ಫ್ಯಾಕ್ಟ್ಚೆಕ್: ಕಟ್ಟಡ ಕಾರ್ಮಿಕರೊಂದಿಗೆ ಪ್ರಧಾನಿ ಮೋದಿ ಊಟ ಮಾಡುತ್ತಿರುವ ದೃಶ್ಯ ಕಾಶಿ ಅಯೋಧ್ಯೆಯ ರಾಮಮಂದಿರದಲ್ಲ ಬದಲಿಗೆ ಕಾಶಿ ವಿಶ್ವನಾಥ ದೇವಸ್ಥಾನ ದೇಗುಲದ್ದು
ಕಟ್ಟಡ ಕಾರ್ಮಿಕರೊಂದಿಗೆ ಪ್ರಧಾನಿ ಮೋದಿ ಊಟ ಮಾಡುತ್ತಿರುವ ದೃಶ್ಯ ಕಾಶಿ ಅಯೋಧ್ಯೆಯ ರಾಮಮಂದಿರದಲ್ಲ ಬದಲಿಗೆ ಕಾಶಿ ವಿಶ್ವನಾಥ ದೇವಸ್ಥಾನ ದೇಗುಲದ್ದು
Claim :
ಭಾರತದ ಪ್ರಧಾನಿ ನರೇಂದ್ರ ಮೋದಿಯವರು ರಾಮಮಂದಿರವನ್ನು ನಿರ್ಮಾಣ ಮಾಡುತ್ತಿರುವ ಕಾರ್ಮಿಕರೊಂದಿಗೆ ಊಟ ಮಾಡುತ್ತಿದ್ದಾರೆ.Fact :
ವೈರಲ್ ಆದ ಚಿತ್ರ ಇತ್ತೀಚಿನದಲ್ಲ 2021ರದ್ದು. ಅಷ್ಟೇ ಅಲ್ಲ ವೈರಲ್ ಆದ ಚಿತ್ರ ಅಯೋಧ್ಯೆಯ ರಾಮಮಂದಿರದ್ದು ಸಹ ಅಲ್ಲ ಬದಲಿಗೆ ಈ ಚಿತ್ರ ಕಾಶಿಯ ವಿಶ್ವನಾಧ ದೇವಾಲಯದಲ್ಲಿ ನಿರ್ಮಾಣ ಮಾಡುತ್ತಿದ್ದ ಕಾರ್ಮಿಕರೊಂದಿಗೆ ಊಟ ಮಾಡುತ್ತಿದ್ದ ದೃಶ್ಯವದು.
ಅಯೋಧ್ಯೆಯ ರಾಮಮಂದಿರದ ನಿರ್ಮಾಣ ಕಾರ್ಯ 2020ರಲ್ಲಿ ಆರಂಭವಾಗಿ ಬರುವ ವರ್ಷ ಅಂದರೆ ಜನವರಿ 24, 2024ರಷ್ಟರಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಅಯೋಧ್ಯೆಯ ರಾಮಮಂದಿರ ಜಗತ್ತಿನಲ್ಲೇ ಮೂರನೇ ಅತಿ ದೊಡ್ಡ ಹಿಂದೂ ದೇವಾಲಯವಾಗಲಿದೆ. ದೇವಾಲಯವು 380 ಅಡಿ ಉದ್ದ, 250 ಅಡಿ ಅಗಲ ಮತ್ತು 161 ಅಡಿ ಎತ್ತರವಿರಲಿದೆ. ಇನ್ನೇನು ನಿರ್ಮಾಣ ಕಾರ್ಯ ಪೂರ್ಣಗೊಳ್ಳುತಿದ್ದಂತೆ ದೇವಸ್ತಾನದ ಕುರಿತು ಹಲುವು ಫೋಟೋಗಳು ಮತ್ತು ವಿಡಿಯೋಗಳಿ ತಪ್ಪಾದ ಮಾಹಿತಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇತ್ತೀಚೆಗೆ ರಾಮಮಂದಿರಕ್ಕೆ ಸಂಬಂಧಿಸಿದ ಫೋಟೋವೊಂದು ವೈರಲ್ ಆಗಿದೆ. ವೈರಲ್ ಆದ ಫೋಟೋವಿನಲ್ಲಿ ಅಯೋಧ್ಯೆಯ ರಾಮಮಂದಿರ ನಿರ್ಮಾಣ ಮಾಡುತ್ತಿರುವ ಕಟ್ಟಡ ಕಾರ್ಮಿಕರೊಂದಿಗೆ ಪ್ರಧಾನಿ ಮೋದಿ ಊಟ ಮಾಡುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಮೋದಿಯೊಂದಿಗೆ ಕಾರ್ಮಿಕರು ಊಟ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
అద్భుత రామ మందిరం నిర్మించిన వారిని గౌరవించి వారితో కలిసి భోజనం చేస్తున్న జనహృదయ నేత @narendramodi గారు.!!
ఎంత తేడా???
— Pilla Naveen Kumar (@PillaNaveenBJP) December 17, 2023
ఒక రాజు అద్భుత భవనాన్ని నిర్మించిన వారి చేతులు నరికేస్తే..
అద్భుత రామ మందిరం నిర్మించిన వారిని గౌరవించి వారితో కలిసి భోజనం చేస్తున్న జనహృదయ నేత @narendramodi గారు... pic.twitter.com/C4W9KUSCaa
ಫ್ಯಾಕ್ಟ್ಚೆಕ್
ವೈರಲ್ ಆದ ಚಿತ್ರ ಇತ್ತೀಚಿನದಲ್ಲ. 2021ರಲ್ಲಿ ಕಾಶಿ ವಿಶ್ವನಾಥ ದೇವಸ್ಥಾನದ ಕಾರಿಡಾರ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೊಂದಿಗೆ ಮೋದಿ ಊಟ ಮಾಡಿದ ಫೋಟೋವದು. ವೈರಲ್ ಆದ ಚಿತ್ರಕ್ಕೂ
ಅಯೋಧ್ಯೆಯ ರಾಮಮಂದಿರಕ್ಕೂ ಯಾವುದೇ ಸಂಬಂಧವಿಲ್ಲ.
ಫೋಟೋವಿನಲ್ಲಿರುವ ಸುದ್ದಿಯ ಬಗ್ಗೆ ಅಸಲಿಯತ್ತನ್ನು ತಿಳಿಯಲು ನಾವು ವೈರಲ್ ಆದ ಫೋಟೋವನ್ನು ಗೂಗಲ್ನ ಮೂಲಕ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಫಲಿತಾಂಶವಾಗಿ ನಮಗೆ ಸಾಕಷ್ಟು ಲೇಖನಗಳು ಮತ್ತು ಪೋಸ್ಟ್ಗೆ ಸಂಬಂಧಿಸಿದ ಚಿತ್ರಗಳು ಕಂಡುಬಂದವು.
ಇಂಡಿಯಾ ಟುಡೆ ವರದಿಯ ಪ್ರಕಾರ 2021ರ ಡಿಸಂಬರ್,12 ಮತ್ತು 13ರಂದು ಪ್ರಧಾನಿ ನರೇಂದ್ರ ಮೋದಿ ಎರಡು ದಿನದ ವಾರಣಾಸಿ ಪ್ರವಾಸದಲ್ಲಿದ್ದಾಗ ಕಾರಿಡಾರ್ ಯೋಜನೆಯ ಕಾರ್ಮಿಕರೊಂದಿಗೆ ಊಟ ಮಾಡಿದ್ದರು. ಕಾರಿಡಾರ್ ಯೋಜನೆ ಕಾಶಿ ವಿಶ್ವನಾಥ ದೇಗುಲದಿಂದ ಗಂಗಾ ನದಯ ದ್ದಕ್ಕೂ ಇರುವ ಹಲವಾರು ಘಾಟ್ಗಳಿಗೆ ಸಂಪರ್ಕವಿರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ನ್ಯೂಸ್18.ಕಾಂ ವರದಿಯ ಪ್ರಕಾರ ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆಯ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಲ್ಲಿ ಯೋಜನೆಯ ನಿರ್ಮಾಣ ಕಾರ್ಮಿಕರೊಂದಿಗೆ ಊಟ ಮಾಡಿದರು. ಪ್ರಧಾನಿಯವರೊಂದಿಗೆ ಊಟ ಮಾಡಿದ್ದು ಕಾರ್ಮಿಕರಿಗೆ ಬಹಳ ಸಂತೋಷವನ್ನುಂಟು ಮಾಡಿದೆ ಎಂದು ವರದಿ ಮಾಡಿದ್ದರು.
ತನ್ನ X ಖಾತೆಯಲ್ಲಿ ಆನಿ ನ್ಯೂಸ್ ವೈರಲ್ ಆದ ಚಿತ್ರವನ್ನು ಪೋಸ್ಟ್ ಮಾಡಿ ಫೋಟೋಗೆ ಶೀರ್ಷಿಕೆಯಾಗಿ “Varanasi: PM Narendra Modi had lunch with the workers involved in construction work of Kashi Vishwanath Dham Corridor” ಬರೆದಿದ್ದರು.
ಹೀಗಾಗಿ ವೈರಲ್ ಆದ ಚಿತ್ರದಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ಚಿತ್ರ 2021ರದ್ದು. ಅಷ್ಟೇ ಅಲ್ಲ ವೈರಲ್ ಆದ ಚಿತ್ರ ಅಯೋಧ್ಯೆಯ ರಾಮಮಂದಿರದ್ದು ಸಹ ಅಲ್ಲ ಬದಲಿಗೆ ಈ ಚಿತ್ರ ಕಾಶಿಯ ವಿಶ್ವನಾಧ ದೇವಾಲಯದಲ್ಲಿ ನಿರ್ಮಾಣ ಮಾಡುತ್ತಿದ್ದ ಕಾರ್ಮಿಕರೊಂದಿಗೆ ಊಟ ಮಾಡುತ್ತಿದ್ದ ದೃಶ್ಯವದು.