ಫ್ಯಾಕ್ಟ್ಚೆಕ್: ಮೂರು ಲಕ್ಷದೊಳಗೆ ಈಗ ಟಾಟಾ ಎಲೆಕ್ಟ್ರಿಕ್ ನ್ಯಾನೋ ಕಾರು ಸಿಗುತ್ತದೆ
ಮೂರು ಲಕ್ಷದೊಳಗೆ ಈಗ ಟಾಟಾ ಎಲೆಕ್ಟ್ರಿಕ್ ನ್ಯಾನೋ ಕಾರು ಸಿಗುತ್ತದೆ
Claim :
ಎಲೆಕ್ಟ್ರಿಕ್ ಟಾಟಾ ನ್ಯಾನೋ ಕಾರು 3 ಲಕ್ಷದೊಳಗೆ ಮಾರುಕಟ್ಟೆಗೆ ಬರಲಿದೆFact :
ವೈರಲ್ ಪೋಸ್ಟ್ಗಳಲ್ಲಿ ಕಾಣಿಸುವ ಕಾರು ಬಿವೈಡಿ ಕಂಪನಿಯ ಎಲೆಕ್ಟ್ರಿಕ್ ಕಾರ್
ಮಧ್ಯಮ ವರ್ಗದವರ ಮನೆಗಳಲ್ಲೂ ಕಾರು ಬೇಕು ಎಂಬ ಸಂಕಲ್ಪದಿಂದ ಅಂದು ಟಾಟಾ ನ್ಯಾನೋ ಕಾರನ್ನು ತರಿಸಿದ್ದು ಗೊತ್ತೇ ಇದೆ. ಒಂದು ಹಂತದಲ್ಲಿ ಈ ಕಾರು ಬಹಳ ಜನಪ್ರಿಯವಾಗಿತ್ತು. ಆದರೆ ಕೆಲವು ಕಾರಣಗಳಿಂದ ಟಾಟಾ ಕಂಪನಿಯು ಈ ಕಾರನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಆದರೆ, ಇದೀಗ ಮತ್ತೊಮ್ಮೆ ಟಾಟಾ ಎಲೆಕ್ಟ್ರೀಕಲ್ ಕಾರ್ಗಳ ಬಗ್ಗೆ ಚರ್ಚೆ ಶುರುವಾಗಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ನಿಂದ ಟಾಟಾ ನ್ಯಾನೋ ಇವಿ ಬರಲಿದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಗಳಲ್ಲಿ ವೈರಲ್ ಆಗಿದೆ. ಟಾಟಾ ನ್ಯಾನೋ ಇವಿ ಬಿಡುಗಡೆಯಾಗಲಿದೆ ಎಂದು ವಿವಿಧ ದಿನಾಂಕಗಳನ್ನು ಸಹ ಹೇಳಲಾಗುತ್ತಿದೆ. ಈ ಹಿಂದೆ, ಕೆಲವು ಮಾಧ್ಯಮ ಸಂಸ್ಥೆಗಳು ಟಾಟಾ ನ್ಯಾನೋ ಒಂದೇ ಚಾರ್ಜ್ನಲ್ಲಿ 200 ರಿಂದ 400 ಕಿಲೋಮೀಟರ್ಗಳ ವ್ಯಾಪ್ತಿಯೊಂದಿಗೆ ಬರಲಿದೆ ಎಂದು ವರದಿಗಳನ್ನು ಹಂಚಿಕೊಂಡಿದ್ದವು. ಆದರೆ ಟಾಟಾ ನ್ಯಾನೋ ಕಾರಿನ ಮತ್ತಷ್ಟು ಫೇಚರ್ಗಳ ಬಗ್ಗೆ ಎಲ್ಲೂ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿಲ್ಲ.
ಸಾಮಾಜಿ ಮಾಧ್ಯಗಳಲ್ಲಿ ವೈರಲ್ ಆದ ಹಸಿರು ಬಣ್ಣದ ಕಾರಿನ ಬಗ್ಗೆ ಇದೀಗ ಭಾರೀ ಚರ್ಚೆಯಾಗುತ್ತಿದೆ. ಕೆಲವು ಪೋಸ್ಟ್ಗಳಲ್ಲಿ ಈ ಕಾರು ಕೇವಲ 1,65,000 ಕ್ಕೆ ಸಿಗಲಿದೆ ಎಂದು ಪೋಸ್ಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಈ ಕಾರು 3-4 ಲಕ್ಷ ರೂಪಾಯಿಗೆ ಸಿಗಲಿದೆ ಎಂದು ಪೋಸ್ಟ್ ಮಾಡುತ್ತಿದ್ದಾರೆ.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ಕಾರು ಟಾಟಾ ನ್ಯಾನೋ ಇವಿಯಲ್ಲ, ವೈರಲ್ ಫೋಟೋಗಳಲ್ಲಿ ಕಾಣಿಸುವ ಕಾರು ಬಿವೈಡಿ ಸೀಗಲ್ನ ಎಲೆಕ್ಟ್ರಿಕ್ ಕಾರ್.
ನಾವು ವೈರಲ್ ಸುದ್ದಿಯ ಬಗ್ಗೆ ಮತ್ತಷ್ಟು ಸತ್ಯಾಂಶವನ್ನು ತಿಳಿಯಲು ಟಾಟಾ ಮೋಟರ್ಸ್ನ ಅಧಿಕೃತ ವೆಬ್ಸೈಟ್ನಲ್ಲಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಇಲ್ಲಿಯೂ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರ್ ಬಗ್ಗೆಯ ಸುದ್ದಿ ಕಂಡಿಬಂದಿಲ್ಲ.
ನಂತರ ನಾವು ಟಾಟಾ ಮೋಟಾರ್ಸ್ಗೆ ಸಂಬಂಧಿಸಿದ್ದ ಪ್ರೆಸ್ ರಿಲೀಸ್ ಪೇಜ್ನ್ನು ಯ್ಯಾಕ್ಸಿಸ್ ಮಾಡಿದೆವು. ಅದರಲ್ಲೂ ನಮಗೆ ನ್ಯಾನೂ ಕಾರ್ ಲಾಂಚ್ಗೆ ಸಂಬಂಧಿಸಿದ ಯಾವುದೇ ಮಾಹಿತಿ ಕಂಡುಬಂದಿಲ್ಲ.
ವೈರಲ್ ಆದ ಪೋಸ್ಟ್ಗೆ ಕೆಲವು ಖಾತೆದಾರರು ಕಾಮೆಂಟ್ ವಿಭಾಗದಲ್ಲಿ ಈ ಕಾರು ಬಿವೈಡಿ ಕಂಪನಿಯದ್ದು ಎಂದು ಬರೆದಿದ್ದನ್ನು ನಾವು ಕಂಡುಕೊಂಡೆವು. ನಂತರ ಬಿವೈಡಿ ಎಲೆಕ್ಟ್ರಿಕ್ ಕಾರ್ ಎಂದು ನಾವು ಗೂಗಲ್ನಲ್ಲಿ ಸರ್ಚ್ ಮಾಡಿದಾಗ ನಮಗೆ ವೈರಲ್ ಆದ ಫೋಟೋವಿನಲ್ಲಿ ಕಾಣುವ ಕಾರಿನಂತೆ ಬಿವೈಡಿ ಕಾರು ಇರುವುನ್ನು ನಾವು ಕಂಡುಕೊಂಡೆವು.
ಇಲ್ಲಿ ನಾವು ಎರಡೂ ಕಾರಿನ ನಡುವೆ ಇರುವ ಹೋಲಿಕೆಗಳನ್ನು ನೋಡಬಹುದು. ಕಾರಿನ ಅಲಾಯ್ ವೀಲ್ಗಳಿಂದ ಹಿಡಿದು ಕಾರು ನಿಂತಿರುವ ಸ್ಥಳದವರೆಗೂ ಎಲ್ಲವೂ ಒಂದೇ ರೀತಿಯಿರುವುದನ್ನು ನಾವು ಗಮನಿಸಬಹುದು.
ವೈರಲ್ ಆದ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕಾರಿನ ಲೋಗೊವನ್ನು ಮತ್ತು ಕಾರಿನ ಹೆಸರನ್ನು ಫೋಟೋ ಶಾಪ್ ಮಾಡಿರುವುದನ್ನು ನಾವು ನೋಡಬಹುದು.
ಅಷ್ಟೇ ಅಲ್ಲ ನಾವು ವೈರಲ್ ಆದ ಫೋಟೋವನ್ನು ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಡಿದಾಗ ನಮಗೆ www.autocar.co.uk ನಲ್ಲಿ ವಿವೈಡಿ ಸೀಗಲ್ ಕಾರಿನ ಫೋಟೋಗಳಿರುವುದನ್ನು ನಾವು ಕಾಣಬಹುದು.
https://www.autocar.co.uk/car-news/new-cars/byd-seagull-sub-%C2%A38000-electric-supermini-china
ಬಿವೈಡಿ ಸೀಗಲ್ ಕಾರಿಗೆ ಸಂಬಂಧಿಸಿದ ಕೆಲವು ಫೋಟೋ ಮತ್ತು ವಿಡಿಯೋಗಳನ್ನು ವೈರಲ್ ಆಗಿವೆ.
Say hello to the new BYD Seagull - a sub-£8000 EV for China with a sodium-ion battery and up to 100bhp https://t.co/rHRri1DUzy pic.twitter.com/6LKAtj1Xwk
— Autocar (@autocar) April 18, 2023
ಕೆಲವು ಯೂಟ್ಯೂಬ್ ಚಾನೆಲ್ನಲ್ಲೂ ಸಹ ಬಿವೈಡಿ ಸೀಗಲ್ ಕಾರಿನ ಬಗ್ಗೆ ರಿವ್ಯೂ ಹೇಳಿರುವುದನ್ನು ಸಹ ನೋಡಬಹುದು.
ಬಿವೈಡಿ ಕಾರಿಗೆ ಸಂಬಂಧಿಸಿದ ಬ್ಲಾಗ್ನಲ್ಲೂ ವೈರಲ್ ಆದ ಫೋಟೋವನ್ನು ನೋಡಬಹುದು.
https://bydauto.com.co/blog/byd-seagull-el-carro-electrico-que-debuto-en-shanghai/
ಹೀಗಾಗಿ ವೈರಲ್ ಆದ ಫೋಟೋವಿನಲ್ಲಿ ಕಾಣುವ ಕಾರು ಟಾಟಾ ನ್ಯಾನೋ ಇವಿಯಲ್ಲ, ವೈರಲ್ ಫೋಟೋಗಳಲ್ಲಿ ಕಾಣಿಸುವ ಕಾರು ಬಿವೈಡಿ ಸೀಗಲ್ನ ಎಲೆಕ್ಟ್ರಿಕ್ ಕಾರು.