ಫ್ಯಾಕ್ಟ್ಚೆಕ್: ಆರ್ಬಿಐ ಚೆಕ್ ಬರೆಯಲು ಕಪ್ಪು ಇಂಕ್ನ್ನು ಬಳಸಬಾರದು ಎಂದು ಮಾರ್ಗಸೂಚಿ ನೀಡಿಲ್ಲ
ಆರ್ಬಿಐ ಚೆಕ್ ಬರೆಯಲು ಕಪ್ಪು ಇಂಕ್ನ್ನು ಬಳಸಬಾರದು ಎಂದು ಮಾರ್ಗಸೂಚಿ ನೀಡಿಲ್ಲ

Claim :
ಭಾರತೀಯ ರಿಸರ್ವ್ ಬ್ಯಾಂಕ್ ಚೆಕ್ಗಳ ಮೇಲೆ ಕಪ್ಪು ಶಾಯಿಯನ್ನು ಬಳಸುವುದನ್ನು ನಿಷೇಧಿಸಿದೆFact :
ಆರ್ಬಿಐ ಚೆಕ್ ಮೇಲೆ ಕಪ್ಪು ಶಾಯಿಯನ್ನು ಬಳಸುವುದನ್ನು ನಿಷೇಧಿಸುವ ಬಗ್ಗೆ ಯಾವುದೇ ಮಾರ್ಗಸೂಚಿಯನ್ನು ಹೊರಡಿಸಿಲ್ಲ
ಆರ್ಬಿಐ ನಾನಾ ಕಾರಣಗಳಿಗೆ ಆಗಾಗ ನಿಯಮಗಳನ್ನು ಬದಲಿಸುತ್ತಲೇ ಇರುತ್ತದೆ. ಅನೇಕ ಬಾರಿ ಅದು ಬ್ಯಾಂಕ್ ವಹಿವಾಟಿನ ಭದ್ರತೆ ಮತ್ತು ಗ್ರಾಹಕರ ಹಿತದೃಷ್ಟಿಯಿಂದ ಮಾಡಿರುವಂಥದ್ದಾಗಿರುತ್ತದೆ. ಈಗಿರುವುದು ಡಿಜಿಟಲ್ ಯುಗ. ಎಐನಂತಹ ಆಧುನಿಕ ಟೆಕ್ನಾಲಜಿಗಳ ಹೊಸ ಆವಿಷ್ಕಾರಗಳ ಬದುಕು. ಕೆಲವು ವಿಷಯಗಳು ಮಾತ್ರ ಜನಸಾಮಾನ್ಯರನ್ನು ಭಾರೀ ಗೊಂದಲಕ್ಕೆ ಕಾರಣವಾಗುತ್ತಿದೆ. ಕೆಲವು ಸುದ್ದಿಗಳಂತೂ ನಮ್ಮ ದೈನಂದಿನ ಜೀವನದ ಮೇಲೆ ಭಾರಿ ಪರಿಣಾಮವಾಗುತ್ತದೆ. ವೈರಲ್ ಆದ ಸುದ್ದಿ ನಿಜವೋ ಸುಳ್ಳೋ ಎಂದು ಜನರು ಗೊಂದಲಕ್ಕೀಡಾಗುತ್ತಾರೆ.
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದೆ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ವೊಂದು ವೈರಲ್ ಆಗುತ್ತಿದೆ. ವೈರಲ್ ಆದ ಸುದ್ದಿಯಲ್ಲಿ ಏನಿದೆಯೆಂದರೆ ಇನ್ಮುಂದೆ ಚೆಕ್ ಬರೆಯುವಾಗ ಕಪ್ಪು ಶಾಹಿಯಲ್ಲಿ ಬರೆಯುವಂತಿಲ್ಲ, ಒಂದು ವೇಳೆ ಬರೆದರೆ ಅದನ್ನು ಬ್ಯಾಂಕಿನಲ್ಲಿ ಪರಿಗಣಿಸುವುದಿಲ್ಲ. ಕೇವಲ ನೀಲಿ ಮತ್ತು ಹಸಿರು ಬಣ್ಣದ ಶಾಹಿಯಲ್ಲಿ ಬರೆದಿರುವ ಚೆಕ್ಗಳನ್ನು ಮಾತ್ರ ಬ್ಯಾಂಕ್ಗಳು ಸ್ವೀಕರಿಸಲಿದೆ ಎಂದು ಆರ್ಬಿಐ ತಿಳಿಸಿರುವುದಾಗಿ ಹೊಸ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿದೆ ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ವೊಂದು ಹರಿದಾಡುತ್ತಿದೆ.
ಜನವರಿ 17, 2025ರಂದು ʼಹೈಬಿಜ್ʼ ಎಂಬ ವೆಬ್ಸೈಟ್ನಲ್ಲಿ ʼBlack Ink Banned on Cheques: Enhancing Security Standardsʼ ಎಂಬ ಹೆಡ್ಲೈನ್ನೊಂದಿಗೆ ವರದಿ ಮಾಡಿರುವುದನ್ನು ನಾವಿಲ್ಲಿ ನೋಡಬಹುದು. ವರದಿಯಲ್ಲಿ ʼ ಭಾರತೀಯ ರಿಸರ್ವ್ ಬ್ಯಾಂಕ್ ಚೆಕ್ಗಳ ಮೇಲೆ ಕಪ್ಪು ಶಾಯಿಯನ್ನು ನಿಷೇಧಿಸಲಾಗಿದೆ. ಜನವರಿ 1, 2025ರಿಂದ ಈ ಮಾರ್ಗಸೂಚಿ ಜಾರಿಗೆ ಬರಲಿದೆ. ಇನ್ಮುಂದೆ ನೀಲಿ ಮತ್ತು ಹಸಿರು ಬಣ್ಣದ ಶಾಹಿಯಲ್ಲಿ ಬರೆದಿರುವ ಚೆಕ್ಗಳನ್ನು ಮಾತ್ರ ಬ್ಯಾಂಕ್ಗಳು ಸ್ವೀಕರಿಸಲಿದೆ. ವಹಿವಾಟಿನ ಭದ್ರತೆಯನ್ನು ಬಲಪಡಿಸುವ ಮತ್ತು ಗ್ರಾಹಕರನ್ನು ರಕ್ಷಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ತೆಗೆದುಕೊಂಡಿದೆʼ ಎಂದು ವರದಿ ಮಾಡಿದ್ದಾರೆ.
ವೈರಲ್ ಆದ ಸುದ್ದಿಗೆ ಸಂಬಂಧಿಸಿದ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು.
ಜನವರಿ 18, 2025ರಂದು ʼಸಿಎ ಮೋಹಿತ್ ಜೈನ್ʼ ಎಂಬ ಫೇಸ್ಬುಕ್ ಖಾತೆದಾರ ತಮ್ಮ ಖಾತೆಯಲ್ಲಿ ʼಹೊಸ ಆದೇಶದ ಪ್ರಕಾರ, 2025ರ ಜನವರಿ 01 ರಿಂದ ಕಪ್ಪು ಬಣ್ಣದಲ್ಲಿ ಬರೆದ ಚೆಕ್ಗಳನ್ನು ಸ್ವೀಕರಿಸಲಾಗುವುದಿಲ್ಲ. ಚೆಕ್ಗಳನ್ನು ಮಾನ್ಯವೆಂದು ಪರಿಗಣಿಸಲು ನೀಲಿ ಅಥವಾ ಹಸಿರು ಬಣ್ಣದಲ್ಲಿ ಕಡ್ಡಾಯವಾಗಿ ಬರೆಯಬೇಕುʼ ಎಂದು ಬರೆದಿರುವುದನ್ನು ನೋಡಬಹುದು.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪೋಸ್ಟ್ಗಳನ್ನು ನೀವಿಲ್ಲಿ , ಇಲ್ಲಿ ನೋಡಬಹುದು.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್ ಆದ ಸುದ್ದಿಯಲ್ಲಿ ಹೇಳಿರುವ ಹಾಗೆ ಭಾರತೀಯ ರಿಸರ್ವ್ ಬ್ಯಾಂಕ್ ಚೆಕ್ಗಳ ಮೇಲೆ ಕಪ್ಪು ಶಾಯಿಯನ್ನು ನಿಷೇಧಿಸಲಾಗಿದೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಆರ್ಬಿಐ ಇಂತಹ ಯಾವುದೇ ಆದೇಶವನ್ನು ಹೊರಡಿಸಿಲ್ಲ ಎಂದು ಸಾಭೀತಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ನಾವು ಸುದ್ದಿಗೆ ಸಂಬಂಧಿಸಿದ ಕೆಲವು ಕೀವರ್ಡ್ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಆರ್ಬಿಐ ಚೆಕ್ಗಳನ್ನು ಭರ್ತಿ ಮಾಡಲು ಬ್ಲಾಕ್ ಇಂಕನ್ನು ಬಳಸಬಾರದೆಂದು ಸೂಚಿಸಿದೆ ಎಂಬ ಹೇಳುವ ಯಾವುದೇ ಅಧಿಕೃತ ಮಾಹಿತಿಯೂ ನಮಗೆ ಲಭ್ಯವಾಗಿಲ್ಲ. ಒಂದು ವೇಳೆ ಆರ್ಬಿಐ ನಿಜವಾಗಿಯೂ ಅಂತಹ ಆದೇಶ ಹೊರಡಿಸಿದ್ದರೆ, ಖಚಿತವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವರದಿಯಾಗುತ್ತಿತ್ತು.
ಜನವರಿ 14, 2025ರಂದು ಟೈಮ್ಸ್ ಆಫ್ ಇಂಡಿಯಾ ವೈಬ್ಸೈಟ್ನಲ್ಲಿ ವೈರಲ್ ಪೋಸ್ಟ್ನಲ್ಲಿ ಹೇಳಿರುವ ಹಾಗೆ ಏನಾದರೂ ಮಾಹಿತಿ ಇದೆಯಾ ಎಂದು ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಅಂತಹ ಯಾವುದೇ ವರದಿಯೂ ಸಿಗಲಿಲ್ಲ.
ನಂತರ ನಾವು ವೈರಲ್ ಸುದ್ದಿಯಲ್ಲಿ ಹೇಳಿರುವ ಹಾಗೆ ಆರ್ಬಿಐ ವೆಬ್ಸೈಟ್ನಲ್ಲಿ ಏನಾದರೂ ಪತ್ರಿಕಾ ಪ್ರಕಟಣೆ ಅಥವಾ ಸುತ್ತೋಲೆಗಳು ಸಿಗುವುದೇನೋ ಎಂದು ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಯಾವದೇ ಮಾಹಿತಿ ಲಭ್ಯವಾಗಿಲ್ಲ. ನಾವು ಆರ್ಬಿಐ ಬೆಬ್ಸೈಟ್ನಲ್ಲಿ ಕೆಲವು ಕೀ ವರ್ಡ್ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಅಕ್ಟೋಬರ್ 31, 2022ರಂದು ಚೆಕ್ ಟ್ರಂಕೇಷಣ್ ಎಂಬ ಟ್ಯಾಬ್ನಲ್ಲಿ ʼಎಫ್ಎಕ್ಯೂʼ ಪ್ರಶ್ನೆಗಳಿರುವುದನ್ನು ಕಂಡುಕೊಂಡೆವು. ಹುಡುಕಾಟದಲ್ಲಿ ನಮಗೆ ʼಆರ್ಬಿಐ ಚೆಕ್ಗಳನ್ನು ಬರೆಯಲು ಬಳಸಬೇಕಾದ ನಿರ್ದಿಷ್ಟ ಬಣ್ಣಗಳ ಕುರಿತು ಆದೇಶ ಹೊರಡಿಸಿಲ್ಲ. ಆರ್ ಬಿಐ ಹೇಳುವುದಿಷ್ಟೇ ಚೆಕ್ ಗಳನ್ನು ತುಂಬುವಾಗ ಒಂದೇ ಚೆಕ್ ನಲ್ಲಿ ಬೇರೆ ಬೇರೆ ಬಣ್ಣಗಳ ಶಾಯಿಗಳಲ್ಲಿ ಬರೆಯಬಾರದು ಒಂದು ವೇಳೆ ವಿವಿಧ ಶಾಯಿಗಳಲ್ಲಿ ಬರೆದರೆ ಆ ಚೆಕ್ ಗಳನ್ನು ಅಮಾನ್ಯ ಎಂದು ಉಲ್ಲೇಖಿಸಲಾಗಿದೆ.
ಅಷ್ಟೇ ಅಲ್ಲ, ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ಸಹ ವೈರಲ್ ಆದ ಸುದ್ದಿಯ ಬಗ್ಗೆ ಫ್ಯಾಕ್ಟ್ಚೆಕ್ ಮಾಡಿರುವುದನ್ನು ನೋಡಬಹುದು. ಚೆಕ್ಗಳಲ್ಲಿ ಕಪ್ಪು ಶಾಯಿಯ ಬಳಕೆಯನ್ನು ನಿಷೇಧಿಸುವ ಯಾವುದೇ ಹೊಸ ನಿಯಮಗಳು. ಚೆಕ್ಗಳನ್ನು ಬರೆಯಲು ಆರ್ಬಿಐ ನಿರ್ದಿಷ್ಟ ಶಾಯಿ ಬಣ್ಣಗಳನ್ನು ಸೂಚಿಸಿಲ್ಲ ಎಂದು ಪಿಐಬಿ ಫ್ಯಾಕ್ಟ್ಚೆಕ್ ಮಾಡಿ ವೈರಲ್ ಆದ ಕ್ಲೈಮ್ನ್ನು ತಳ್ಲಿ ಹಾಕಿದೆ.
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ಸುದ್ದಿಯಲ್ಲಿ ಹೇಳಿರುವ ಹಾಗೆ ಭಾರತೀಯ ರಿಸರ್ವ್ ಬ್ಯಾಂಕ್ ಚೆಕ್ಗಳ ಮೇಲೆ ಕಪ್ಪು ಶಾಯಿಯನ್ನು ನಿಷೇಧಿಸಲಾಗಿದೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ. ಆರ್ಬಿಐ ಇಂತಹ ಯಾವುದೇ ಆದೇಶವನ್ನು ಹೊರಡಿಸಿಲ್ಲ ಎಂದು ಸಾಭೀತಾಗಿದೆ.