ಫ್ಯಾಕ್ಟ್ಚೆಕ್: ವಿಡಿಯೋದಲ್ಲಿ ಕರಾಟೆ ಸ್ಟಂಟ್ ಮಾಡುತ್ತಿರುವ ವ್ಯಕ್ತಿ ಶ್ರೀಕಾಳಹಸ್ತಿ ಶಾಸಕ ಮಧುಸೂಧನ್ ರೆಡ್ಡಿ ಅಲ್ಲ, ಬದಲಿಗೆ ತಮಿಳು ನಟ ಮನ್ಸೂರ್ ಅಲಿ ಖಾನ್
ವಿಡಿಯೋದಲ್ಲಿ ಕರಾಟೆ ಸ್ಟಂಟ್ ಮಾಡುತ್ತಿರುವ ವ್ಯಕ್ತಿ ಶ್ರೀಕಾಳಹಸ್ತಿ ಶಾಸಕ ಮಧುಸೂಧನ್ ರೆಡ್ಡಿ ಅಲ್ಲ, ಬದಲಿಗೆ ತಮಿಳು ನಟ ಮನ್ಸೂರ್ ಅಲಿ ಖಾನ್
Claim :
ವಿಡಿಯೋದಲ್ಲಿ ವೇದಿಕೆಯ ಮೇಲೆ ಸ್ಟಂಡ್ಸ್ ಮಾಡುತ್ತಾ ಗಾಯಗೊಂಡ ವ್ಯಕ್ತಿ ಶ್ರೀಕಾಳಹಸ್ತಿ ಶಾಸಕ ಮಧುಸೂಧನ್ ರೆಡ್ಡಿ.Fact :
ವಿಡಿಯೋದಲ್ಲಿ ಕಾಣುತ್ತಿರುವ ವ್ಯಕ್ತಿ ಶಾಸಕ ಮಧುಸೂಧನ್ ರೆಡ್ಡಿಯಲ್ಲ. ತಮಿಳು ನಟ ಮನ್ಸೂರ್ ಖಾನ್. ವೀದಿಕೆಯ ಮೇಲೆ ಗಾಯಗೊಂಡ ದೃಶ್ಯ ಸಹ ಇತ್ತೀಚಿನದಲ್ಲ, 2014ರದ್ದು.
ಕ್ರೀಡೆ ಮತ್ತು ಕ್ರೀಡಾಪಟುಗಳನ್ನು ಉತ್ತೇಜಿಸಲು ಆಂಧ್ರಪ್ರದೇಶ ಸರ್ಕಾರವು 'ಆಡುದಾಂ ಆಂಧ್ರ' ಎಂಬ ವಿನೂತನ ಕಾರ್ಯಕ್ರಮವನ್ನು ಪ್ರಾರಂಭಿಸಿತ್ತು. ಅದರ ಭಾಗವಾಗಿ ಕ್ರೀಡಾ ಸಚಿವೆ ರೋಜಾ ಮತ್ತು SAF ಅಧ್ಯಕ್ಷ ಬೈರೆಡ್ಡಿ ಸಿದ್ಧಾರ್ಥ ರೆಡ್ಡಿ ಡಿಸಂಬರ್ 1,2023ರಂದು ಕಾರ್ಯಕ್ರಮಕ್ಕೆ ಸಂಬಂಧಿಸಿದ ಫೋಟೋಗಳು, ವಿಡಿಯೋಗಳು ಮತ್ತು ಕ್ರೀಡೆಗೆ ಸಂಬಂಧಿಸಿದ ಬ್ರೋಷರ್ಗಳನ್ನು ಬಿಡುಗಡೆ ಮಾಡಲಾಗಿತ್ತು.
ಇತ್ತೀಚೆಗೆ ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬಿಳಿ ಬಣ್ಣದ ಬಟ್ಟೆ ತೊಟ್ಟಿರುವ ವ್ಯಕ್ತಿಯೊಬ್ಬ ಉರಿಯುತ್ತಿರುವ ಹೆಂಚಿನ ತನ್ನ ತಲೆಯಿಂದ ಹೊಡೆಯಲು ಯತ್ನಿಸಿದಾಗ ತನ್ನ ಕೂದಲಿಗೂ ಬೆಂಕಿ ಹತ್ತಿಕೊಳ್ಳುತ್ತದೆ. ಬೆಂಕಿಯನ್ನು ನಂದಿಸಲು ಅಲ್ಲಿನ ಕೆಲ ಜನರು ಸಹಾಯ ಮಾಡಲು ಓಡಿಬರುವ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋದಲ್ಲಿ ಕಾಣುತ್ತಿರುವ ವ್ಯಕ್ತಿ ಶ್ರೀ ಕಾಳಹಸ್ತಿ ಶಾಸಕ ಮಧುಸೂಧನ್ ರೆಡ್ಡಿ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
"ಶ್ರೀಕಾಳಹಸ್ತಿ ಶಾಸಕ ಮಧುಸೂಧನ್ ರೆಡ್ಡಿ ಆಡುದಾಂ ಆಂಧ್ರಾ" ಕಾರ್ಯಕ್ರಮದ ಭಾಗವಾಗಿ ತನ್ನ ಕರಾಟೆ ಪ್ರತಿಭೆಯನ್ನು ಪ್ರದರ್ಶಿಸಿದ ದೃಶ್ಯಗಳಿವು.ಎಂಬ ಶೀರ್ಷಿಕೆಗಳೊಂದಿಗೆ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.
దీన్నే అంటారు...గూట్లో వున్న గుండ్రాయి ని తెచ్చి ఎక్కడో యెట్టుకోటం అంటే.
— Itdp pamur (@Ramakrishn34298) December 12, 2023
శ్రీకాళహస్తి ఎమ్మెల్యే మధుసూధన్ రెడ్డి "ఆడుదాం ఆంధ్రా" ప్రోగ్రాం లో భాగంగా
తన విజ్ఞానాన్ని (కరాటే ప్రతిభను) పై విధంగా ప్రదర్శించారు. pic.twitter.com/MF5Y8VDcMs
దీన్నే అంటారు...గూట్లో వున్న గుండ్రాయి ని తెచ్చి ఎక్కడో యెట్టుకోటం అంటే.
— iTDP PALNADU:DT (@itdpNarsaraopet) December 12, 2023
శ్రీకాళహస్తి ఎమ్మెల్యే మధుసూధన్ రెడ్డి "ఆడుదాం ఆంధ్రా" ప్రోగ్రాం లో భాగంగా
తన విజ్ఞానాన్ని (కరాటే ప్రతిభను) పై విధంగా ప్రదర్శించారు.,, #YCPDestroyedAP #HOPEPALNADU pic.twitter.com/LIygrRT5Z6
ಫ್ಯಾಕ್ಟ್ಚೆಕ್
ವೈರಲ್ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ಶ್ರೀಕಾಳಹಸ್ತಿ ಶಾಸಕ "ಆಡುದಾಂ ಆಂಧ್ರ" ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂಬ ಮಾಹಿತಿ ನಮಗೆ ಎಲ್ಲೂ ಸಿಗಲಿಲ್ಲ.
ಬಿಯ್ಯಪು ಮಧುಸೂಧನ್ ರೆಡ್ಡಿ ಎಂದು ಗೂಗಲ್ನಲ್ಲಿ ಹುಡುಕಾಡಿದಾಗಲೂ ನಮಗೆ ಯಾವುದೇ ರೀತಿಯ ಸುಳಿವು ಸಿಗಲ್ಲ.
ಮತ್ತಷ್ಟು ಮಾಹಿತಿಯನ್ನು ಕಲೆಹಾಕಲು ನಾವು ಆಡುದಾಂ ಆಂಧ್ರ ಪ್ರೋಗ್ರಾಮ್ಗೆ ಸಂಬಂಧಿಸಿದ ಮಾಹಿತಿಯೇನಾದರೂ ಸಿಗಬಹುದು ಎಂದು ಹುಡುಕಾಡಿದಾಗ ನಮಗೆ ಆಂಧ್ರಪ್ರದೇಶದ ಕ್ರೀಡಾ ಸಚಿವೆ ಆರ್.ಕೆ.ರೋಜಾ, ಎಸ್ಎಪಿ ಆಂಧ್ರ ಕ್ರೀಡಾ ಪ್ರದೇಶ ಪ್ರಾಧಿಕಾರ ಅಧ್ಯಕ್ಷ ಬೈರೆಡ್ಡಿ ಸಿದ್ಧಾರ್ಥ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಪಿ.ಎಸ್.ಪ್ರದ್ಯುಮ್ನ, ಎಸ್ಎಪಿ ಎಂಡಿ ಧ್ಯಾನಚಂದ್ರ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯನ್ನು ಕಂಡುಕೊಂಡೆವು. "ಆಡುದಾಂ ಆಂಧ್ರ" ಕಾರ್ಯಕ್ರಮಕ್ಕೆ ಸಂಬಂಧಿಸಿದ ಬ್ರೊಚರ್ನ್ನು ಸಹ ಬಿಡುಗಡೆ ಮಾಡಲಾಗಿತ್ತು. ಕೆಟ್, ಖೋ-ಖೋ, ಕಬಡ್ಡಿ, ಬ್ಯಾಡ್ಮಿಂಟನ್ ಮತ್ತು ವಾಲಿಬಾಲ್ ಸೇರಿದಂತೆ 5 ಸ್ಪರ್ಧಾತ್ಮಕ ಕ್ರೀಡೆಗಳನ್ನ ರಾಜ್ಯಾದ್ಯಂತ 5 ಹಂತಗಳಲ್ಲಿ ಅಂದರೆ ಗ್ರಾಮ, ಮಂಡಲ, ಕ್ಷೇತ್ರ, ಜಿಲ್ಲೆ, ರಾಜ್ಯಗಳಲ್ಲಿ ಆಯೋಜಿಸಲಾಗುವುದು ಎಂದು ಅಲ್ಲಿದ್ದ ಸಚಿವರು ಹೇಳಿದ್ದರು. ಈ ಕಾರ್ಯಕ್ರಮದಲ್ಲೂ ಸಹ ನಮಗೆ ಬಿಯ್ಯಪು ಮಧುಸೂಧನ್ ರೆಡ್ಡಿ ಎಲ್ಲೂ ಸಹ ಕಾಣಿಸಿಕೊಳ್ಳಲಿಲ್ಲ.
ವಿಡಿಯೋವಿನ ಕೆಲವು ಕೀಫ್ರೇಮ್ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ನ ಮೂಲಕ ಹುಡುಕಾಟ ನಡೆಸಿದಾ ನಮಗೆ ವಿಡಿಯೋದಲ್ಲಿ ಕಾಣಿಸಿದ ವ್ಯಕ್ತಿ ಶಾಸಕ ಮಧುಸೂದನ್ ರೆಡ್ಡಿಯಲ್ಲ ಬದಲಿಗೆ ತಮಿಳು ನಟ ಮನ್ಸೂರ್ ಅಲಿಖಾನ್ ಎಂದು ತಿಳಿದು ಬಂದಿತು.
ಗಲಾಟ ತಮಿಳ್ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ 9ವರ್ಷದ ಹಿಂದೆ ಅಂದರೆ ಜನವರಿ 6,2014ರಂದು ಚಿತ್ರೀಕರಿಸಿರುವ ವಿಡಿಯೋವೊಂದು ಕಂಡುಬಂದಿತು. ವಿಡಿಯೋವಿಗೆ ಶೀರ್ಷಿಕೆಯಾಗಿ "ಅಧಿರಾಧಿ ಚಿತ್ರದ ಪ್ರಮೋಷನ್ ವೇಳೆ ನಟ ಮನ್ಸೂರ್ ಅಲಿ ಖಾನ್ಗೆ ನಡೆದ ಅನಾಹುತ ಎಂಬ ಶೀರ್ಷಿಕೆಯಡಿಯಲ್ಲಿ ವಿಡಿಯೋ ಅಪ್ಲೋಡ್ ಆಗಿತ್ತು.
ಗಲಾಟಾ ತಮಿಳು ಯೂಟ್ಯೂಬ್ ಚಾನೆಲ್ನಲ್ಲಿ ಮನ್ಸೂರ್ ಅಲಿ ಖಾನ್ ಮತ್ತಷ್ಟು ಸಾಹಸ ಮಾಡುತ್ತಿರುವ ವಿಡಿಯೋಗಳನ್ನು ನಾವು ಅಧಿರಾಧಿ ಚಿತ್ರದ ಪ್ರಮೋಷನ್ನಲ್ಲಿ ನೋಡಬಹುದು.
ಐಯಮ್ಡಿಬಿ ವರದಿಯ ಪ್ರಕಾರ ಅಧಿರಾಧಿ ಚಿತ್ರಕ್ಕೆ ಕೇವಲ ನಟನಾಗಿ ಮಾತ್ರವಲ್ಲದೇ ಚಿತ್ರಕ್ಕೆ ಬರಹಗಾರನಾಗಿಯೋ ಮನ್ಸೂರ್ ಅಲಿ ಖಾನ್ ಜವಾಬ್ದಾರಿಯನ್ನು ತೆಗೆದುಕೊಂಡಿದ್ದರು. ಈ ಚಿತ್ರ ಅಕ್ಟೋಬರ್ 2015ರಲ್ಲಿ ಬಿಡುಗಡೆಯಾಗಿದೆ ಎಂಬ ವರದಿಗಳನ್ನು ಕಂಡುಕೊಂಡೆವು.
ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ.ವಿಡಿಯೋದಲ್ಲಿ ಕಾಣಿಸುತ್ತಿರುವುದು ತಮಿಳು ನಟ ಮನ್ಸೂರ್ ಅಲಿ ಖಾನ್ ಶ್ರೀಕಾಳಹಸ್ತಿ ಶಾಸಕ ಬಿಯ್ಯಪು ಮಧುಸೂದನ ರೆಡ್ಡಿಯಲ್ಲ. ವೈರಲ್ ಆದ ವಿಡಿಯೋ ಸಹ ಇತ್ತೀಚಿನದಲ್ಲ 2014ರದ್ದು.