ಫ್ಯಾಕ್ಟ್ಚೆಕ್: ವಾರಣಾಸಿಯಿಂದ ನಾಮಪತ್ರ ಸಲ್ಲಿಸಿದ ಬಳಿಕ ಮೋದಿ ವಿರುದ್ಧ ಘೋಷಣೆಗಳು ಕೂಗಲಿಲ್ಲ
ವಾರಣಾಸಿಯಿಂದ ನಾಮಪತ್ರ ಸಲ್ಲಿಸಿದ ಬಳಿಕ ಮೋದಿ ವಿರುದ್ಧ ಘೋಷಣೆಗಳು ಕೂಗಲಿಲ್ಲ
Claim :
ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಸಾರ್ವಜನಿಕರು ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರುFact :
ಮೂಲ ಆಡಿಯೋದಲ್ಲಿ ಬಿಜೆಪಿ ಮತ್ತು ನರೇಂದ್ರ ಮೋದಿ ಪರ ಘೋಷಣೆಗಳನ್ನು ಕೇಳಬಹುದು
ದೇಶದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಪೈಪೋಟಿ ತೀವ್ರಗೊಳ್ಳುತ್ತಿದೆ. ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ನಿತೀಶ್ ಕುಮಾರ್ ಅವರ ಜನತಾ ದಳ ಯುನೈಟೆಡ್ (ಜೆಡಿಯು) ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದಲ್ಲಿ (ಎನ್ಡಿಎ) ಪ್ರಮುಖ ವ್ಯಕ್ತಿಗಳಾಗಿ ಮಾರ್ಪಟ್ಟಿವೆ ಮತ್ತು ಕೇಂದ್ರ ಸಚಿವ ಸಂಪುಟದಲ್ಲಿ ಮಹತ್ವದ ಸ್ಥಾನಗಳಿಗೆ ಬೇಡಿಕೆಯನ್ನೂ ಸಹ ಇಡುತ್ತಿವೆ. ಹೀಗಿರುವಾಗ, ಬಿಜೆಪಿ ಪಕ್ಷವು ತನ್ನ ಮಿತ್ರಪಕ್ಷಗಳಿಗೆ ಕೆಲವು ನಿರ್ಣಾಯಕ ಸ್ಥಾನಗಳನ್ನು ಸುಲಭವಾಗಿ ಬಿಟ್ಟುಕೊಡುವ ಸಾಧ್ಯತೆಯಿಲ್ಲ. ರಕ್ಷಣೆ, ಹಣಕಾಸು, ಗೃಹ ಮತ್ತು ವಿದೇಶಾಂಗ ವ್ಯವಹಾರಗಳಂತಹ ಪ್ರಮುಖ ಸಚಿವಾಲಯಗಳನ್ನು ತನಗೆ ಬೇಕು ಎಂದು ಬಿಜೆಪಿ ಹೇಳಿಕೊಂಡಿದೆ.
ಇದರ ನಡುವೆ, ಬಿಜೆಪಿ ನಾಯಕ ನರೇಂದ್ರ ಮೋದಿ ಅವರು ವಾರಣಾಸಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯಿಂದ ಹೊರಬರುವಾಗ ಅಮಿತ್ ಶಾ, ಜೆಪಿ ನಡ್ಡಾ, ಯೋಗಿ ಆದಿತ್ಯನಾಥ್ ಮತ್ತು ಹಲವಾರು ಪಕ್ಷದ ಕಾರ್ಯಕರ್ತರೊಂದಿಗೆ ನಡೆದುಕೊಂಡು ಹೋಗುತ್ತಿರುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ವೀಡಿಯೊವಿನಲ್ಲಿ ಕೇಳುವ ಆಡಿಯೋದಲ್ಲಿ ಆಕ್ಷೇಪಾರ್ಹ ಘೋಷಣೆಗಳ ಜೊತೆಗೆ ನಿಂದನೀಯ ಭಾಷೆಯನ್ನು ಬಳಸಲಾಗಿದೆ ಎಂದು ವರದಿಯಾಗಿದೆ.
ಕೆಲವು ಸಾಮಾಜಿಕ ಖಾತೆದಾರರು "“वाराणसी से ये क्या देखने कों मिला रहा है” ಎಂಬ ಶೀರಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ನೋಡಬಹುದು.
ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ " ನಾವು ವಾರಣಾಸಿಯಲ್ಲಿ ಏನ್ನನ್ನು ನೋಡುತ್ತಿದ್ದೇವೆ" ಎಂದು ಬರೆದು ಪೋಸ್ಟ್ ಮಾಡಿದ್ದರು
वाराणसी से ये क्या देखने कों मिला रहा है 😂😂😂 pic.twitter.com/kJfzGKOhaz
— दिव्या कुमारी (@divyakumaari) June 1, 2024
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲವೆಂದು ನಾವು ಕಂಡುಕೊಂಡಿದ್ದೇವೆ. ವೈರಲ್ ವಿಡಿಯೋವಿಗೆ ಬೇರೆ ಆಡಿಯೋವನ್ನು ಸೇರಿಸಿ ಹಂಚಿಕೊಳ್ಳಲಾಗಿದೆ. ಮೂಲ ವಿಡಿಯೋವಿನಲ್ಲಿ ಕಾರ್ಮಿಕರು ಮೋದಿಯನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗುತ್ತಿರುವುದನ್ನು ನಾವು ನೋಡಬಹುದು.
ವೈರಲ್ ಆದ ಸುದ್ದಿಯಲ್ಲಿರುವ ಸತ್ಯಾಂಶವನ್ನು ತಿಳಿಯಲು ನಾವು ವೈರಲ್ ಆದ ಚಿತ್ರದ ಮೂಲಕ ಗೂಗಲ್ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಅದೇ ವೀಡಿಯೊವನ್ನು ಮೇ 14, 2024 ರಂದು News18 UP ಉತ್ತರಾಖಂಡ್ನ ಅಧಿಕೃತ YouTubeಚಾನೆಲ್ನಲ್ಲಿ ಲೈವ್ ಸ್ಟ್ರೀಮ್ ಆಗಿರುವುದನ್ನ ನಾವು ಕಂಡುಕೊಂಡೆವು. ವಿಡಿಯೋವಿಗೆ ಶೀರ್ಷಿಕೆಯಾಗಿ “Narendra Modi Nomination Live from Varanasi.”ಬರೆದಿರುವುದನ್ನು ನಾವು ಕಂಡುಕೊಂಡೆವು.
ಮೂಲ ವಿಡಿಯೋವಿನಲ್ಲಿ ನಿಖರವಾಗಿ 4:01 ಟೈಮ್ಸ್ಟ್ಯಾಂಪ್ನಲ್ಲಿ, ವೈರಲ್ ವೀಡಿಯೊದಲ್ಲಿ ನೋಡಿದ ಅದೇ DM ವಾರಣಾಸಿ ಕಚೇರಿ ಗೇಟ್ ಇರುವುದನ್ನು ನಾವು ಕಂಡುಕೊಂಡಿದ್ದೇವೆ.
ಹಾಗೆ, 8:34 ಟೈಮ್ಸ್ಟ್ಯಾಂಪ್ನಲ್ಲಿ, ಅದೇ ಗುಂಪಿನೊಂದಿಗೆ ನರೇಂದ್ರ ಮೋದಿ ವಾರಣಾಸಿಯ ಡಿಎಂ ಕಚೇರಿಯಿಂದ ಹೊರನಡೆಯುತ್ತಿರುವುದನ್ನು ನೋಡಬಹುದು
ಇಂಡಿಯಾ ಟುಡೇ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಮೇಲೆ ತಿಳಿಸಿದ ಅದೇ ದಿನಾಂಕದಂದು ಲೈವ್ ಸ್ಟ್ರೀಮ್ನಲ್ಲಿ ಅಪ್ಲೋಡ್ ಮಾಡಲಾದ ಅದೇ ಕ್ಲಿಪ್ ಅನ್ನು ನಾವು ಕಂಡುಕೊಂಡಿದ್ದೇವೆ: ಅಪ್ಲೋಡ್ ಆದ ವಿಡಿಯೋವಿಗೆ ಶೀರ್ಷಿಕೆಯಾಗಿ “In Mega Show of Strength, PM Modi Together With NDA Leaders In Varanasi.” ಪೋಸ್ಟ್ ಮಾಡಲಾಗಿದೆ. ವಿಡಿಯೋವಿನ ನಿಖರವಾದ 0:18 ಟೈಮ್ಸ್ಟ್ಯಾಂಪ್ನಲ್ಲಿ, ನಾವು ವೈರಲ್ ಕ್ಲಿಪ್ನ ಅದೇ ಭಾಗವನ್ನು ಬೇರೆ ಕೋನದಿಂದ ವಿಡಿಯೋವನ್ನು ಮಾಡಿರುವುದನ್ನು ನಾವು ಕಂಡುಕೊಂಡೆವು.
ಅಷ್ಟೇ ಅಲ್ಲ, ಮೇ 14, 2024 ರಂದು, ಅದೇ ವೀಡಿಯೊವನ್ನು ನರೇಂದ್ರ ಮೋದಿ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ: “PM Modi along with NDA leaders greets public after filing nomination from Kashi.”
ಮೇಲಿನ ಯಾವುದೇ ವೀಡಿಯೊಗಳು ಯಾವುದೇ ಆಕ್ಷೇಪಾರ್ಹ ಘೋಷಣೆಗಳು ಅಥವಾ ನಿಂದನೀಯ ಭಾಷೆಯನ್ನು ಒಳಗೊಂಡಿಲ್ಲ.
ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಮೂಲ ಆಡಿಯೋದಲ್ಲಿ ಬಿಜೆಪಿ ಮತ್ತು ನರೇಂದ್ರ ಮೋದಿ ಪರ ಘೋಷಣೆಗಳನ್ನು ಕೇಳಬಹುದು.