ಫ್ಯಾಕ್ಟ್ಚೆಕ್: ಸಾಕ್ಷಿ ಸಂಸ್ಥೆಯು ಟಿವಿ9 ನ್ಯೂಸ್ ಚಾನೆಲ್ನ್ನು ಸ್ವಾಧೀನಪಡಿಸಿಕೊಂಡಿದೆ ಎಂಬ ಸುದ್ದಿಯ ಅಸಲಿಯತ್ತೇನು?
ಸಾಕ್ಷಿ ಸಂಸ್ಥೆಯು ಟಿವಿ9 ನ್ಯೂಸ್ ಚಾನೆಲ್ನ್ನು ಸ್ವಾಧೀನಪಡಿಸಿಕೊಂಡಿದೆ ಎಂಬ ಸುದ್ದಿಯ ಅಸಲಿಯತ್ತೇನು?
Claim :
ಟಿವಿ9 ತೆಲುಗು ಟೆಲಿವಿಷನ್ ಚಾನೆಲ್ನ್ನು ಸಾಕ್ಷಿ ಚಾನೆಲ್ ಸ್ವಾಧೀನಪಡಿಸಿಕೊಂಡಿದೆ ಮತ್ತು ಚಾನೆಲ್ನ ವ್ಯವಸ್ಥಾಪಕ ನಿರ್ದೇಶಕರಾದ ರಜನಿಕಾಂತ್ ಅವರನ್ನು ಬದಲಿಸಿ ನೇಮಾನಿ ಭಾಸ್ಕರ್ಗೆ ಜವಾಬ್ದಾರಿಯನ್ನು ವಹಿಸಿದ್ದಾರೆ.Fact :
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲವೆಂದು ಟಿವಿ9 ಮ್ಯಾನೇಜ್ಮೆಂಟ್ ಸ್ಪಷ್ಟಪಡಿಸಿದೆ.
ಮಾಧ್ಯಮ ಸಂಸ್ಥೆಗಳಲ್ಲಿ ಟಿವಿ9 ಮಾಧ್ಯಮ ಸಂಸ್ಥೆ ಪ್ರಮುಖವಾದದ್ದು. ಕೇವಲ ಒಂದೇ ಭಾಷೆಯಲ್ಲಿ ಟಿವಿ9 ನ್ಯೂಸ್ ಚಾನೆಲ್ ಇಲ್ಲ. ತೆಲುಗು ಮೂಲದ ಈ ಸುದ್ದಿ ವಾಹಿನಿಯನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ಮೋಹನ್ ರೆಡ್ಡಿಯ ಸಂಸ್ಥೆ, ಸಾಕ್ಷಿ ವಾಹಿಸಿ ಸಂಸ್ಥೆ ಸ್ವಾಧೀನ ಪಡಿಸಿಕೊಂಡು, ಟಿವಿ9ನ ವ್ಯವಸ್ಥಾಪಕ ನಿರ್ದೇಶಕರಾದ ರಜನಿಕಾಂತ್ರನ್ನು ತೊಲಗಿಸಿ ಬದಲಿಗೆ ನೇಮಾನಿ ಭಾಸ್ಕರ್ಗೆ ಟಿವಿ9 ಚಾನೆಲ್ನ ಜವಾಬ್ದಾರಿಯನ್ನು ವಹಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ತೆಲುಗಿನಲ್ಲಿ ಸುದ್ದಿಗೆ ಸಂಬಂಧಿಸಿದ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ಸುದ್ದಿಯಲ್ಲೇನಿದೆ ಎಂದರೆ,
“టీవీ9ని స్వాధీనం చేసుకున్న సాక్షి
– రజనీకాంత్ ప్లేస్లో నేమాని భాస్కర్
– జగన్ పాపాలు భరించలేమంటూ చేతులెత్తేసిన మైహోం రామేశ్వరరావు
– సాక్షి ఎడిటర్ నేమాని భాస్కర్ కి టివి9 బాధ్యతలు
– ఇక నుంచి సాక్షి గ్రూప్ ఆధ్వర్యంలో పనిచేయనున్న టీవీ9 ఇన్నాళ్లూ టివి9కి వేసిన ముసుగు తొలగిపోయింది. రాజకీయ నేతలు ఆరోపిస్తున్నట్టుగానే అది సాక్షి-2 అని తేలిపోయింది. సోమవారం మధ్యాహ్నం టివి9 నిర్వహణ బాధ్యతలని సాక్షి గ్రూప్ తీసుకుంది. సాక్షి మేనేజింగ్ ఎడిటర్గా ఉంటూ ఏపీ ప్రభుత్వ సలహాదారుడు పదవి పొందిన నేమాని భాస్కర్ ఇక నుంచి టివి9 బాధ్యతలు చూస్తారని విశ్వసనీయ సమాచారం. ఇన్నాళ్లూ రజనీకాంత్ టివి9 మేనేజింగ్ ఎడిటర్ గా ఉన్నా, ఆపరేషన్స్ అన్నీ సాక్షి వాళ్లే తెరవెనుక నుంచి చూసేవారు. ఇక నుంచి డైరెక్టుగా సాక్షియే టివి9 బాధ్యతలు చూసుకుంటుందని ప్రచారం సాగుతోంది. జగన్ కోసం టీవీ9 అథఃపాతాళానికి దిగజారిపోయి, క్రెడిబులిటీని దెబ్బతీసుకుంది. టివి9 కేంద్రంగా జగన్ గ్యాంగ్ సాగిస్తున్న అసత్యప్రచారాలన్నీ మైహోం రామేశ్వరరావుకు చుట్టుకుంటున్నాయి. జగన్ కోసం ఆయన బినామీ మెగా కృష్ణారెడ్డి టీవీ9 కొనుగోలు చేశాడు.
తెలంగాణలో రవిప్రకాశ్ నుంచి ఇబ్బంది రాకుండా ఉండేందుకు మైం హోం రామేశ్వరరావుని యాజమాన్యం కుర్చీలో ఉంచారు. రామేశ్వరరావు జీయర్ స్వామిని అడ్డంపెట్టుకుని రియల్ దందాలు నడిపించుకుంటూ హాయిగా ఉండేవాడు. జగన్ కోసం టీవీ9 చేసే అకృత్యాలన్నీ మైహోం రామేశ్వరరావుకి చుట్టుకుంటున్నాయి. ఈ పాపాలు తాను మోయలేనని మైం హోం వాళ్లు చెప్పేశారు. ఎన్నికలు అయిపోయాయి. ఇక ముసుగులు పని కూడా లేదని నిర్ణయానికి వచ్చిన జగన్ అండ్ కో టీవీ9ని కూడా సాక్షి యాజమాన్యంలోకి తీసుకుంది. ముందుగా నేమాని భాస్కర్ ని సంస్థలోకి ప్రవేశపెట్టింది. రవిప్రకాశ్ దగ్గర ఉండి, ఆయనకే దెబ్బకొట్టిన రజనీకాంత్...రేపు తమకూ దెబ్బ కొట్టడన్న గ్యారెంటీ ఏంటని.. రజనీకాంత్ ని తప్పించేందుకు నేమాని భాస్కర్ రూపంలో పొమ్మనలేక పొగబెట్టింది. టీవీ9 హ్యాండోవర్ చేసుకున్నాక..తమ బినామీలతో కొనిపించిన ఎన్టీవీ, 10టీవీలు కూడా సాక్షిలో మిర్జ్ చేస్తారని మీడియా సర్కిళ్లలో జోరుగా ప్రచారం సాగుతోంది. తెలంగాణలో కాంగ్రెస్ సర్కారుతో యుద్ధం చేయాలని, ఏపీలో కూటమి ప్రభుత్వం ఏర్పడితే తనకు చుక్కలు చూపిస్తారని...ఈ దాడులు తట్టుకోవాలంటే...అతి పెద్ద మీడియా సామ్రాజ్యం తనకు అవసరం అని భావిస్తున్నారట జగన్ రెడ్డి. ఈ దిశగానే సాక్షి నెట్ వర్క్ కిందకే తమ తోకచానళ్లు టీవీ9, 10టీవీ, ఎన్టీవీని తీసుకొస్తున్నారని విశ్లేషణలు సాగుతున్నాయి.” ಎಂಬ ಬರಹಗಳೊಂದಿಗೆ ಸಾಮಾಜಿಕ ಮಾಧ್ಯಮವಾದ ವಾಟ್ಸಾಪ್ನಲ್ಲಿ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿದೆ.
ವೈರಲ್ ಸುದ್ದಿಯನ್ನು ಕನ್ನಡಕ್ಕೆ ಅನುವಾದಿಸಿದಾಗ
- ಟಿವಿ9 ಸಂಸ್ಥೆಯನ್ನು ಸಾಕ್ಷಿ ಸ್ವಾಧೀನಪಡಿಸಿಕೊಂಡಿದೆ
- ನಿರ್ದೇಶಕ ರಜನಿಕಾಂತ್ ಬದಲಿಗೆ ನೇಮಾನಿ ಭಾಸ್ಕರ್ ನೇಮಕ
- ಇನ್ನು ಜಗನ್ ಮಾಡುತ್ತಿರುವ ಪಾಪಗಳನ್ನು ಸಹಿಸಲಾರೆ ಎಂದು ಮೈ ಹೋಮ್ ರಾಮೇಶ್ವರ ರಾವ್ ಕೈ ಬಿಟ್ಟಿದ್ದಾರೆ.
- ಟಿವಿ9 ಜವಾಬ್ದಾರಿಯನ್ನು ಸಾಕ್ಷಿ ಸಂಪಾದಕ ನೇಮಾನಿ ಭಾಸ್ಕರ್ಗೆ ವಹಿಸಲಾಗುವುದು
- ಟಿವಿ9 ಇನ್ನು ಮುಂದೆ ಸಾಕ್ಷಿ ಗ್ರೂಪ್ ಅಡಿಯಲ್ಲಿ ಕೆಲಸ ಮಾಡುತ್ತದೆ
ಇನ್ನು ಮುಂದೆ ಸಾಕ್ಷಿ ಗ್ರೂಪ್ ನಿರ್ವಹಣೆಯಲ್ಲಿ ಕಾರ್ಯನಿರ್ವಹಿಸಲಿದೆ ಟಿವಿ9 ಸಂಸ್ಥೆ. ಇನ್ನು ಮುಂದೆ ಟಿವಿ9 ಮುಖವಾಡ ಕಳಚಲಿದೆ. ರಾಜಕೀಯ ನಾಯಕರು ಹೇಳುವ ಹಾಗೆ ಟಿವಿ9, ಸಾಕ್ಷಿ ಸಂಸ್ಥೆ-2 ಆಗಿದೆ. ಸೋಮವಾರ ಮಧ್ಯಾಹ್ನ ಟಿವಿ9 ನಿರ್ವಹಣೆಯ ಜವಾಬ್ದಾರಿಯನ್ನು ಸಾಕ್ಷಿ ಸಂಸ್ಥೆ ವಹಿಸಿಕೊಂಡಿದೆ. ಎಪಿ ಸರ್ಕಾರದ ಸಲಹೆಗಾರರಾದ ನೇಮಾನಿ ಭಾಸ್ಕರ್ ಇದೀಗ ‘ಸಾಕ್ಷಿ’ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾಗಿ ಟಿವಿ9 ಜವಾಬ್ದಾರಿಯನ್ನು ನೋಡಿಕೊಳ್ಳಲಿದ್ದಾರೆ. ಇಷ್ಟು ವರ್ಷ ಟಿವಿ9 ಮ್ಯಾನೇಜಿಂಗ್ ಎಡಿಟರ್ ರಜನಿಕಾಂತ್ ಟಿವಿ9ನಲ್ಲಿ ಕೆಲಸ ಮಾಡುತ್ತಿದ್ದರೂ, ತೆರೆಮರೆಯಲ್ಲಿ ಸಾಕ್ಷಿ ಸಂಸ್ಥೆಗೆ ಕೆಲಸ ಮಾಡುತ್ತಿದ್ದರು. ಇನ್ನು ಮುಂದೆ ಟಿವಿ9 ಜವಾಬ್ದಾರಿಯನ್ನು ಸಾಕ್ಷಿ ನೇರವಾಗಿಯೇ ನಿಭಾಯಿಸುತ್ತದೆ ಎಂದು ಪ್ರಚಾರವು ನಡೆಯುತ್ತಿದೆ. ಸಿಎಂ ಜಗನ್ನಿಂದಾಗಿ ಟಿವಿ9 ಸಂಸ್ಥೆ ವೀಕ್ಷಕರ ವಿಶ್ವಾಸಾರ್ಹತೆ ಮತ್ತು ನಂಬಿಕೆಯನ್ನು ಕಳೆದುಕೊಂಡಿದೆ. ಟಿವಿ9 ಸುತ್ತ ಜಗನ್ ಗ್ಯಾಂಗ್ ನಡೆಸುತ್ತಿರುವ ಸುಳ್ಳು ಪ್ರಚಾರಗಳಿಂದಾಗಿ ಮೈ ಹೋಮ್ ರಾಮೇಶ್ವರ ರಾವ್ಗೆ ನೋವುಂಟಾಗಿದೆ. ಜಗನ್ ಅವರ ಬೇನಾಮಿ ಕೃಷ್ಣಾ ರೆಡ್ಡಿ ಟಿವಿ9 ಖರೀದಿಸಿದ್ದಾರೆ.
ತೆಲಂಗಾಣದಲ್ಲಿ ರವಿ ಪ್ರಕಾಶ್ನಿಂದ ತೊಂದರೆಯಾಗದಂತೆ ಮೈ ಹೋಮ್ ರಾಮೇಶ್ವರ ರಾವ್ರನ್ನು ಸಂಸ್ಥೆಯ ಮಾಲಿಕತ್ವ ಅವರನ್ನೇ ನೇಮಕ ಮಾಡಿದೆ. ಇಲ್ಲಿಯವರೆಗೂ ರಾಮೇಶ್ವರ ರಾವ್ ಅವರು ಜೀಯರ್ ಸ್ವಾಮಿಯವರನ್ನು ಮುಂದಿಟ್ಟುಕೊಂಡು ತಪ್ಪು ಕೆಲಸಗಳನ್ನು ಮತ್ತು ದಂದೆಗಳನ್ನು ನಡೆಸಿಕೊಂಡು ನೆಮ್ಮದಿಯಿಂದಿರುತ್ತಿದ್ದರು. ಆದರೆ ಇನ್ನು ಮುಂದೆ ಜಗನ್ ಮಾಡುವ ಈ ಪಾಪದ ಹೊರೆಯನ್ನು ತಾನು ಮತ್ತು ತನ್ನ ಕುಟುಂಬದವರು ಹೊರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಚುನಾವಣೆಗಳು ಮುಗಿದ ನಂತರ, ಜಗನ್ ಮತ್ತು ತನ್ನ ಅನುಚರರಿಗೆ ಮುಖವಾಡದ ಅಗತ್ಯವಿಲ್ಲ ಎಂದು ಭಾವಿಸಿದ್ದರು ಆದ್ದರಿಂದ, ಇದೀಗ ಬಹಿರಂಗವಾಗಿ ಹೊರಬಂದು ಟಿವಿ9 ಮಾಲೀಕತ್ವವನ್ನು ಪಡೆದುಕೊಂಡಿದ್ದಾರೆ. ಮೊದಲಿಗೆ ನೇಮಾನಿ ಭಾಸ್ಕರ್ ಅವರನ್ನು ಸಂಘಟನೆಗೆ ಸೇರಿಸಿಕೊಂಡರು. ರಜನಿಕಾಂತ್ ರವಿ ಪ್ರಕಾಶ್ ಅವರಿಗೆ ಹತ್ತಿರವಾಗಿ, ಅವರನ್ನು ವಂಚಿಸಿದ್ದಾರೆ. ನಾಳೆ ಜಗನ್ಗೆ ಮೋಸ ಮಾಡುವುದಿಲ್ಲ ಎಂಬ ಗ್ಯಾರಂಟಿ ಇಲ್ಲ. ಆದ್ದರಿಂದ, ಅವರು ನೇಮಾನಿ ಭಾಸ್ಕರ್ ಅವರನ್ನು ಮುಂದಿಟ್ಟುಕೊಂಡು ಆಟವಾಡುತ್ತಿದ್ದಾರೆ. ಟಿವಿ9 ಸ್ವಾಧೀನಪಡಿಸಿಕೊಂಡ ನಂತರ ಜಗನ್ ಬೇನಾಮಿ ಮೂಲಕ ಖರೀದಿಸಿದ ಎನ್ಟಿವಿ ಮತ್ತು 10 ಟಿವಿಗಳನ್ನು ಸಹ ಸಾಕ್ಷಿಯೊಂದಿಗೆ ವಿಲೀನಗೊಳಿಸಲಾಗುವುದು ಎಂಬ ಊಹಾಪೋಹಗಳು ಹರಿದಾಡುತ್ತಿವೆ. ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಡಲು ಮತ್ತು ತ್ರಿಪಕ್ಷೀಯ ಸಮ್ಮಿಶ್ರ ಸರ್ಕಾರವನ್ನು ಎದುರಿಸಲು ಜಗನ್ ಮೋಹನ್ ರೆಡ್ಡಿಗೆ ಆಂಧ್ರಪ್ರದೇಶ್ನಲ್ಲಿರುವ ದೊಡ್ಡ ದೊಡ್ಡ ಮಾಧ್ಯಮ ಸಂಸ್ಥೆಗಳಿರಬೇಕೆಂದು ಜಗನ್ ಟಿವಿ9, 10ಟಿವಿ, ಎನ್ಟಿವಿಯನ್ನೂ ಸಾಕ್ಷಿ ನೆಟ್ವರ್ಕ್ಗೆ ತರುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
టీవీ9ని స్వాధీనం చేసుకున్న సాక్షి
— YV4TDP🚲✌️ (@rajuyv) May 21, 2024
- రజనీకాంత్ ప్లేస్లో నేమాని భాస్కర్
- జగన్ పాపాలు భరించలేమంటూ చేతులెత్తేసిన మైహోం రామేశ్వరరావు
- సాక్షి ఎడిటర్ నేమాని భాస్కర్ కి టివి9 బాధ్యతలు
- ఇక నుంచి సాక్షి గ్రూప్ ఆధ్వర్యంలో పనిచేయనున్న టీవీ9
ఇన్నాళ్లూ టివి9కి వేసిన ముసుగు…
ನಂದಮೂರಿ ಅಭಿಮಾನಿಗಳ ವೆಬ್ಸೈಟ್
టీవీ9ని స్వాధీనం చేసుకున్న సాక్షి
— YV4TDP🚲✌️ (@rajuyv) May 21, 2024
- రజనీకాంత్ ప్లేస్లో నేమాని భాస్కర్
- జగన్ పాపాలు భరించలేమంటూ చేతులెత్తేసిన మైహోం రామేశ్వరరావు
- సాక్షి ఎడిటర్ నేమాని భాస్కర్ కి టివి9 బాధ్యతలు
- ఇక నుంచి సాక్షి గ్రూప్ ఆధ్వర్యంలో పనిచేయనున్న టీవీ9
ఇన్నాళ్లూ టివి9కి వేసిన ముసుగు…
ವಾಟ್ಸಾಪ್ನಲ್ಲೂ ಇದೇ ಸಂದೇಶ ವೈರಲ್ ಆಗಿರುವುದನ್ನು ನೋಡಬಹುದು
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ಸುದ್ದಿಯನ್ನು ಟಿವಿ9 ಮ್ಯಾನೆಜ್ಮೆಂಟ್ ನಿರಾಕರಿಸಿದೆ.
ಗೂಗಲ್ನಲ್ಲಿ ನಾವು ಸಾಕ್ಷಿ ಮೀಡಿಯಾ ಗ್ರೂಪ್ನಿಂದ ಟಿವಿ9 ಸ್ವಾಧೀನಪಡಿಸಿಕೊಂಡಿರುವ ಕುರಿತು ವರದಿಗಳನ್ನು ನಾವು ಹುಡುಕಿದಾಗ, ನಮಗೆ ಅಂತಹ ಯಾವುದೇ ವರದಿಗಳು ಕಂಡುಬಂದಿಲ್ಲ. ಎರಡೂ ಮಾಧ್ಯಮ ಸಂಸ್ಥೆಗಳು ಎರಡೂ ತೆಲುಗು ರಾಜ್ಯಗಳಲ್ಲಿ ಪ್ರಮುಖ ಮಾಧ್ಯಮ ಗುಂಪುಗಳಾಗಿರುವುದರಿಂದ, ದೊಡ್ಡ ಸುದ್ದಿಯಾಗಿದೆ. ಇದರ ಕುರಿತು ಸಾಕಷ್ಟು ವೆಬ್ಸೈಟ್ಗಳೂ ಸಹ ವರದಿ ಮಾಡಿವೆ.
ಈ ಕುರಿತು ನಾವು ಮತ್ತಷ್ಟು ಹುಡುಕಾಟ ನಡೆಸಿದಾಗ ನಮಗೆ TV9 X ಖಾತೆಯಲ್ಲಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲವೆಂದು ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದನ್ನು ನಾವು ಕಂಡುಕೊಂಡೆವು.
TV9 ನೆಟ್ವರ್ಕ್ ಅನೇಕ ಹೊಸ ಉದ್ಯಮ ಮಾನದಂಡಗಳನ್ನು ಹೊಂದಿದೆ. ಪ್ರಸಾರ ಮತ್ತು ಡಿಜಿಟಲ್ ಡೊಮೇನ್ಗಳಾದ್ಯಂತ ಅದ್ಭುತ ಕಾರ್ಯಕ್ಷಮತೆಯನ್ನು ಸಾಧಿಸಿದೆ. ಟಿವಿ9 ನೆಟ್ವರ್ಕ್ ಕೆಲವು ಅತ್ಯುತ್ತಮ ಮತ್ತು ಅತ್ಯಂತ ನವೀನ ಸಂಪಾದಕೀಯ, ಉತ್ಪನ್ನ ಮತ್ತು ಮಾರ್ಕೆಟಿಂಗ್ ಉಪಕ್ರಮಗಳನ್ನು ಹೊಂದಿದೆ.
TV9 Network has nothing to do with the rumours about its takeover which are absolutely false, baseless and malafide. TV9 Network, India's largest news network, represents a phenomenal growth story in recent times. Bucking the trend, TV9 Network's has set many new industry…
— TV9 Telugu (@TV9Telugu) May 23, 2024
ಈ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಆಧರಿಸಿ, ಹಲವಾರು ಸ್ಥಳೀಯ ವೆಬ್ಸೈಟ್ಗಳು ಟಿವಿ9 ಸ್ವಾಧೀನದ ಹಕ್ಕುಗಳನ್ನು ತಳ್ಳಿಹಾಕಿದೆ ಎಂದು ವರದಿಗಳನ್ನು ಪ್ರಕಟಿಸಿದವು.
ವೈರಲ್ ಆದ ಪೋಸ್ಟ್ನಲ್ಲಿ ಟಿವಿ9 ಬೃಹತ್ ಯೋಜನೆಗಳನ್ನು ಹೊಂದಿದೆ ಮತ್ತು ಜಾಗತಿಕವಾಗಿ ಮುನ್ನಡೆಯಲು ಸಿದ್ಧವಾಗಿದೆ ಎಂದು ವರದಿಗಳು ಸಹ ಹಂಚಿಕೊಳ್ಳಲಾಗಿತ್ತು. TV9 ಇದು ಕೆಲವು "best and most innovative editorial, product, and marketing initiative" ಎಂಬ ಶೀರ್ಷಿಕೆಯೊಂದಿಗೆ ಟಿವಿ9 ಮಾಧ್ಯಮ ಸಂಸ್ಥೆ ವರದಿಯನ್ನು ಹಂಚಿಕೊಂಡಿತ್ತು.
ಟಿವಿ9 ಸ್ಪಷ್ಟನೆಯೊಂದಿಗೆ, ಊಹಾಪೋಹಗಳು ಮತ್ತು ವದಂತಿಗಳಿಗೆ ಕೊನೆಗೊಳ್ಳಲಿ ಎಂದು ಹಾರೈಸೋಣ. ಇದೀಗ ಎಲ್ಲರ ಕಣ್ಣುಗಳು ಜೂನ್ 4 ರಂದು 2024 ರ ಚುನಾವಣಾ ಫಲಿತಾಂಶದ ಮೇಲಿದೆ.
https://www.gulte.com/political-news/293812/tv9-denies-rumors-of-takeover-by-jagans-sakshi
https://english.tupaki.com/latest-news/tv9respondstotakeoverrumours-1363075
ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸಾಭೀತಾಗಿದೆ.ಸಾಕ್ಷಿ ಸಂಸ್ಥೆ ಟಿವಿ9 ಸಂಸ್ಥೆಯನ್ನು ಸ್ವಾಧೀನ ಪಡಸಿಕೊಂಡಿದೆ ಎಂಬ ಮಾಹಿತಿ ತಪ್ಪೆಂದು ಟಿವಿ9 ಮ್ಯಾನೆಜ್ಮೆಂಟ್ ಸ್ಪಷ್ಟೀಕರಿಸಿದೆ.