ಫ್ಯಾಕ್ಟ್ಚೆಕ್: ಕೋಲ್ಕತ್ತಾದಲ್ಲಿ ಹಿಂದೂಗಳು ಮುಸ್ಲಿಂ ಮಹಿಳೆಯನ್ನು ಅಪಹರಿಸಿದ್ದಾರೆ ಎಂದು ಬಾಂಗ್ಲಾದೇಶದ ಸ್ಕ್ರಿಪ್ಟೆಡ್ ವಿಡಿಯೋ ಹಂಚಿಕೆ
ಕೋಲ್ಕತ್ತಾದಲ್ಲಿ ಹಿಂದೂಗಳು ಮುಸ್ಲಿಂ ಮಹಿಳೆಯನ್ನು ಅಪಹರಿಸಿದ್ದಾರೆ ಎಂದು ಬಾಂಗ್ಲಾದೇಶದ ಸ್ಕ್ರಿಪ್ಟೆಡ್ ವಿಡಿಯೋ ಹಂಚಿಕೆ

Claim :
ಕೋಲ್ಕತ್ತದಲ್ಲಿ ಮುಸ್ಲಿಂ ಮಹಿಳೆಯ ಮೇಲೆ ಹಿಂದೂ ಪುರುಷರಿಂದ ಅಪಹರಿಸಿ ಅತ್ಯಾಚಾರ ಎಸಗಿದ್ದಾರೆFact :
ಬಾಂಗ್ಲಾದೇಶದ ಸ್ಕ್ರಿಪ್ಟೆಡ್ ವಿಡಿಯೋವನ್ನು ಕೋಲ್ಕತ್ತಾದಲ್ಲಿ ನಡೆದ ಘಟನೆ ಎಂದು ಹಂಚಿಕೆ
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ವೈರಲ್ ಆದ ವಿಡಿಯೋವನ್ನು ಗಮನಿಸಿದರೆ, ಒಂದು ದೊಡ್ಡ ಬಿಲ್ಡಿಂಗ್ ಹಿಂಭಾಗದಲ್ಲಿ ಇಬ್ಬರು ಹುಡುಗರು ನಿಂತಿರುವುದನ್ನು ನೋಡಬಹುದು. ಒಬ್ಬನ ಕೈಯಲ್ಲಿ ಆಯುಧವನ್ನು ಕಾಣಬಹುದು. ನಂತರ ಮತ್ತೊಬ್ಬ ಯುವಕ ಬುರ್ಖಾ ಧರಿಸಿದ ಮಹಿಳೆಯನ್ನು ಅಲ್ಲಿಗೆ ಕರೆದುಕೊಂಡು ಬರುತ್ತಾನೆ. ಮಹಿಳೆ ಮತ್ತು ಯುವಕನ ಮಧ್ಯೆ ಮಾತಿನ ಚಕಾಮಕಿ ನಡೆಯುತ್ತದೆ. ನಂತರ ಈ ಮೂವರೂ ಯುವಕರು ಸೇರಿ ಬುರ್ಖಾ ಧರಿಸಿದ ಮಹಿಳೆಯನ್ನು ಬಲವಂತವಾಗಿ ಎಳೆದುಕೊಂಡು ಹೋಗುವುದನ್ನು ನೋಡಬಹುದು. ಈ ದೃಶ್ಯ ಸಿಸಿಟಿವಿ ಮಾದರಿಯಲ್ಲಿ ಸೆರೆಯಾಗಿದೆ. ಅನೇಕ ಬಳಕೆದಾರರು ಈ ವೀಡಿಯೊವನ್ನು ವ್ಯಾಪಕವಾಗಿ ಸಾಮಾಜಿಕ ಮಾಧ್ಯಮಗಹಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಫೆಬ್ರವರಿ 05, 2025ರಂದು ʼಸಬೀಲ್ʼ ಎಂಬ ಇನ್ಸ್ಟಾಗ್ರಾಮ್ ಖಾತೆದಾರ ತನ್ನ ಖಾತೆಯಲ್ಲಿ ʼThe result of befriending non-Muslims and believing in them. This video is from a CCTV camera behind a big college in Kolkata. Muslim girl Gul Fashan was living in a haram relationship with her boyfriend Ankit for 2 years, when the girl got pregnant, the boy invited the girl to meet her, after which her two friends, Abhinu and Raju, met the girl. They brought the girl behind the school and took her to the Scorpio car. The girl was raped for three days and then her body was found in a naked state... both from religion and from the world. God save your sisters and daughters. This is a lesson for wandering and misguided Muslim girls and a warning for their parents and the entire Muslim community. May Allah protect Muslim women and girls from friendship and seduction by non-Muslim men and women, boys and girls. protect them from temptation. Amen, then Amen, Lord of the worldsʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಮುಸ್ಲಿಮೇತರರೊಂದಿಗೆ ಸ್ನೇಹ ಬೆಳೆಸುವುದರ ಮತ್ತು ಅವರನ್ನು ನಂಬುವುದರ ಫಲಿತಾಂಶ. ಈ ವೀಡಿಯೋ ಕೋಲ್ಕತ್ತಾದ ದೊಡ್ಡ ಕಾಲೇಜಿನ ಹಿಂದಿನ ಸಿಸಿಟಿವಿ ಕ್ಯಾಮರಾದಿಂದ ಬಂದಿದೆ. ಮುಸ್ಲಿಂ ಹುಡುಗಿ ಗುಲ್ ಫಾಶನ್ ತನ್ನ ಗೆಳೆಯ ಅಂಕಿತ್ ಜೊತೆ 2 ವರ್ಷಗಳಿಂದ ಹರಾಮ್ ಸಂಬಂಧದಲ್ಲಿ ವಾಸಿಸುತ್ತಿದ್ದಳು, ಹುಡುಗಿ ಗರ್ಭಿಣಿಯಾದಾಗ, ಹುಡುಗ ಹುಡುಗಿಯನ್ನು ಭೇಟಿಯಾಗಲು ಆಹ್ವಾನಿಸಿದನು, ನಂತರ ಅವಳ ಇಬ್ಬರು ಸ್ನೇಹಿತರಾದ ಅಭಿನು ಮತ್ತು ರಾಜು ಅವರು ಹುಡುಗಿಯನ್ನು ಕರೆತಂದರು ಶಾಲೆಯ ಹಿಂದೆ ಹುಡುಗಿ ಅವಳನ್ನು ಸ್ಕಾರ್ಪಿಯೋ ಕಾರಿನಲ್ಲಿ ಕರೆದೊಯ್ದಳು. ಹುಡುಗಿಯ ಮೇಲೆ ಮೂರು ದಿನಗಳ ಕಾಲ ಅತ್ಯಾಚಾರ ನಡೆಸಲಾಯಿತು ಮತ್ತು ನಂತರ ಆಕೆಯ ದೇಹವು ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಧರ್ಮದಿಂದ ಮತ್ತು ಪ್ರಪಂಚದಿಂದಲೂ. ದೇವರೇ ನಿಮ್ಮ ಸಹೋದರಿಯರನ್ನು ಮತ್ತು ಹೆಣ್ಣು ಮಕ್ಕಳನ್ನು ರಕ್ಷಿಸಲಿ. ಇದು ಅಲೆದಾಡುವ ಮತ್ತು ದಾರಿತಪ್ಪಿದ ಮುಸ್ಲಿಂ ಹೆಣ್ಣುಮಕ್ಕಳಿಗೆ ಒಂದು ಪಾಠ ಮತ್ತು ಅವರ ಹೆತ್ತವರಿಗೆ ಮತ್ತು ಇಡೀ ಮುಸ್ಲಿಂ ಸಮುದಾಯಕ್ಕೆ ಒಂದು ಎಚ್ಚರಿಕೆ. ಅಲ್ಲಾ ಮುಸ್ಲಿಂ ಮಹಿಳೆಯರು ಮತ್ತು ಹುಡುಗಿಯರನ್ನು ಮುಸ್ಲಿಮೇತರ ಪುರುಷರು ಮತ್ತು ಮಹಿಳೆಯರು, ಹುಡುಗರು ಮತ್ತು ಹುಡುಗಿಯರ ಸ್ನೇಹ ಮತ್ತು ಮೋಹದಿಂದ ರಕ್ಷಿಸಲಿ ಪ್ರಲೋಭನೆಯಿಂದ ಅವರನ್ನು ರಕ್ಷಿಸು, ಮತ್ತು ಮುಸ್ಲಿಮರ ಗೌರವವು ಅವರು ತಮ್ಮ ಸಹೋದರಿಗಾಗಿ ಏನು ಮಾಡುತ್ತಾರೆ ಎಂಬುದನ್ನು ನೋಡಲು ಯೋಗ್ಯವಾಗಿದೆʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು
ಫೆಬ್ರವರಿ 06, 2025, ʼಮಹಮ್ಮದ್ ಸಮೀರ್ ಅನ್ಸಾರ್ʼ Tag your friends जो बोलते हैं मेरी बाला ऐसा नहींʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಫೆಬ್ರವರಿ 04, 2025ರಂದು ʼಬ್ರೆಟಾನಿಯ್ಕ್ʼ ಎಂಬ ಯೂಟ್ಯೂಬ್ ಖಾತೆದಾರ ತನ್ನ ಖಾತೆಯಲ್ಲಿ ʼViral Video: Hindu Boyfriend Ankit Kidnaps Muslim Girlfriend Gulafsha!|ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಮತ್ತಷ್ಟು ವಿಡಿಯೋವಿನ್ನು ನೀವಿಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ಬಾಂಗ್ಲಾದೇಶದ ಒಂದು ಸ್ಕ್ರಿಪ್ಟೆಡ್ ವಿಡಿಯೋವನ್ನು ಕೋಲ್ಕತ್ತಾದಲ್ಲಿ ಹಿಂದೂಗಳು ಮುಸ್ಲಿಂ ಮಹಿಳೆಯನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ.
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಉಪಯೋಗಿಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಜನವರಿ 21, 2025ರಂದು ʼಲಾಫ್ಟರ್ ಚಾಟ್2ʼ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ, বিষয়টি খুবই দুঃখজনক প্রেমের প্রস্তাবে রাজি না হওয়ায় মেয়েটিকে তুলে নিলʼ ಎಂಬ ಶೀರ್ಷಿಕೆಯನ್ನು ನೀಡಿ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಪ್ರೇಮ ಪ್ರಸ್ತಾಪಕ್ಕೆ ಹುಡುಗಿ ಒಪ್ಪದ ಕಾರಣ ಅವಳನ್ನು ಎತ್ತಿಕೊಂಡು ಹೋದರುʼ ಎಂಬ ಶೀರ್ಷಿಕೆಯನ್ನಿಡಿ ಪೋಸ್ಟ್ ಮಾಡಿದ್ದಾರೆ.
ನಂತರ ನಾವು ಈ ಫೇಸ್ಬುಕ್ ಪೇಜ್ನ್ನು ಸೂಕ್ಷ್ಮವಾಗಿ ಗಮನಿಸಿದಾಗ ವೈರಲ್ ವೀಡಿಯೊದಲ್ಲಿರುವ ಸ್ಥಳದಲ್ಲಿ ಚಿತ್ರೀಕರಿಸಲಾದ ಮತ್ತೊಂದು ವೀಡಿಯೊವನ್ನು ನಾವು ಕಂಡುಕೊಂಡೆವು. ಆ ವಿಡಿಯೋವನ್ನು ಜನವರಿ 17, 2025ರಂದು ʼমানবতা আজ হারিয়ে গেছে দুঃখজনক একটি বিষয়ʼ ಎಂಬ ಶೀರ್ಷಿಕೆಯೊಂದಿಗೆ ಅಪ್ಲೋಡ್ ಮಾಡಿರುವುದನ್ನು ನೋಡಬಹುದು.
ʼಲಾಫ್ಟರ್ ಚಾಟ್2ʼ ಫೇಸ್ಬುಕ್ ಬಯೋವಿನಲ್ಲಿ ʼಈ ಪೇಜ್ನಲ್ಲಿ ಹಂಚಿಕೊಂಡ ವಿಡಿಯೋಗಳನ್ನು ಯಾರೂ ಗಂಭೀರವಾಗಿ ಪರಿಗಣಿಸಬಾರದು. ಈ ವಿಡಿಯೋಗಳು ಕೇವಲ ಮನರಂಜನೆಗಾಗಿ ಮಾತ್ರ. ನಮ್ಮ ಪೇಜ್ನ್ನು ಫಾಲೋ ಮಾಡಿದ್ದಕ್ಕೆ ಧನ್ಯವಾದಗಳುʼ ಎಂದು ಬರೆದಿರುವುದನ್ನು ನೋಡಬಹುದು. ಇದರಿಂದ ಸಾಭೀತಾಗಿದ್ದೇನೆಂದರೆ ಈ ಪುಟದಲ್ಲಿ ಹಂಚಿಕೊಂಡಿರುವ ವಿಡಿಯೋಗಳು ಸ್ಕ್ರಿಪ್ಟ್ಡ್ ವಿಡಿಯೋವೆಂದು.
ನಾವು ಈ ಪೇಜ್ನ್ನು ಮತ್ತಷ್ಟು ಸೂಕ್ಷ್ಮವಾಗಿ ಗಮನಿಸಿದಾಗ ಕೆಲವು ವಿಡಿಯೋಗಳಲ್ಲಿ ಕಾಣಿಸುವ ವ್ಯಕ್ತಿಗಳೇ ಮತ್ತೆ ಮತ್ತೆ ಕಾಣಿಸುತ್ತಿರುವುದನ್ನು ನಾವು ಗಮನಿಸಿದೆವು. ಇತರ ವೀಡಿಯೊಗಳನ್ನು ಪರಿಶೀಲಿಸಿದಾಗ ವೈರಲ್ ವೀಡಿಯೊದಲ್ಲಿ ಕಂಡುಬರುವ ವ್ಯಕ್ತಿಗಳಲ್ಲಿ ಒಬ್ಬರು ವಿಡಿಯೋದಲ್ಲಿ ಸಹ ಕಾಣಿಸಿಕೊಂಡಿರುವುದನ್ನು ನೋಡಬಹುದು. ಹೀಗಾಗಿ ವೈರಲ್ ವಿಡಿಯೋ ನಿಜವಲ್ಲ ನಾಟಕೀಯ ಎಂಬುದು ಸಾಬೀತಾಗಿದೆ.
ಇದರಿಂದ ತಿಳಿಯುವುದೇನೆಂದರೆ, ವೈರಲ್ ಆದ ವಿಡಿಯೋ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ಬಾಂಗ್ಲಾದೇಶದ ಒಂದು ಸ್ಕ್ರಿಪ್ಟೆಡ್ ವಿಡಿಯೋವನ್ನು ಕೋಲ್ಕತ್ತಾದಲ್ಲಿ ಹಿಂದೂಗಳು ಮುಸ್ಲಿಂ ಮಹಿಳೆಯನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ.