ಫ್ಯಾಕ್ಟ್ಚೆಕ್: ಭಾರತದ ಅಧ್ಯಕ್ಷ್ಯೆ ದ್ರೌಪದಿ ಮುರ್ಮುವಿನ ಚರ್ಮ ಬಣ್ಣದ ಬಗ್ಗೆ ಮೋದಿ ಟೀಕಿಸಿದರಾ?
ಭಾರತದ ಅಧ್ಯಕ್ಷ್ಯೆ ದ್ರೌಪದಿ ಮುರ್ಮುವಿನ ಚರ್ಮ ಬಣ್ಣದ ಬಗ್ಗೆ ಮೋದಿ ಟೀಕಿಸಿದರಾ?
Claim :
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಪ್ರಧಾನಿ ಮೋದಿ ಟೀಕಿಸಿದ್ದಾರೆFact :
ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಮುರ್ಮು ಅವರ ಚರ್ಮದ ಬಣ್ಣದ ಬಗ್ಗೆ ಟೀಕಿಸಿಲ್ಲ. ಬದಲಿಗೆ ಜನಾಂಗೀಯ ಹೇಳಿಕೆ ನೀಡಿದ್ದ ಮಾಜಿ ಐಒಸಿ ಸದಸ್ಯ ಸ್ಯಾಮ್ ಪಿತ್ರೋಡಾ ಅವರನ್ನು ಟೀಕಿಸಿದ್ದರು.
2024 ರ ಸಾರ್ವತ್ರಿಕ ಚುನಾವಣೆಗಳಿಗೆ ಸಂಬಂಧಿಸಿದಂತೆ ಹಲವಾರು ಸುಳ್ಳು ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಬಿಜೆಪಿ ನಾಯಕ ನರೇಂದ್ರ ಮೋದಿ ಅವರು ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಚರ್ಮದ ಬಣ್ಣವನ್ನು ಟೀಕಿಸುತ್ತಿದ್ದಾರೆ ಎಂಬ 15 ಸೆಕೆಂಡುಗಳ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ವೈರಲ್ ಆದ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು “murkh modi ko rastropati ko sanman dena gyan nehi hai” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ವಿಡಿಯೋವನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ. ಮೂಲ ವಿಡಿಯೋವಿನಲ್ಲಿ ಮೋದಿ ಮುರ್ಮುರವರ ಚರ್ಮದ ಬಣ್ಣದ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಲಿಲ್ಲ.
ಬದಲಿಗೆ ಜನಾಂಗೀಯ ಹೇಳಿಕೆ ನೀಡಿದ್ದ ಮಾಜಿ ಐಒಸಿ ಸದಸ್ಯ ಸ್ಯಾಮ್ ಪಿತ್ರೋಡಾ ಅವರನ್ನು ಟೀಕಿಸಿದ್ದಾರು.
ಹೆಚ್ಚಿನ ಮಾಹಿತಿ ಕಲೆಹಾಕಲು ನಾವು "“ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಚರ್ಮದ ಬಣ್ಣ ಕುರಿತು ನರೇಂದ್ರ ಮೋದಿ ಹೇಳಿಕೆ” ಎಂಬ ಗೂಗಲ್ನಲ್ಲಿ ಹುಡುಕಿದಾಗ ನಮಗೆ ಮೇ 9, 2024 ರಂದು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ್ದ ಲೇಖನವೊಂದು ಕಾಣಿಸಿತು. “Skin colour stopped Cong from voting for Droupadi Murmu as president: PM” ಎಂಬ ಶೀರ್ಷಿಕೆಯೊಂದಿಗೆ ಟೈಮ್ಸ್ ಆಫ್ ಇಂಡಿಯಾ ಲೇಖನವನ್ನು ಪ್ರಕಟಿಸಿತು.
ಲೇಖನದ ಮೊದಲಿನಲ್ಲಿ “ಬುಧವಾರ ಕರೀಂನಗರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷವನ್ನುನ್ನು ಜಾತಿವಾದಿ ಎಂದು ಆರೋಪಿಸಿದ್ದನ್ನು ಸ್ಪಷ್ಟವಾಗಿ ವಿವರಿಸಲಾಗಿದೆ. ಸ್ಯಾಮ್ ಪಿತ್ರೋಡಾ ಅವರ ಇತ್ತೀಚಿನ ವಾಕ್ಯಗಳನ್ನು ಬಳಸಿಕೊಂಡ ದ್ರೌಪದಿ ಮುರ್ಮು ಅವರು ಕಪ್ಪು ಚರ್ಮದವರಾಗಿರುವುದರಿಂದ ಕಾಂಗ್ರೆಸ್ ಪಕ್ಷ ಅವರಿಗೆ ಅಧ್ಯಕ್ಷೆಯಾಗಿ ಮತ ಹಾಕಲಿಲ್ಲ ಎಂದು ಹೇಳಿದ್ದಾರೆ.
ಲೇಖನದ ಕೊನೆಯಲ್ಲಿ, “ಇತ್ತೀಚೆಗೆ ದಿ ಸ್ಟೇಟ್ಸ್ಮನ್ಗೆ ಸಂದರ್ಶನ ನೀಡುವಾಗ ಪಿತ್ರೋಡಾ ಭಾರತದಲ್ಲಿನ ಜನರ ವೈವಿಧ್ಯತೆಯ ಬಗ್ಗೆ ಮಾತನಾಡಿದ್ದರು ಮತ್ತು ಹೇಳಿದರು, ಪೂರ್ವದಲ್ಲಿರುವ ಜನರು ಚೀನಿಯರಂತೆ ಕಾಣುತ್ತಾರೆ, ಪಶ್ಚಿಮದಲ್ಲಿ ಜನರು ಅರಬ್ಬರಂತೆ ಕಾಣುತ್ತಾರೆ, ಉತ್ತರದ ಜನರು ಬಹುಶಃ ಬಿಳಿ ಮತ್ತು ದಕ್ಷಿಣದ ಜನರು ಆಫ್ರಿಕಾದಂತೆ ಕಾಣುತ್ತಾರೆ." ಎಂದು ವರದಿ ಮಾಡಿತ್ತು.
TOI ಲೇಖನದಲ್ಲಿ “BJP supporters during PM Narendra Modi's meeting in Warangal.” ಎಂಬ ಶೀರ್ಷಿಕೆಯೊಂದಿಗೆ ಫೋಟೋವನ್ನು ಪ್ರಕಟಿಸಲಾಗಿದೆ.
ನಾವು ವಾರಂಗಲ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಎಂಬ ಕೀವರ್ಡ್ನ ಮೂಲಕ ಹುಡುಕಿದಾಗ ನಮಗೆ ನರೇಂದ್ರ ಮೋದಿ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಲೈವ್ ಸ್ಟ್ರೀಮ್ವೊಂದು ಕಂಡುಬಂದಿತು.
ಮೂಲ ವಿಡಿಯೋವಿನಲ್ಲಿರು 43.56 ಟೈಮ್ ಸ್ಟ್ಯಾಂಪ್ನಲ್ಲಿ “why Congress didn't vote for President Murmu? ಎಂದು ಹೇಳುವುದನ್ನು ನಾವು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ “ಕಾಂಗ್ರೆಸ್ ಅಧ್ಯಕ್ಷ ಮುರ್ಮುಗೆ ಏಕೆ ಮತ ಹಾಕಲಿಲ್ಲ?” ಎಂಬ ಮೋದಿಯ ಹೇಳಿಕೆಯನ್ನು ನಾವು ಕಂಡುಕೊಂಡೆವು.
ವಿಡಿಯೋವಿನಲ್ಲಿ ಮೋದಿ ಸ್ಯಾಮ್ ಪಿತ್ರೋಡಾ ನೀಡಿದ ಚರ್ಮದ ಬಣ್ಣದ ಹೇಳಿಕೆಯನ್ನು ಮೋದಿ ಟೀಕಿಸಿದ್ದರು.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಮೂಲ ಭಾಷಣವನ್ನು ನಾವು 45.06 ಸಮಯದ ಸ್ಟ್ಯಾಂಪ್ನಲ್ಲಿರುವುದನ್ನು ನಾವು ಕಂಡುಕೊಂಡಿದ್ದೇವೆ.
ಹುಡುಕಾಟದ ವೇಳೆ ನಮಗೆ ಬಿಜೆಪಿಯ ಪತ್ರಿಕಾ ಪ್ರಕಟಣೆಯೊಂದು ಕಾಣಿಸಿತು.
ದಿ ಸೌತ್ ಫಸ್ಟ್ ಪ್ರಕಟಿಸಿದ ಲೇಖನದ ಪ್ರಕಾರ, “PM Modi’s bizarre claim: Congress opposed Droupadi Murmu as President because of her skin colour” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು.
ಹೀಗಾಗಿ,ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲವೆಂದು ಸಾಭೀತಾಗಿದೆ. ವೈರಲ್ ವಿಡಿಯೋವನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ. ಮೂಲ ವಿಡಿಯೋವಿನಲ್ಲಿ ಮೋದಿ ಮುರ್ಮುರವರ ಚರ್ಮದ ಬಣ್ಣದ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಲಿಲ್ಲ. ಬದಲಿಗೆ ಜನಾಂಗೀಯ ಹೇಳಿಕೆ ನೀಡಿದ್ದ ಮಾಜಿ ಐಒಸಿ ಸದಸ್ಯ ಸ್ಯಾಮ್ ಪಿತ್ರೋಡಾ ಅವರನ್ನು ಟೀಕಿಸಿದ್ದಾರು.