ಫ್ಯಾಕ್ಟ್ಚೆಕ್: ಜಗನ್ ಪ್ರಚಾರಕ್ಕೆ ಬಳಸುವ ಹಾಡನ್ನು ನಟ, ಟಿಡಿಪಿ ಶಾಸಕ ಬಾಲಕೃಷ್ಣ ಹಾಡಿದ್ದರಾ?
ಜಗನ್ ಪ್ರಚಾರಕ್ಕೆ ಬಳಸುವ ಹಾಡನ್ನು ನಟ, ಟಿಡಿಪಿ ಶಾಸಕ ಬಾಲಕೃಷ್ಣ ಹಾಡಿದ್ದರಾ?
Claim :
ಟಿಡಿಪಿ ಶಾಸಕ, ನಟ ಬಾಲಕೃಷ್ಣ ಕಾರ್ಯಕ್ರಮವೊಂದರಲ್ಲಿ ಜಗನ್ ಪ್ರಚಾರದ ಹಾಡುಗಳಲ್ಲಿ ಒಂದನ್ನು ಹಾಡಿದ್ದಾರೆFact :
ಬಾಲಕೃಷ್ಣ ಜಗನ್ ಪ್ರಚಾರದ ಗೀತೆಯನ್ನು ಹಾಡಿಲ್ಲ. ಮೂಲ ವಿಡಿಯೋವಿಗೆ ಬೇರೆ ಆಡಿಯೋವನ್ನು ಸೇರಿಸಿ ಎಡಿಟ್ ಮಾಡಲಾಗಿದೆ.
ಆಂಧ್ರ ಪ್ರದೇಶ ಅಸೆಂಬ್ಲಿ ಮತ್ತು ಲೋಕಸಭೆ ಚುನಾವಣೆಗಳು ಮೇ 13, 2024 ರಂದು ನಡೆಯಲಿದೆ. ಆಂಧ್ರಪ್ರದೇಶದಲ್ಲಿ 25 ಲೋಕಸಭಾ ಸ್ಥಾನಗಳು ಮತ್ತು 175 ವಿಧಾನಸಭಾ ಸ್ಥಾನಗಳಲ್ಲಿ ಚುನಾವಣೆ ನಡೆಯಲಿದೆ. ಎಲ್ಲ ಪಕ್ಷದ ನಾಯಕರು ತಮ್ಮ ತಮ್ಮ ಗೆಲುವಿಗಾಗಿ ಆದಷ್ಟು ಶ್ರಮ ಪಡುತ್ತಿದ್ದಾರೆ. ವೈಎಸ್ಆರ್ಸಿ ಪಕ್ಷವು ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಕಲ್ಯಾಣ ಪಿಂಚಣಿಯನ್ನು ತಿಂಗಳಿಗೆ 3000 ರೂ.ನಿಂದ 3500 ರೂ.ಗೆ ಹೆಚ್ಚಿಸುವುದಾಗಿ ಮತ್ತು ವೈಜಾಗ್ ಅನ್ನು ಕಾರ್ಯಕಾರಿ ರಾಜಧಾನಿಯನ್ನಾಗಿ ಮಾಡುವ ಭರವಸೆಯೊಂದಿಗೆ ಪ್ರಣಾಳಿಕೆಯನ್ನು ಅಭಿವೃದ್ದಿ ಪಡಿಸಿದ್ದಾರೆ. ಟಿಡಿಪಿ ಪಕ್ಷ ಅಧಿಕಾರಕ್ಕೆ ಬಂದರೆ 20 ಲಕ್ಷ ಉದ್ಯೋಗ ಸೃಷ್ಟಿ ಮತ್ತು ಮಾಸಿಕ ರೂ 3,000 ನಿರುದ್ಯೋಗ ಭತ್ಯೆ ಸೇರಿದಂತೆ ಸೂಪರ್ ಸಿಕ್ಸ್ ಭರವಸೆಗಳನ್ನು ಪೂರೈಸುವುದಾಗಿ ಹೇಳಿದ್ದಾರೆ.
ಈ ನಡುವೆ, ಹಿಂದೂಪುರ ಶಾಸಕ ಮತ್ತು ಟಿಡಿಪಿ ಶಾಸಕ ಮತ್ತು ಟಾಲಿವುಡ್ ನಟ ಬಾಲಕೃಷ್ಣ ವೇದಿಕೆಯ ಮೇಲೆ ಹಾಡುತ್ತಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ವೈಎಸ್ಆರ್ಸಿ ಮುಖ್ಯಸ್ಥ ಜಗನ್ ಪ್ರಚಾರ ಹಾಡನ್ನು ನಂದಮೂರಿ ಬಾಲಕೃಷ್ಣ ಹಾಡುತ್ತಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋವಿನಲ್ಲಿ ತೆಲುಗು ಹಿನ್ನೆಲೆ ಗಾಯಕಿ ಗೀತಾ ಮಾಧುರಿ ಬಾಲಕೃಷ್ಣ ಅವರೊಂದಿಗೆ ಹಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅಷ್ಟೇ ಅಲ್ಲ ವಿಡಿಯೋವಿನ ಹಿಂದೆ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಬ್ಯಾನರ್ಗಳನ್ನು ನೋಡಬಹುದು.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ನಟ ಬಾಲಕೃಷ್ಣ ವೈಎಸ್ ಜಗನ್ ಮೋಹನ್ ರೆಡ್ಡಿಯವರ ಪ್ರಚಾರ ಗೀತೆಯನ್ನು ಹಾಡಿಲ್ಲ.
ನಾವು ವೈರಲ್ ವೀಡಿಯೊದಿಂದ ಹೊರತೆಗೆಯಲಾದ ಕೆಲವು ಪ್ರಮುಖ ಕೀಫ್ರೇಮ್ಗಳ ಮೂಲಕ ರಿವರ್ಸ್ ಇಮೇಜ್ ಸರ್ಚ್ನ್ನು ಮತ್ತು ಕೆಲವು ಕೀವರ್ಡ್ಗಳ ಮೂಲಕ ಹುಡುಕಾಟ ನಡೆಸಿದೆವು.
ಹುಡುಕಾಟದಲ್ಲಿ ನಮಗೆ, ಒಂದು ಈವೆಂಟ್ನಲ್ಲಿ ಬಾಲಕೃಷ್ಣ ಹಾಡುತ್ತಿರುವ ವೀಡಿಯೋವೊಂದು ಯೂಟ್ಯೂಬ್ನಲ್ಲಿರುವುದು ನಮಗೆ ಕಾಣಿಸಿತು.
filmibeats.com ವರದಿಯ ಪ್ರಕಾರ , ಬಾಲಕೃಷ್ಣ ಹಿಂದೂಪುರದಲ್ಲಿ ನಡೆದ 2016ರಲ್ಲಿ ಲೇಪಾಕ್ಷಿ ಉತ್ಸವವನ್ನು ಆಯೋಜಿಸಿದ್ದರು.ಆ ಕಾರ್ಯಕ್ರಮದಲ್ಲಿ ಅಲ್ಲಿ ನೆರೆದಂತಹ ಜನರನ್ನು ರಂಜಿಸಲು ನಡೆಯುವ ಈವೆಂಟ್ನಲ್ಲಿ ಗಾಯಕಿ ಗೀತಾಮಾಧುರಿ ಮತ್ತು ಗಾಯಕ ಸಿಂಹರ ಜೊತೆ ಬಾಲಕೃಷ್ಣ ನಟನೆಯ ಡಿಕ್ಟೇಟರ್ ಚಲನಚಿತ್ರದ ಹಾಡನ್ನು ಲೈವ್ ಆಗಿ ಹಾಡಿದ್ದಾರೆ ಎಂದು ವರದಿಯಾಗಿರುವುದನ್ನು ನಾವು ಕಂಡುಕೊಂಡೆವು.
ಫೆಬ್ರವರಿ 29, 2016 ರಂದು ‘Balakrishna Singing on Stage for his fans at Lepakshi Utsav 2016 at Hindupur Day 2’.ಎಂಬ ಶೀರ್ಷಿಕೆಯೊಂದಿಗೆ ಯೂಟ್ಯೂಬ್ನಲ್ಲಿ ಬಾಲಕೃಷ್ಣ ಹಾಡಿರುವ ಹಾಡನ್ನು ನೋಡಬಹುದು.
ವೈರಲ್ ಆದ ಹಾಡನ್ನು ಇಲ್ಲಿ ನೋಡಬಹುದು.
ವೈಎಸ್ ಜಗನ್ಮೋಹನ್ ರೆಡ್ಡಿಯ ಪ್ರಚಾರ ಹಾಡಿನ ಮೂಲ ವಿಡಿಯೋವನ್ನು ಇಲ್ಲಿ ನೋಡಬಹುದು. ಈ ವೀಡಿಯೊದಲ್ಲಿ ಬರುವ ಹಾಡನ್ನು ನಂದಮೂರಿ ಬಾಲಕೃಷ್ಣರವರು ಹಾಡಿರುವ ವಿಡಿಯೋಗೆ ಸೇರಿಸಿ ವೈರಲ್ ಮಾಡಿದ್ದಾರೆ.
ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಬಾಲಕೃಷ್ಣ ಜಗನ್ ಪ್ರಚಾರದ ಗೀತೆಯನ್ನು ಹಾಡಿಲ್ಲ. ಮೂಲ ವಿಡಿಯೋವಿಗೆ ಬೇರೆ ಆಡಿಯೋವನ್ನು ಸೇರಿಸಿ ಎಡಿಟ್ ಮಾಡಲಾಗಿದೆ.