Mon Dec 23 2024 19:36:19 GMT+0000 (Coordinated Universal Time)
ಫ್ಯಾಕ್ಟ್ಚೆಕ್: ಪ್ರಭಾಸ್ ನಟನೆಯ ಸಲಾರ್ ಮತ್ತು ಸ್ಯಾಂಡಲ್ವುಡ್ನ ʼಉಗ್ರಂʼ ಚಿತ್ರಗಳ ನಡುವೆ ಹಲವು ಹೋಲಿಕೆಗಳಿರುವ ಕಾರಣ ಯೂಟ್ಯೂಬ್ನಿಂದ ʼಉಗ್ರಂʼ ಚಿತ್ರವನ್ನು ತೆಗೆದುಹಾಕಿದ್ದಾರೆಂಬ ಸುದ್ದಿ ಸುಳ್ಳು.
ಪ್ರಭಾಸ್ ನಟನೆಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ʼಸಲಾರ್ʼ ಚಿತ್ರವನ್ನು, 2014ರಲ್ಲಿ ಬಿಡುಗಡೆಯಾದ ಸ್ಯಾಂಡಲ್ವುಡ್ನ ʼಉಗ್ರಂʼ ಚಿತ್ರಕ್ಕೆ ಹೋಲಿಸುವ ಕೆಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
Claim :
ಡಾರ್ಲಿಂಗ್ ಪ್ರಭಾಸ್ ನಟನೆಯ ಸಲಾರ್ ಚಿತ್ರವು 2014ರಲ್ಲಿ ಬಿಡುಗಡೆಯಾದ ಕನ್ನಡದ ʼಉಗ್ರಂʼ ಚಿತ್ರದ ರಿಮೇಕ್. ಜೊತೆಗೆ ಶ್ರೀ ಮುರಳಿ ನಟನೆಯ ʼಉಗ್ರಂʼ ಚಿತ್ರವನ್ನು ಎಲ್ಲಾ OTT ಪ್ಲಾಟ್ಫಾರ್ಮ್ಗಳಿಂದ ತೆಗೆದುಹಾಕಲಾಗಿದೆ.Fact :
OTT ಪ್ಲಾಟ್ಫಾರ್ಮ್ಗಳಲ್ಲಿ ಉಗ್ರಂ ಚಿತ್ರವನ್ನು ನೋಡಬಹುದು. ಚಿತ್ರವನ್ನು OTTಗಳಲ್ಲಾಗಲಿ ಯೂಟ್ಯೂಬ್ನಲ್ಲಾಗಲಿ ತೆಗೆದುಹಾಕಿಲ್ಲ.
ಪ್ರಭಾಸ್ ನಟನೆಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ʼಸಲಾರ್ʼ ಚಿತ್ರವನ್ನು, 2014ರಲ್ಲಿ ಬಿಡುಗಡೆಯಾದ ಸ್ಯಾಂಡಲ್ವುಡ್ನ ʼಉಗ್ರಂʼ ಚಿತ್ರಕ್ಕೆ ಹೋಲಿಸುವ ಕೆಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಶ್ರೀಮುರಳಿ ನಟನೆಯ ʼಉಗ್ರಂʼ ಮತ್ತು ಪ್ರಭಾಸ್ ನಟನೆಯ ಬಹುನಿರೀಕ್ಷಿತ ಸಿನಿಮಾ ʼಸಲಾರ್ʼ ಪೋಸ್ಟರ್ಗಳಲ್ಲಿ ಕೆಲವೊಂದಷ್ಟು ಹೋಲಿಕೆಗಳಿರುವುದರಿಂದ ಸಲಾರ್ ಚಿತ್ರ, ಉಗ್ರಂ ಚಿತ್ರದ ರಿಮೇಕ್ ಎಂದು ಕೆಲವು ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಯೂಟ್ಯೂಬ್ ಮತ್ತು OTT ಪ್ಲಾಟ್ಫಾರ್ಮ್ಗಳಲ್ಲಿ ಚಿತ್ರವನ್ನು ತೆಗೆದುಹಾಕಿದ್ದಾರೆಂದು X ನ ಬಾಕ್ಸ್ ಆಫೀಸ್ ಪೇಜ್ನಲ್ಲಿ ಹಂಚಿಕೊಂಡಿದ್ದಾರೆ.
X (Twitter)ನ ಬಾಕ್ಸ್ ಆಫೀಸ್ ಪೇಜ್ನ ಖಾತೆಯಲ್ಲಿ ಖಾತೆದಾರ ಕನ್ನಡದ ʼಉಗ್ರಂʼ ಚಿತ್ರವನ್ನು ಯೂಟ್ಯೂಬ್ನಿಂದ ತೆಗೆದುಹಾಕಿದ್ದಾರೆ. ಪ್ರಭಾಸ್ ನಟನೆಯ ಸಲಾರ್ ʼಉಗ್ರಂʼ ಚಿತ್ರದ ರಿಮೇಕ್ ಆಗಿರಬಹುದೇ ಎಂದು ಶೀರ್ಷಿಕೆಯನ್ನು ನೀಡಿದ್ದಾರೆ. ʼKGF ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬಂದಂತಹ ಆಕ್ಷನ್ ಚಿತ್ರ ʼಉಗ್ರಂʼ. ಈ ಚಿತ್ರ 2014ರಲ್ಲಿ ಬಿಡುಗಡೆಗೊಂಡು, ಒಳ್ಳೆಯ ಪ್ರದರ್ಶನವನ್ನು ಕಂಡಿತ್ತು. ಇದೀಗ ಅದೇ ಚಿತ್ರಕ್ಕೆ ಕೆಲವೊಂದಷ್ಟು ಬದಲಾವಣೆಗಳನ್ನು ಮಾಡಿ ಕಥೆಗೆ ಕೆಲವೊಂದಷ್ಟು ತಿರುವುಗಳನ್ನು ನೀಡಿ ತಮ್ಮದೇ ಚಿತ್ರವನ್ನ ಮರುಚಿತ್ರೀಕರಣ ಮಾಡುತ್ತಿದ್ದಾರೆ, ಆದ್ದರಿಂದ ʼಉಗ್ರಂʼ ಚಿತ್ರವನ್ನು ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಮತ್ತು OTTಯಿಂದ ತೆಗೆದುಹಾಕಿದ್ದಾರೆ ಎಂಬ ವದಂತಿಗಳು ಇದೀಗ ಹರಿದಾಡುತ್ತಿವೆ.
ಸಲಾರ್ ಚಿತ್ರ ಒಂದು ಹೊಸ ಸ್ಕ್ರಿಪ್ಟ್ ಎಂದು #KGF 2 ಸಿನಿಮಾದ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡುವ ಸಂದರ್ಭದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಅಧಿಕೃತವಾಗಿ ಹೇಳಿದ್ದರು. ಆದರೆ ಸಲಾರ್ ಮತ್ತು ಉಗ್ರಂ ಚಿತ್ರದ ಪೋಸ್ಟರ್ಗಳಲ್ಲಿ ಸಾಮ್ಯತೆಗಳಿರುವುದರಿಂದ ಇದೀಗ ಊಹಾಪೋಹಗಳು ಸೃಷ್ಟಿಯಾಗಿವೆ. ಹೊಂಬಾಳೆ ಫಿಲ್ಮ್ಸ್ ಸಲಾರ್ ಬಿಡುಗಡೆಯ ದಿನಾಂಕವನ್ನು ಘೋಷಿಸಿದ ಬೆನ್ನಲೇ ʼಉಗ್ರಂʼ ಚಿತ್ರವನ್ನು ಎಲ್ಲಾ OTT ಯಲ್ಲಿ ತೆಗೆದುಹಾಕಿರುವುದು ಈ ಎಲ್ಲಾ ವದಂತಿಗಳಿಗೆ ಜೀವ ನೀಡಿದೆ ಎಂದು ತನ್ನ X ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಫಿಲ್ಮೀ ಟಾಕ್ಸ್ ಎಂಬ ಫೇಸ್ಬುಕ್ ಖಾತೆಯಲ್ಲಿ ಬಳಕೆದಾರ, ಸಲಾರ್ ಮತ್ತು ಉಗ್ರಂ ಚಿತ್ರದಲ್ಲಿನ ಕೆಲವು ಹೋಲಿಕೆಯನ್ನು ಪೋಸ್ಟ್ ಮಾಡಿದ್ದಾರೆ. ಉಗ್ರಂ ಚಿತ್ರದಲ್ಲಿ ನಟ ಶ್ರೀಮುರಳಿ ತನ್ನ ಜೀವನದಲ್ಲಿ ನಡೆದು ಹೋದಂತಹ ಕೆಲವು ಘಟನೆಗಳನ್ನು ಮರೆಮಾಚಲು ತನ್ನ ಎಡಗೈಯನ್ನು ಯಾವಾಗಲೂ ಕಪ್ಪು ಬಟ್ಟೆಯಲ್ಲಿ ಮುಚ್ಚಿರುತ್ತಾನೆ. ಸಲಾರ್ ಚಿತ್ರದಲ್ಲೂ ಸಹ ನಟ ಪ್ರಭಾಸ್ ತನ್ನ ಎಡಗೈಯನ್ನು ಕಪ್ಪು ಬಟ್ಟೆಯಲ್ಲಿ ಮುಚ್ಚಿದ್ದಾರೆ. ಅಷ್ಟೇ ಅಲ್ಲದೇ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಸಂಗೀತ ನಿರ್ದೇಶಕ ರವಿಬಸ್ರೂರ್ ಸಹ ʼಉಗ್ರಂʼ ಚಿತ್ರದ ತಂಡದಲ್ಲಿದ್ದರು ಇದೀಗ ʼಸಲಾರ್ʼ ಚಿತ್ರದಲ್ಲೂ ಒಟ್ಟಿಗೆ ಕೆಲಸ ಮಾಡುತ್ತಿರುವುದರಿಂದ ಎಲ್ಲರಿಗೂ ಸಂಶಯ ಮೂಡುತ್ತಿದೆ.
ಫ್ಯಾಕ್ಟ್ಚೆಕ್
ಪ್ರಭಾಸ್ ನಟನೆಯ ಸಲಾರ್ ಮತ್ತು ಸ್ಯಾಂಡಲ್ವುಡ್ನ ʼಉಗ್ರಂʼ ಚಿತ್ರಗಳ ನಡುವೆ ಹಲವು ಹೋಲಿಕೆಗಳಿರುವುದರಿಂದ ಯೂಟ್ಯೂಬ್ ಮತ್ತು OTTಗಳಲ್ಲಿ ʼಉಗ್ರಂʼ ಚಿತ್ರವನ್ನು ಡಿಲೇಟ್ ಮಾಡಿದ್ದಾರೆಂಬುದು ಸುಳ್ಳು ಸುದ್ದಿ. ಕನ್ನಡದ ಉಗ್ರಂ ಚಿತ್ರವನ್ನು ಯಾವುದೇ OTT ವೇದಿಕೆಯಿಂದ ತೆಗೆದುಹಾಕಲಾಗಿಲ್ಲ.
ನೀಲ್ ನಿರ್ದೇಶನದ ಚೊಚ್ಚಲ ಚಿತ್ರ ʼಉಗ್ರಂʼ. ನನ್ನ ಎಲ್ಲಾ ಚಿತ್ರಗಳು ʼಉಗ್ರಂʼ ಚಿತ್ರದ ಶೈಲಿಯಲ್ಲೇ ಇರುತ್ತದೆ. ಆದರೆ ʼಉಗ್ರಂʼ ಚಿತ್ರದ ರಿಮೇಕ್ ʼಸಲಾರʼ ಅಲ್ಲ ಎಂದು www.businesstoday.in ಪ್ರಕಟಿಸಿದ ವರದಿಯಲ್ಲಿ ಪ್ರಶಾಂತ್ ನೀಲ್ ಸ್ಪಷ್ಟನೆ ನೀಡಿದ್ದಾರೆ.
ಉಗ್ರಂ ಚಿತ್ರ OTTಯಲ್ಲಿ ಲಭ್ಯವಿದೆಯಾ ಎಂದು ಹುಡುಕಿದಾಗ, VOOTನಲ್ಲಿ ಉಗ್ರಂ ಚಿತ್ರ ಲಭ್ಯವಿದೆ, Voot ನಲ್ಲಿ ಸ್ಟ್ರೀಮ್ ಆಗುತ್ತಿದೆ ಎಂದು justwatch.com ಎಂಬ ವೆಬ್ಸೈಟ್ನ ಪ್ರಕಟನೆಯಲ್ಲಿ ಕಂಡುಕೊಂಡೆವು.
IMDb ನಲ್ಲಿ ಹುಡುಕಿದಾಗ , ಈ ಚಿತ್ರ Voot ನಲ್ಲಿ ಲಭ್ಯವಿರುವುದನ್ನು ನೋಡಬಹುದು.
ಜಿಯೋ ಸಿನಿಮಾದಲ್ಲಿ ಹುಡುಕಿದಾಗ, ಕನ್ನಡ ಭಾಷೆಯಲ್ಲಿ ಉಗ್ರಂ ಸಿನಿಮಾ ಸ್ಟ್ರೀಮ್ ಆಗುತ್ತಿದೆ.
ಹಿಂದಿಯಲ್ಲಿ ರಿಮೇಕ್ ಆದ ʼಉಗ್ರಂʼ Zee 5 ಫ್ಲಾಟ್ಫಾಮ್ನಲ್ಲಿ ʼಮೈ ಹೂನ್ ಫೈಟರ್ ಬಾದ್ಶಾʼ ಎಂಬ ಹೆಸರಿನಲ್ಲಿ ಸ್ಟ್ರೀಮ್ ಆಗುತ್ತಿದೆ. ಇನ್ನು ಯೂಟ್ಯೂಬ್ನಲ್ಲಿ ಪರಿಶೀಲಿಸಿದಾಗ ಈ ಚಿತ್ರವು SRS ಮೀಡಿಯಾ ವಿಷನ್ I ಕನ್ನಡ ಫುಲ್ ಮೂವೀಸ್ ಹೆಸರಿನ ಯೂಟ್ಯೂಬ್ ಚಾನೆಲ್ನಲ್ಲಿ “ Ugram – ಉಗ್ರಂ || kannada full HD movie || Sri Murali || Haripriya || Action Movie ||” ಎಂಬ ಶೀರ್ಷೀಕೆಯಡಿಯಲ್ಲಿ 48ಮಿಲಿಯನ್ಗೂ ಹೆಚ್ಚು ವೀಕ್ಷಣೆಯನ್ನು ಕಂಡಿದೆ.

ಸಲಾರ್ ಚಿತ್ರದಿಂದಾಗಿ ಕನ್ನಡದ ʼಉಗ್ರಂʼ ಚಿತ್ರವನ್ನು OTT ಪ್ಲಾಟ್ಫಾರ್ಮ್ಗಳಿಂದ ತೆಗೆದುಹಾಕಲಾಗಿದೆ ಎನ್ನುವ ಸುದ್ದಿ ಸುಳ್ಳು. ಈ ಸಿನಿಮಾವನ್ನು ಒಟಿಟಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನೋಡಬಹುದು.
Claim : Salaar movie is a remake of the Kannada movie Ugramm released in 2014. Ugramm Movie (Kannada) has been removed from all OTT platforms.
Claimed By : Social media users
Claim Reviewed By : Telugupost Fact Check
Claim Source : Social media
Fact Check : False
Next Story