ಫ್ಯಾಕ್ಟ್ಚೆಕ್: ಭಾರತ ಧ್ವಜದಲ್ಲಿ ಅಶೋಕ ಚಕ್ರದ ಬದಲಿಗೆ ಇಸ್ಲಾಮಿಕ್ ಕಲ್ಮಾಗಳನ್ನು ಹಿಡಿದು ಕಾಂಗ್ರೇಸ್ನ ಪ್ರತಿಭಟನಾಕಾರರು ಘೋಷಣೆ ಕೂಗುತ್ತಿದ್ದಾರೆಂಬ ಸುದ್ದಿಯ ಅಸಲಿಯತ್ತೇನು?
ಭಾರತ ಧ್ವಜದಲ್ಲಿ ಅಶೋಕ ಚಕ್ರದ ಬದಲಿಗೆ ಇಸ್ಲಾಮಿಕ್ ಕಲ್ಮಾಗಳನ್ನು ಹಿಡಿದು ಕಾಂಗ್ರೇಸ್ನ ಪ್ರತಿಭಟನಾಕಾರರು ಘೋಷಣೆ ಕೂಗುತ್ತಿದ್ದಾರೆಂಬ ಸುದ್ದಿಯ ಅಸಲಿಯತ್ತೇನು?
Claim :
ತೆಲಂಗಾಣದಲ್ಲಿ ಕಾಂಗ್ರೇಸ್ ಗೆದ್ದ ನಂತರ ಅಲ್ಲಿ ಭಾರತದ ಧ್ವಜದಲ್ಲಿರುವ ಅಶೋಕ ಚಕ್ರದ ಬದಲು ಇಸ್ಲಾಮಿಕ್ ಅಕ್ಷರಗಳನ್ನು ಹೊಂದಿರುವ ಬಾವುಟವನ್ನು ಹಾರಿಸಲಾಗಿದೆ ಎಂಬ ವಿಡಿಯೋ ವೈರಲ್Fact :
ವೈರಲ್ ಆದ ವಿಡಿಯೋ ಇತ್ತೀಚಿನದಲ್ಲ, 2022ರದ್ದು. ತೆಲಂಗಾಣದ ಮಹಬೂಬ್ನಗರದಲ್ಲಿ ನಡೆದ ಮೆರವಣಿಗೆಯನ್ನು ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಗೆಲುವಿಗೆ ಜೊಡಿಸಿ ವೈರಲ್ ಮಾಡಲಾಗುತ್ತಿದೆ.
ತೆಲಂಗಾಣದಲ್ಲಿ ಕಳೆದ ಹತ್ತು ವರ್ಷಗಳಿಂದ ಗೆದ್ದುಕೊಂಡು ಬರುತ್ತಿದ್ದ ಬಿಆರ್ಎಸ್ ಪಕ್ಷವನ್ನು ಕಾಂಗ್ರೆಸ್ 65 ಸ್ಥಾನಗಳಿಂದ ಗೆದ್ದು ಬಿಆರ್ಎಸ್ನ್ನು ಹೀನಾಯವಾಗಿ ಸೋಲಿಸಿದೆ. ಕಾಂಗ್ರೇಸ್ನ ರಾಜ್ಯಾಧ್ಯಕ್ಷ ರೇವಂತ್ ರೆಡ್ಡಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನವನ್ನು ಮಾಡಿ ಚುನಾವಣೆ ವೇಳೆ ನೀಡಿದ ಆರು ಭರವಸೆಗಳು ಮತ್ತು ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದಾರೆ.
ಕಾಂಗ್ರೇಸ್ ಪಕ್ಷ ಗೆಲುವನ್ನು ಸಂಭ್ರಮಿಸಲು ಕಾಂಗ್ರೆಸ್ನ ಕಾರ್ಯಕರ್ತರು ಭಾರತ ದೇಶದ ಧ್ವಜವನ್ನು ಹೋಲುವ ಧ್ವಜವನ್ನು ಹಿಡಿದು ಸಂಭ್ರಮಿಸುತ್ತಿದ್ದಾರೆ. ತೆಲಂಗಾಣದಲ್ಲಿ ಕಾಂಗ್ರೇಸ್ ಗೆದ್ದ ನಂತರ ಅಲ್ಲಿ ಭಾರತದ ಧ್ವಜದಲ್ಲಿರುವ ಅಶೋಕ ಚಕ್ರದ ಬದಲು ಇಸ್ಲಾಮಿಕ್ ಅಕ್ಷರಗಳನ್ನು ಹೊಂದಿರುವ ಬಾವುಟವನ್ನು ಹಾರಿಸಲಾಗಿದೆ ಎಂಬ ವಿಡಿಯೋ ವೈರಲ್.
‘तेलंगाना में कांग्रेस के जीतते ही भारत के झंडे पर कलमा लिख दिया गया. क्या अब भी कांग्रेस को लाना चाहोगे अपने अपने प्रदेस में या केंद्र में ‘ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಈಗಲೂ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ನಿಮಗೆ ಅನಿಸುತ್ತಿದೆಯಾ ಎಂದು ಪೋಸ್ಟ್ ಮಾಡಿದ್ದರು.
ಕೆಲವು ಫೇಸ್ಬುಕ್ ಖಾತೆದಾರರು ವಿಡಿಯೋವನ್ನು ಕನ್ನಡದ ಶೀರ್ಷಿಕೆಯೊಂದಿಗೆ ಶೇರ್ ಮಾಡಿದ್ದರು.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಇತ್ತೀಚಿನಿದಲ್ಲ. 2022ರಲ್ಲಿ ನಡೆದ ಮೆರವಣಿಗೆಯದ್ದು.
ಕೆಲವು ಪ್ರಮುಖ ಫ್ರೇಮ್ಗಳನ್ನು ಉಪಯೋಗಿಸಿಕೊಂಡು ನಾವು ಗೂಗಲ್ನಲ್ಲಿ ರಿವರ್ಸ್ ಸರ್ಚ್ ಮಾಡಿದೆವು. ನಮಗೆ ಆಗ ಈ ವಿಡಿಯೋ 2022ರಲ್ಲಿ ಚಿತ್ರೀಕರಿಸಿದ್ದು ಎಂದು ತಿಳಿದು ಬಂದಿತು. ಜೊತೆಗೆ ಈ ಸುದ್ದಿಯ ಬಗ್ಗೆ ವರದಿಗಳು ಮತ್ತು ಲೇಖನಗಳು ಸಹ ಕಂಡುಬಂದಿತು.
ಜೂನ್ 10, 2022 ರಂದು ಝೀ ನ್ಯೂಸ್ ಯೂಟ್ಯೂಬ್ ಚಾನೆಲ್ನಲ್ಲಿ ವೈರಲ್ ಆದ ಸುದ್ದಿಯ ಕುರಿತು ವರದಿ ಮಾಡಲಾಗಿತ್ತು. ಯೂಟ್ಯೂಬ್ನಲ್ಲಿ ಅಪ್ಲೋಡ್ ಆದ ವಿಡಿಯೋದಲ್ಲಿನ ಒಂದ ಭಾಗದಲ್ಲಿ ಅಂದ್ರೆ 32.52 ನಿಮಿಷಗಳಲ್ಲಿ ನಾವು ವೈರಲ್ ವಿಡಿಯೋದ ತುಣಿಕನ್ನು ನೋಡಬಹುದು. "ತೆಲಂಗಾಣದಲ್ಲಿ ನಡೆದ ಪ್ರತಿಭಟನೆಯ ಸಮಯದಲ್ಲಿ ಕೆಲವರು ಅಶೋಕ ಚಕ್ರದ ಜಾಗದಲ್ಲಿ ಇಸ್ಲಾಮಿಕ್ ಕಲ್ಮಾವನ್ನು ಬರೆದಿದ್ದಾರೆ"ಎಂದು ಬರೆದಿದ್ದಾರೆ. ಈ ವಿಡಿಯೋಗೆ ನುಪುರ್ ಶರ್ಮಾ ಮಾಡಿದ ಕಮೆಂಟ್ ದೇಶಾದ್ಯಂತ ವೈರಲ್ ಆಗಿತ್ತು.
ಪ್ರವಾದಿ ಮುಹಮ್ಮದ್ ವಿರುದ್ಧ ನೂಪುರ್ ಶರ್ಮಾ ಮಾಡಿರುವ ಕಮೆಂಟ್ಗಳ ವಿರುದ್ದ ನಡೆದ ರಾಷ್ಟ್ರವ್ಯಾಪಿ ಪ್ರತಿಭಟನೆಯ ಭಾಗವಾಗಿ ಈ ಪ್ರತಿಭಟನೆಯೂ ನಡೆದಿತ್ತು. ಈ ಪ್ರತಿಭಟನೆ ನಡೆಯುವ ವೇಳೆ ಕಾಂಗ್ರೇಸ್ ಪಕ್ಷ ಇನ್ನು ಅಧಿಕಾರವನ್ನು ಸ್ವೀಕರಿಸಿರಲಿಲ್ಲ. ಆಗಿನ್ನು ಬಿಆರ್ಎಸ್ ಪಕ್ಷ ಅಧಿಕಾರದಲ್ಲಿತ್ತು.
ಇಂಡಿಯಾ ಟುಡೆ ಯೂಟ್ಯೂಬ್ ಚಾನೆಲ್ನಲ್ಲಿ ಜೂನ್ 10,2022ರಂದು "तेलंगाना के महबूबनगर में तिरंगे से बेअदबी, अशोक चक्र की जगह कलमा लिख दिया गया”ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದರು.
ಫಸ್ಟ್ಪೋರ್ಟ್.ಕಾಮ್ ನಲ್ಲಿ ಪ್ರಕಟಿಸಿದ ವರದಿಯ ಪ್ರಕಾರ ನೂಪುರ್ ಶರ್ಮಾ ಮಾಡಿರುವ ಕಮೆಂಟ್ಗಳ ವಿರುದ್ದ ನಡೆದ ರಾಷ್ಟ್ರವ್ಯಾಪಿ ಪ್ರತಿಭಟನೆಯ ಭಾಗವಾಗಿ ಕೆಲವು ಪ್ರತಿಭಟನಾಕಾರರು ಅಶೋಕ ಚಕ್ರದ ಬದಲಿಗೆ ಇಸ್ಲಾಮಿಕ್ ಕಲ್ಮಾವನ್ನು ಬರೆದು ಪ್ರತಿಭಟನೆಯನ್ನು ಮಾಡಿದ್ದರು.
ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋ ಇತ್ತೀಚಿನದಲ್ಲ, 2022ರದ್ದು. ತೆಲಂಗಾಣದ ಮಹಬೂಬ್ನಗರದಲ್ಲಿ ನಡೆದ ಮೆರವಣಿಗೆಯನ್ನು ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಗೆಲುವಿಗೆ ಜೊಡಿಸಿ ವೈರಲ್ ಮಾಡಲಾಗುತ್ತಿದೆ.