ಫ್ಯಾಕ್ಟ್ ಚೆಕ್: ʻʻನಾವು ರಾಜಕೀಯ ಪಕ್ಷದ ವಿರುದ್ಧ ಹೋರಾಡುತ್ತಿಲ್ಲ, ಭಾರತದ ಸಂಪೂರ್ಣ ಮೂಲ ಸೌಕರ್ಯಗಳ ವಿರುದ್ಧʼʼ ಎಂಬ ರಾಹುಲ್ ಗಾಂಧಿಯವರ ವೈರಲ್ ವಿಡಿಯೋದ ಸತ್ಯಾಂಶವೇನು?
ʻʻನಾವು ರಾಜಕೀಯ ಪಕ್ಷದ ವಿರುದ್ಧ ಹೋರಾಡುತ್ತಿಲ್ಲ, ಭಾರತದ ಸಂಪೂರ್ಣ ಮೂಲ ಸೌಕರ್ಯಗಳ ವಿರುದ್ಧʼʼ ಎಂಬ ರಾಹುಲ್ ಗಾಂಧಿಯವರ ವೈರಲ್ ವಿಡಿಯೋದ ಸತ್ಯಾಂಶವೇನು?
Claim :
"ನಾವು ರಾಜಕೀಯ ಪಕ್ಷದ ವಿರುದ್ಧ ಹೋರಾಡುತ್ತಿಲ್ಲ, ಭಾರತದ ಸಂಪೂರ್ಣ ಮೂಲ ಸೌಕರ್ಯಗಳ ವಿರುದ್ಧ ಹೋರಾಡುತ್ತಿದ್ದೇವೆ" ಎಂಬ ಹೇಳಿಕೆಯನ್ನು ನೀಡಿದ ರಾಹುಲ್ ಗಾಂಧಿFact :
2022 ಆಗಸ್ಟ್ 5ರಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿಯವರು ಮಾತನಾಡಿದ ವಿಡಿಯೋ ತುಣುಕನ್ನು ತಿರುಚಿ, ಸುಳ್ಳು ಪ್ರತಿಪಾದನೆಯೊಂದಿಗೆ ವೈರಲ್ ಮಾಡಲಾಗಿದೆ.
ಶ್ರೀ ರಾಮಸೇನೆ ನವಾಜುದ್ದೀನ್ ಎಂಬ ಫೇಸ್ಬುಕ್ ಖಾತೆದಾರ ರಾಹುಲ್ ಗಾಂಧಿಯವರ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು. ಈ 16ಸೆಂಡ್ನ ವಿಡಿಯೋದಲ್ಲಿ ರಾಹುಲ್ "ನಾವು ಭಾರತ ದೇಶದ ಸಂಪೂರ್ಣ ಮೂಲ ಸೌಕರ್ಯಗಳ ವಿರುದ್ಧ ಹೋರಾಡುತ್ತಿದ್ದೇವೆ" ಎಂಬ ಹೇಳಿಕೆಯನ್ನು ನೀಡಿದ್ದಾರೆ. ಕೊನೆಗೂ ಬಾಯಿಂದ ಸತ್ಯ ಹೊರಬಂದಿದೆ. ರಾಹುಲ್ ಗಾಂಧಿ ʻʻನಾವು ರಾಜಕೀಯ ಪಕ್ಷದ ವಿರುದ್ಧ ಹೋರಾಡುತ್ತಿಲ್ಲ, ಭಾರತದ ಸಂಪೂರ್ಣ ಮೂಲ ಸೌಕರ್ಯಗಳ ವಿರುದ್ಧʼʼ ಎಂದು ಹೇಳಿದ್ದಾರೆ ಎಂದು ವೈರಲ್ ಆಗಿರುವ ವಿಡಿಯೋದ ಅಡಿ ಟಿಪ್ಪಣಿಯಲ್ಲಿ ಬರೆಯಲಾಗಿದೆ.
ಫ್ಯಾಕ್ಟ್ ಚೆಕ್
ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ವಿಡಿಯೋವಿನಲ್ಲಿ ಏನಾದರೂ ಸತ್ಯಾಂಶವಿದೆಯಾ ಎಂದು ತಿಳಿದುಕೊಳ್ಳಲು ಪರಿಶೀಲಿಸಿದೆವು.
ವಿಡಿಯೊವಿನಲ್ಲಿರುವ ಕೆಲವು ಕೀ ಫ್ರೇಮ್ಗಳನ್ನು ಗೂಗಲ್ ರಿವರ್ಸ್ ಇಮೇಜ್ ಮೂಲಕ ಹುಡುಕಿದೆವು. ಇಂಡಿಯನ್ ಕಾಂಗ್ರೇಸ್ ಯೂಟ್ಯೂಬ್ ಚಾನೆಲ್ನಲ್ಲಿ , ಕಳೆದ ವರ್ಷ ಆಗಸ್ಟ್ 5ರಂದು ನಡೆದ ಕಾರ್ಯಕ್ರಮದ ಸಂಪೂರ್ಣ ವಿಡಿಯೊ ದೊರೆಯಿತು. 30 ನಿಮಿಷಗಳ ಈ ಪತ್ರಿಕಾಗೋಷ್ಠಿಯ ಈ ವಿಡಿಯೋದಲ್ಲಿ ರಾಹುಲ್ ಗಾಂಧಿ "ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗ, ಚುನಾವಣಾ ರಚನೆ, ಮಾಧ್ಯಮ ಮುಂತಾದ ವಿವಿಧ ಸಂಸ್ಥೆಗಳ ಬೆಂಬಲದೊಂದಿಗೆ ಆಡಳಿತ ಪಕ್ಷದ ವಿರುದ್ಧ ಆಡಳಿತ ಪಕ್ಷ ಹೋರಾಡುತ್ತದೆ, ಆದರೆ ಇಂದು ದೇಶ ಆರ್ಎಸ್ಎಸ್ ಹಿಡಿತದಲ್ಲಿದೆ. ಪ್ರತಿ ಸಂಸ್ಥೆಯಲ್ಲೂ ಒಬ್ಬರಾದರೂ ಆರೆಸ್ಸೆಸ್ ವ್ಯಕ್ತಿ ಇದ್ದಾರೆ. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ದೇಶಕ್ಕೆ ಬೇಕಾದ ಎಲ್ಲಾ ಸೌಕರ್ಯಗಳು ತಟಸ್ಥವಾಗಿತ್ತು. ಆದರೆ ಈಗ ಸರ್ಕಾರದ
ಸಂಪೂರ್ಣ ಮೂಲಸೌಕರ್ಯ ಒಂದೇ ಪಕ್ಷದ ಬಳಿ ಇದೆ. ಎಂದು ಹೇಳಿದ್ದಾರೆ.
ಈ ವಿಡಿಯೋಗೆ ಸಂಬಂಧಿಸಿದ ಕೆಲವು ಕೀವರ್ಡ್ಗಳನ್ನು ಬಳಸಿಕೊಂಡು ಇಂಟರ್ನೆಟ್ನಲ್ಲಿ ಹುಡುಕಿದಾಗ ಜಾಗರಣ್.ಕಾಂ ಮತ್ತು ಕ್ವಿಂಟ್ನಲ್ಲಿ ಪ್ರಕಟವಾದ ವರದಿಗಳನ್ನು ಲಭ್ಯವಾದವು.
2022 ಆಗಸ್ಟ್ 5ರಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿಯವರು ಮಾತನಾಡಿದ ವಿಡಿಯೋ ತುಣುಕನ್ನು ತಿರುಚಿ, ಸುಳ್ಳು ಪ್ರತಿಪಾದನೆಯೊಂದಿಗೆ ವೈರಲ್ ಮಾಡಲಾಗಿದೆ.