ಫ್ಯಾಕ್ಟ್ಚೆಕ್: ಪೋಲಿಸರು ಜನರನ್ನು ಹೊಡೆಯುತ್ತಿರುವ ದೃಶ್ಯ ಉತ್ತರ ಪ್ರದೇಶದಲ್ಲ ಬದಲಿಗೆ ಮಧ್ಯಪ್ರದೇಶದ್ದು.
ಪೋಲಿಸರು ಜನರನ್ನು ಹೊಡೆಯುತ್ತಿರುವ ದೃಶ್ಯ ಉತ್ತರ ಪ್ರದೇಶದಲ್ಲ ಬದಲಿಗೆ ಮಧ್ಯಪ್ರದೇಶದ್ದು.
Claim :
ನಮಾಜ್ ಮಾಡುತ್ತಿದ್ದ ಜನರನ್ನು ಉತ್ತರ ಪ್ರದೇಶದ ಪೋಲಿಸರು ಥಳಿಸಿದ್ದಾರೆ.Fact :
ವೈರಲ್ ಆದ ವಿಡಿಯೋ 2021ರದ್ದು, ವಿಡಿಯೋ ಚಿತ್ರೀಕರಿಸಿರುವುದು ಉತ್ತರ ಪ್ರದೇಶದಲ್ಲಿ ಅಲ್ಲ ಬದಲಿಗೆ ಮಧ್ಯಪ್ರದೇಶದ ಜಬಲ್ಪುರದ ದೃಶ್ಯಗಳಿವು.
ಪೋಲಿಸರು ಒಂದು ಯುವಕರ ಗುಂಪನ್ನು ಲಾಠಿ ಪ್ರಹಾರದ ಮೂಲಕ ಓಡಿಸುತ್ತಿರುವ ದೃಶ್ಯ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವೈರಲ್ ಆದ ವಿಡಿಯೋದಲ್ಲಿ ಪೋಲಿಸರು ಉತ್ತರ ಪ್ರದೇಶದಲ್ಲಿನ ರಸ್ತೆಗಳಲ್ಲಿ ನಮಾಜ್ ಮಾಡುತ್ತಿದ್ದ ಯುವಕರ ಗುಂಪೊಂದನ್ನು ಹೊಡೆಯುತ್ತಿರುವ ವಿಡಿಯೋ ಇದಾಗಿದೆ. ಮುಖ್ಯಮಂತ್ರಿ ಯೋಗಿನಾಥರ ಆಡಳಿತದಲ್ಲಿ ಪೋಲಿಸರು ರಸ್ತೆಗಳಲ್ಲಿ ನಮಾಜ್ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ ಬಿಜೆಪಿಗೆ ಮತಹಾಕಿ ಎಂದು ಪೋಸ್ಟ್ಗಳನ್ನೂ ಸಹ ಮಾಡುತ್ತಿದ್ದಾರೆ.
ಉತ್ತಿಷ್ಟ ಭಾರತ ಎಂಬ ಫೇಸ್ಬುಕ್ ಖಾತೆದಾರ ತನ್ನ ಖಾತೆಯಲ್ಲಿ ವೈರಲ್ ಆದ ಈ ವಿಡಿಯೋವನ್ನು ಶೇರ್ ಮಾಡಿ ವಿಡಿಯೋಗೆ ಶೀರ್ಷಿಕೆಯಾಗಿ “Such joy to see this. Yogi ji need of the hour to set straight religious fanatics. NEW RULES Vote for BJP!” ಎಂದು ಬರೆದುಕೊಂಡಿದ್ದಾರೆ. ಕನ್ನಡಕ್ಕೆ ಶೀರ್ಷಿಕೆಯನ್ನು ಅನುವಾದಿಸಿದಾಗ "ವಿಡಿಯೋವನ್ನು ನೋಡಲು ತುಂಬಾ ಸಂತೋಷವಾಗುತ್ತಿದೆ. ನೇರವಾಗಿ ಧಾರ್ಮಿಕ ಮತಾಂಧರವನ್ನು ಹೊಂದಿಸೋದಕ್ಕೆ ಯೋಗಿನಾಧರ ಅವಶ್ಯಕತೆಯಿದೆ. ಬಿಜೆಪಿಯಲ್ಲೀಗ ಹೊಸ ನಿಯಮಗಳು ಜಾರಿಯಾಗಲಿವೆ. ಎಂದು ಪೋಸ್ಟ್ ಮಾಡಿದ್ದರು.
ಫ್ಯಾಕ್ಟ್ಚೆಕ್
ವೈರಲ್ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋ 2021ರಲ್ಲಿ ಚಿತ್ರೀಕರಿಸಿದ್ದು ಮತ್ತು ಈ ವಿಡಿಯೋ ಚಿತ್ರೀಕರಿಸಿದ್ದು ಉತ್ತರ ಪ್ರದೇಶದಲ್ಲ ಬದಲಿಗೆ ಮಧ್ಯಪ್ರದೇಶದ ಜಬಲ್ಪುರದ್ದು.
ವಿಡಿಯೋವಿನಲ್ಲಿರುವ ಸತ್ಯಾಂಶವನ್ನು ತಿಳಿಯಲು ನಾವು ಗೂಗಲ್ನ ಮೂಲಕ ಗೂಗಲ್ ರಿವರ್ಸ್ ಸರ್ಚ್ ಮಾಡಿದೆವು. ನಮಗೆ ಫಲಿತಾಂಶವಾಗಿ ಎಂಪಿಟಕ್ ಯೂಟ್ಯೂಬ್ ಚಾನೆಲ್ನಲ್ಲಿ ಅಕ್ಟೋಬರ್ 19,2021ರಂದು ಅಪ್ಲೋಡ್ ಮಾಡಿರಿವ ವಿಡಿಯೋವೊಂದು ಕಂಡುಬಂದಿತು. ವಿಡಿಯೋವಿಗೆ ಶೀರ್ಷಿಕೆಯಾಗಿ "ಜಬಲ್ಪುರದಲ್ಲಿ ಧಾರ್ಮಿಕ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಸಿದದಾರೆ. ದುಷ್ಕರ್ಮಿಗಳಿಗೆ ಪೋಲಿಸರು ಧಳಿಸಿದರು" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿತ್ತು.
ವಿಡಿಯೋಗೆ ವಿವರಣೆಯನ್ನೂ ಸಹ ನೀಡಲಾಗಿತ್ತು. ವಿವರಣೆಯಲ್ಲಿ " ಜಬಲ್ಪುರದಲ್ಲಿ ನಡೆದ ಮೀಲಾದುನ್ನಬಿ ಮೆರವಣಿಗೆ ಸಂಬಂಧಿಸಿದ ವಿಡಿಯೋವಿದು. ಮೆರವಣಿಗೆಯಲ್ಲಿದ್ದ ಕೆಲವು ದುಷ್ಕರ್ಮಿಗಳು ಪೋಲಿಸರ ಮೇಲೆ ಪಟಾಕಿಯನ್ನು ಸಿಡಿಸಿದರು. ನಂತರ ಪೋಲೀಸರು ದುಷ್ಕರ್ಮಿಗಳ ಮೇಲೆ ಲಾಠಿ ಪ್ರಹಾರ ಮಾಡಿದರು. ಗಾಳಿಯಲ್ಲಿ ಬಂದೂಕನ್ನು ಸಿಡಿಸಿ ಅಲ್ಲಿ ನೆರದಿದ್ದ ಜನರನ್ನು ಚದುರಿಸಲಾಯಿತು. ಇದಕ್ಕೂ ಮೊದಲು ರಡ್ಡಿ ಚೌಕ್ ಎನ್ನುವ ಪ್ರದೇಶದಲ್ಲೂ ಸಹ ಇದೇ ರೀತಿಯ ಉದ್ವಿಗ್ನತೆಯನ್ನು ಪುಂಡರು ಸೃಷ್ಟಿಸಿದ್ದರು. ಈ ಗಲಾಟೆಯನ್ನು ನಿಭಾಯಿಸಲು ಬರೋಬಬ್ಬರಿ ಒಂದು ಗಂಟೆ ಸಮಯ ತೆಗೆದು ಕೊಂಡಿದೆ" ಎಂದು ವಿವರಣೆ ನೀಡಿದ್ದರು.
ಎಮ್ಪಿ ತಕ್ ಅಪ್ಲೋಡ್ ಮಾಡಿದ್ದ ವಿಡಿಯೋವಿನಲ್ಲಿರುವ ಕೆಲವು ಸ್ಕ್ರೀನ್ಶಾಟ್ಗಳು ಇಲ್ಲಿವೆ.
ಅಕ್ಟೋಬರ್ 20,2021ರಂದು ಇಂಡಿಯನ್ ಎಕ್ಸ್ಪ್ರೆಸ್ ಪ್ರಕಟಿಸಿದ್ದ ವರದಿಯ ಪ್ರಕಾರ, ಈದ್ ಮಿಲಾದ್-ಉನ್-ನಬಿ ಮೆರವಣಿಗೆಯ ಅಂಗವಾಗಿ ನೆರೆದಿದ್ದ ಜನಸಂದಣಿಯನ್ನು ನಿಯಂತ್ರಿಸಲು ಮಧ್ಯಪ್ರದೇಶದ ಪೋಲಿಸರು ಲಾಠಿ ಪ್ರಹಾರ ಮಾಡಿದರು ಮತ್ತು ಗಾಳಿಯಲ್ಲಿ ಗುಂಡನ್ನು ಸಿಡಿಸಿದರು ಎಂದು ವರದಿ ಮಾಡಿದ್ದಾರೆ. ಅಷ್ಟೇ ಅಲ್ಲ ಕೆಲವು ದುಷ್ಕರ್ಮಿಗಳು ಪೋಲೀಸರ ಮೇಲೆ ಕಲ್ಲು ಎಸೆಯುವುದು ಮತ್ತು ಪಟಾಕಿಯನ್ನು ಸಿಡಿಸುವುದು ಮಾಡಿದ್ದಾರೆ. ಅವರನ್ನು ನಿಯಂತ್ರಿಸಲು ಪೋಲಿಸರು ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ವರದಿಯಾಗಿದೆ.
ಹಾಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ವಿಡಿಯೋ ಸಹ ಇತ್ತೀಚಿನದಲ್ಲ. ವೈರಲ್ ಆದ ವಿಡಿಯೋ 2021ರದ್ದು, ವಿಡಿಯೋ ಚಿತ್ರೀಕರಿಸಿರುವುದು ಉತ್ತರ ಪ್ರದೇಶದಲ್ಲಿ ಅಲ್ಲ ಬದಲಿಗೆ ಮಧ್ಯಪ್ರದೇಶದ ಜಬಲ್ಪುರದ ದೃಶ್ಯಗಳಿವು.