾಳಮೋಕ್ಷ ಮಾಡುತ್ತಿರುವುದನ್ನು ತೋರಿಸಲಾಗಿದ್ದು, ಈ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ ಎಂಬ “పట్టపగలు నడిరోడ్డు మీద ఒక పోలీస్ అధికారి మీద ఇలా చెయ్య చేసుకుంటున్నాడు అంటే చాలా దౌర్భాగ్యమైన పరిస్థితిలో ఉంది ఆంధ్రప్రదేశ్... మేలుకో ఆంధ్రుడా నీ అమూల్యమైన ఓటు ని టీడీపీ జనసేన కూటమికి వేసి ఆంధ్రరాష్ట్రాన్ని పరిరక్షించు...”ಎಂದು ತೆಲುಗಿನಲ್ಲಿ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಕನ್ನಡಕ್ಕೆ ಅನುವಾದಿಸಿದಾಗ “ಆಂಧ್ರಪ್ರದೇಶದಲ್ಲಿ ಹಾಡು ಹಗಲೇ ಪೋಲೀಸ್ ಅಧಿಕಾರಿಯೊಬ್ಬರಿಗೆ ವ್ಯಕ್ತಿಯೊಬ್ಬ ಕಪಾಳಮೋಕ್ಷ ಮಾಡಿದಂತಹ ಘಟನೆ ನಡೆದಿದೆ. ಆಂಧ್ರ ಪ್ರದೇಶದ ಜನರೇ ಎದ್ದೇಳಿ ಮತ್ತು ಟಿಡಿಪಿ ಜನಸೇನಾ ಮೈತ್ರಿಕೂಟಕ್ಕೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ಮತ್ತು ರಾಜ್ಯವನ್ನು ಉಳಿಸಿ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ನೋಡಬಹುದು.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ವಿಡಿಯೋವಿನಲ್ಲಿ ಪೊಲೀಸರಿಗೆ ಕಪಾಳಮೋಕ್ಷ ಮಾಡಿದ ವ್ಯಕ್ತಿ ತಮಿಳುನಾಡಿನ ಚೆನ್ನೈನವರು. ಆಂಧ್ರ ಪ್ರದೇಶದ ವ್ಯಕ್ತಿಯಲ್ಲ.
ವೈರಲ್ ವಿಡಿಯೋವಿನಲ್ಲಿರುವ ಸತ್ಯಾಂಶವನ್ನು ತಿಳಿಯಲು ನಾವು ವೀಡಿಯೊವಿನಲ್ಲಿರುವ ಕೆಲವು ಕೀಫ್ರೇಮ್ಗಳನ್ನು ಬಳಸಿ ಗೂಗಲ್ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಹುಡುಕಾಟದಲ್ಲಿ ನಮಗೆ ಮೂಲ ವಿಡಿಯೋ 2017ರಲ್ಲಿ ಚಿತ್ರೀಕರಿಸಿದ್ದು ಎಂದು ನಮಗೆ ತಿಳಿದು ಬಂದಿತು.
ಡಿಸೆಂಬರ್ 25, 2017 ರಂದು ಮಿರರ್ ನೌನ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ವೈರಲ್ ವೀಡಿಯೊವನ್ನು ನೋಡಬಹುದು.ವಿಡಿಯೋಗೆ ಕ್ಯಾಪ್ಷನಾಗಿ" ಚೆನ್ನೈ: ಮೋಟರ್ ಬೈಕ್ನಲ್ಲಿ ಸವಾರಿ ಮಾಡುತ್ತಿದ್ದ ಮೂವರು ವಿದ್ಯಾರ್ಥಿಗಳನ್ನು ಹಿಡಿದಿದ್ದಕ್ಕೆ ಕಪಾಳಮೋಕ್ಷ ಮಾಡಿದ ವಿದ್ಯಾರ್ಥಿಗಳು" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ "ಬೈಕ್ನಲ್ಲಿ ಟಿಪಲ್ ರೈಡಿಂಗ್ನಲ್ಲಿ ಹೋಗುತ್ತಿದ್ದ ಮೂವರು ವಿದ್ಯಾರ್ಥಿಗಳನ್ನು ತಡೆದ ಪೊಲೀಸರ ಮತ್ತು ರೈಡರ್ಗಳ ವಾಗ್ವಾದದ ಸಮಯದಲ್ಲಿ, 21 ವರ್ಷದ ವಿದ್ಯಾರ್ಥಿಯು ಪೊಲೀಸರಿಗೆ ಕಪಾಳಮೋಕ್ಷ ಮಾಡಿದ್ದಾನೆ" ಎಂದು ವರದಿಯಾಗಿದೆ.
ಇದೇ ವೀಡಿಯೊವನ್ನು ಒನ್ಇಂಡಿಯಾ.ಕಾಂನ ಯೂಟ್ಯೂಬ್ ಚಾನೆಲ್ನಲ್ಲೂ ನೋಡಬಹುದು. ಕಾಲೇಜು ವಿದ್ಯಾರ್ಥಿಯೊಬ್ಬ ಪೊಲೀಸರಿಗೆ ಕಪಾಳಮೋಕ್ಷ ಮಾಡಿದ ಆಘಾತಕಾರಿ ಘಟನೆ ಚೆನ್ನೈನಲ್ಲಿ ನಡೆದಿದೆ. ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ ವಿದ್ಯಾರ್ಥಿಯರನ್ನು ಹಿಡಿದ ಪೊಲೀಸರ ಮೇಲೆ ಹಲ್ಲೆ ಮಾಡಿದ ದೃಶ್ಯವನ್ನು ವಿಡಿಯೋವಿನಲ್ಲಿ ನೋಡಬಹುದು. ವಿದ್ಯಾರ್ಥಿಗಳನ್ನು ತಡೆದ ಪೊಲೀಸರ ಮತ್ತು ರೈಡರ್ಗಳ ವಾಗ್ವಾದದ ಸಮಯದಲ್ಲಿ ಟ್ರಾಫಿಕ್ ನಿರ್ವಹಿಸುತ್ತಿದ್ದ ಕಾನ್ಸ್ಟೇಬಲ್ ಮಗೇಶ್ವರನ್ ಮೇಲೆ ಕೋಪಗೊಂಡ ಪಿಲಿಯನ್ ರೈಡರ್ಗಳಲ್ಲಿ ಒಬ್ಬನಾದ ಮಣಿಕಂದನ್ ಪೊಲೀಸರೊಂದಿಗೆ ವಾಗ್ವಾದದ ಸಮಯದಲ್ಲಿ ಕಪಾಳಕ್ಕೆ ಹೊಡೆದದನ್ನು ವಿಡಿಯೋವಿನಲ್ಲಿ ನೋಡಬಹುದು.
ಹೀಗಾಗಿ ವೈರಲ್ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸಾಭೀತಾಗಿದೆ. ವೈರಲ್ ವಿಡಿಯೋ ಇತ್ತೀಚಿನದಲ್ಲ ౨౦౧౭ರದ್ದು ಅಷ್ಟೇ ಅಲ್ಲ ವಿಡಿಯೋದಲ್ಲಿ ಪೊಲೀಸರಿಗೆ ಹೊಡೆಯುತ್ತಿರುವ ವ್ಯಕ್ತಿ ಆಂಧ್ರಪ್ರದೇಶದವನಲ್ಲ ಆತ ತಮಿಳುನಾಡಿನ ಚೆನ್ನೈಗೆ ಸೇರಿದವರು.