ಫ್ಯಾಕ್ಟ್ಚೆಕ್: ಧೀರೇಂದ್ರ ಶಾಸ್ತ್ರಿ ಪಾದಯಾತ್ರೆಯಲ್ಲಿ ಮುಸ್ಲಿಮರು ಔರಂಗಾಜೇಬ್ನ ಪೋಟೋವನ್ನು ಪ್ರದರ್ಶಿಸಿಲ್ಲ
ಧೀರೇಂದ್ರ ಶಾಸ್ತ್ರಿ ಪಾದಯಾತ್ರೆಯಲ್ಲಿ ಮುಸ್ಲಿಮರು ಔರಂಗಾಜೇಬ್ನ ಪೋಟೋವನ್ನು ಪ್ರದರ್ಶಿಸಿಲ್ಲ
Claim :
ಧೀರೇಂದ್ರ ಶಾಸ್ತ್ರಿ ಪಾದಯಾತ್ರೆಯಲ್ಲಿ ಮುಸ್ಲಿಮರು ಔರಂಗಾಜೇಬ್ನ ಪೋಟೋಗಳನ್ನು ಹಿಡಿದಿದ್ದಾರೆFact :
ವೈರಲ್ ವಿಡಿಯೋ 2024ರ ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ನಡೆದ ಚುನಾವಣಾ ರ್ಯಾಲಿಯದ್ದು
ಉತ್ತರಾಖಾಂಡದ ಬಾಗೇಶ್ವರ ಧಾಮದ ಪೀಠಾದೀಶ್ವರಾದ ಧೀರೇಂದ್ರ ಶಾಸ್ತ್ರಿ ಅವರು ಒಂಬತ್ತು ದಿನಗಳು ಬಾಗೇಶ್ವರ ಧಾಮದಿಂದ 160 ಕಿ.ಮೀ. ಪಾದಯಾತ್ರೆಯನ್ನು ನಡೆಸಿ ಮುಕ್ತಾಯಗೊಳಿಸಿದ್ದಾರೆ. ಹಿಂದೂಗಳಲ್ಲಿ ಐಕ್ಯತೆಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಈ ಜಾಗೃತಿ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ನವಂಬರ್ 21ರಂದು ಬಾಗೇಶ್ವರ ಧಾಮದಿಂದ ಶುರುವಾದ ಈ ಯಾತ್ರೆಯು ನವಂಬರ್ 29ರಂದು ಮಧ್ಯಪ್ರದೇಶದ ಓಜಾದಲ್ಲಿ ಮುಕ್ತಾಯಗೊಂಡಿತು. ಈ ಯಾತ್ರೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಮಾಧ್ಯದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ವೈರಲ್ ಆದ ವಿಡಿಯೋದಲ್ಲಿ ʼಬಾಗೇಶ್ವರ ಧಾಮದ ಧೀರೇಂದ್ರ ಶಾಸ್ತ್ರಿಯವರ ಪಾದಯಾತ್ರೆಯಲ್ಲಿ ಹೆದ್ದಾರಿಯ ಕೆಲವರು ಫ್ಲೈಓವರ್ ಮೇಲೆ ನಿಂತಿರುವುದನ್ನು ನಾವು ನೋಡಬಹುದು. ಇನ್ನೊಂದು ಬದಿಯಲ್ಲಿದ್ದ ಮುಸ್ಲಿಮರು ಔರಂಗಜೇಬನ ಫೋಟೋಗಳನ್ನು ಹಿಡಿದು ಘೋಷಣೆಗಳನ್ನು ಕೂಗಿತ್ತಿರುವುದನ್ನುನೋಡಬಹುದು. ಈಗಲೇ ಹಿಂದೂಗಳು ಒಂದಾಗದಿದ್ದರೆ ಔರಂಗಜೇಬನ ಈ ಮಕ್ಕಳು ನಿಮಗೆ ಏನು ಮಾಡುತ್ತಾರೆ ಎಂದು ಊಹಿಸಿಕೊಳ್ಳಿ. ಅವರು ನಿಮ್ಮ ಜಾತಿಯನ್ನು ನೋಡಿ ನಿಮ್ಮ ಕುತ್ತಿಗೆಯನ್ನು ಕತ್ತರಿಸುವುದಿಲ್ಲ. ನಿಮ್ಮ ಧರ್ಮವನ್ನು ನೋಡಿ ನಿಮ್ಮ ಕುತ್ತಿಗೆಯನ್ನು ಕತ್ತರಿಸುತ್ತಾರೆ. ಈ ವಿಡಯೋವನ್ನು ಆದಷ್ಟು ಜನರಿಗೆ ಶೇರ್ ಮಾಡಿʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು
ಜಿತೇಂದ್ರ ಪ್ರಸಾದ್ ಸಿಂಗ್ ಎಂಬ ಎಕ್ಸ್ ಖಾತೆದಾರ ತನ್ನ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಿ ʼबागेश्वर बाबा धीरेंद्र शास्त्री जी के पदयात्रा को मुसलमानो ने औरंगजेब की फोटो दिखाकर नारे लगाए औरंगजेब तेरा बाप औरंगजेब तेरा बाप| हिंदुओं ने बड़ी शांति का परिचय दिया |आप खुद वीडियो देखीये कि दंगा करने के लिए कितना उकसाया गया लेकिन हिंदू चुपचाप पदयात्रा में चलते रहे |अगर हिंदू जवाब देते तो फिर वह पूरी गैंग विक्टिम कार्ड प्ले करती की धीरेंद्र शास्त्री की पदयात्रा में मुसलमानो पर हमला किया गया" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ, ʼಬಾಗೇಶ್ವರದಲ್ಲಿ ಬಾಬಾ ಧೀರೇಂದ್ರ ಶಾಸ್ತ್ರಿ ಪಾದಯಾತ್ರೆಯ ಸಮಯದಲ್ಲಿ, ಮುಸ್ಲಿಮರು ಔರಂಗಜೇಬ್ ಅವರ ಫೋಟೋಗಳನ್ನು ಹಿಡಿದು “ಔರಂಗಜೇಬ್ ತೇರಾ ಬಾಪ್, ಔರಂಗಜೇಬ್ ತೇರಾ ಬಾಪ್” ಎಂಬ ಘೋಷಣೆಗಳನ್ನು ಕೋಗಿದರು. ಅಶಾಂತಿಯನ್ನು ಉಂಟುಮಾಡಲು ಎಷ್ಟು ಪ್ರಚೋದನೆಯನ್ನು ಕೊಟ್ಟರೂ, ಹಿಂದೂಗಳು ಬಹಳ ಸಂಯಮವನ್ನು ಪ್ರದರ್ಶಿಸಿದರು ಎಂಬುದನ್ನು ನೀವೇ ವೀಡಿಯೊದಲ್ಲಿ ನೋಡಬಹುದು, ಹಿಂದೂಗಳು ಪ್ರತಿಕ್ರಿಯಿಸಿದ್ದರೆ, ಧೀರೇಂದ್ರ ಶಾಸ್ತ್ರಿ ಮೆರವಣಿಗೆಯಲ್ಲಿ ಮುಸ್ಲಿಮರ ಮೇಲೆ ದಾಳಿ ನಡೆಸಲಾಗಿದೆ ಎಂದು ಆರೋಪಿಸಿ ಎದುರಾಳಿ ಗುಂಪು ಬಲಿಪಶು ಕಾರ್ಡ್ ಅನ್ನು ಆಡುತ್ತಿತ್ತು
ವೈರಲ್ ಆದ ವಿಡಿಯೋವನ್ನಿ ನೀವಿಲ್ಲಿ ನೋಡಬಹುದು
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. 2024ರ ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ನಡೆದ ಚುನಾವಣಾ ರ್ಯಾಲಿಯ ವಿಡಿಯೋವನ್ನು ಧೀರೇಂದ್ರ ಶಾಸ್ತ್ರೀಯ ಪಾದಯಾತ್ರೆಗೆ ಸಂಬಂಧೀಸಿದ್ದು ಎಂದು ತಪ್ಪು ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.
ವೈರಲ್ ಆದ ಸುದ್ದಿಯಲ್ಲಿರುವ ಸತ್ಯಾಂಶವನ್ನು ತಿಳಿಯಲು ನಾವು ವೈರಲ್ ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಉಪಯೋಗಿಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ನಡೆಸಿದೆವು. ಹುಡುಕಾಟದಲ್ಲಿ ನಮಗೆ, 18 ನವೆಂಬರ್ 2024ರಂದು ʼಜಾವೀದ್ ಖುರೇಷಿʼಯ ಫೇಸ್ಬುಕ್ ಖಾತೆಯಲ್ಲಿ ʼऔरंगाबाद मध्य वंचित के उमीदवार जावीद कुरेशी कि रेली में आमने सामने प्रदीप जायसवाल से भिड़े औरंगजेब (rh) फोटो दिखाकर जिंदाबाद के नारे लगाएʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಔರಂಗಾಬಾದ್ ಸೆಂಟ್ರಲ್ ವಂಚಿತ್ ಅಭ್ಯರ್ಥಿ ಜಾವೇದ್ ಖುರೇಷಿ ಮತ್ತು ಇತರ ಅಭ್ಯರ್ಥಿ ಪ್ರದೀಪ್ ಜೈಸ್ವಾಲ್ರ ಬೆಂಬಲಿಗರು ಮುಖಾಮುಖಾಯಾಗಿದ್ದಾರೆʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ನಾವು ವೈರಲ್ ಆದ ವಿಡಿಯೋವನ್ನು ಸೂಕ್ಷವಾಗಿ ಗಮನಿಸಿದೆವು. ವಿಡಿಯೋದಲ್ಲಿ ವೋಟ್ ಫಾರ್ ಜಾವೇದ್ ಖುರೇಷಿ ಎಂಬುದು ಮತ್ತು ಔರಂಗಾಬಾದ್ ಎಂಬ ಪೊಸ್ಟರ್ನ್ನು ನಾವು ನೋಡಬಹುದು. ಪೋಸ್ಟರ್ನಲ್ಲಿ ಚುನಾವಣಾ ಚಿಹ್ನೆಯಾದ ಗ್ಯಾಸ್ ಸಿಲಿಂಡರ್ನ್ನು ನೋಡಬಹುದು. ಕೆಲವರು ಟಿಪ್ಪು ಸುಲ್ತಾನ್ ಮತ್ತು ಔರಂಗಜೇಬ್ ಅವರ ಚಿತ್ರಗಳೊಂದಿಗೆ ಘೋಷಣೆಗಳನ್ನು ಕೂಗುತ್ತಿರುವುದನ್ನು ನೋಡಬಹುದು. ಕೆಲವರು 'ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ' ಎಂದು ಘೋಷಣೆಗಳನ್ನು ಕೂಗಿದರು. ಇನ್ನು ಕೆಲವರು, ಕೆಲವರು 'ಜಾವೇದ್ ಖುರೇಷಿಗೆ ಮತ ನೀಡಿ' ಎಂಬ ಫಲಕಗಳನ್ನು ಹಿಡಿದುಕೊಂಡಿರುವುದು ಕಾಣಬಹುದು. ರಸ್ತೆಯ ಎಡ ಬದಿಯಲ್ಲಿ ಕೇಸರಿ ಧ್ವಜಗಿರುವ ವಾಹನಗಳನನ್ನು ನೋಡಬಹುದು. ಅದರಲ್ಲಿ ಬಿಜೆಪಿ ಮತ್ತು ಶಿವಸೇನೆಯ ಚುನಾವಣಾ ಚಿನ್ಹೆಯಿದೆ. ಹಾಗೂ ವಿಡಿಯೋದಲ್ಲಿ ಕಾಣುವ ಕಾರಿನ ನಂಬರ್ ಪ್ಲೇಟ್ನಲ್ಲಿ ಮಹಾರಾಷ್ಟ್ರ ಕೋಡ್ MH-20 ಸಂಖ್ಯೆ ಬರೆಯಲಾಗಿದೆ.
ನಾವು ವಿಡಿಯೋಗೆ ಸಂಬಂಧಿಸಿದ ಕೆಲವು ಪ್ರಮುಖ ಕೀವರ್ಡ್ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ನವಂಬರ್ 18, 2024ರಂದು ʼಔರಂಗಾಬಾದ್ ಅಪ್ಡೇಟ್ಸ್ʼ ಎಂಬ ಯೂಟ್ಯೂಬ್ನಲ್ಲಿ ʼऔरंगाबाद मध्य:जावेद कुरैशी के बाइक रैली में कार्यकर्ता औरंगजेब का फोटो लेकर पहुंचे लगाए जिंदाबाद केʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ಕಾಣಬಹುದು.
ವೈರಲ್ ಆದ ವಿಡಿಯೋ ಮತ್ತು ಔರಂಗಾಬಾದ್ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡಿರುವ ವಿಡಿಯೋವಿನಲ್ಲಿರುವ ಸಾಮ್ಯತೆಯನ್ನು ನೀವಿಲ್ಲಿ ನೋಡಬಹುದು.
ನವೆಂಬರ್ 21ರಂದು ಶಾಸ್ತ್ರಿಯವರ ರ್ಯಾಲಿ ಪ್ರಾರಂಭವಾಗಿತ್ತು, ಆದರೆ ವೀಡಿಯೋವನ್ನು ಮೊದಲು ಪೋಸ್ಟ್ ಮಾಡಿದ್ದು ನವೆಂಬರ್ 18ರಂದು. ಅಂದರೆ, ಇದು ಶಾಸ್ತ್ರಿಯವರ ರ್ಯಾಲಿಗಿಂತ ಮೊದಲೇ ಹಂಚಿಕೊಳ್ಳಲಾಗಿದೆ ಎಂದು ಸಾಭೀತಾಗಿದೆ.
ಮತ್ತಷ್ಟು ಹುಡುಕಾಟದ ನಂತರ, ಭಡ್ಕಲ್ ಗೇಟ್ ಔರಂಗಾಬಾದ್ ಸೆಂಟ್ರಲ್ ಅಸೆಂಬ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ತಿಳಿದುಕೊಂಡೆವು. ಈ ಸುಳಿವನ್ನು ಬಳಸಿಕೊಂಡು, ನಾವು ಚುನಾವಣಾ ಆಯೋಗದ ವೆಬ್ಸೈಟ್ನ್ನು ಪರಿಶೀಲಿಸಿದ್ದೇವೆ. ಹುಡುಕಾಟದಲ್ಲಿ ನಮಗೆ ಪ್ರದೀಪ್ ಜಯಸ್ವಾಲ್ ಶಿವನಾರಾಯಣ್ ಸ್ಥಾನವನ್ನು ಗೆದ್ದಿದ್ದಾರೆ ಎಂದು ಖಚಿತವಾಯಿತು, ಔರಂಗಾಬಾದ್ ಸೆಂಟ್ರಲ್ ಕ್ಷೇತ್ರದಲ್ಲಿ ಪ್ರದೀಪ್ ಶಿವನಾರಾಯಣ್ ಅವರು ಒಟ್ಟು 85459 ಮತಗಳನ್ನು ಪಡೆದು ಜಯಗಳಿಸಿರುವುದು ಗಮನಾರ್ಹ. ಆದರೆ ವಂಚಿತ್ ಬಹುಜನ್ ಅಘಾಡಿಯ ಮೊಹಮ್ಮದ್ ಜಾವೇದ್ ಖುರೇಷಿ 12639 ಮತಗಳನ್ನು ಪಡೆದರು. ಚುನಾವಣೆಯಲ್ಲಿ ಸೋತ ಜಾವೇದ್ ಖುರೇಷಿ ನಾಲ್ಕನೇ ಸ್ಥಾನದಲ್ಲಿದ್ದಾರೆ ಎಂದು ತಿಳಿದುಬಂದಿತು.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. 2024ರ ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ನಡೆದ ಚುನಾವಣಾ ರ್ಯಾಲಿಯ ವಿಡಿಯೋವನ್ನು ಧೀರೇಂದ್ರ ಶಾಸ್ತ್ರೀಯ ಪಾದಯಾತ್ರೆಗೆ ಸಂಬಂಧೀಸಿದ್ದು ಎಂದು ತಪ್ಪು ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.